Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Cowlbazar PS | ||||||||||||||||
1 | Cr.No:0349/2015 (IPC 1860 U/s 457,380 ) |
27/11/2015 | Under Investigation | |||||||||||||
BURGLARY - NIGHT - At Residential Premises | ||||||||||||||||
Brief Facts : | ದಿನಾಂಕ 26-11-2015 ರಂದು ರಾತ್ರಿ 8-30 ಗಂಟೆಯಿಂದ ದಿ: 27-11-2015 ರಂದು ಬೆಳಿಗ್ಗೆ 5-40 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಯಾವುದೋ ಆಯುಧದಿಂದ ಜಖಂಗೊಳಿಸಿ ಮನೆಯೊಳಗೆ ಪ್ರವೇಶಿಸಿ ಬೆಡ್ ರೂಮ್ ನ ಬೀರುವಾದಲ್ಲಿಟ್ಟಿದ್ದ ಸುಮಾರು 71,000/- ರೂ ಗಳ ಬೆಲೆ ಬಾಳುವ ಬೆಳ್ಳಿ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿದಾರರ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ | |||||||||||||||
Gudekote PS | ||||||||||||||||
2 | Cr.No:0142/2015 (IPC 1860 U/s 504,323,324 ) |
27/11/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ 27/11/2015 ರಂದು ಬೆಳಿಗ್ಗೆ 07-30 ಗಂಟೆಗೆ ಪಿರ್ಯಾಧಿ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಕಸ ಗುಡಿಸಿ ತಮ್ಮ ಮನೆಯ ಗೋಡೆ ಪಕ್ಕದಲ್ಲಿ ಕಸ ಹಾಕುವಾಗ ಪಕ್ಕದ ಮನೆಯ ಮೇಲ್ಕಂಡ ಆರೋಪಿ ಕಸವನ್ನು ಇಲ್ಲಿ ಹಾಕಬೇಡ ಅಂತಾ ಹೇಳಿದ್ದು, ತಾನು ಯಾವಾಗಲ್ಲೂ ಇಲ್ಲೇ ಕಸ ಹಾಕುವುದು ಈಗ ಇಲ್ಲೇ ಹಾಕುತ್ತೇನೆ ಅಂತಾ ಹೇಳಿದ್ದಕ್ಕೆ ಲೇ ಸೂಳೇ ಮಗನೇ ನಿನ್ನ ತಮ್ಮ ಸತ್ತರು ನಿಮಗೆ ಬುದ್ದಿ ಬಂದಿಲ್ಲ, ನೀವು ಮನೆ ಪಕ್ಕದಲ್ಲಿ ಹಸು ಕಟ್ಟಿದ್ದಕ್ಕೆ ಜಗಳ ಮಾಡಿದ್ದಿರೀ ಈಗ ಇಲ್ಲೇ ಕಸ ಹಾಕುತ್ತಿವಿ ಅಂತಾ ಹೇಳುತ್ತಿಯೇನಲೇ ಅಂತಾ ಬೈಯುತ್ತಾ ಎಕಾಏಕಿ ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ತನ್ನ ಹಣೆಯ ಎಡಭಾಗಕ್ಕೆ ಕುಟ್ಟಿ ರಕ್ತಗಾಯ ಮಾಡಿ ತನ್ನ ಬಲ ಕೈ ಮೊಣಕೈ ಕೆಳಗೆ ಉಗುರಿನಿಂದ ಗೀರಿ ಚೀರುಗಾಯ ಮಾಡಿದ ಆರೋಪಿ ವಿರುದ್ದ ಕ್ರಮ ಜರುಗಿಸಲು ಪಿರ್ಯಾಧಿ ಶಶಿಕುಮಾರ ತಂದೆ ಚನ್ನಬಸಪ್ಪ ವಾಸ ಚಂದ್ರಶೇಖರಪುರ ಇವರು ನೀಡಿದ ಲಿಖಿತ ದೂರಿನ ಮೇರಿಗೆ ಈ ಪ್ರಕರಣ ದಾಖಲಿಸಿದೆ. | |||||||||||||||
