ಶನಿವಾರ, ನವೆಂಬರ್ 28, 2015

PRESS NOTE OF 29/11/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0101/2015
(IPC 1860 U/s 00MP )
28/11/2015 Under Investigation
MISSING PERSON - Women
Brief Facts :  ದಿನಾಂಕ: 25/11/2015 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿದಾರರ ಮಗಳು ಕುಮಾರಿ ನೆಹರಾಬಾನು ವಯಸ್ಸು 19 ವರ್ಷ ಇವಳು ತಾನು ಬಳ್ಳಾರಿ ಮರಿಸ್ವಾಮಿ ಮಠದ ಹತ್ತಿರ ಟೈಲರಿಂಗ್ ಮತ್ತು ಬ್ಯೂಟಿ ಪಾರ್ಲರ್ ತರಭೇತಿಗಾಗಿ ಹೋಗಿ ಬರುತ್ತೇನೆಂದು ಮನೆಯಿಂದ ಹೋದವಳು ವಾಪಾಸ್ ಮನೆಗೆ ಬರದೇ ಇದ್ದುದರಿಂದ ಕಾಣೆಯಾದ ತನ್ನ ಮಗಳನ್ನು ಬಳ್ಳಾರಿಯ ಎಲ್ಲಾ ಕಡೆ  ಹುಡುಕಾಡಿ, ಈ ಕಾಣೆಯಾದ ತನ್ನ ಮಗಳ ವಿಷಯವನ್ನು ಯಾರಿಗೂ ಹೇಳದೆ, ತನ್ನ ಮಗಳು ವಾಪಾಸ್ ಮನೆಗೆ ಬರುತ್ತಾಳೆಂದು ಎರಡು ದಿನ ಕಾದು ನೋಡಿ ಈ ದಿನ ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು  ದೂರು
Bellary Rural PS
2 Cr.No:0503/2015
(IPC 1860 U/s 498A,306,34,376 2F,376(2)(n) )
28/11/2015 Under Investigation
RAPE - By Relatives
Brief Facts :  ದಿನಾಂಕ: 28-11-2015 ರಂದು 0015 ಗಂಟೆಗೆ ಶ್ರೀಮತಿ. ಹನುಮಕ್ಕ, ವಾಸ: ಸಿ.ಬಿ. ಬಳ್ಳಾರಿರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ತನ್ನ ಎರಡನೇ ಮಗಳಾದ ಭವಾನಿ ಮತ್ತು ಸಿದ್ದಾರ್ಥ ಕಾಲೋನಿಯ ಕಾಲುವೆ ದಂಡೆಯ ಮೇಲೆ ವಾಸವಿರುವ ಸುರೇಶ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸಿದ್ದರಿಂದ ಈಗ್ಗೆ ಮೂರು ವರ್ಷದ ಹಿಂದೆ ತಾವು ಸಿದ್ದಾರ್ಥ ಕಾಲೋನಿ ವಾಸಿ ತಿಪ್ಪಯ್ಯ ಕೂಡಿ ಕಪ್ಪಗಲ್ಲು ರಸ್ತೆ ಅಂಜಿನೇಯ ಸ್ವಾಮಿ ಗುಡಿಯ ಮುಂದೆ ಇವರಿಗೆ ಲಗ್ನ ಮಾಡಿದ್ದು ತನ್ನ ಮಗಳು ಸಿದ್ದಾರ್ಥ ಕಾಲೋನಿಯಲ್ಲಿರುವ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು ತನ್ನ ಮಗಳಿಗೆ ಅಕೆಯ ಗಂಡ ಸುರೇಶ, ಅತ್ತೆ ತುಪ್ಪದಮ್ಮ, ಗಂಡನ ಅಣ್ಣ ಹೊನ್ನೂರ್ ಸ್ವಾಮಿರವರು ವಿನಾಕಾರಣ ಅಡಿಗೆ ಸರಿಯಾಗಿ ಮಾಡಲ್ಲ, ಮನೆಯ ಕೆಲಸ ಮಾಡಲ್ಲವೆಂದು ಬೈದಾಡುವುದು, ಕೈಕಾಲುಗಳಿಂದ ಹೊಡೆಯುವುದು, ಊಟ ಸರಿಯಾಗಿ ಹಾಕದೇ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ, ಕಿರುಕುಳ ನೀಡಿದ್ದರಿಂದ ಹಾಗೂ ಹೊನ್ನೂರ್ ಸ್ವಾಮಿಯು ತನ್ನ ಮಗಳ ಮೇಲೆ ಮೇಲಿಂದ ಮೇಲೆ ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿದ್ದರಿಂದ ತನ್ನ ಮಗಳು ಬೇಸರಗೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿ ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ಈ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.
