ಭಾನುವಾರ, ನವೆಂಬರ್ 1, 2015

PRESS NOTE OF 01/11/2015

Crime Key Report From   To   
Sl. No FIR No FIR Date Crime Group - Crime Head Stage of case
Kampli  PS
1 Cr.No:0142/2015
(IPC 1860 U/s 363 )
01/11/2015 Under Investigation
KIDNAPPING AND ABDUCTION - Procuration Of Minor Girls - For Other Purpose
Brief Facts :  ದಿನಾಂಕ: 23/10/2015ರಂದು  ಪಿರ್ಯಾದಿದಾರರ ಮೈದುನ ರಮೇಶ ರವರ ಮಗಳು ಪಲ್ಲವಿಯು ಕಂಪ್ಲಿಯ ಪಿರ್ಯಾದಿದಾರರ ಮನೆಯಿಂದ ಬೆಳಿಗ್ಗೆ 8ಗಂಟೆಗೆ ದೇವಸ್ಥಾನಕ್ಕೆ ಹೋಗಿ   ಬರುವುದಾಗಿ ಹೇಳಿ ಹೋಗಿರುತ್ತಾಳೆ.  ಅದೇ ದಿನ  ಪಿರ್ಯಾದಿದಾರರ ಮಗಳು  ಇಂದು  ಪಲ್ಲವಿಯು ದೇವರಾಜನೊಂದಿಗೆ ಇದ್ದುದನ್ನು ಕಂಡಿದ್ದು , ಪಲ್ಲವಿಯು ವಾಪಾಸು ಮನೆಗೆ ಬಂದಿರುವುದಿಲ್ಲ  ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲ . ಮೇಲ್ಕಂಡ ದಿನದಂದು ಅಪ್ರಾಪ್ತ ವಯಸ್ಸಿನ  ಪಲ್ಲವಿಯನ್ನು  ದೇವರಾಜನು ಕಿಡ್ನಾಪ್ (ಅಪಹರಣ) ಮಾಡಿಕೊಂಡು ಹೋಗಿದ್ದು  ಈತನಿಗೆ   ಹನುಮೇಶ ಎನ್ನುವವರು ಸಹಕಾರ ಮಾಡಿರುವ ಬಗ್ಗೆ ಅನುಮಾನವಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತಾ   ಅಪಹರಣಕ್ಕೊಳಗಾದ ಪಲ್ಲವಿಯನ್ನು ಹುಡುಕಿಕೊಡಲು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿದೆ.
Siruguppa PS
2 Cr.No:0226/2015
(INDIAN MOTOR VEHICLES ACT, 1988 U/s 183 ; IPC 1860 U/s 279,337,338 )
01/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಈ ದಿನ ದಿನಾಂಕ; 01-11-15 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಆಲೂರು ತಾಲೂಕಿನ ಸುಳುವಾಯಿ ಗ್ರಾಮದವರಾಗಿದ್ದು ಇವರಗೆ ತಮ್ಮ ಗ್ರಾಮದಲ್ಲಿ ಜಮೀನು ಇದ್ದು ಪಿರ್ಯಾದಿದಾರರು ಮತ್ತು ತಮ್ಮ ಗ್ರಾಮದ ಶಾಷಾಸಾಬ್ ಇವರನ್ನು ತಮ್ಮ ಹೋಂಡಾ ಡ್ರೀಂ ಮೋಟಾರ್ ಸೈಕಲ್ ಚಾಸಿ ನಂ. ME4JC583DD8267915 ನೇದ್ದರಲ್ಲಿ ನವಣಿ ಬೀಜ ತರಲು ಸಿರುಗುಪ್ಪಕ್ಕೆ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಬಂದಿದ್ದು ತಮ್ಮ ಕೆಲಸ ಮುಗಿಸಿಕೊಂಡು ವಾಪಾಸು ತಮ್ಮ ಊರಿಗೆ ಹೋಗಲೆಂದು ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಪಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನಲ್ಲಿ ಹಿಂದೆ ಶಾಷಾಸಾಬ್ ಇವರನ್ನು ಕೂಡಿಸಿಕೊಂಡು ಆದೋನಿ ರಸ್ತೆಯಲ್ಲಿರುವ ರಾಮಾಂಜಿನೇಯ ರೈಸ್ ಮಿಲ್ಲಿನ ಮುಂದೆ ರಾರಾವಿ ಕಡೆಗೆ ಹೋಗುತ್ತಿರುವಾಗ ಅದೇ ಸಮಯ ರಾರಾವಿ ಕಡೆಯಿಂದ ಬರುತ್ತಿದ್ದ ಟಾಟಾ ಏಸ್ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಎಡಬಲ ಕಡೆಗೆ ತಿರುಗಿಸುತ್ತಾ ಬರುತ್ತಿದ್ದನ್ನು ಕಂಡು ಪಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನ್ನು ರಸ್ತೆಯ ಎಡಕ್ಕೆ ನಿಲ್ಲಿಸಿದ್ದು ಸದರಿ ಆಟೋ ಚಾಲಕನು ತನ್ನ ಆಟೋವನ್ನು ಅದೇ ವೇಗದಲ್ಲಿ ನಡೆಸುತ್ತಾ ಬಂದು  ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಹಿಂದೆ ಕುಳಿತ್ತಿದ್ದ ವ್ಯಕ್ತಿ ಶಾಷಾಸಾಬ್ ಇವರ ಬಲಮೊಣಕಾಲಿಗೆ ಪೆಟ್ಟು ರಕ್ತಗಾಯವಾಗಿ ಮೂಳೆ ಮುರಿದು ಪಾದಕ್ಕೆ ಪೆಟ್ಟು ರಕ್ತಗಾಯವಾಗಿದ್ದು ಪಿರ್ಯಾದಿಗೆ ಬಲಮೊಣಕಾಲಿಗೆ ಒಳಪೆಟ್ಟಾಗಿರುತ್ತದೆ. ಅಪಘಾತ ಪಡಿಸಿದ ಟಾಟಾ ಏಸ್ ಆಟೋವನ್ನು ನೋಡಲು ಇದರ ರಿಜಿ. ನಂ.ಕೆಎ-34/ಬಿ-0891 ಇದ್ದು ಇದರ ಚಾಲಕನ ಹೆಸರು ಶಿವುಕುಮಾರ್ ಎಂದು ತಿಳಿದು ಬಂದಿರುತ್ತದೆ. ಅಪಘಾತ ಪಡಿಸಿದ ಟಾಟಾ ಏಸ್ ಆಟೋ ನಂ. ಕೆಎ-34/ಬಿ-0891 ನೇದ್ದರ ಚಾಲಕ ಶಿವುಕುಮಾರ್ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
T.B. Halli PS
3 Cr.No:0039/2015
(IPC 1860 U/s 504,323,324,506,34 )
01/11/2015 Under Investigation
CASES OF HURT - Simple Hurt
Brief Facts :  ಫಿರ್ಯಾದಿ ತಂದೆಗೆ 1) ಉಮೇಶ 2) ಗಂಗಮ್ಮ 3) ಫಿರ್ಯಾದಿದಾರರು 4) ಭಾರತಿ ಅಂತಾ ನಾಲ್ಕು ಜನ ಮಕ್ಕಳಿದ್ದು, ಅವರಿಗೆ ಸಂಬಂಧಿಸಿದ ಪಾಲುಪಟ್ಟಿಯನ್ನು ರಿಜಿಸ್ಟರ್ ಮಾಡಿಸಲು ಈಗ್ಗೆ 1 ತಿಂಗಳ ಹಿಂದೆ ಏಣಿಗಿ ಪಕ್ಕೀರ್ ಸಾಬ್ ಇವರಿಗೆ ಕೊಟ್ಟಿದ್ದು, 1 ತಿಂಗಳಾದರೂ ನೊಂದಣಿ ಮಾಡಿಸದೇ ಇದ್ದುದರಿಂದ ಫಿರ್ಯಾದಿಯು ಪಾಲುಪಟ್ಟಿಯನ್ನು ಪಕ್ಕೀರ್ ಸಾಬ್ ಇವರಿಂದ ವಾಪಸ್ಸು ತೆಗೆದುಕೊಂಡು ಬಂದಿದ್ದು, ಈ ವಿಷಯ ತಿಳಿದ ಫಿರ್ಯಾದಿಯ ಸಂಬಂಧಿ ಕೋಟೆಪ್ಪ ಮತ್ತು ಗಿರೀಶ್ ರವರು ದಿನಾಂಕ : 31-10-2015 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ಏಣಿಗಿ ಗ್ರಾಮದ ದುರುಗಮ್ಮ ದೇವಸ್ಥಾನದ ಹತ್ತಿರ ಫಿರ್ಯಾದಿದಾರರು ಇದ್ದಾಗ ಅಲ್ಲಿಗೆ ಹೋಗಿ ಆ ಪಾಲುಪಟ್ಟಿಯನ್ನು ನಮಗೆ ಕೊಡು ಅಂತಾ ಫಿರ್ಯಾದಿದಾರರನ್ನು ಕೇಳಿದ್ದು ಅದಕ್ಕೆ ಫಿರ್ಯಾದಿದಾರರು ಒಪ್ಪದೇ ಇದ್ದಾಗ ಆರೋಪಿತರು ಲೇ ಸೂಲೇ ಮಗನೇ, ಮಿಂಡ್ರಿಗೆ ಹುಟ್ಟಿದವನೇ ಅಂತಾ ಅವಾಚ್ಯ ಶಬ್ದಗಳಿಂಧ ಬೈದು ಆರೋಪಿ-1 ಕೋಟೆಪ್ಪನು ಅಲ್ಲಿಯೇ ಬಿದ್ದದ್ದ ಕೋಲಿನಿಂದ ಫಿರ್ಯಾದಿ ಎಡ ಕಿವಿಗೆ ಹೊಡೆದು ಒಳಪೆಟ್ಟು ಮಾಡಿದ್ದು,  ಆರೋಪಿ-2 ಗಿರೀಶ್ ನು ಫಿರ್ಯಾದಿಯ ಅಂಗಿಯ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು ಒಳಪೆಟ್ಟು ಮಾಡಿ, ಆರೋಪಿತರಿಬ್ಬರೂ ಪ್ರಾಣ ಬೆಧರಿಕೆ ಹಾಕಿರುತ್ತಾರೆ ಅಂತಾ ಫಿರ್ಯಾದಿ ಹ.ಬೊ ಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಹೆಚ್.ಸಿ 301 ಶ್ರೀ.ಮಂಜುನಾಥರವರ ಮುಂದೆ ನೀಡಿದ 
ಹೇಳಿಕೆ ದೂರನ್ನು ಪಿ.ಸಿ 530 ರವರ ಮುಖಾಂತರ ಕಳುಹಿಸಿದ್ದನ್ನು ಪಡೆದು ಪ್ರಕರಣದ ದಾಖಲಿಸಿದೆ.