Hagaribommanahalli PS | ||||||||||||||||
3 | Cr.No:0174/2015 (IPC 1860 U/s 302,201 ) |
27/11/2015 | Under Investigation | |||||||||||||
MURDER - Due To OtherCauses | ||||||||||||||||
Brief Facts : | ಈ ದಿನ ದಿನಾಂಕ:-27/11/2015 ರಂದು ಬೆಳಿಗ್ಗೆ 10-00 ಗಂಟೆಗೆ ಪಿ.ಎಸ್.ಐ ರವರು ಫಿರ್ಯಾದಿದಾರರಾದ ಶ್ರೀ.ಕೆ.ಭರ್ಮಜ್ಜ, ತಂದೆ ಕಾಳಪ್ಪ ಇವರು ಕೊಟ್ಟ ಲಿಖಿತ ದೂರನ್ನು ಠಾಣೆಯ ಪಿ.ಸಿ.873 ರವರ ಮುಖಾಂತರ ಕಳುಹಿಸಿಕೊಟ್ಟಿದ್ದು ಸದರಿ ದೂರನ್ನು ಪರಿಶೀಲಿಸಲಾಗಿ ಅದರಲ್ಲಿನ ಸಾರಾಂಶ ದಿನಾಂಕ 25-11-2015 ರಂದು 00-00 ಗಂಟೆಯಿಂದ 27-11-15 ರ ಬೆಳಿಗ್ಗೆ 8-00 ಗಂಟೆಯ ಮದ್ಯದ ಅವಧಿಯಲ್ಲಿ. ಹ.ಬೊ.ಹಳ್ಳಿ ತಂಬ್ರಹಳ್ಳಿ ತಾರ್ ರಸ್ತೆಯ ಪಕ್ಕದ ಬ್ಯಾಸಿಗಿದೇರಿ ಗ್ರಾಮದ ಹತ್ತಿರ ಇರುವ ಶಿರೂರು ನೀಂಗಜ್ಜನ ಹೊಲದ ಬಳಿ ಸುಮಾರು 40 ವರ್ಷದ ಅನಾಮಧೇಯ ವ್ಯಕ್ತಿಗೆ ಯಾರೊ ದುಷ್ಕರ್ಮಿಗಳು ಆತನಿಗೆ ಆಗದವರು ಆತನನ್ನು ಯಾವುದೊ ಕಾರಣಕ್ಕೋ ಆತನ ಮುಖಕ್ಕೆ ಗಾಯಗೊಳಿಸಿ ಕೊಲೆ ಮಾಡಿ ರಸ್ತೆಯ ಪಕ್ಕದ ತಗ್ಗಿನಲ್ಲಿ ಬಿಸಾಕಿ, ಆತನ ಮೈಮೇಲೆ ಸಜ್ಜೆಯ ಉಬ್ಬಲವನ್ನು ಮುಚ್ಚಿ ಸಾಕ್ಷ್ಯಾದಾರವನ್ನು ನಾಶಪಡಿಸಿದ್ದು ಸದರಿ ಮೃತನು ದುಂಡು ಮುಖದವನಾಗಿದ್ದು ಆತನ ಮೈಮೇಲೆ ಸಿಮೆಂಟ್ ಕಲರಿನ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಬನಿಯನ್, ಹಸಿರು ಬಣ್ಣದ ಡ್ರಾಯರ್, ಕಂದು ಬಣ್ಣದ ಸ್ವೆಟರ್, ಕೆಂಪು ಚೌಕಳಿ ಟವೆಲ್, ಇದ್ದು ಸದರಿ ಮೃತ ದೇಹವನ್ನು ಪಿರ್ಯಾದಿಯು ನೋಡಿ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದು, ಇರುತ್ತದೆ. ಕಾರಣ ಸದರಿ ದೂರಿನ ಮೇರೆಗೆ ಈ ಮೇಲ್ಕಂಡ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. | |||||||||||||||
Hampi Tourism PS | ||||||||||||||||
4 | Cr.No:0021/2015 (IPC 1860 U/s 506,448,354 ) |
27/11/2015 | Under Investigation | |||||||||||||
MOLESTATION - Attempt To Commit | ||||||||||||||||
Brief Facts : | ಪ್ರಕರಣದ
ಪಿರ್ಯಾದಿದಾರಳ ಸ್ವ-ಗ್ರಾಮವು ಬಸವನ ಬಾಗೇವಾಡಿ
