Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Cowlbazar PS | ||||||||||||||||
1 | Cr.No:0343/2015 (IPC 1860 U/s 435 ) |
16/11/2015 | Under Investigation | |||||||||||||
ARSON - Others | ||||||||||||||||
Brief Facts : | ಫಿರ್ಯಾದಿದಾರರು ತಮ್ಮ ಮನೆಯ ಮುಂದೆ ತಮ್ಮ ಇನೋವಾ ಕಾರ್ ನಂಬರ್ ಕೆಎ-35, ಎಂ.8245 ನೇದ್ದನ್ನು ನಿನ್ನೆ ದಿನ ನಿಲ್ಲಿಸಿದ್ದು, ನಂತರ ಈ ದಿನ ದಿನಾಂಕ: 16/11/2015 ಬೆಳಿಗ್ಗೆ 3-30 ಗಂಟೆ ಸುಮಾರಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಕಾರ್ ಗೆ ಬೆಂಕಿಯನ್ನು ಹಚ್ಚಿ ಸುಮಾರು 2,00,000/- ರೂಗಳಷ್ಟು ನಷ್ಟವನ್ನುಂಟು ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದೆ. | |||||||||||||||
Hosahalli PS | ||||||||||||||||
2 | Cr.No:0210/2015 (IPC 1860 U/s 504,323,324,34 ) |
16/11/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಈ ದಿನ ದಿನಾಂಕ- 16/11/2015 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಹರಿಣೇಶ್ ನಾಯ್ಕ ತಂದೆ ಭೀಮನಾಯ್ಕ ವಯಸ್ಸು 28 ವರ್ಷ ಲಂಬಾಣಿ ಜನಾಂಗ ಕೂಲಿ ಕೆಲಸ ವಾಸ ಉಲ್ಲಾನಹಳ್ಳಿ ತಾಂಡ ಆದ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ ತಾನು ತನ್ನ ತಂದೆಗೆ ಒಬ್ಬನೇ ಗಂಡು ಮಗನಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದು ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು, ತಾನು ತನ್ನ ತಂದೆ ತಾಯಿಯೊಂದಿಗೆ ತುಮಕೂರು ಕಡೆ ಕೂಲಿಗಾಗಿ ಹೋಗಿ ಸುಮಾರು 8-9 ವರ್ಷಗಳಾಗಿದ್ದು, ತಾನು ಆಗಾಗ್ಗೆ ತಮ್ಮ ಊರಿಗೆ ಬಂದು ಹೋಗುತ್ತಿದ್ದು, ಈ ವರ್ಷ ದೀಪಾವಳಿ ಹಬ್ಬಕ್ಕೆಂದು ತನ್ನ ತಂದೆ ತಾಯಿಯನ್ನು ತುಮಕೂರಿನಲ್ಲಿಯೇ ಬಿಟ್ಟು ತಾನು ಒಬ್ಬನೇ ದಿನಾಂಕ:- 28-10-2015 ರಂದು ತಮ್ಮ ಸ್ವ ಗ್ರಾಮ ಆದ ಉಲ್ಲಾನಹಳ್ಳಿ ತಾಂಡಾಕ್ಕೆ ಬಂದಿದ್ದು,ದಿನಾಂಕ:-15-11-2015 ರಂದು ತಮ್ಮ ತಾಂಡಾದ ಹರೀಶ್ ನಾಯ್ಕ ಇವರ ಹೊಲಕ್ಕೆ ಕೂಲಿ ಕೆಲಸಕ್ಕೆಂದು ಶೇಂಗಾ ಕೀಳಲು ಹೋಗಿ ತಾನು ಕೂಲಿ ಕೆಲಸ ಮುಗಿಸಿಕೊಂಡು ಸಾಯಂಕಾಲ 5-00 ಗಂಟೆ ಸುಮಾರಿಗೆ ತಮ್ಮ ಮನೆಯ ಹತ್ತಿರ ನಿಂತಿದ್ದಾಗ ಅದೇ ಗ್ರಾಮದ ಗೋಪಾಲನಾಯ್ಕನು ಬಂದು ಪಿರ್ಯಾದುದಾರರ ಬಳಿ ನಾಳೆ ನನ್ನ ಹೊಲಕ್ಕೆ ಶೇಂಗಾ ಕೀಳಲು ಕೂಲಿಗಾಗಿ ಬರುತ್ತೀಯಾ ಅಂತ ಕೇಳಿದ್ದಕ್ಕೆ ಪಿರ್ಯಾದುದಾರನು ಇನ್ನು 2-3 ದಿನ ಕಲಿಯುವುದಿಲ್ಲ ಬೇರೆಯವರಿಗೆ ಕೂಲಿಗೆ ಹೇಳಿಸಿಕೊಂಡಿದ್ದೇನೆ ಎಂದು ಹೇಳಿ, ತಮ್ಮ ಅಕ್ಕನ ಮನೆ ಮುಂದೆ ಇಟ್ಟಿರುವ ಇಟ್ಟಂಗಿ ಯನ್ನು ತೆಗೆದುಕೋ ಎಂದು ಗೋಪಾಲನಾಯ್ಕನಿಗೆ ಹೇಳಿದ್ದಕ್ಕೆ ಅದಕ್ಕೆ ಗೋಪಾಲನಾಯ್ಕನು ಸೂಳೇ ಮಗನೇ ನೀನು ಕೂಲಿಗೆ ಬರದಿದ್ದರೆ ಬರಲಿಲ್ಲ ಇಟ್ಟಂಗಿ ತಗೆದು ಕೋ ಎಂದು ನನಗೆ ಹೇಳುತ್ತೀಯಾ ಎಂದು ಬೈದಾಡುತ್ತಿದ್ದುದ್ದನ್ನು ನೋಡಿ ಗೋಪಾಲನಾಯ್ಕನ ಮಗ ಲೋಕೇಶ್ ನಾಯ್ಕನು ಬಂಡಿಯ ಕಣಗ ಹಿಡಿದುಕೊಂಡು ಬಂದು ತನ್ನ ತಂದೆಗೆ ಎದುರು ಮಾತನಾಡುತ್ತೀಯಾ ಎಂದು ತನ್ನ ಬಲಗಡೆ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಗೋಪಾಲನಾಯ್ಕನು ಕೈಯಿಂದ ಕಪಾಳಕ್ಕೆ ಮೈ ಮೇಲೆ ಹೊಡೆದನು. ತಾನು ಕೂಗಿಕೊಂಡಾಗ ತಮ್ಮ ಚಿಕ್ಕಮ್ಮ ಸೋನಿಬಾಯಿ ಗಂಡ ಲೇಟ್ ಪೂರ್ಯನಾಯ್ಕ ಇವರು ಜಗಳ ಬಿಡಿಸಲು ಬಂದಾಗ ಗೋಪಾಲನಾಯ್ಕನು ತಮ್ಮ ಚಿಕ್ಕಮ್ಮಳಿಗೆ ಕೈಯಿಂದ ಮೈ ಮೇಲೆ ಹೊಡೆದನು. ತನ್ನ ತಲೆಗೆ ರಕ್ತಗಾಯವಾಗಿ ರಕ್ತ ಬರುತ್ತಿದ್ದುದ್ದನ್ನು ನೋಡಿ ಗೋಪಾಲನಾಯ್ಕ ಹಾಗೂ ಆತನ ಮಗ ಲೋಕೇಶ್ ನಾಯ್ಕನು ತಮ್ಮ ಮನೆ ಕಡೆ ಹೋದರು. ತನಗೆ ತಲೆಗೆ ಗಾಯವಾಗಿದ್ದರಿಂದ ತಾನು ಹೊಸಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಜಗಳ ಮಾಡಿ ಹೊಡೆದ ಬಗ್ಗೆ ತುಮಕೂರಿನಲ್ಲಿರುವ ತನ್ನ ತಂದೆ ತಾಯಿಗೆ ವಿಷಯ ತಿಳಿಸಿ ಅವರೊಂದಿಗೆ ಚರ್ಚಿಸಿ ತಡವಾಗಿ ಠಾಣೆಗೆ ಬಂದು ತನ್ನ ಮೇಲೆ ಜಗಳ ತೆಗೆದು ತನ್ನ ತಲೆಗೆ ಗಾಯವುಂಟುಪಡಿಸಿದ ಗೋಪಾಲನಾಯ್ಕ ಹಾಗೂ ಆತನ ಮಗ ಲೋಕೇಶ್ ನಾಯ್ಕನ ವಿರುಧ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ. | |||||||||||||||
Itagi PS | ||||||||||||||||
