ಸೋಮವಾರ, ನವೆಂಬರ್ 23, 2015

PRESS NOTE OF 23112015

Crime Key Report From   To   
Sl. No FIR No FIR Date Crime Group - Crime Head Stage of case
Gandhinagar PS
1 Cr.No:0244/2015
(CODE OF CRIMINAL PROCEDURE, 1973 U/s 107 )
22/11/2015 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ:22.11.2015 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣಾ ಸರಹದ್ದಿನ ದುರುಗಮ್ಮ ಗುಡಿ ಏರಿಯಾದಲ್ಲಿ ಗಸ್ತು ತಿರುಗಾಡುತ್ತಿದ್ದಾಗ ಪ್ರತಿವಾದಿಗಳ ಮಧ್ಯ ಮನೆ ನಂ.51/2 ನೇದ್ದರಲ್ಲಿಯ ಮನೆಯ ಜಾಗದ ಬಗ್ಗೆ  ತಕರಾರು ಇದ್ದು, ಪರಸ್ಪರ ಸಣ್ಣ ಪುಟ್ಟ ಗಲಾಟೆಗಳನ್ನು ಮಾಡುತ್ತ ಸಾರ್ವಜನಿಕರ ಶಾಂತತೆ ಭಂಗವನ್ನುಂಟು ಮಾಡುತ್ತಿರುತ್ತಾರೆಂದು ತಿಳಿದು ಬಂದಿರುತ್ತದೆ. ಈ ವಿಚಾರದಲ್ಲಿ ಪ್ರತಿವಾದಿಗಳು ಪರಸ್ಪರ ಗಲಾಟೆ ಮತ್ತು ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಪ್ರತಿವಾದಿ-1 ರವರ ವಿರುದ್ದ ಠಾಣಾ ಗುನ್ನೆ ನಂ.201/15 ಕಲಂ:323-324-504-506-114 ರೆವಿ 34  ಐ.ಪಿ.ಸಿ ರಿತ್ಯ ಪ್ರಕರಣ ದಾಖಲಾಗಿದ್ದು, ಸದರಿಯವರು ಪದೇ ಪದೇ ಗಲಾಟೆಗಳನ್ನು ಮಾಡಿಕೊಳ್ಳುತ್ತ ಸಾರ್ವಜನಿಕ ಶಾಂತತೆ ಭಂಗವನ್ನುಂಟು ಮಾಡುತ್ತಿದ್ದರಿಂದ ಸ್ಥಳದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ಸಲುವಾಗಿ ಈ ಪ್ರಥಮ ವರ್ತಮಾನ ವರದಿ.
2 Cr.No:0245/2015
(CODE OF CRIMINAL PROCEDURE, 1973 U/s 41(1)(d),102 ; IPC 1860 U/s 379 )
22/11/2015 Under Investigation
THEFT - Of Automobiles - Of Two Wheelers
Brief Facts :  ದಿನಾಂಕ: 22/11/2015 ರಂದು ಸಂಜೆ 5 -00 ಗಂಟೆಯಿಂದ ನಾನು ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಹೆಚ್.ಸಿ. 345, 202 ಮತ್ತು ಪಿಸಿ 301, 193 ರವರೊಂದಿಗೆ ಠಾಣೆಯ ಸರಹದ್ದಿನಲ್ಲಿ ಸ್ವತ್ತಿನ ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿತರ ಪತ್ತೆಗಾಗಿ ತಿರುಗಾಡಿ, ಬಳ್ಳಾರಿ ನಗರದ ಮೋಕ ರಸ್ತೆಯ ಕೆ.ಇ.ಬಿ ಸರ್ಕಲ್ ನಲ್ಲಿ ವಾಹನಗಳನ್ನು ನಿಲ್ಲಿಸಿ ಚೆಕ್ ಮಾಡುತ್ತಾ ಇದ್ದಾಗ ಸಂಜೆ 6-30 ಗಂಟೆಗೆ ಒಬ್ಬ ವ್ಯಕ್ತಿಯು ಗಾಂಧಿನಗರ ಮಾರ್ಕೆಟ್ ಕಡೆಯಿಂದ ಮೋಕ ಕಡೆಗೆ ಹೋಗಲು ಒಂದು ಕಪ್ಪು ಬಣ್ಣದ ಕವಾಸಕಿ ಕಂಪನಿಯ ಬಾಕ್ಸರ್ ಮೋಟಾರ್ ಸೈಕಲ್ ನಂಬರ್ ಪ್ಲೇಟ್ ಗೆ ಆಕಾಶ ನೀಲಿ ಬಣ್ಣ ಹಚ್ಚಿದ್ದರಿಂದ ತಡೆದು ನಿಲ್ಲಿಸಿ ವಿಚಾರಿಸಲಾಗಿ ಸದರಿ ವಾಹನದಲ್ಲಿ ಬಂದವನನ್ನು ನಾವು ತಪಾಸಣೆ ಮಾಡಲು ಎಲ್ಲಾ ವಾಹನಗಳನ್ನು ನಿಲ್ಲಿಸಿದಂತೆ ನಿಲ್ಲಿಸಿದಾಗ ಅವನನ್ನು ವಿಚಾರಿಸಲು ತನ್ನ ಹೆಸರು ಅಬ್ದುಲ್ಲಾ ತಂದೆ ಗಾದೆಪ್ಪ, ವ. 20 ವರ್ಷ, ವಾಸ: ಹಾಲರವಿ ಮಂಡಲಂ, ಆಲೂರು ತಾಲ್ಲೂಕು ಎಂದು ತಿಳಿಸಿದ್ದು, ನಾವು ಪುನ: ವಿಚಾರಿಸಲು ತನ್ನ ಹೆಸರು ಅಬ್ದುಲ್ ತಂದೆ ಗಾದಿಲಿಂಗ, ವ. 21 ವರ್ಷ, ವಾಸ: ಹಾಲರವಿ, ಆಲೂರು ತಾಲ್ಲೂಕು ಎಂದು ತಪ್ಪು ತಪ್ಪಾಗಿ ನುಡಿದಿದ್ದರಿಂದ ನಮಗೆ ಅನುಮಾನ ಬಂದು ಪುನ: ವಿಚಾರಿಸಲು ತನ್ನ ಹೆಸರು ಪಿಂಜಾರ್ ಅಬ್ದುಲ್ಲಾ ತಂದೆ ಗಾದಿಲಿಂಗಪ್ಪ, ವ. 22 ವರ್ಷ, ಪಿಂಜಾರ್ ಜಾತಿ, ಕೂಲಿ ಕೆಲಸ, ವಾಸ: ಗೂಳ್ಯಂ ಗ್ರಾಮ, ಹಾಲರವಿ ಮಂಡಲಂ, ಕರ್ನೂಲ್ ಜಿಲ್ಲೆ ಎಂದು ತಿಳಿಸಿದ್ದು ಅವನ ಹತ್ತಿರವಿದ್ದ ಮೋಟಾರ್ ಸೈಕಲ್ ನ ದಾಖಲಾತಿಗಳನ್ನು ವಿಚಾರಿಸಲು ತನ್ನಲ್ಲಿರುವುದಿಲ್ಲವೆಂದು ತಿಳಿಸಿದನು.  ಇದೇ ವೇಳೆಗೆ ಬಳ್ಳಾರಿ ನಿಸ್ತಂತು ಘಟಕದಿಂದ ನಿಸ್ತಂತುವಿನಲ್ಲಿ ಕವಾಸಕಿ ಬಾಕ್ಸರ್ ಕಂಪನಿಯ ಮೋಟಾರ್ ಸೈಕಲ್ ಕುರಿತಾಗಿ ಅನುಮಾನ ಬಂದು ವಿಚಾರಿಸಿದಾಗ ಈಗ್ಗೆ ದಿನಗಳ ಹಿಂದೆ ಹೊಸಪೇಟೆ ರಾಣಿಪೇಟೆಯ ಹತ್ತಿರದಿಂದ ಒಂದು ಕವಾಸಕಿ ವಾಹನವು ಕಳುವಾಗಿರುವ ಬಗ್ಗೆ ತಿಳಿದು ಬಂದಿದ್ದು, ಆ ಸದರಿ ವಾಹನಕ್ಕೆ ಬಳಿದಿದ್ದ ಆಕಾಶ ನೀಲಿ ಬಣ್ಣವನ್ನು ಒಂದು ಬೀಗದ ಕೈಯಿಂದ ನಂಬರ್ ಪ್ಲೇಟ್ ಮೇಲೆ ಹಚ್ಚಲಾದ ಆಕಾಶ ನೀಲಿ ಬಣ್ಣವನ್ನು ಕೆರೆದು ನೋಡಿದಾಗ್ಗೆ ಅದರ ನಂ. ಕೆಎ 35/ಜೆ-9655 ಎಂದು ತಿಳಿದು ಬಂದಿದ್ದರಿಂದ ಆರೋಪಿಯು ಮೇಲ್ಕಂಡ ಮೋಟಾರ್ ಸೈಕಲ್ ನ್ನು ಈಗ್ಗೆ ಸುಮಾರು 10 ದಿನಗಳ ಹಿಂದೆ ಹೊಸಪೇಟೆಯ ರಾಣಿಪೇಟೆಯ ಒಂದು ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ ಮೇರೆಗೆ ಸ್ಥಳಕ್ಕೆ ಪಂಚರನ್ನು ಕರೆಯಿಸಿಕೊಂಡು ಮೋಟಾರ್ ಸೈಕಲ್ ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದೆ.
Hirehadagali PS
3 Cr.No:0193/2015
(INDIAN MOTOR VEHICLES ACT, 1988 U/s 183 ; IPC 1860 U/s 279,337 )
22/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಫಿರ್ಯಾದಿದಾರರಿಗೆ ಹೊಳಲು ಮೈಲಾರ ರಸ್ತೆಯಲ್ಲು ಸುಮಾರು 10 ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿಯ ಕೆಲಸಕ್ಕೆ ದಿನಾಂಕ 22-11-2015 ರಂದು ಬೆಳಿಗ್ಗೆ ತಮ್ಮ ಚಾಲಕ ಹನುಮನಗೌಡನಿಗೆ ಟ್ರಾಕ್ಟರನ್ನು ಹೊಲಕ್ಕೆ ತೆಗೆದುಕೊಂಡು ಹೋಗಲು ಹೇಳಿ ನಾನು ಟ್ರಾಕ್ಟರ್ ಹಿಂದೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ, ಬೆಳಿಗ್ಗೆ 10.15 ಗಂಟೆ ಸುಮಾರಿಗೆ ಆರೋಪಿಯು ಲಾರಿ ನಂ. ಎಪಿ-24 ವೈ-5988 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ಹೊಳಲು-ಮೈಲಾರ ರಸ್ತೆಯಲ್ಲಿ ಶಾಂತಪ್ಪನವರ ಬಸವಂತಪ್ಪನವರ ಹೊಲದ ಹತ್ತಿರ ನಮ್ಮ ಟ್ರಾಕ್ಟರನ ಬಲಬದಿಯ ದೊಡ್ಡ ಚಕ್ರದ ಹತ್ತಿರ ಢಿಕ್ಕಿ ಹೊಡೆಸಿದ್ದು, ಹಾಗು ನಮ್ಮ ಟ್ರಾಕ್ಟರ್ ರಸ್ತೆಯ ಎಡಬದಿಯ ತೆಗ್ಗಿನಲ್ಲಿ ಪಲ್ಟಿಯಾಗಿದ್ದು, ಟ್ರಾಕ್ಟರ್ ಚಾಲಕ ಹನುಮನಗೌಡನಿಗೆ ಸೊಂಟಕ್ಕೆ, ಬೆನ್ನಿಗೆ, ಬಲಗೈಗೆ ಮತ್ತು ಬಲಗಡೆ ಮೊಣಕಾಲ ಹತ್ತಿರ ಒಳಪೆಟ್ಟು ಮತ್ತು ತೆರಚಿದ ರಕ್ತಗಾಯಗಳಾಗಿದ್ದು, ನಂತರ ಹನುಮನಗೌಡನಿಗೆ ಚಿಕಿತ್ಸೆಗಾಗಿ ಖಾಸಗಿ ವಾಹನದಲ್ಲಿ ಕಳುಹಿಸಿಕೊಟ್ಟು ಫಿರ್ಯಾದಿಯು ಠಾಣೆಗೆ ಬಂದು  ಲಾರಿ ಚಾಲಕನ ಮೇಲೆ ದೂರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿದೆ.