3 Cr.No:0504/2015
(KARNATAKA EXCISE ACT, 1965 U/s 34 )
28/11/2015 Under Investigation
KARNATAKA STATE LOCAL ACTS - Karnataka Excise Act 1965
Brief Facts :  ದಿನಾಂಕ: 28-11-2015 ರಂದು ಸಂಜೆ ಪಿ.ಎಸ್.ಐ ಶ್ರೀ. ಕೆ. ಹೊಸಕೇರಪ್ಪ, ರವರಿಗೆ ಠಾಣೆಯ ಸರಹದ್ದು ಇಬ್ರಾಹಿಂಪುರ ಗ್ರಾಮದ ಹಳೇ ಸರ್ಕಾರಿ ಶಾಲೆಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮಹಿಳೆ ಅನಧಿಕೃತವಾಗಿ ಮದ್ಯದ ಪೌಚ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಠಾಣೆಗೆ ಮಾನ್ಯ  ಸಿ.ಪಿ.ಐ ಬಳ್ಳಾರಿ ಗ್ರಾಮೀಣ ವೃತ್ತರವರಾದ ಶ್ರೀ.ಪ್ರಸಾದ್ ಕೆ.ಗೋಖಲೆ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರು, ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಮ.ಪಿ.ಸಿ 1023 ಪಿ.ಸಿ-90-91-839 ರವರು ಇಲಾಖೆಯ ಜೀಪ್ ನಂ: ಕೆಎ-34-ಜಿ-303 ರಲ್ಲಿ ಸಂಜೆ 5-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಹೋಗಿ ದಾಳಿ ಮಾಡಿದಾಗ ಒಂದು ಪ್ಲಾಸ್ಟಿಕ್ ಸೂಪರ್ ಚೀಲದಲ್ಲಿ ಮದ್ಯದ ಪೌಚ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಸಾವಿತ್ರಮ್ಮ ವಾಸ: ಇಬ್ರಾಹಿಂಪುರರವರು ಓಡಿ ಹೋಗಿದ್ದು ಪ್ಲಾಸ್ಟಿಕ್ ಸೂಪರ್ ಚೀಲದಲ್ಲಿದ್ದ ಬಿಟ್ಟು ಹೋಗಿದ್ದ 1] 90 ಎಂ.ಎಲ್. ನ ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ತುಂಬಿದ ಪೌಚ್ ಗಲು -62 ಒಟ್ಟು ಬೆಲೆ ರೂ. 1550-00 2] 180 ಎಂ.ಎಲ್. ನ ಓಲ್ಡ ಟವರನ್ ವಿಸ್ಕಿ ತುಂಬಿದ ಪೌಚ್ಗಳು-15 ಒಟ್ಟು ಬೆಲೆ ರೂ. 870-00 ಗಳನ್ನು ಜಪ್ತು ಮಾಡಿಕೊಂಡು ಸ್ಯಾಂಪಲ್ ಗಳನ್ನು ತೆಗೆದುಕೊಂದು ಬಂದಿದ್ದಾಗಿ ಪರಾರಿಯಾದ ಸಾವಿತ್ರಮ್ಮರವರ ಮೆಲೆ ಕಲಂಃ 34 ಅಬಕಾರಿ ಕಾಯ್ದೆ ರಿತ್ಯ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ
4 Cr.No:0505/2015
(IPC 1860 U/s 406,420 )
28/11/2015 Under Investigation
CHEATING - CHEATING