3 | Cr.No:0062/2015 (CODE OF CRIMINAL PROCEDURE, 1973 U/s 109 ) |
16/11/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ಈ ದಿನ ದಿನಾಂಕ 16-11-2015 ರಂದು ಗುಡ್ ಮಾನರ್ಿಂಗ್ ಬೀಟ್ ಕರ್ತವ್ಯದಲ್ಲಿದ್ದಾಗ ಇಟ್ಟಗಿ ಗ್ರಾಮದ ಹೆಚ್.ಬಿ ಹಳ್ಳಿ ಕಡೆಗೆ ಹೋಗುವ ಎಸ್.ಹೆಚ್ 25 ಟಾರ್ ರಸ್ತೆಯ ಪಕ್ಕ ಇರುವ ಹಾಲಿನ ಡೈರಿಯ ಹತ್ತಿರ ಬೆಳಗಿನ ಜಾವ 05-30 ಗಂಟೆಗೆ ಠಾಣೆಗೆ ಬರುತ್ತಿರುವಾಗ ನಮ್ಮ ಇಲಾಖಾ ಜೀಪನ್ನು ನೋಡಿ ಒಬ್ಬ ವ್ಯಕ್ತಿಯು ಹಾಲಿನ ಡೈರಿಯೊಳಗೆ ಓಡಿ ಹೋಗಿ ಅವಿತುಕೊಳ್ಳಲು ಪ್ರಯತ್ನಿಸುತ್ತಿರುವಾಗ, ಕೂಡಲೇ ನಾನು ಜೀಪನ್ನು ನಿಲ್ಲಿಸಲು ಹೇಳಿ ಠಾಣಾ ಪಿ.ಸೀಸ್ 1098, 1120 ರವರ ಸಂಗಡ ಓಡಿ ಹೋಗಲು ಪ್ರಯತ್ನಿಸಿದ ಆ ವ್ಯಕ್ತಿಯನ್ನು ಹಿಡಿದು ಅವನ ಹೆಸರು & ವಿಳಾಸದ ಬಗ್ಗೆ ವಿಚಾರ ಮಾಡಲಾಗಿ ಅವನು ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸುತ್ತಾ ಮೊದಮೊದಲು ಈ ವ್ಯಕ್ತಿಯು ತನ್ನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಹೇಳದೇ ತಪ್ಪು-ತಪ್ಪಾಗಿ ಹೇಳುತ್ತಾ ಚಡಪಡಿಸುತ್ತಿದ್ದು, ಪುನಃ-ಪುನಃ ಆ ವ್ಯಕ್ತಿಗೆ ವಿಚಾರ ಮಾಡಲಾಗಿ ಈತನು ತನ್ನ ಹೆಸರು ತಳವಾರ ಪುಂಡ್ಲಿಕಾ ತಂದೆ ಈರಣ್ಣ, 30 ವರ್ಷ, ತಳವಾರ ಜನಾಂಗ, ಜೆ.ಸಿ.ಬಿ ಡ್ರೈವರ್ ಕೆಲಸ, ವಾಸ:-ಸಾತಲಗಾಂವ್ ಗ್ರಾಮ, ಇಂಡಿ ತಾಲೂಕು, ಬಿಜಾಪುರ ಜಿಲ್ಲೆ. ಅಂತ ತಿಳಿಸಿತಿಸಿದನು. ಆದರೆ ಈ ವ್ಯಕ್ತಿಯು ತನ್ನ ಇರುವಿಕೆಯನ್ನು ಮರೆಮಾಚುತ್ತಾ ಯಾವುದೋ ಸಂಜ್ಞೆಯ ಅಪರಾಧವನ್ನು ಮಾಡುವ ಉದ್ದೇಶವನ್ನು ಹೊಂದಿರುವಂತೆ ಕಂಡು ಬಂದಿದ್ದರಿಂದ ಮುಂಜಾಗ್ರತ ಕ್ರಮವಾಗಿ ಈತನನ್ನು ವಶಕ್ಕೆ ಪಡೆದು ಈತನಿಂದ ಸದ್ವರ್ತನೆಯ | |||||||||||||||
ಬಗ್ಗೆ ಮುಚ್ಛಳಿಕೆಯನ್ನು ತಹಶೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳ ನ್ಯಾಯಾಲಯ, ಹೂವಿನಹಡಗಲಿ ರವರು ಬರೆಸಿಕೊಳ್ಳುವಂತೆ ಮುಂಜಾಗ್ರತ ಕ್ರಮವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ. | ||||||||||||||||
Kamalapur PS | ||||||||||||||||