Thoranagal PS
4 Cr.No:0165/2015
(IPC 1860 U/s 279 ; INDIAN MOTOR VEHICLES ACT, 1988 U/s 187 )
01/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ನಿವೇದನೆ:-
     ಈ ದಿನ   ದಿನಾಂಕ1/11/2015 ರಂದು 1;00 ಪಿ.ಎಂ.ಗೆ ಹಾಜುರಗಿ  ನೀಡಿದ ದೂರಿನ ಸಾರಂಶವೆನೆಂದರ ದಿನಾಂಕ  30/10/2015 ರಂದು ನಾನು ನಮ್ಮ ಸ್ನೇಹಿತನಾದ  ಅನಿಲ್  ರವರು ಕೂಡಿಕೊಂಡು  ನಮ್ಮ  ಮನೆಗೆ  ನನ್ನ ಕಾರು ನಂ ಕೆಎ/35/ಎನ್/3404 ನೇದ್ದರ ಬರುತ್ತಾ ಇದ್ದೆವು. ಕಾರನ್ನು ನಮ್ಮ ಸ್ನೇಹಿತನಾದ ಅನಿಲ್ ರವರು ಚಾಲನೆ ಮಾಡಿಕೊಂಡು ಬರುತ್ತಾ ಇದ್ದೆವು. ಅದೇ ದಿನ ಸುಮಾರು 7;00 ಪಿ.ಎಂ.ಗೆ ತೋರಣಗಲ್ಲು-ಸಂಡೂರು ರಸ್ತೆಯ   ಜಿಂದಾಲ್ ಎರ್ ಪೂರ್ಟ ಮುಂದೆ ಹೋಗುತ್ತಿರುವಾಗ  ಹಿಂದಿನಿಂದ ಟಿಪ್ಪರ್ ಗಾಡಿ ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನಮ್ಮ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದನು. ಇದರಿಂದ ನನ್ನ ಕಾರು ರೋಡ್ ಡಿವೈಡರ್ ಗೆ ಹೋಗಿ ಡಿಕ್ಕಿ ಹೊಡೆಯಿತು. ನಾನು ಮತ್ತು ನಮ್ಮ ಅನಿಲ್ ರವರು  ಕೆಳಗೆ ಇಳಿದು ನೋಡಲು ನಮ್ಮ ಕಾರು ಹಿಂದೆ ಮತ್ತು ಮುಂದೆ ಜಖಂ ಗೊಂಡಿರುತ್ತದೆ. ನಮ್ಮ ಕಾರಿಗೆ ಹಿಂದಿನಿಂಡ ಡಿಕ್ಕಿ ಹೊಡೆಸಿದ ಲಾರಿ ನಂ ನೋಡಲು ನಂ ಕೆಎ/35/ಎ/8345 ಇದ್ದು ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು  ಜಲಿಲ್ ವಾಸ: ತಾರಾನಗರ   ಎಂದು ತಿಳಿಸಿದನು.ಕಾರಿನಲ್ಲಿದ್ದ ನಮಗೆ ಯಾವುದೇ ರೀತಿ  ಗಾಯಗಳು ಅಗಿರುವುದಿಲ್ಲ  ವಿಷಯವನ್ನು ನಮ್ಮ ಸಂಬಂದಿಕರಿಗೆ ತಿಳಿಸಿ  ಬಂದು ಡಿಕ್ಕಿ ಹೊಡೆಸಿದ ಲಾರಿ ನಂ ಕೆಎ/35/ಎ/8345 ನೇದ್ದರ ಚಾಲಕ ಜಲಿಲ್ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಎಂದು ದೂರು ನೀಡಿದ ಮೇರೆಗೆ ಈ ಗುನ್ನೆ  ದಾಖಲು ಮಾಡಿ ತನಿಖೆ ಕೈಗೊಂಡಿದೆ.(ಪ್ರ.ವ.ವ.ಗೆ  ಪಿರ್ಯಾದಿ ದೂರು ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