Brief Facts :  ದಿನಾಂಕ: 28-11-2015 ರಂದು ರಾತ್ರಿ 8-30 ಗಂಟೆ ಶ್ರೀ. ಎ. ರಾಘವೇಂದ್ರ, ವಾಸ: ಬಳ್ಳಾರಿರವರು ಠಾಣೆಗೆ ಬಂದು ದೂರು ನೀಡಿದ್ದು ತಾನು ಮುಂಬಾಯಿಯಲ್ಲಿರುವ ನ್ಯಾಷನಲ್ ಬಲ್ಕ್ ಹ್ಯಾಂಡಲಿಂಗ್ ಕಾರ್ಪೋರೇಶನ್ ಪ್ರವೇಟ್ ಲಿಮಿಟೆಡ್ ನಲ್ಲಿ [ಎನ್.ಬಿ.ಹೆಚ್.ಸಿ]  ಸ್ಟೇಟ್ ಇನ್ಚಾರ್ಜ ಅಪರೇಷನ್ ಆಗಿ ಕೆಲಸ ಮಾಡುತ್ತಿದ್ದು ತಮ್ಮ ಕಂಪನಿಯು ದೇಶಾದ್ಯಂತ ಕೊಲ್ಡ್ / ಡ್ರೈ ಸೋರೇಜ್ ಗಳನ್ನು ಬಾಡಿಗೆಗೆ ಮತ್ತು ಸ್ವಂತಕ್ಕೆ ಖರೀದಿ 
ಮಾಡಿದ್ದು ಅದರಲ್ಲಿ ಟ್ರೇಡರ್ಸ್/ರೈತರು ತಮ್ಮ ಬೆಳೆಗಳನ್ನು ಸುರಕ್ಷಿತ ದೃಷ್ಟಿಯಿಂದ ಇಡುತ್ತಿದ್ದು ತಾವು ಅವರಿಂದ ಬಾಡಿಗೆ ಪಡೆಯುತ್ತಿರುತ್ತೇವೆ. ಹಾಗೂ ಕೆಲವು ಟ್ರೇಡರ್ಸ್ ನವರು ಬೆಳೆಗಳನ್ನು ತಮ್ಮ ಗೋಡಾನ್ ನಲ್ಲಿಟ್ಟು ಬ್ಯಾಂಕ್ ನಿಂದ ಸಾಲ ಪಡೆಯುತ್ತಿದ್ದು, ಬಳ್ಳಾರಿ-ಬೆಂಗಳೂರು ರಸ್ತೆ ಮುಂಡ್ರಗಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ತಮ್ಮ ಕಂಪನಿ ಲೀಸ್ ಪಡೆದ ಗೋಡಾನ್ ಇದ್ದು  ಈ ಗೋಡಾನ್ ಗೆ ಸೂಪರ್ ವೈಜರ್ ಆಗಿ ಮಹಮ್ಮದ್ ಇಲಿಯಾಸ್ ಇದ್ದು ಮತ್ತು ಬಳ್ಳಾರಿಯಲ್ಲಿರುವ ತಮ್ಮ ಒಟ್ಟು 5 ಗೋಡಾನ್ ಗಳಿಗೆ ವಿಜಯಪ್ರಕಾಶ್ ರವರು ಇನ್ಚಾರ್ಜ ಇರುತ್ತಾರೆ. ತಮ್ಮ ಗೋಡಾನ್ ನಲ್ಲಿ 1]. ಮಲೇಮುಲ್ಲಾ ರಾಮಮೂರ್ತಿ  2]. ಮುರಳಿ ಮೋಹನ್. ಎಂ. 3]. ದೇವರಪ್ಪಗಿರಿ ಮಲ್ಲಿಕಾರ್ಜುನ 4]. ವೇಟೂರಿ ಸತೀಶ್ ಬಾಬು 5]. ಡಬಾರ ಪ್ರತಾಪುಲು 6]. ಮಾಲಾಪಾಟಿ ಪುರುಶೋತ್ತಮ್ಮ 7]. ಮದಿಪಟ್ಲ ಚಂದ್ರಮೋಳಿ ರವರು ತಮ್ಮ ಗೋಡಾನ್ ನಲ್ಲಿಟ್ಟಿದ್ದ ಕಡ್ಲೆ ಕಾಳು ಚೀಲಗಳಲ್ಲಿ ಒಟ್ಟು 2494, ಚೀಲಗಳು ಅಂದರೆ 2213.9 ಕ್ವಿಂಟಾಲ್ ಕಡ್ಲೆಕಾಳು ಇರುವ ಚೀಲಗಳು ಅಂದಾಜು ಬೆಲೆ ರೂ: 73,05870/- ಉಳ್ಳದ್ದು ಇರುವುದಿಲ್ಲವೆಂದು ತಮ್ಮ ಕಂಪನಿಯು ಮಹಮ್ಮದ್ ಇಲಿಯಾಸ್ ಗೆ ಮತ್ತು ವಿಜಯಪ್ರಕಾಶ್ ಗೆ ನಂಬಿ ಇಷ್ಟು ಬೃಹತ್ತ ಮೊತ್ತದ ಮಾಲು ಇರುವ ಗೋಡಾನ್ ನೋಡಿಕೊಳ್ಳಲು ಕೆಲಸಕ್ಕೆ ನೇಮಕ ಮಾಡಿದ್ದು ಇವರು ಮತ್ತು ಇತರರು ಸೇರಿಕೊಂಡು ದಿನಾಂಕ: 10-8-2015 ರಿಂದ ದಿನಾಂಕ: 6-11-2015 ರ ಮಧ್ಯಾವಧಿಯಲ್ಲಿ ಈ ಮೇಲ್ಕಂಡ ತಮ್ಮ ಕಂಪನಿಯ ಗೋಡನ್ ನಲ್ಲಿಟ್ಟಿದ್ದ ಒಟ್ಟು 2494, ಚೀಲಗಳು ಅಂದರೆ 2213.9 ಕ್ವಿಂಟಾಲ್ ಕಡ್ಲೆಕಾಳು ಇರುವ ಚೀಲಗಳು ಅಂದಾಜು ಬೆಲೆ ರೂ: 73,05870/- ಉಳ್ಳದ್ದನ್ನು ಯಾರಿಗೋ ಮಾರಾಟ ಮಾಡಿ ತಮ್ಮ ಕಂಪನಿಗೆ ಮೊಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆಂದು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.