4 | Cr.No:0096/2015 (CODE OF CRIMINAL PROCEDURE, 1973 U/s 110(E)(G) ) |
16/11/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ದಿನಾಂಕ:-16/11/2015ರಂದು ಮದ್ಯಾಹ್ನ 12-15 ಗಂಟೆಗೆ ವಶಕ್ಕೆ ಪಡೆದಕಂಡು ಠಾಣೆಗೆ ಕರೆದುಕೊಂಡು ಬಂದು ಪ್ರತಿವಾದಿಯಾದ ಚಿನ್ನ ಕಮಲಾಪುರ ಈತನು ಚಾರಿತ್ರ್ಯ ಹೀನಾ ವ್ಯಕ್ತಿಯಾಗಿದ್ದು ಪದೆ-ಪದೆ ಗಲಾಟೆ ಮಾಡುವ ವ್ಯಕ್ತಿಯಾಗಿದ್ದು ಈ ಹಿಂದೆ ದೊಂಬಿ ಪ್ರಕರಣದಲ್ಲಿ ಆರೋಪಿತನಾಗಿದ್ದು ಈಗಾಗಲೆ ಪ್ರತಿವಾದಿಯ ವಿರುದ್ದ ಕಲಂ151, 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಪ್ರತಿವಾದಿಯು ಕುಮಾರಿ ಮಮತಾ ಎಂಬುವವರೊಂದಿಗೆ ಅಸಬ್ಯ ರೀತಿಯಿಂದ ವರ್ತನೆ ಮಾಡಿದ್ದರಿಂದ ಪ್ರತಿವಾದಿಯಿಂದ ಮುಂಬರುವ ದಿನಗಳಲ್ಲಿ ಗಲಾಟೆಯಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾದ್ಯತೆ ಇರುವುದರಿಂದ ಮುಂಜಾಗ್ರತೆಯ ಕ್ರಮವಾಗಿ ಪ್ರತವಾದಿಯ ವಿರುದ್ದ ಠಾಣೆ ಗುನ್ನೆ ನಂ:96/2015{ಈ- ಜಿ} ಸಿ. ಆರ್. ಪಿ.ಸಿ ಅಡಿಯಲ್ಲಿ ಪ್ರ.ವ ವರದಿ ಸಲ್ಲಿಸಲಾಗಿದೆ. | |||||||||||||||
Kudligi PS | ||||||||||||||||
5 | Cr.No:0190/2015 (CODE OF CRIMINAL PROCEDURE, 1973 U/s 109 ) |
16/11/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ಈ ದಿನ ದಿನಾಂಕ : ೧೬/೧೧/೧೫ ರಂದು ಬೆಳಗ್ಗೆ ೦೯-೧೫ ಗಂಟೆಗೆ ಕೂಡ್ಲಿಗಿ ಠಾಣೆಯ ಎ.ಎಸ್.ಐ ಶ್ರೀ.ಜಿ.ಮಾರಪ್ಪ ಇವರು ವಿಶೇಷ ವರದಿಯನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ ತಾನು ನಿನ್ನೆಯ ದಿನ ದಿ:೧೫/೧೧/೧೫ ರಂದು ರಾತ್ರಿ ಪಟ್ಟಣದಲ್ಲಿ ಸೆಕ್ಟರ್ ಕರ್ತವ್ಯದ ಸಲುವಾಗಿ ಹೋಗಿ ಕೂಡ್ಲಿಗಿ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ದಿನ ದಿ.೧೬/೧೧/೧೫ ರ ಬೆಳಗಿನ ಜಾವ ೨-೩೦ ಗಂಟೆ ಸುಮಾರಿಗೆ ಕೂಡ್ಲಿಗಿ ಪಟ್ಟಣದ ಕೋರಖಣ ಏರಿಯಾದಲ್ಲಿರುವ ಶ್ರೀ.ವೆಂಕಟೇಶ್ವರ ದೇವಸ್ಥಾನದ ಹತ್ತಿರ ಮೆಡಿಕಲ್ ಶಾಪ್ ಮುಂದುಗಡೆ ತಾನು ಮತ್ತು ರಾತ್ರಿ ಕರ್ತವ್ಯದ ಸಿಬ್ಬಂದಿಯವರಾದ ಪಿ.