Hospet Town PS
4 Cr.No:0229/2015
(IPC 1860 U/s 379 )
22/11/2015 Under Investigation
THEFT - Of Automobiles - Of Two Wheelers
Brief Facts :  ಫಿರ್ಯಾದಿದಾರರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶ ಏನಂದರೆ,  ಫಿರ್ಯಾದಿದಾರರ ತಂದೆಯ ಸ್ನೇಹಿತನಾದ ಹರಿಭಾಸ್ಕರ್ ರವರ  ಹೆಸರಿನಲ್ಲಿರುವ  ಕಪ್ಪು ಬಣ್ಣದ ಬಜಾಜ್ ಬಾಕ್ಸ್ರ್ ಸಿಟಿ-100 ಮೋಟಾರ್ ಸೈಕಲ್ ಕೆಎ-35/ಜೆ-9655 ಮೋಟಾರ್ ಸೈಕಲ್ನ್ನು ಈಗ್ಗೆ ಸುಮಾರು 5 ವರ್ಷಗಳ ಹಿಂದೆ ಖರೀದಿಗೆ ನಮ್ಮ ತಂದೆಯವರು ತೆಗೆದುಕೊಂಡಿದ್ದು ಸದರಿ ಮೋಟಾರ್ ಸೈಕಲ್ನ್ನು ನಾನು ಉಪಯೋಗಿಸುತ್ತಿದ್ದು  ದಿನಾಂಕ; 10/11/2015 ರಂದು ರಾತ್ರಿ ಸುಮಾರು 9-00 ಗಂಟೆಗೆ ಕೆಲಸದಿಂದ ವಾಪಾಸು ಬಂದು ನಮ್ಮ ಮನೆಯ ಮುಂದೆ ನಿಲ್ಲಿಸಿ ಬೀಗವನ್ನು ಹಾಕಿಕೊಂಡು ಹೋಗಿದ್ದು ನಂತರ ದಿನಾಂಕ; 11/11/2015 ರಂದು ಬೆಳಿಗ್ಗೆ 6-00 ಗಂಟೆಗೆ ನಾನು ಕೆಲಸಕ್ಕೆ ಹೋಗಲು ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ್ ಸೈಕಲ್ ಇರಲಿಲ್ಲ ನಂತರ ಅಲ್ಲಿಯೇ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗಲಿಲ್ಲ  ನಾನು ಯಾರದರೂ ನನ್ನ ಸ್ನೇಹಿತರು ತೆಗೆದುಕೊಂಡು ಹೋಗಿರಬಹುದೆಂದು ಕೊಂಡಿದೆನು. ನಂತರ ನಾನು ನನ್ನ ಎಲ್ಲಾ ಸ್ನೇಹಿತರನ್ನು ಮೋಟಾರ್ ಸೈಕಲ್ ಮಾಹಿತಿ ತಿಳಿಸಿ ವಿಚಾರಿಸಲು ಇಲ್ಲಿಯ ವರೆಗೆ ನನ್ನ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲ ಕಪ್ಪು ಬಣ್ಣದ ಬಜಾಜ್ ಬಾಕ್ಸ್ರ್ ಸಿಟಿ-100 ಮೋಟಾರ್ ಸೈಕಲ್ ಕೆಎ-35/ಜೆ-9655 ಮೋಟಾರ್ ಸೈಕಲ್ನ್ನು ಚಾಸಿಸ್ ನಂ  DFFBKC65453             ಇಂಜಿನ್ ನಂ: DMMBKC17192 ಇದರ ಅಂದಾಜು ಬೆಲೆ ರೂ; 25,000/-ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಖಾತ್ರಿ ಪಡಿಸಿಕೊಂಡು ಈ ದಿನ  ತಡವಾಗಿ ಠಾಣೆಗೆ ನೀಡಿದ ದೂರಿನ ಮೇರೆಗೆ .
Kudligi PS
5 Cr.No:0193/2015
(IPC 1860 U/s 302 )
22/11/2015 Under Investigation
MURDER - Due To OtherCauses
Brief Facts :  ಈ ದಿನ ದಿನಾಂಕ: ೯-೧೫ ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಕಲ್ಲಪ್ಪ ತಂದೆ ಲೇಟ್ ಬಸಲಿಂಗಪ್ಪ, ಈತನು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶದಲ್ಲಿ ತನಗೆ ೧) ಸಿದ್ದಮ್ಮ ೨) ಸಾವಿತ್ರಮ್ಮ, ೩) ಕೊಟ್ರಮ್ಮ, ಅಂತಾ ಮೂರು ಜನರು ಹೆಂಡತಿಯರಿದ್ದು ಮೊದಲ ಹೆಂಡತಿ ಸಿದ್ದಮ್ಮಳಿಗೆ ೨ ಹೆಣ್ಣು ೧ ಗಂಡು, ೨ ನೇ ಹೆಂಡತಿ ಸಾವಿತ್ರಮ್ಮಳಿಗೆ  ೩ ಹೆಣ್ಣು ೧ ಗಂಡು ಮಕ್ಕಳಿದ್ದು ಹೆಣ್ಣ ಮಕ್ಕಳೆಲ್ಲರಿಗೂ ಮದುವೆ ಮಾಡಿಕೊಟ್ಟಿದ್ದು ಮೊದಲ ಹೆಂಡತಿಯ ಮಗ ಎಸ್. ಪರಮೇಶ್ ಈತನು ಕೂಡ್ಲಿಗಿ ಯಲ್ಲಿ ವಾಸವಾಗಿದ್ದು ಎರಡನೇ ಹೆಂಡತಿಯ ಮಗ ರಮೇಶ ನು ಹನಸಿಯಲ್ಲಿ ಬೇರೆ ಮನೆಯನ್ನು ಮಾಡಿಕೊಂಡು ತನ್ನ ಕುಟುಂಬದೊಂದಿಗೆ ವಾಸವಾಗಿರುತ್ತಾನೆಂದು, ಸಾವಿತ್ರಮ್ಮ ಮತ್ತು ಕೊಟ್ರಮ್ಮ ಇವರುಗಳು ಫಿರ್ಯದಿದಾರರ ಜೊತೆಯಲ್ಲಿ ವಾಸವಾಗಿದ್ದು ಫಿರ್ಯಾದಿದಾರರ ಮಗ ರಮೇಶನು ತನ್ನ ತಾಯಿ ಸಾವಿತ್ರಮಂಳೊಂದಿಗೆ ಮಾತ್ರ ಮಾತನಾಡುತ್ತಿದ್ದು ಫಿರ್ಯಾದಿದಾರರೊಂದಿಗೆ ಮತ್ತು ಮೃತ ಕೊಟ್ರಮ್ಮಳೊಂದಿಗೆ ಮಾತನಾಡುತ್ತಿರುವುದಿಲ್ಲವೆಂದು ನಿನ್ನೆ ದಿನ ದಿನಾಂಕ: ೨೧/೧೧/೨೦೧೫ ರಂದು ಮದ್ಯಾಹ್ನ ೨-೩೦ ಗಂಟೆ ಸುಮಾರಿಗೆ  ಫಿರ್ಯಾದಿದಾರರು ಮಾದೀಹಳ್ಳಿ ಗ್ರಾಮಕ್ಕೆ ತನ್ನ ಮಗಳು ಶಂಕ್ರಮ್ಮಳನ್ನು ನೋಡಿಕೊಂಡು ಬರಲು ಹೋಗಿದ್ದು ಈ ದಿನ ದಿನಾಂಕ: ೨೨/೧೧/೨೦೧೫ ರಂದು ಬೆಳಿಗ್ಗೆ ೬-೦೦ ಗಂಟೆಗೆ ಹನಸಿ ಗ್ರಾಮದ ಬಸವರಾಜ ಎಂಬುವವರು ತನಗೆ ಫೋನ್ ಮಾಡಿ ನಿನ್ನ ಸಣ್ಣ ಹೆಂಡತಿ ಕೊಟ್ರಮ್ಮ ಮನೆ ಹತ್ತಿರ ರಸ್ತೆಯಲ್ಲಿ ಸತ್ತು ಬಿದ್ದಿರುತ್ತಾಳೆಂದು ತಿಳಿಸಿದ ಮೇರೆಗೆ ತಾನು ಮಾದೀಹಳ್ಳಿ ಗ್ರಾಮದಿಂದ ತನ್ನ ಸಂಬಂದಿಯೊಂದಿಗೆ ಬೆಳಿಗ್ಗೆ ೭-೪೫ ಗಂಟೆಗೆ ಹನಸಿ ಗ್ರಾಮಕ್ಕೆ ಬಂದು ನೋಡಿದಾಗ ತನ್ನ ಹೆಂಡತಿ ಕೊಟ್ರಮ್ಮ ಸತ್ತು ಬಿದ್ದಿದ್ದು ಆಕೆಯ ಕುತ್ತಿಗೆಯಲ್ಲಿ ಕಂದು ಗಟ್ಟಿದ ಗಾಯವಾಗಿರುವುದು ಕಂಡು ಬಂದಿದ್ದು ತನ್ನ ಹೆಂಡತಿಯನ್ನು ಯಾರೋ ತನಗೆ ಆಗದವರು ಆಕೆಯ ಕುತ್ತಿಗೆಯಲ್ಲಿ ಯಾವುದೋ ವಸ್ತುವಿನಿಂದ ಬಿಗಿದು ಕಟ್ಟಿ ಕೊಲೆ ಮಾಡಿ ಆಕೆಯ ಕಿವಿಯಲ್ಲಿ ಇದ್ದ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆಂದು ತನ್ನ ಹೆಂಡತಿಯನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಸಾರಾಂಶದ ಮೇರೆಗೆ ಠಾಣಾ ಗುನ್ನೆ ನಂ ೧೯೩/೨೦೧೫ ಕಲಂ ೩೦೨ ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ.