Brucepet PS
5 Cr.No:0220/2015
(KARNATAKA POLICE ACT, 1963 U/s 78(III) )
28/11/2015 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ: 26-11-15 ರಂದು ಬೆಳಿಗ್ಗೆ 11-15 ಗಂಟೆಗೆ ಪಿ.ಎಸ್.ಐ [ಕಾ.ಸು] ಮತ್ತು ಸಿಬ್ಬಂದಿಯವರಾದ ಪಿ.ಸಿ.1118-489 ರವರೊಂದಿಗೆ ಬಳ್ಳಾರಿ ನಗರದ ಕಣೇಕಲ್ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದಾಗ ಬಳ್ಳಾರಿ ನಗರದ ರಾಣಿತೋಟದಲ್ಲಿರುವ ಯಲ್ಲಮ್ಮ ಕಟ್ಟೆ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಸೀಬಿನ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ [ಕಾ.ಸು] ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗು ಪಂಚರ ಸಂಗಡ ಬೆಳಿಗ್ಗೆ 11-30 ಗಂಟೆಗೆ ಸ್ಥಳವನ್ನು ಬಿಟ್ಟು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-45 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಇದು ಮಟಕಾ ನಸೀಬಿನ ಜೂಜಾಟವಾಗಿದ್ದು ಮಟಕಾ ನಂಬರ್ ಬಂದವರಿಗೆ 1 ರೂ ಗೆ 80 ರೂ ಕೊಡುವುದಾಗಿ ಅಂತಾ ಕೂಗಿ ಕರೆಯುತ್ತಾ ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ರವರು ಪಂಚರ ಸಂಗಡ ಸಿಬ್ಬಂದಿಯೊಂದಿಗೆ ದಾಳಿ ಮಾಡಲು ಮಟಕಾ ಬರೆಯಿಸಲು ಬಂದಂತಹ ಸಾರ್ವಜನಿಕರು ಓಡಿ ಹೋಗಿದ್ದು ಮಟಕಾ ಜೂಜಾಟದಲ್ಲಿ ತೊಡಗಿದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ್ ತಂದೆ ಲಕ್ಷ್ಮಣ, 41ವರ್ಷ, ವಾಸ: ರಾಣಿತೋಟ ಬಳ್ಳಾರಿ ಅಂತಾ ತಿಳಿಸಿದ್ದು ಸದರಿಯವನನ್ನು ಪಂಚರ ಸಮಕ್ಷಮ ಅಂಗಶೋದನೆ ಮಾಡಲಾಗಿ ನಗದು ಹಣ ರೂ 1645/-, 02 ಮಟಕಾ ಪಟ್ಟಿ, 01 ಬಾಲ್  ಪೆನ್ನಿನೊಂದಿಗೆ ಸಿಕ್ಕಿಬಿದ್ದು ಮಟಕಾ ಜೂಜಾಟದಲ್ಲಿ ಸಿಕ್ಕಿ ವಸ್ತುಗಳನ್ನು ಪಂಚನಾಮೆ ಮೂಲಕ ಜಪ್ತು ಪಡಿಸಿಕೊಂಡು ಠಾಣೆಗೆ ಕರೆತಂದು ಠಾಣಾ ಎನ್.ಸಿ. ನಂ: 41/15 ರಲ್ಲಿ ನೊಂದಾಯಿಸಿಕೊಂಡು ಘನ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಈ ದಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Gadiganur PS
6 Cr.No:0113/2015
(IPC 1860 U/s 504,506,306 )
28/11/2015 Under Investigation
SUICIDE - Other Reasons
Brief Facts :  ದಿನಾಂಕ: 26.11.2015 ರಂದು ರಾತ್ರಿ 9.00 ಗಂಟೆಗೆ ಫಿರ್ಯಾದಿದಾರರ ಅಳಿಯನಾದ ವೆಂಕಟೇಶನು ನಾಯಕರ ಷಣ್ಮುಖನು ಮನೆಯ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದರ ಬಗ್ಗೆ ಕೇಳಿದ ವೆಂಕಟೇಶನೊಂದಿಗೆ ನಾಯಕರ ಷಣ್ಮುಖನು ಜಗಳ ಮಾಡಿ ವೆಂಕಟೇಶನಿಗೆ ಹೊಡೆ-ಬಡೆ ಮಾಡಿದ್ದು, ಫಿರ್ಯಾದಿದಾರರು ಸದರಿ ಜಗಳವನ್ನು ಬಿಡಿಸಿದ್ದು, ಮರು ದಿನ ದಿನಾಂಕ: 27.11.2015 ರಂದು ಬೆಳಗ್ಗೆ ನಾಯಕರ ಷಣ್ಮುಖನು ತನ್ನೊಂದಿಗೆ ಮೂವರನ್ನು