ಸಿ-೩೮೯ ಶ್ರೀ.ಶಶಿಧರ ಮತ್ತು ಪಿ.ಸಿ ನಂ:೩೦೨ ಇವರೊಂದಿಗೆ ಇದ್ದಾಗ ಮೇಲ್ಕಂಡ ಆಸಾಮಿಯು ತಮ್ಮನ್ನು ನೋಡಿ , ಕತ್ತಲಿನಲ್ಲಿ ಮರೆಮಾಚಿಕೊಂಡು, ಅನುಮಾನಸ್ಪದವಾಗಿ ನಿಂತುಕೊಂಡಿದ್ದನ್ನು ನೋಡಿ ಅವನ ಬಳಿ ಹೋಗಲು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗುತ್ತಿದ್ದವನ್ನು ಹಿಡಿದು ಅವನ ಹೆಸರು ವಿಳಾಸ ಕೇಳಲು ತೊದಲು ಮಾತಿನಿಂದ ಮತ್ತು ಗಾಬರಿಯಿಂದ ನನ್ನ ಹೆಸರು ಕರಿಯಪ್ಪ @ ಕರಿಯ ಸಾ: ಬಂಡ್ರಿ ಗ್ರಾಮ ಅಂತಾ ತಿಳಿಸಿದಾಗ ಪುನಃ ಅವನಿಗೆ ಮತ್ತೆ ಮತ್ತೆ ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ಚಿತ್ತಪ್ಪ ತಂದೆ ದೊಡ್ಡಚಿತ್ತಪ್ಪ, ವಯಸ್ಸು ೧೯ ವರ್ಷ, ಗೊಲ್ಲರ ಜಾತಿ, ವ್ಯವಸಾಯ ವಾಸ: ಬಂಡ್ರಿ ಗೊಲ್ಲರ ಹಟ್ಟಿ, ಸಂಡೂರು ತಾಲೂಕು ಅಂತಲೂ ಕೂಡ್ಲಿಗಿಯಲ್ಲಿ ಯಾವುದಾದರೂ ಹೊಟೇಲ್ ನಲ್ಲಿ ಕೆಲಸ ಹುಡುಕಿ ಕೆಲಸ ಮಾಡಲು ಬಂದಿರುವುದಾಗಿ ತಿಳಿಸಿದ್ದು. ಇವನು ಯಾವುದೋ ಸಂಜ್ಞೆಯ ಅಪರಾಧ ಮಾಡಲು ಪ್ರಯತ್ನಿಸುತ್ತಿದ್ದಾಗಿ ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಮೇಲ್ಕಂಡ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಕರ್ತವ್ಯದ ನಂತರ ಈ ದಿನ ದಿ:೧೬-೧೧-೧೫ ರಂದು ಬೆಳಗ್ಗೆ ೪-೦೦ ಗಂಟೆಗೆ ಠಾಣೆಗೆ ಕರೆತಂದಿದ್ದು, ಸದರಿ ಆಸಾಮಿಯ ವಿರುದ್ಧ ಮುಂಜಾಗ್ರತೆ ಕ್ರಮದ ಸಲುವಾಗಿ ಕ್ರಮ ಜರುಗಿಸಬೇಕೆಂದು ಈ ದಿನ ಬೆಳಗ್ಗೆ 08-30 ಗಂಟೆಗೆ ವರದಿ ಕೊಟ್ಟಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
Moka PS | ||||||||||||||||
6 | Cr.No:0162/2015 (IPC 1860 U/s 279,337 ; INDIAN MOTOR VEHICLES ACT, 1988 U/s 187 ) |
16/11/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಈ ದಿನ ದಿನಾಂಕ:೧೬-೧೧-೧೫ ರಂದು ಬೆಳಿಗ್ಗೆ ೮-೩೦ ಗಂಟೆಗೆ ಪಿರ‍್ಯಾದಿದಾರರಾದ ಶ್ರೀ.ಕೆ.ನಿಸಾರ ಅಹ್ಮದ್ ತಂದೆ ಕೆ.ಬಾಷೀರ್ ಅಹ್ಮದ್ ವಾಸ:ರಾಯಚೂರು ರವರು ಠಾಣೆಗೆ ಬಂದು ಕೊಟ್ಟ ಗಣಕೀಕೃತ ದೂರು ಏನಂದರೇ, ನಿನ್ನೆ ದಿನಾಂಕ:೧೫-೧೧-೧೫ ರಂದು ಬೆಳಿಗ್ಗೆ ಬಳ್ಳಾರಿಗೆ ಮದುವೆ ಅಂತ ತನ್ನ ಅಣ್ಣನ ಕಾರ್ ನಂ:ಕೆ:ಎ:೩೬:ಎಂ.೯೮೬೩ ನೇದ್ದರಲ್ಲಿ ತಾನು ಮತ್ತು ಇತರೆ ಇಬ್ಬರು ಕಾರ್‌ನಲ್ಲಿ ಬಂದು ಬಳ್ಳಾರಿಯಲ್ಲಿ ಮದುವೆ ಮುಗಿಸಿಕೊಂಡು ಅದೇ ಕಾರಿನಲ್ಲಿ ಮೋಕಾ ಮೂಖಾಂತರ ರಾಯಚೂರಿಗೆ ಹೋಗುತ್ತಿರುವಾಗ ಕಾರ್‌ನ್ನು ತಾನು ಚಲಾಯಿಸುತ್ತಿದ್ದು ಅಶೋಕನಗರ ಕ್ಯಾಂಪ್‌ನ ಮುಂದೆ ಬಳ್ಳಾರಿ ಮೋಕಾ ರಸ್ತೆಯಲ್ಲಿ ಹಪ್ಂ ಮುಂದೆ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿರುವಾಗ ತನ್ನ ಹಿಂದೆ ಬಳ್ಳಾರಿ ಕಡೆಯಿಂದ | |||||||||||||||
ಒಬ್ಬ ಮೋಟಾರ್ ಸೈಕಲ್ ತನ್ನ ಮೋಟಾರ್ ಸೈಕಲ್ ನಂ:ಕೆ:ಎ:೩೪:ಕೆ:೬೯೨೦ ನೇದ್ದರ ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬಂದು ತನ್ನ ಕಾರಿಗೆ ಹಿಂದೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಾಗ ನಾವೆಲ್ಲಾರು ಹೋಗಿ ನೋಡಲು ತನ್ನ ಕಾರಿ ಹಿಂದೆ ಎಲ್ಲಾ ಭಾಗ ಜಖಂಗೊಂಡಿದ್ದು ಮೋಟಾರ್ ಸೈಕಲ್ ಸವಾರನಿಗೆ ಮೂಖಕ್ಕೆ, ಕೈಕಾಲುಗಳಿಗೆ ರಕ್ತಗಾಯವಾಗಿದ್ದು, ಮೋಟಾರ್ ಸೈಕಲ್ ಚಾಲಕ ಹೆಸರು ಜಗದೀಶ ಮೋಟಾರ್ ಸೈಕಲ್ ನಂ:ಕೆ:ಎ:೩೪:ಕೆ:೬೯೨೦ ವಾ:ಬಳ್ಳಾರಿ ಅಂತ ತಿಳಿಯಿತು. ನಂತರ ೧೦೮ ಅಂಬ್ಯೂಲೇಶ್‌ನಲ್ಲಿ ಜಗದೀಶನಿಗೆ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳಿಸಿದ್ದು ಈ ದಿನ ತಮ್ಮ ಹಿರಿಯರಿಗೆ ವಿಷಯ ತಿಳಿಸಿ ತಡವಾಗಿ ಠಾಣೆಗ ಬಂದು ಕಾರ್ ಹಿಂದೆ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಗಣಕೀಕೃತ ದೂರಿನ ಮೇರೆಗೆ, | ||||||||||||||||
Siruguppa PS | ||||||||||||||||
7 | Cr.No:0239/2015 (IPC 1860 U/s 341,34,504,323 ) |
16/11/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಪಿರ್ಯಾದಿದಾರರು ಈ ದಿನ ದಿನಾಂಕ-16-11-15 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದೆರೆ, ಪಿರ್ಯಾದಿಗೆ ದಿನಾಂಕ; 29-03-12 ರಂದು ಸಿರುಗುಪ್ಪ ವಾಸಿಯಾದ ಅಕ್ಬರ್ ಸಾಬ್ ಇವರ ಮಗನಾದ ಮೀರ್ ಹುಸೇನ್ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಪಿರ್ಯಾದಿಯು ಮದುವೆ ಆದ ಕೆಲವು ತಿಂಗಳಗಳವರೆಗೆ ತನ್ನ ಗಂಡ ಮತ್ತು ಅತ್ತೆಮಾವ ಇವರೊಂದಿಗೆ ಚೆನ್ನಾಗಿದ್ದು ಸಂಸಾರ ಮಾಡುತ್ತಿದ್ದು ನಂತರ ಗಂಡ ಮತ್ತು ಅತ್ತೆ ಮಾವನವರು ಚಿಕ್ಕಪುಟ್ಟ ವಿಷಯಗಳಿಗೆ ಜಗಳ ಮಾಡುತ್ತಿದ್ದು ಆದರೂ ನಾನು ನನ್ನ ಸಂಸಾರ ಇಂದಲ್ಲ ನಾಳೆ ಸರಿಹೋಗಬಹುದೆಂದು ಸುಮ್ಮನಿದ್ದು ಸಂಸಾರ ಮಾಡಿಕೊಂಡು ಹೋಗುತ್ತಿದ್ದೆನು. ನಂತರ ಪಿರ್ಯಾದಿಯು ತನ್ನ ಮೊದಲನೆಯ ಹೆರಿಗೆಗೆ ತವರು ಮನೆಗೆ ಹೋಗಿದ್ದು ಹೆರಿಗೆ ಆದ ನಂತರ ಪಿರ್ಯಾದಿಯು ಗಂಡನ ಮನೆಗೆ ಬಂದು ಸಂಸಾರ ಮಾಡುತ್ತಿದ್ದು ನಂತರ ಪಿರ್ಯಾದಿಯು ತಮ್ಮ ತಾಯಿಗೆ ಆರೋಗ್ಯ ಸರಿಇಲ್ಲದ ಕಾರಣ ತಾಯಿಯನ್ನು ಮಾತಾಡಿಸಿಕೊಂಡು ಬರಲು ತವರು ಮನೆಗೆ ಹೋಗಿದ್ದು ನಂತರ ಎರಡು ತಿಂಗಳು ಆದ ನಂತರ ನಮ್ಮ ಚಿಕ್ಕಮ್ಮ ಫಾತಿಮಾ ಇವರೊಂದಿಗೆ ವಾಪಾಸು ಗಂಡನ ಮನೆಗೆ ಬಂದಿದ್ದು ಪುನಃ ಪಿರ್ಯಾದಿಗೆ ಗಂಡ ಮತ್ತು ಅತ್ತೆ ಮಾವ ಸೇರಿ ಹೊಡೆಬಡೆ ಮಾಡಿ ವಾಪಾಸು ತವರು ಮನೆಗೆ ಕಳುಹಿಸಿದರು. ನಂತರ ಪಿರ್ಯಾದಿಯು ತನ್ನ ಗಂಡ ಮತ್ತು ಅತ್ತೆ ಮಾವ ಇವರ ಮೇಲೆ ಕೇಸು ಕೊಟ್ಟಿದ್ದು ಸದರಿ ಕೇಸು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಪಿರ್ಯಾದಿಯ ಗಂಡ ಕೇಸು ವಾಪಾಸು ತೆಗೆದುಕೊಂಡರೆ ನಾನು ಕರೆದುಕೊಂಡು ಸಂಸಾರ ಮಾಡುತ್ತೇನೆ ಎಂದು ಹೇಳಿದ್ದರಿಂದ ಪಿರ್ಯಾದಿಯು ತಾನು ಕೊಟ್ಟ ಕೇಸುಗಳನ್ನು ವಾಪಾಸು ಪಡೆದುಕೊಂಡಿರುತ್ತಾರೆ. ನಂತರ ದಿನಾಂಕ; 12-11-15 ರಂದು ಶ್ರೀಮತಿ ಖಾಜಾಬೀ ಇವರು ತಮ್ಮ ಮಗಳಾದ ಪಿರ್ಯಾದಿ ರೇಷ್ಮ ಇವರನ್ನು ಕರೆದುಕೊಂಡು ಬಂದು ಗಂಡನ ಮನೆಗೆ ಬಿಟ್ಟು ಹೋದರು. ನಂತರ ದಿನಾಂಕ; 12-11-15 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಪಿರ್ಯಾದಿಗೆ ಆಕೆಯ ಗಂಡ ಮೀರ್ ಹುಸೇನ್,ಈತನು ಕೂದಲು ಹಿಡಿದು ಜೋರಾಗಿ ನೂಕಿ ಏ ಬೋಸಡಿ ರಾಂಡಕೋ ಮಾರೋ ಕ್ಯಾದೇಕ್ತೆ ಎಂದು ದುರ್ಬಾಷೆಗಳಿಂದ ಬೈದಾಡಿದ್ದು ಮಾವ ಅಕ್ಬರ್ ಸಾಬ್ ಮತ್ತು ಅತ್ತೆ ಮಾಬುನ್ನಿ ಹಾಗೂ ಸೋನ @ ಮುಬೀನ ಇವರು ಪಿರ್ಯಾದಿಗೆ ಕೂದಲು ಹಿಡಿದು ಕಪಾಳಕ್ಕೆ ಮತ್ತು ಬೆನ್ನಿನ ಮೇಲೆ ಪಿರ್ಯಾದಿಗೆ ಹೊಡೆದುಕೊಂಡರು. ಮರುದಿನ ದಿ. 