ತಾಲೂಕು ನೀಡಗುಂದಿ ಗ್ರಾಮದವಳಾಗಿದ್ದು ಈಗ್ಗೆ ಸುಮಾರು 11 ವರ್ಷಗಳ ಕೆಳಗೆ ಹಂಪಿಯ ಎಸ್.ಐ.ಎಸ್
ನಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮಾಡುವ ವಿರುಪಾಕ್ಷಯ್ಯ ಎಂಬುವರನ್ನು ಮದುವೆಯಾಗಿ ಹಂಪಿಯ
ಪ್ರಕಾಶನಗರದಲ್ಲಿ ವಾಸ ವಿರುತ್ತಾರೆ. ಈ ಹಿಂದೆ ಹಂಪಿ ಉತ್ಸವಕ್ಕೆ ಪ್ರಕರಣದ ಆರೋಪಿತನಾದ ನಿಡಗುಂದಿ ಗ್ರಾಮವಾಸಿ ಮೌಲಾಸಾಬ ನು ಹಂಪಿಗೆ ತನ್ನ ಹೆಂಡತಿ ಮಕ್ಕಳೊಂದಿಗೆ |
|||||||||||||||
ಪ್ರಕರಣದ ಪಿರ್ಯಾದಿದಾರಳ ಮನಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದು ದಿನಾಂಕ:27-11-2015 ರಂದು ಹಂಪಿಯ ಉದ್ದಾನ ವೀರಭದ್ರ ದೇವಾಸ್ಥಾನದಲ್ಲಿ ಮದುವೆ ಇದ್ದುದರಿಂದ ಪ್ರಕರಣದ ಆರೋಪಿತನು ಮದುವೆಗೆಂದು ಬಂದು ದಿನಾಂಕ:27-11-2015 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರಳ ಮನೆಗೆ ಬಂದು ಒಬ್ಬಳೇ ಇದ್ದುದ್ದನ್ನು ನೋಡಿ ಆಕೆಯನ್ನು ಹಿಡಿದು ಮೈ ಕೈ ಮುಟ್ಟಿ ಎಳೆದಾಡಿದಾಗ ಪಿರ್ಯಾದಿದಾರಳು ಕೂಗಿಕೊಂಡಿದ್ದರಿಂದ ಆಕೆಯು ಬಾಯಿಯನ್ನು ಕೈ ವಸ್ತ್ರದಿಂದ ಮುಚ್ಚಿ ಕೂಗಾಡಿದರೆ ಸಾಯಿಸಿಬಿಡುತ್ತೇನೆಂದು ಮಾನಭಂಗ ಮಾಡಲು ಪ್ರಯತ್ನಿಸುತ್ತಿರುವಾಗ ಮನೆಯ ಮುಂದುಗಡೆ ಬೈಕ ನ್ನು ನಿಲ್ಲಿಸಿದ ಶಬ್ದವನ್ನು ಕೇಳಿ ಆರೋಪಿತನು ಪಿರ್ಯಾದಿದಾರಳಿಗೆ ಬಿಟ್ಟು ಅವನು ತಂದಿರುವ ಬೈಕ ನ್ನು ಸ್ಟಾಟ್ ಮಾಡಿಕೊಂಡು ಹೊರಟು ಹೋಗಿರುತ್ತಾನೆ.ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರಕರಣದ ವರ್ತಮಾನ ವರದಿ. | ||||||||||||||||
Kamalapur PS | ||||||||||||||||
5 | Cr.No:0098/2015 (CODE OF CRIMINAL PROCEDURE, 1973 U/s 109 ) |
27/11/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ:- 27/11/2015 ರಂದು ಬೆಳಿಗ್ಗೆ 04-30 ಗಂಟೆ ಸಮಯದಲ್ಲಿ ಠಾಣಾ ಸಿಬ್ಬಂದಿಯೊಂದಿಗೆ ರಾತ್ರಿ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಕಮಲಾಪುರ ಪಟ್ಟಣದ ಜೈಭೀಮ್ ನಗರದ ಬಳಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಪೊಲೀಸ್ ಜೀಪ್ ನ್ನು ನೋಡಿ ಭಯಪಟ್ಟು ಅನುಮಾನಾಸ್ಪದ ರೀತಿಯಲ್ಲಿ ವರ್ತನೆ ಮಾಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸದರಿ ವ್ಯಕ್ತಿಯನ್ನು ಹಿಡಿದ ಸದರಿ ವ್ಯಕ್ತಿಯಿಂದ ಯಾವುದಾರೂ ಸ್ವತ್ತಿನ ಅಪರಾದ ಪ್ರಕರಣಗಳಲ್ಲಿ ಭಾಗಿಯಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಮುಂಜಾಗ್ರತ ಕ್ರಮಕ್ಕಾಗಿ ಸದರಿ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆತಂದು ಆರೋಪಿತನ ವಿರುದ್ಧ ಪ್ರ.ವ ವರದಿ ಸಲ್ಲಿಸಲಾಗಿದೆ. | |||||||||||||||
Kampli PS | ||||||||||||||||
6 | Cr.No:0154/2015 (KARNATAKA POLICE ACT, 1963 U/s 87 ) |
27/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 26/11/2015ರಂದು ಮದ್ಯಾಹ್ನ 2 ಗಂಟೆಗೆ ಮಾನ್ಯ ಸಿ ಪಿ ಐ ಕಂಪ್ಲಿ ಶ್ರೀ,ಲಿಂಗನಗೌಡ ನೆಗಳೂರು ರವರು ಕಛೇರಿಯಲ್ಲಿದ್ದಾಗ ಠಾಣಾ ಸರಹದ್ದಿನ ರಾಮಸಾಗರ ಗ್ರಾಮದ ಬಳಿಯ ಅಯ್ಯೋಧಿ ಮಲ್ಲಯ್ಯನ ಗದ್ದೆಯ ಹತ್ತಿರವಿರುವ ಸಾರ್ವಜನಿಕ ರಸ್ತೆಯಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನ ಬಂದ ಮೇರೆಗೆ ಪಿಎಸ್ಐ ಕಂಪ್ಲಿ ಠಾಣೆ , ಸಿಬ್ಬಂದಿ , ಪಂಚರೊಂದಿಗೆ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಅಂದರ್ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿದ್ದ 23 ಜನ ಆರೋಪಿತರ ಮೇಲೆ ಧಾಳಿ ಮಾಡಿದ್ದು 08 ಜನರು ಓಡಿ ಹೋಗಿದ್ದು 15 ಜನ ಆರೋಪಿತರು ಸಿಕ್ಕಿದ್ದು ಸಿಕ್ಕ ಆರೋಪಿತರಿಂದ ನಗದು ಹಣ ರೂ 120536/-, 08 ಮೋಟಾರ್ ಸೈಕಲ್ ಗಳು , 0 1 ಪ್ಯಾಸೆಂಜರ್ ಆಟೋ, ಇನ್ನೋವಾ ಕಾರು , 52 ಇಸ್ಪೀಟ್ ಎಲೆಗಳು, 01 ಪ್ಲಾಸ್ಟಿಕ್ ತಾಡ್ ಪಾಲ್ ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಆರೋಪಿತರು & ಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ದ ಕ್ರಮ ಜರುಗಿಸಲು ನೀಡಿದ ಜ್ಞಾಪನವನ್ನು ಪಡೆದು ಠಾಣಾ ಎನ್ ಸಿ ನಂ 25/2015 ಕಲಂ 87 ಕೆ ಪಿ ಯಾಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದು ಈ ದಿನ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರ.ವ ವರದಿಯನ್ನು ದಾಖಲಿಸಿದೆ. | |||||||||||||||
ಶುಕ್ರವಾರ, ನವೆಂಬರ್ 27, 2015
PRESS NOTE OF 27/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