ಕರೆದುಕೊಂಡು ಫಿರ್ಯಾದಿಯ ಅಳಿಯನಾದ ವೆಂಕಟೇಶನ ಮನೆಯ ಹತ್ತಿರ ಹೋಗಿ ವೆಂಕಟೇಶನಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನ್ನಷ್ಟಕ್ಕೆ ನೀನೇ ನೇಣು ಹಾಕಿಕೊಂಡು ಸಾಯಿ, ಇಲ್ಲಾಂದ್ರೆ ನಾನೇ ನಿನ್ನ ಆಂಧ್ರಕ್ಕೆ ಕರೆದುಕೊಂಡು ಹೋಗಿ ಕುತ್ತಿಗೆ ಕೊಯ್ತೀನಿ ಅಂತ ಹೆದರಿಸಿದ್ದು, ನಂತರ ಬೆಳೆಗ್ಗೆ 11.00 ಗಂಟೆ ಸುಮಾರಿಗೆ ವೆಂಕಟೇಶನು ಬಹಿರ್ದೆಸೆಗೆಂದು ಹೋದವನು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಎಲ್ಲಾ ಕಡೆ ಹುಡುಕಾಡಿ ನೋಡಿದ್ದು, ಈ ದಿನ ದಿನಾಂಕ: 28.11.2015 ರಂದು ಬೆಳೆಗ್ಗೆ 08.00 ಗಂಟೆ ಸುಮಾರಿಗೆ ವೆಂಕಟೇಶನು ಪಾಪಿನಾಯಕನ ಹಳ್ಳಿ ಗ್ರಾಮದ ಸಮೀಪವಿರುವ ಬೋಳುಗುಡ್ಡದ ಹಿಂದಿನ ಹುಣಿಸೆ ಮರಕ್ಕೆ ನೇಣು ಹಾಕಿಕೊಂಡಿರುವುದನ್ನು ಕಂಡು ತನ್ನ ಅಳಿಯ ವೆಂಕಟೇಶನಿಗೆ ಭಯಪಡಿಸಿ, ಸಿಕ್ಕಿದರೆ ಕೊಲೆ ಮಾಡ್ತೀನಿ ಅಂತ ಹೆದರಿಸಿ ವೆಂಕಟೇಶನು ಆತ್ಮಹತ್ಯೆ ಮಾಡಿಕೊಳ್ಳವ ಹಾಗೆ ಪ್ರಚೋದನೆ ಮಾಡಿದ ನಾಯಕರ ಷಣ್ಮುಖನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.( ದೂರು ಪ್ರತಿಯನ್ನು ಲಗತ್ತಿಸಿದೆ)
Hadagali PS
7 Cr.No:0111/2015
(CODE OF CRIMINAL PROCEDURE, 
28/11/2015 Under Investigation
1973 U/s 107 )
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ 28-11-2015 ರಂದು ಸಂಜೆ 07-30 ಪಿ.ಎಂ ಗಂಟೆ ಯಿಂದ 08-30 ಪಿ.ಎಂ ಗಂಟೆ ವರೆಗೆ  ನಾನು, ಪಿ.ಸಿ 66 ರವರೊಂದಿಗೆ ಹಡಗಲಿ ಪಟ್ಟಣದಲ್ಲಿ ಗಸ್ತುನಲ್ಲಿ ಇದ್ದಾಗ, ಮೇಲ್ಕಂಡ ಪ್ರತಿವಾದಿಯ ಬಗ್ಗೆ ಪಟ್ಟಣದಲ್ಲಿನ ಪ್ರಮುಖ ವ್ಯಕ್ತಿಗಳಲ್ಲಿನ್ನು ಹಾಗೂ ಪೊಲೀಸ್ ಬಾತ್ಮಿದಾರನ್ನು ವಿಚಾರ ಮಾಡಿದ್ದು, ಪ್ರತಿವಾದಿಯು ಈಗಲೂ ಸಹ ಪಟ್ಟಣದಲ್ಲಿ ಗುಂಪು ಕಟ್ಟಿಕೊಂಡು ಪುಂಡಾಟಿಕೆ ಮಾಡುವ ಸ್ವಭಾವವನ್ನು ಮುಂದುವರಿಸಿದ್ದು, ಸಮಾಜದಲ್ಲಿ ಆಶಾಂತಿಯನ್ನು ಉಂಟುಮಾಡುವ ಪ್ರವೃತ್ತಿಯುಳ್ಳ ವನಾಗಿರುತ್ತಾನೆಂದು, ತಿಳಿದು ಬಂದಿದ್ದರಿಂದ , ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಹಾಗೂ ಅದರ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ  ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವಂತೆ ಮಾಡುವ ಸಾದ್ಯತೆ ಇರುವ ಕಾರಣ,  ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಪಾಡುವ ದೃಷ್ಟಿಯಿಂದ ಮುಂಜಾಗ್ರತ ಕ್ರಮಕ್ಕಾಗಿ ಪ್ರಕರಣವನ್ನು ದಾಖಲಿಸಿ, ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆತರದಂತೆ ಒಳ್ಳೆಯ ನಡೆತೆಯಿಂದಿರಲು ಮಂಜಾಗ್ರತೆ ದೃಷ್ಟಿಯಿಂದ ಪ್ರತಿವಾದಿಯಿಂದ ಸೂಕ್ತವಾದ ಭದ್ರತೆ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲು, ಮಾನ್ಯ ತಾಲೂಕು ದಂಡಾಧಿಕಾರಿಗಳು ಹಡಗಲಿ ರವರಲ್ಲಿ ಕೋರಿದೆ.