Kuduthini PS
6 Cr.No:0143/2015
(IPC 1860 U/s 279 )
22/11/2015 Under Investigation
MOTOR VEHICLE ACCIDENTS NON-FATAL - National Highways
Brief Facts :  ಈ ದಿನ ದಿನಾಂಕ:- 22.11.2015 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿದಾರನು ಬೊಲೊರೊ ನಂ, ಕೆಎ-37/ಎಂ.8541 ನೇದ್ದರಲ್ಲಿ ತೋರಣಗಲ್ಲು ಕಡೆಯಿಂದ ಬಳ್ಳಾರಿ ಕಡೆಗೆ ಎನ್.ಹೆಚ್. 63 ರಸ್ತೆಯಲ್ಲಿ ಕೆಪಿಸಿಎಲ್ ಗೇಟ್ ದಾಟಿದ ನಂತರ ಬರುತ್ತಿರುವಾಗ ರಸ್ತೆಯಲ್ಲಿ ತಗ್ಗು ಇದ್ದುದ್ದರಿಂದ ನಿಧಾನವಾಗಿ ಬೊಲೊರೊವನ್ನು ತಗ್ಗುನ್ನು ಇಳಿಸಿ ನಿಧಾನವಾಗಿ ಚಲಾಯಿಸುತ್ತಿದ್ದು,  ಅದೇ ವೇಳೆಗೆ ಹಿಂದೆ ಬಂದ ಲಾರಿನಂ, ಕೆಎ-52/ಎ-1877 ನೇದ್ದರ ಚಾಲಕ ಮಂಜುನಾಥ ನು ಲಾರಿಯನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಬೊಲೊರೊ ಹಿಂದೆ ಡಿಕ್ಕಿ ಹೊಡೆಸಿದ ಪರಿಣಾಮ ಬೊಲೊರೊ ಜಖಂಗೊಂಡಿರುತ್ತದೆ. ಬೊಲೊರೊದಲ್ಲಿವರಿಗೆ ಯಾವುದೇ ಗಾಯಳಾಗಿರುವುದಿಲ್ಲ. ಅದ್ದರಿಂದ 
ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ರತಿ ಲಗತ್ತಿಸಿದೆ)
Marriyammanahalli PS
7 Cr.No:0139/2015
(IPC 1860 U/s 186,506,510,504 )
22/11/2015 Under Investigation
PUBLIC NUISANCE - Public Nuisance
Brief Facts :  ಈ ದಿನ ದಿನಾಂಕ-22/11/2015 ರಂದು ಬೆಳಿಗ್ಗೆ 7.00 ಗಂಟೆಗೆ ಪಿರ್ಯಾದಿ ಯು.ಚಿದಾನಂದ ಪಿ.ಸಿ.120 ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ದೂರಿನ ಸಾರಾಂಶ- ಚಿದಾನಂದ, ಪಿ.ಸಿ. ೧೨೦ ಮರಿಯಮ್ಮಹಳ್ಳಿ ಪೊಲೀಸ್ ಠಾಣೆ. ಆದ ನಾನು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಈ ದಿನ ದಿ:೨೨-೧೧-೧೫ ರಂದು ಬೆಳಿಗಿನ ಜಾವ ೧-೩೦ ಗಂಟೆ ಸುಮಾರಿಗೆ ನಾನು ಮತ್ತು ಪಿ.ಸಿ. ೮೬ ಶ್ರೀ. ಬಾಗ್ಯನಾಯ್ಕ ಇಬ್ಬರು ಠಾಣೆಯಲ್ಲಿ ಹಾಜರಿರುವಾಗ ಠಾಣಾಧಿಕಾರಿ ಶ್ರೀ. ವೇಣುಗೋಪಾಲ ರವರು ಎಂ.ಎಂ. ಹಳ್ಳಿ ೪ನೇ ವಾರ್ಡಿನಲ್ಲಿ ಗಲಾಟೆ ಆಗುತ್ತಿದೆ. ಎಂದು ವೆಂಕಟೇಶ ಎಂಬುವರು ಬಂದು ತಿಳಿಸಿದ್ದಾರೆ ನೀನು, ಪಿ.ಸಿ. ೮೬ ರವರ ಸಂಗಡ ಹೋಗಿ ಬಾ ಎಂದು ತಿಳಿಸಿದನು.            