13-11-15 ರಂದು ಪಿರ್ಯಾದಿಗೆ ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಸಂಬಂದಿ ನೂರ್ ಮೊಹಮ್ಮದ್ ಇವರನ್ನು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದು ಈ ದಿನ ದಿ. 16-11-15 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. | |||||||||||||||
Tekkalkota PS | ||||||||||||||||
8 | Cr.No:0121/2015 (CODE OF CRIMINAL PROCEDURE, 1973 U/s 107 ) |
16/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ ದಿನ ದಿನಾಂಕ; 16/11/2015 ರಂದು ಮದ್ಯಾಹ್ನ 3-೦೦ ಗಂಟೆಗೆ ನಾನು ಪಿಸಿ-1197 ರವರ ಸಂಗಡ ತೆಕ್ಕಲಕೋಟೆ ಪಟ್ಟಣದ ೫ನೇ ವಾರ್ಡನಲ್ಲಿ ಮಾಹಿತಿ ಸಂಗ್ರಹಿಸಲು ಹೋದಾಗ ಪ್ರತಿವಾದಿ ಹಚ್ಚೊಳ್ಳಿ ಮುರ್ತುಜಾ ರವರು ವಿನಾಕಾರಣ ತಮ್ಮ ಸಂಗಡಿಗರೊಂದಿಗೆ ಪಟ್ಟಣದಲ್ಲಿ ತಿರುಗಾಡಿ, ಜನರಲ್ಲಿ ಮತೀಯ ದ್ವೇಷ ಬೆಳೆಯುವಂತೆ ಮಾತನಾಡುತ್ತಿದ್ದು, ಅಲ್ಲದೇ ಪ್ರತಿವಾದಿಗಳು ಸಾರ್ವಜನಿಕರಲ್ಲಿ ಗಲಭೆ ಉಂಟು ಮಾಡುವ ಪ್ರವೃತ್ತಿ ಉಳ್ಳವರಾಗಿದ್ದು, ಅಕ್ರಮಗುಂಪು ಸೇರಿಸುವುದು ಮತ್ತು ಕೋಮುಗಲಬೆಯನ್ನು ಮಾಡುವ ಪ್ರವೃತ್ತಿ ಉಳ್ಳವರಾಗಿದ್ದು, ಇವರ ಹೆಸರಿನಲ್ಲಿ ತೆಕ್ಕಲಕೋಟೆ ಠಾಣೆಯಲ್ಲಿ ರೌಡಿ ಹಾಳೆ ಸಹಾ ತೆರೆದಿದ್ದು ಇದೆ. ಈತನಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಗಳ / ಗಲಾಟೆಗಳು ಆಗುವಂತೆ, ಕಾನೂನು ಸುವ್ಯವಸ್ಥೆಗೆ ತೊಂದರೆ ಯಾಗದಂತೆ ಮತ್ತು ಸಾರ್ವಜನಿಕರ ಶಾಂತತೆಗೆ ಭಂಗ ವಾಗದಂತೆ ಇರಲು, ಮಾನ್ಯ ನ್ಯಾಯಾಲಯವು ಸದರಿ ಪ್ರತಿವಾದಿಯನ್ನು ಕರೆಯಿಸಿ, ಒಳ್ಳೆಯ ನಡೆತೆಯಿಂದ ಇರುವಂತೆ ಮುಚ್ಚಳಿಕೆಯನ್ನು ಪಡೆಕೊಳ್ಳಲು ಕೋರಿ, ಪ್ರತಿವಾದಿ ವಿರುದ್ದ ಠಾಣಾ ಗುನ್ನೆ ನಂಬರ್ ೧೨೧/೨೦೧೫ ಕಲಂ ೧೦೭ ಸಿಆರ್ಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
ಸೋಮವಾರ, ನವೆಂಬರ್ 16, 2015
PRESS NOTE OF 16/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