Hagaribommanahalli PS
8 Cr.No:0176/2015
(IPC 1860 U/s 00MP )
28/11/2015 Under Investigation
MISSING PERSON - Girl
Brief Facts :  ಈ ದಿನ ದಿನಾಂಕ 28-11-15 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಬಂದು ಗಣಕೀಕೃತ ದೂರು ಹಾಜರ್ ಪಡಿಸಿದ್ದು ಪಡೆದು ಸಾರಾಂಶ ನೋಡಲು, ತನ್ನ ಮಗಳಾದ ಕುಮಾರಿ.ಬಿ.ಪಿ ಸಂಗೀತಾ, 19  ವರ್ಷ, ಈಕೆಯು ಹ.ಬೊ.ಹಳ್ಳಿ ಪಟ್ಟಣದ ಇಂದಿರಾ ಗಾಂಧಿ ಬಾಲಕಿಯರ ಪಿ.ಯು ಕಾಲೇಜಿನಲ್ಲಿ, 2 ನೇ ವರ್ಷದ ಕಾಮರ್ಸ ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಪ್ರತಿ ದಿನ ಬೆಳಿಗ್ಗೆ 6-45 ಗಂಟೆಗೆ ತಮ್ಮ ಮನೆಯಿಂದ ಕಾಲ್ನಡಿಗೆಯಲ್ಲಿ ಕಾಲೇಜಿಗೆ ಹೋಗಿ ಮದ್ಯಾಹ್ನ 1-45 ಗಂಟೆಗೆ ವಾಪಾಸ್ ಮನೆಗೆ ಬರುತ್ತಿದ್ದು,  ಅದರಂತೆ ದಿನಾಂಕ:-18-11-15  ರಂದು ಬೆಳಿಗ್ಗೆ 6-45 ಗಂಟೆಗೆ ಕಾಲೇಜೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ಮದ್ಯಾಹ್ನ 1-45 ಗಂಟೆಗೆ ಮನೆಗೆ ವಾಪಾಸ್ ಬರದೇ ಇದ್ದು, ನಂತರ ಕಾಲೇಜಿಗೆ ಹೋಗಿ ವಿಚಾರಿಸಿದಾಗ ಈ ದಿವಸ ಸಂಗೀತ ಕಾಲೇಜಿಗೆ ಬಂದಿರುವುದಿಲ್ಲ. ಅಂತ ಉಪನ್ಯಾಸಕರು ತಿಳಿಸಿದ್ದರಿಂದ, ನಾವು ಗಾಬರಿಯಾಗಿ ನಮ್ಮ ಸಂಭಂಧಿಕರ ಮನೆಗಳಲ್ಲಿ, ಮತ್ತು ಆಕೆಯ ಸ್ನೇಹಿತರ ಮನೆಗಳಲ್ಲಿ ಹೋಗಿ ವಿಚಾರಿಸಿದ್ದು, ಅಲ್ಲದೇ ನಮ್ಮ ಸಂಬಂಧಿಕರು ಇರುವ ಊರುಗಳಲ್ಲಿ ಹೋಗಿ ಹುಡುಕಾಡಿ ಬಂದಿದ್ದು, ಇಲ್ಲಿಯವರಿಗೆ ಸಂಗೀತಾ ಪತ್ತೆಯಾಗಿರುವುದಿಲ್ಲ, ನಮ್ಮ ಮನೆತನದ ಮರ್ಯಾದೆಯ ದೃಷ್ಠಿಯಿಂದ ಇಲ್ಲಿಯವರೆಗೆ ಹುಡುಕಾಡಿ ಪತ್ತೆಯಾಗದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರು ನೀಡಲು ಬಂದಿದ್ದು, ಸಂಗೀತಳ ಚಹರೆ ಗುರುತು;-ಸುಮಾರು 5 ಅಡಿ ಎತ್ತರ, ದುಡು ಮುಖ, ಗೋದಿ ಮೈಬಣ್ಣ,ಕೆಳ ತುಟಿಯ ಎಡ ಬಾಗದಲ್ಲಿ ಒಂದು ಸಣ್ಣ ಕಪ್ಪು ಮಚ್ಚೆ ಇರುತ್ತದೆ. ಸಂಗೀತ ಮನೆಯಿಂದ ಹೋಗುವಾಗ, ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಹಿಂದಿ, ಕನ್ನಡ, ರಾಜಸ್ಥಾನಿ  ಭಾಷೆ ಮಾತನಾಡುತ್ತಾಳೆ. ಕಾರಣ ಕಾಣೆಯಾದ ತನ್ನ ಮಗಳಾದ ಕುಮಾರಿ. ಬಿ.ಪಿ ಸಂಗೀತಾ ಇವಳನ್ನು ಪತ್ತೆ ಮಾಡಿ ಕೊಡಬೇಕೆಂದು ಇದ್ದ ದೂರು ಸಾರಾಂಶದ ಮೇರೆಗೆ ಈ ಪ್ರಕರಣ ದಾಖಿಲಿಸಿ ತನಿಖೆ ಕೈಗೊಳ್ಳಲಾಗಿದೆ.