         ಕೂಡಲೆ ನಾನು ಮತ್ತು ಪಿ.ಸಿ. ೮೬ ಬಾಗ್ಯನಾಯ್ಕನ ಸಂಗಡ ಬೆಳಗಿನ ಜಾವ ೧-೪೦ ಗಂಟೆಗೆ ೪ನೇ ವಾರ್ಡಿನಲ್ಲಿ ಹೋಗಲು ಪಂಪಣ್ಣ ರವರ ಮನೆ ಮಾಳಿಗೆ ಮೇಲೆ ಸುಮಾರು ೧೫ ರಿಂದ ೨೦ ಜನರು ಇದ್ದು ಜೋರಾಗಿ ಕೇಕೆ ಹೊಡೆಯುತ್ತಾ, ಮದ್ಯಪಾನ ಸೇವಿಸುತ್ತಾ ಚೀರಾಡುತ್ತಾ ಸಾರ್ವಜನಿಕರಿಗೆ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡುತ್ತಾ ಇದ್ದು ಇವರ ಆರ್ಭಟಕ್ಕೆ ಓಣಿಯ ಜನರು ಹೊರಗಡೆ ಬಂದು ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಕೂಡಲೆ ನಾನು, ಪಿ.ಸಿ. ೮೬ ರವರ ಸಂಗಡ ಹೋಗಿ ಅವರ ಪೈಕಿ ಒಬ್ಬನಿಗೆ ಕರೆದು ವಿಚಾರಿಸಲು, ತನ್ನ ಹೆಸರು ಸುಖೇಶ್ ಎಂದು ತಿಳಿಸಿ ನನ್ನದು ಬರ್ತಡೇ ಪಾರ್ಟಿ ಇದೆ ಎಲ್ಲಾರಿಗೆ ನಾನು, ಪಾರ್ಟಿ ಕೊಡುತ್ತಿದ್ದೇನೆ. ಎಂದು ತಿಳಿಸಿದೆನು. ಇದು ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಇಲ್ಲಿಗೆ ನಿಲ್ಲಸಿಬಿಡು ಎಂದು ತಿಳಿಸಿದೆವು. ಸುಖೇಶನು ನಾವೇನು ಪ್ರತಿ ದಿನ ಪಾರ್ಟಿ ಮಾಡುತ್ತ್ತೀವೆನು. ಅದನ್ನು ಕೇಳೋಕೆ ಇಲ್ಲಿಗೆ ಬಂದಿಯಾ ಹೋಗಿ ನೈಟ್ ಬೀಟ್ ಮಾಡು ಎಂದು ಘದರಿಸಿದನು. ಇದನ್ನು ಕೇಳಿ ವಿದ್ಯಾಸಾಗರ ಮತ್ತು ದಾಮೋದರ ಪಾಂಡ್ಯ @ ರಾಜು ಪಾಂಡ್ಯ ಎಂಬ ಮತ್ತಿಬ್ಬರು ಬಂದು  ಈ ಪೊಲೀಸೋಳ್ಳು ಇಕ್ಕಡಿಕೆಂದುಕು ವಚ್ಚಿನಾರು. ಈ ಲಂಜಾಕೊಡಕೊಳ್ಳದಿ ಈಡೇಮ್ ಫನಿ  ಎಂದು ಬಾಯಿಗೆ ಬಂದಂತೆ ದುರ್ಬಾಷೆಗಳಿಂದ ಬೈದರು. ನಾನು ಮತ್ತು ಪಿ.ಸಿ. ೮೬  ಇಬ್ಬರು ತುಂಬಾ ಹೊತ್ತು ಸಮಾದಾನ ಮಾಡಿದರು ಸಹಾ ನಮ್ಮ ಮಾತು ಕೇಳಲಿಲ್ಲ. ಕರ್ತವ್ಯದಲ್ಲಿ ಇದ್ದ ನಮಗೆ ಸುಖೇಶನು  ಲೇ ಸೂಳೆ ಮಕ್ಕಳೆ ನಮ್ಮ ಪಾರ್ಟಿ ತಂಟೆಗೆ ಬಂದರೆ ನಿಮಗೆ ಸಾಯಿಸಿ ಬಿಡುತ್ತೇವೆ ನೋಡು  ಎಂದು ಬೈದರು. ಇವರ ಉಪಟಳ ಜಾಸ್ತಿಯಾಗಿದ್ದರಿಂದ ಇನ್ನು ಹೆಚ್ಚಿನ ಸಿಬ್ಬಂದಿಯನ್ನು ಕಳಿಸಿಕೊಡಲು ಠಾಣೆಗೆ ಪೋನ್ ಮಾಡಿ ತಿಳಿಸಿದೆನು. ಸ್ವಲ್ಪ ಹೊತ್ತಿನಲ್ಲಿ ನಮ್ಮ ಠಾಣೆಯಿಂದ ಪಿ.ಸಿ. ೭೨೦, ೭೦೬ ರವರುಗಳು ಮತ್ತು ಸಾರ್ವಜನಿಕರು ಬಂದಿದ್ದನ್ನು ನೋಡಿ ಮಾಳಿಗೆ ಮೇಲೆ ಇದ್ದ ಜನರು ಪರಾರಿಯಾದರು.             
         ಸುಖೇಶ್ ಎಂಬುವರು ಎಂ.ಎಂ. ಹಳ್ಳಿ ೪ನೇ ವಾರ್ಡಿನಲ್ಲಿ ತನ್ನ ಬರ್ತಡೇ ಪಾರ್ಟಿ ಏರ್ಪಡಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮದ್ಯಪಾನ ಸೇವಿಸಿ ಅನುಚಿತವಾಗಿ ವರ್ತಿಸುತ್ತಾ ಕೇಕೆ ಹೊಡೆಯುತ್ತಾ ಇದ್ದು ಉಪಟಳವನ್ನು ತಡೆಯಲು ಹೋದ ನಮಗೆ ಸಹಾ ದುರ್ಬಾಷೆಗಳಿಂದ ಬೈದು ಪ್ರಾಣ ಭಯ ಹಾಕಿರುತ್ತಾರೆ. ೧) ಸುಖೇಶ್ ೨) ವಿದ್ಯಾಸಾಗರ ೩) ದಾಮೋದರ ಪಾಂಡ್ಯ @ ರಾಜು ಪಾಂಡ್ಯ ೪) ಮಂಜುನಾಥ ಮತ್ತು ಇತರರು ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಈ ಘಟನೆ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಈ ವೇಳೆಗೆ ತಡವಾಗಿ ಠಾಣೆಗೆ ದೂರು ನೀಡಿರುತ್ತೇನೆ. ಎಂದು ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.