9 Cr.No:0177/2015
(IPC 1860 U/s 279,337 )
29/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ಈ ದಿನ ದಿನಾಂಕ 29-11-15 ರಂದು ಬೆಳಿಗ್ಗೆ 9-15 ಗಂಟೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ದೂರವಾಣಿ ಕರೆ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಪಿರ್ಯಾದಿದಾರರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡು ಬಂದಿದ್ದು ಸಾರಾಂಶವೇನೆಂದರೆ, ಪಿರ್ಯಾದಿದಾರರು ಈ ದಿನ ದಿನಾಂಕ 29-11-5 ರಂದು ಬೆಳಿಗ್ಗೆ 8-20 ಗಂಟೆಗೆ ತಮ್ಮ ಗ್ರಾಮದ ಪಕ್ಕೀರಮ್ಮ, ಲಲಿತಮ್ಮ ಮತ್ತು ಕಸ್ತೂರಮ್ಮ ರವರೊಂದಿಗೆ ಇಬ್ರಾಹಿಂ ಸಾಬ್ ನಿಗೆ ಸಂಬಂದಿಸಿದ ಆಪೆ ಆಟೊ ನಂ ಕೆ.ಎ.35/ಎ-8417 ರಲ್ಲಿ ಇದರ ಚಾಲಕ ಡಿ ರಹಿಮಾನ್ ಈತನೊಂದಿಗೆ ತಮ್ಮ ಗ್ರಾಮದ ಪೀರಸಾಬ್ ನ ಹೊಲಕ್ಕೆ ಕೂಲಿ ಕೆಲಸಕ್ಕೆಂದು ತಮ್ಮ ಗ್ರಾಮದಿಂದ ಹ.ಬೊ.ಹಳ್ಳಿ-ಹರಪನಹಳ್ಳಿ ತಾರ್ ರಸ್ತೆಯ ಮೇಲೆ ಮಾಲವಿ ಕ್ರಾಸ್ ನಲ್ಲಿ ಮಾಲವಿ ಕಡೆಗೆ ಹೋಗುತ್ತಿದ್ದಾಗ ಆಪೆ ಆಟೊ ಚಾಲಕನು ತನ್ನ ಆಟೊವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಕಾಏಕಿ ಮಾಲವಿ ಕಡೆಗೆ ಕಟ್ ಮಾಡಿದ್ದರಿಂದ, ಆಟೊ ಚಾಲಕನ ನಿಂಯಂತ್ರಣ ತಪ್ಪಿ ರಸ್ತೆಯ ಎಡ ಬದಿಯ ಕಬ್ಬಿಣದ ಕಂಬದ ಹತ್ತಿರ ವಾಲಿಕೊಂಢು ನಿಂತಿದ್ದರಿಂದ ಆಟೊದಲ್ಲಿದ್ದ ಪಿರ್ಯಾದಿ ಮತ್ತು ಮೇಲ್ಕಂಡವರು ಆಟೊದಿಂದ ಕೆಳಗೆ ಬಿದ್ದ ಪರಿಣಾಮವಾಗಿ ಪಿರ್ಯಾದಿಗೆ ಎರಡೂ ಭುಜಗಳ ಹತ್ತಿರ ಒಳಪೆಟ್ಟುಗಳಾಗಿ, ಮೈಮೇಲೆ ಅಲ್ಲಲ್ಲಿ ಒಳನೋವುಗಳಾಗಿರುವುದಾಗಿ, ಪಕ್ಕೀರಮ್ಮನಿಗೆ  ಬಲಗೈ ಭುಜದ ಹತ್ತಿರ, ಬಲ ಪಕ್ಕೆಗೆ, ಎದೆಗೆ ಮತ್ತು ಬಲ ರೊಂಡಿ ಹತ್ತಿರ ತೆರಚಿದ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿ, ಲಲಿತಮ್ಮನಿಗೆ ಹಣೆಯ ಎಡ ಬಾಗದಲ್ಲಿ ಕೊಯ್ದಂತ ರಕ್ತಗಾಯವಾಗಿರುವುದಾಗಿ, ಈ ಅಪಘಾತದಲ್ಲಿ ಕಸ್ತೂರಮ್ಮನಿಗೆ ಮತ್ತು ಚಾಲಕ ಡಿ.ರಹಿಮಾನ್ ನಿಗೆ ಯಾವುದೆ ಗಾಯಗಳಾಗಿರುವುದಿಲ್ಲ ಅಂತ ಈ ಅಪಘಾತ ಪಡಿಸಿದ ಆಪೆ ಆಟೊ ಚಾಲಕ ಡಿ.ರಹಿಮಾನ್ ನ ಮೇಲೆ ಕಾನೂನು ಕ್ರಮ ಜರುಗಿಸಲು ಇದ್ದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Hosahalli PS
10 Cr.No:0219/2015
(KARNATAKA POLICE ACT, 1963 U/s 87 )
29/11/2015 Under Investigation