Moka PS
8 Cr.No:0163/2015
(KARNATAKA MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 192(a),73 ; IPC 1860 U/s 379 )
23/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿನಾಂಕ:23-11-15 ರಂದು01-45 ಗಂಟೆಗೆ ಮಾನ್ಯ ಪಿ ಎಸ್ ಐ ರವರು ಠಾಣೆಗ ಬಂದು ಕೊಟ್ಟ ವಿಶೇಷ ವರದಿ ಎನಂದರೇ
, ಈ ದಿನ ದಿನಾಂಕ:೨೨-೧೧-೧೫ ರಂದು ರಾತ್ರಿ ೯-೪೫ಗಂಟೆಗೆ ನಾನು  ೪ನೇ ಗ್ರಾಮ ಗಸ್ತುಗಳ ಹಳ್ಳಿಗಳ ಮೇಲೆ ವಿಶೇಷ ರಾತ್ರಿ ಗಸ್ತು ಕರ್ತವ್ಯ ಮಾಡಲು ನನ್ನ ಜೊತೆಯಲ್ಲಿ ಪಿಸಿಸ್-೧೫೪-೨೯೫ರವರೊಂದಿಗೆ ನಮ್ಮ ಜೀಪ್‌ನಲ್ಲಿ ಕರೆದುಕೊಂಡು ಹೋಗಿ ಜಾಲಿಬೆಂಚಿ ಗ್ರಾಮದಲ್ಲಿ ಗಸ್ತು ತಿರುಗಾಡಿ ನಂತರ ರಾತ್ರಿ ೧೧ ಗಂಟೆಗೆ ಕೊರಲಗುಂದಿ ಗ್ರಾಮದಲ್ಲಿ ರಾತ್ರಿ ಗಸ್ತು ಮಾಡುತ್ತಿರುವಾಗ ನನಗೆ ಪೋನ್ ಮೂಖಾಂತರ ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ ಒಂದು ಟ್ರಾಕ್ಟರ ಟ್ರಾಲಿಯಲ್ಲಿ ಚಾಲಕನು ಅಕ್ರಮವಾಗಿ ಮರಳು ತುಂಬಿಕೊಂಡು ಕೆ.ಕೆ.ಹಾಳ್ ಮುಖಾಂತರ ಬಳ್ಳಾರಿ ಕಡೆಗೆ ಹೋಗುತ್ತಿದ್ದಾನೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ರಾತ್ರಿ ೧೧-೩೦ ಗಂಟೆಗೆ ಕೆ.ಕೆ.ಹಾಳ್ ಗ್ರಾಮಕ್ಕೆ ಬಂದು  ಗುಡಿ ಮುಂದೆ ಇದ್ದ  ಇಬ್ಬರು ಪಂಚರನ್ನು ಬರಮಾಡಿಕೊಂಡು  ಇವರಿಗೆ ಪಂಚರಂತ ಹೇಳಿ ನೋಟೀಸ್ ಜಾರಿ ಮಾಡಿ ಸದರಿ ದಾಳಿಗೆ  ಪಂಚರಾಗಿ ವಿವರವಾದ ಪಂಚನಾಮೆಯನ್ನು ಬರೆಯಿಸಿಕೊಡಲು ತಿಳಿಸಿ ಕೇಳಿಕೊಂಡ ಮೇರೆಗೆ ಪಂಚರು ಪಂಚರಾಗಲು ಒಪ್ಪಿಕೊಂಡಿದ್ದು. ಇವರೊಂದಿಗೆ ರಾತ್ರಿ ೧೧-೪೫ ಗಂಟೆಗೆ  ಕೆ.ಕೆ.ಹಾಳ್ ಗ್ರಾಮದ ಶ್ರೀ.ಕಲ್ಲುನಾಥೇಶ್ವರ ಗುಡಿ ಮುಂದೆ ಕಾಯುತ್ತಿರುವಾಗ  ಮರಳು ತುಂಬಿದ ಒಂದು ಟ್ರಾಕ್ಟರ್ ಟ್ರಾಲಿಯು ಬರುತ್ತಿದ್ದನ್ನು ನೋಡಿ ದಿ:೨೩-೧೧-೧೫ ರಂದು ೦೦-೦೫ ಗಂಟೆಗೆ ನಾನು ನನ್ನ ಸಿಬ್ಬಂದಿರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಯನ್ನು ಮತ್ತು ಚಾಲಕನನ್ನು  ಹಿಡಿಯಲು ಹೋದಾಗ  ಚಾಲಕ ನಮ್ಮ ಇಲಾಖೆಯ ಜೀಪ್ ನೋಡಿ  ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು. ಅಲ್ಲೇ ಇದ್ದ ನಮಗೆ ಪರಿಚಯವಿದ್ದ ವ್ಯಕ್ತಿಯಾದ ಶ್ರೀ ಜಮಲ್ ಸಾಬ್ ತಂದೆ ಮರಿಸಿದ್ದಪ್ಪ ವ:೩೦ವರ್ಷ ಮುಸ್ಲಿಂ ಜನಾಂಗ,ಬೇಸಯ ಕೆಲಸ ವಾಸ: ಹರಿ ಚಂದ್ರನಗರ ಸಂಗನಕಲ್ಲು ಗ್ರಾಮರವರನ್ನು ಆಗ ಓಡಿ ಹೋದ ಟ್ರಾಕ್ಟರ್ ಟ್ರಾಲಿಯ ಮಾಲಿಕರ & ಚಾಲಕನ ಹೆಸರು ಮತ್ತು ವಿಳಾಸ
ಹುಸೇನ ಸಾಬ್ ತಂದೆ ಕಾಶೀಂಸಾಬ್ ವ:೪೫ವರ್ಷ ಮುಸ್ಲಿಂ ಜನಾಂಗ, ಟ್ರಾಕ್ಟರ್ ನಂ:ಕೆ:ಎ:೩೪:ಟಿ:ಎ;೩೮೦೮ & ಟ್ರಾಲಿ ನಂಬರ್ ಇರುವುದಿಲ್ಲ ಚಾಸಿ ನಂ:೪೭/೨೦೦೮-೦೯ನೇದ್ದರ ಮಾಲಿಕ ಮತ್ತು ಚಾಲಕ ವಾಸ:ಸಂಗನಕಲ್ಲು ಗ್ರಾಮ ಅಂತ ತಿಳಿಸಿದನು. ಮತ್ತು ಟ್ರಾಲಿಯಲ್ಲಿ ಮರಳು ಇರುತ್ತದೆ.
 ಈ ಮರಳನ್ನು ಎಲ್ಲಿ ತುಂಬಿದು ಅಂತ ಸಾಕ್ಷಿದಾರರನ್ನು ವಿಚಾರಿಸಿದಾಗ ರಾತ್ರಿ ೯-೩೦ ಗಂಟೆಯಿಂದ ೧೦-೩೦ ಗಂಟೆಯ ಮದ್ಯದ ಅವಧಿಯಲ್ಲಿ ಬೆಣಕಲ್ಲು ಗ್ರಾಮದ ವೇದಾವತಿ ಹಗರಿಯಲ್ಲಿ ತುಂಬಿದು ಅಂತ ತಿಳಿಸಿದನು. ಆಗ ಪಂಚರ ಸಮಕ್ಷಮ ದಿ:೨೩-೧೧-೧೫ ರಂದು ೦೦-೦೦ ಗಂಟೆಯಿಂದ ೦೧-೦೦ ಗಂಟೆಯವರೆಗೆ ಮರಳು ತುಂಬಿದ ಟ್ರಾಕ್ಟರ ಟ್ರಾಲಿ ಸಿಕ್ಕ ಸ್ಥಳದ ಮತ್ತು ಜಪ್ತು ಪಂಚನಾಮೆ ಮಾಡಿಕೊಂಡಿದೆ.
 ಕಾರಣ ಮೇಲ್ಕಂಟ ಟ್ರಾಕ್ಟರ್ ಟ್ರಾಲಿಯ ಮಾಲಿಕ ಮತ್ತು ಚಾಲಕನು ಯವುದೇ ಅಧಿಕೃತ ಪರಾನಿಗೆ ಇಲ್ಲದೇ ಅನಧಿಕೃತವಾಗಿ ಮರಳನ್ನು ಕಳ್ಳತನದಿಂದ ಬೆಣಕಲ್ಲು ಗ್ರಾಮದ ವೇದಾವತಿ ಹರಿಯಲ್ಲಿನ ಸರ್ಕಾರಿ ಜಮೀನಿನಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಮೇಲ್ಕಂಡ ಟ್ರಾಕ್ಟರ್ ಟ್ರಾಲಿಯ ಮಾಲಿಕ & ಚಾಲಕನ ವಿರುದ್ದ ಕಲಂ:೪೨-೪೩-೪೪-ಕೆ.ಎಂ.ಎಂ.ಸಿ ರೋಲ್ಸ್ ಮತ್ತು ಕಲಂ:೨೧(ಎ)ಎಂಎಂಆರ್‌ಡಿ ಯಾಕ್ಟ್ ಮತ್ತು ಕಲಂ:೭೩-೧೯೨(ಎ)ಕೆ.ಎಲ್.ಆರ್. ಯಾಕ್ಟ್ ಮತ್ತು ಕಲಂ:೩೭೯ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು  ಪಿ ಎಸ್ ಐ ರವರು  ಠಾಣೆಗೆ ೦೧-೩೦ ಗಂಟೆಗೆ ಬಂದು ತಮ್ಮ ವಿಶೇಷ ವರದಿಯನ್ನು ನನಗೆ ನೀಡಿದ್ದರಿಂದ ಮೇಲ್ಕಂಡ ಗುನ್ನೆ ದಾಖಲಿಸಿ್ಕೊಂಡು ತನಿಖೆ ಕೈಗೊಂಡಿದೆ.
Siruguppa PS
9 Cr.No:0243/2015
(INDIAN MOTOR VEHICLES ACT, 1988 U/s 183,187 ; IPC 1860 U/s 279,338 )
22/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಈ ದಿನ ದಿನಾಂಕ 22-11-2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಸ್. ಸಲೀಂ ರವರು ಠಾಣೆಗೆ ಹಾಜರ್ ಆಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಈ ದಿನ ದಿ:22-11-15 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಆದೋನಿ ರಸ್ತೆಯಲ್ಲಿ ಪಿರ್ಯಾದಿಯು ಮತ್ತು ತನ್ನ ಸ್ನೇಹಿತ ಮಸ್ತಾನ್ ಇಬ್ಬರು ತಮ್ಮ ಮೋಟಾರ್ ಸೈಕಲ್ ನಲ್ಲಿ ರಾರಾವಿ ಕಡೆಗೆ ಅನ್ನಪೂರ್ಣ ರೈಸ್ ಮಿಲ್ ಮುಂದೆ ಹೋಗುತ್ತಿರುವಾಗ ಅದೋನಿ ಕಡೆಯಿಂದ ಬರುತ್ತಿದ್ದ ಆಟೋವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ತಮ್ಮ ಮುಂದೆ ರಸ್ತೆಯ ಎಡ ಬದಿಗೆ ಹೋಗುತ್ತಿದ್ದ  ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಮತ್ತು ಡಿಕ್ಕಿ ಹೊಡೆಸಿದ ಆಟೋ ಎರಡೂ ಅನ್ನಪೂರ್ಣ ರೈಸ್ ಮಿಲ್ಲಿನ ಪಕ್ಕದಲ್ಲಿರುವ ತಗ್ಗಿನಲ್ಲಿ ಬಿದ್ದಿದ್ದು, ಕೂಡಲೇ ಪಿರ್ಯಾದಿಯು ಮತ್ತು ಮಸ್ತಾನ್ ಇಬ್ಬರು ಹೋಗಿ ನೋಡಲು ಮೋಟಾರ್ ಸೈಕಲ್ ಸವಾರನು ಸಿದ್ದಲಿಂಗೇಶ್ವರ ರೈಸ್ಮಿಲ್ಲಿನಲ್ಲಿ ಫಿಟ್ಟರ್ ಕೆಲಸ ಮಾಡುವ ರಹೆಮಾನ್ ಸಾಬ್ ಇದ್ದು ಈತನ ಬಲಮೊಣಕಾಲಿಗೆ ಮತ್ತು ಕೆಳಗೆ ಪೆಟ್ಟು ಬಿದ್ದು ಮೂಳೆ ಮುರಿದಿದ್ದು, ಬಲಬಪಾದದ ಹತ್ತಿರ ಹಾಗೂ ಬಲಗಡೆಯ ಹಣೆಪಟ್ಟಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ. ಈತನು ನಡೆಸುತ್ತಿದ್ದ ಮೋಟಾರ್ ಸೈಕಲ್ ನೋಡಲು ಇದರ ನಂ. ಕೆಎ-34/ಯು-6889 ಇದ್ದು ಹೀರೋ ಹೋಂಡಾ ಕಂಪನಿಯದಾಗಿರುತ್ತದೆ. ಅಪಘಾತ ಪಡಿಸಿದ ಅಟೋ ಚಾಲಕನು ಸ್ಥಳದಿಂದ ಓಡಿಹೋಗಿದ್ದು ಇದರ ನಂ. ಕೆಎ-36/ಎ-7063 ಇದ್ದು  ಸದರಿ ಆಟೋ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ಸದರಿ ಅಪಘಾತದಲ್ಲಿ ಗಾಯಗಳಾದ ರಹೆಮಾನ್ ಸಾಬ್ ಈತನಿಗೆ ಪಿರ್ಯಾದಿಯು, ಮಸ್ತಾನ್, ಇಕ್ಬಾಲ್ ಮತ್ತು ರಾಮಕೋಟಿ ರೆಡ್ಡಿ ರವರೊಂದಿಗೆ ಸೇರಿ ಚಿಕಿತ್ಸೆಗಾಗಿ ಅಂಬುಲೇನ್ಸ್ ನಲ್ಲಿ ಸಿರುಗುಪ್ಪ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದು.  ಅಪಘಾತ ಪಡಿಸಿ ಓಡಿ ಹೋದ ಆಟೋ  ನಂ. ಕಎ-36/ಎ-7063 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
10 Cr.No:0244/2015
(IPC 1860 U/s 379 )
22/11/2015 Under Investigation
THEFT - Jewellery
Brief Facts :  ಈ ದಿನ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆಂದರೆ, ಈ ದಿನ ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ತಾಯಿ ಅಂಗಡಿಯಲ್ಲಿದ್ದಾಗ ನಾಲ್ಕು ಜನ  ಹೆಣ್ಣು ಮಕ್ಕಳು ನಮ್ಮ ಅಂಗಡಿಗೆ ಬಂದಿದ್ದು, ಅದರಲ್ಲಿ ಇಬ್ಬರು ಯಾವುದೇ ಖರೀದಿ ಮಾಡದೇ  ವಾಪಸ್ಸು ಹೋಗಿರುತ್ತಾರೆ. ಆ ಇಬ್ಬರು ಹೆಂಗಸರಲ್ಲಿ  ಒಬ್ಬಳು  ಸುಮಾರು  60 ವರ್ಷದ ಹೆಂಗಸು ಗೋದಿ  ಮೈಬಣ್ಣ, ದುಂಡನೆ ಮುಖ, ಸುಮಾರು 4 1/2 
ಅಡಿ ಎತ್ತರದವಳಾಗಿದ್ದು, ಚಾಕಲೇಟ್ ಕಲರ್ ಸೀರೆಯು ಇದ್ದು  ಸೆರಗಿನ ಮೇಲೆ  ಬಿಳಿ ಬಣ್ಣದ ಹೂಗಳಿರುವ  ಸೀರೆಯನ್ನು ಉಟ್ಟುದ್ದಳು, ಕೈಯಲ್ಲಿ  ಬಿಳಿ ಮತ್ತು ಪರ್ಪಲ್ ಕಲರಿನ ಡಿಸೈನ್ಯುಳ್ಳ  ಬೆಡ್ಶೀಟ್ನಿಂದ ಮಾಡಿದ  ಕೈ ಚೀಲ ಹಿಡಿದುಕೊಂಡಿದ್ದಳು. ಇನ್ನೊಬ್ಬಳು ಸುಮಾರು 25 ವರ್ಷದ ಹೆಂಗಸು  ಗೋದಿಮೈ ಬಣ್ಣ ,ಕೋಲು ಮುಖ, ಸುಮಾರು 5 ಅಡಿ ಎತ್ತರದವಳಾಗಿದ್ದು. ಕಪ್ಪು ಬಣ್ಣದ ಸೀರೆಗೆ ಗೊಲ್ಡ್ ಕಲರಿನ ಅಂಚುಯುಳ್ಳ  ಸೀರೆಯನ್ನು ತೊಟ್ಟಿದ್ದು ಕಪ್ಪು ಬಣ್ಣದ  ಬಟ್ಟೆಯ ಚಿಕ್ಕ ಬ್ಯಾಗ್ ಕೈಯಲ್ಲಿದ್ದು ಈ ಇಬ್ಬರೂ ನನಗೆ  ಬೆಳ್ಳಿ ಗ್ಲಾಸ್ ತೋರಿಸುವಂತೆ  ಕೇಳಿದ್ದು  ಆಗ ನಾನು ಹಿಂದಕ್ಕೆ ತಿರುಗಿ  ಶ್ಯೋಕೇಸ್ನಲ್ಲಿದ್ದ ಬೆಳ್ಳಿ ಗ್ಲಾಸ್ಗಳನ್ನು   ತೆಗೆದುಕೊಂಡು ಅವರಿಗೆ, ತೋರಿಸಲು  ನೋಡಿದಾಗ  ಆ ಇಬ್ಬರು ಹೆಂಗಸರು ಕಾಣಲಿಲ್ಲ.  ನನಗೆ ಅನುಮಾನ ಬಂದು ನೋಡಲು ನಾಲ್ಕು ಬಿಳಿ ಪ್ಲಾಸ್ಟಿಕ್ ಡಬ್ಬಿಗಳು ಕೆಳಗೆ ಬಿದ್ದಿದ್ದು  ನೋಡಿ ನನಗೆ ಗಾಬರಿಯಾಗಿ   ಟೇಬಲ್ ಡ್ರಾ ತೆಗೆದು ನೋಡಲು ಅಲ್ಲಿ ನಾನು ಇಟ್ಟಿದ್ದ  ಐದು  ಬಿಳಿ ಪ್ಲಾಸ್ಟಿಕ್ ಡಬ್ಬಿಗಳು ಕಾಣಲಿಲ್ಲ  ಈ ಐದು  ಪ್ಲಾಸ್ಟಿಕ್ ಡಬ್ಬಿಗಳಲ್ಲಿ ನಾಲ್ಕು ಪ್ಲಾಸ್ಟಿಕ್  ಡಬ್ಬಿಗಳು ಖಾಲಿ ಇದ್ದು ಇನ್ನೊಂದು ಬಿಳಿ ಪ್ಲಾಸ್ಟಿಕ್ ಡಬ್ಬಿಯಲ್ಲಿ  ಕ್ರೀಂ  ಕಲರಿನ ಎರಡು  ಗಿಫ್ಟ್ ಬಾಕ್ಸ್ ಇದ್ದು ಎರಡೂ ಗಿಫ್ಟ್ ಬಾಕ್ಸಿನಲ್ಲಿ  ್ಲ ತಲಾ ಒಂದು ಬಾಕ್ಸನಲ್ಲಿ 03 ಗ್ರಾಂ ವಿರುವ ಪ್ಲೆನ್ ಡಿಸೈನಿನ ಎರಡು   ಬಂಗಾರದ ಉಂಗುರಗಳಿದ್ದು ಆ ಎರಡು ಗಿಫ್ಟ್ ಬಾಕ್ಸಿನ ಮೇಲೆ  ಕೆಂಪು ಬಣ್ಣದ ಅಕ್ಷರದಲ್ಲಿ ನಮ್ಮ ತಂದೆಯ ಸೆಲ್ ನಂಬರ್ 9886485198  ಮತ್ತು ಇಂಗ್ಲೀಷ  ಅಕ್ಷರದಲ್ಲಿ  ಂಒಃಏಂ ಉಔಐಆ ಖಒಖಿಊ ಟಿಜಚಿಡಿ ಠಿಣಜಚಿ ಂಟಿರಿಚಿಟಿಜಥಿಚಿ ಖಿಜಟಠಿಟಜ ಖಖಗಉಗಕಕಂ  ಅಂತಾ ಪ್ರಿಂಟ್ ಹಾಕಿಸಿದ್ದು ಇರುತ್ತದೆ. ಎರಡು ಗಿಫ್ಟ್ ಬಾಕ್ಸಗಳಲಿ  03ಗ್ರಾಂ*2 ಹೀಗೆ ಎರಡು  ಬಂಗಾರದ ಉಂಗುರಗಳ ಒಟ್ಟು ತೂಕ ಅಂದಾಜು 06 ಗ್ರಾಂ ಇದ್ದು ಇವುಗಳ  ಅಂದಾಜು ಬೆಲೆ 15000/- ರೂ ಗಳಿದ್ದು  ಇರುತ್ತದೆ. ಖಾಲಿ ಇದ್ದ ನಾಲ್ಕು ಬಿಳಿ ಪ್ಲಾಸ್ಟಿಕ್ ಡಬ್ಬಿಗಳನ್ನು ಕೆಳಗೆ ಬಿಸಾಡಿ ಉಂಗುರಗಳಿದ್ದ ಬಿಳಿ ಪ್ಲಾಸ್ಟಿಕ್ ಡಬ್ಬಿಯನ್ನು ಮಾತ್ರ  ಆ ಇಬ್ಬರು ಹೆಂಗಸರು   ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಹೆಂಗಸರನ್ನು ನೋಡಿದರೆ ನಾನು  ಗುತರ್ಿಸಿತ್ತೇನೆ.  ಕಾರಣ ಕಳ್ಳತನವಾದ ಬಂಗಾದದ ಉಂಗುರಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದ  ಆ ಇಬ್ಬರು ಹೆಂಗಸರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೊಟ್ಟ ದೂರುನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