 KARNATAKA POLICE ACT 1963 - Street Gambling (87)
Brief Facts  ದಿನಾಂಕ:-28/11/2015 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಮಂಗಾಪುರ ಗ್ರಾಮದಿಂದ ಪಾಲಯ್ಯನಕೋಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬರುವ ಕಾರೆಮರ ಸರದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದಿದ್ದರಿಂದ ಠಾಣೆಯಲ್ಲಿದ್ದ ಪಿ.ಸಿ ಗಳಾದ 189,1073,661,989 ರವರಿಗೆ ಇಸ್ಪೇಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ನಾನು ಮೇಲ್ಕಂಡ ಸಿಬ್ಬಂದಿಯವರಿಗೆ ಖಾಸಗಿ ವಾಹನದಲ್ಲಿ ಕೂರಿಸಿಕೊಂಡು ಸಾಯಂಕಾಲ 4-30 ಗಂಟೆಗೆ ಠಾಣೆಯಿಂದ ಹೊರಟು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಮಂಗಾಪುರ ಗ್ರಾಮದ ಊರ ಹೊರಗಡೆ ಜೀಪನ್ನು ನಿಲ್ಲಿಸಿ ಇಬ್ಬರು ಪಂಚರಿಗೆ ಬರಮಾಡಿಕೊಂಡು ಪಂಚರಿಗೆ ಇಸ್ಪೀಟ್ ಜೂಜಾಟದ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಸಾಯಂಕಾಲ 5-25 ಗಂಟೆಯ ಸುಮಾರಿಗೆ ಮಂಗಾಪುರ ಗ್ರಾಮದ ಸಮೀಪ ಮಂಗಾಪುರ ಗ್ರಾಮದಿಂದ ಪಾಲಯ್ಯನಕೋಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬರುವ ಕಾರೆಮರದ ಸರದ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಮಂಗಾಪುರ ಗ್ರಾಮದಿಂದ ಪಾಲಯ್ಯನಕೋಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬರುವ ಕಾರೆಮರದ ಸರದ ಬಳಿ ಸಾರ್ವಜನಿಕ ರಸ್ತೆಯಲ್ಲಿ 7 ಜನರು ಗುಂಪಾಗಿ ಕುಳಿತುಕೊಂಡು ಅಂದರ್-ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟ ಅಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಾಯಂಕಾಲ 5-30 ಗಂಟೆಗೆ ನಾನು, ಸಿಬ್ಬಂದಿ ಮತ್ತು ಪಂಚರೊಂದಿಗೆ ಇಸ್ಪೇಟ್ ಜೂಜಾಟ ಸ್ಥಳದ ಮೇಲೆ ದಾಳಿ ಮಾಡಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರ ಪೈಕಿ 4 ಜನರು ಸಿಕ್ಕಿದ್ದು, 3 ಜನರು ತಪ್ಪಿಸಿಕೊಂಡು ಓಡಿ ಹೋದರು. ನಾವು ಹಿಡಿದುಕೊಂಡಿದ್ದ ವ್ಯಕ್ತಿಗಳ ಹೆಸರು ವಿಳಾಸ ಕೇಳಲಾಗಿ 1) ಪಿ.ಬಸವರಾಜ ತಂದೆ ಮಂಜುನಾಥ ವಯಸ್ಸು 25 ವರ್ಷ, ಲಿಂಗಾಯಿತರು ಚಾಲಕ ಕೆಲಸ ವಾಸ ನಿಂಬಳಗೇರಿ ಗ್ರಾಮ ಅಂತ ತಿಳಿಸಿದ್ದು, ಇವನ ಮುಂದುಗಡೆ ಇಸ್ಪೀಟ್ ಜೂಜಾಟದ ಹಣ 630=00 ರೂಗಳು ದೊರೆಯಿತು. 2) ಎಂ.ಜಿ ಕೊಟ್ರೇಶ್ ತಂದೆ ವಿಶ್ವನಾಥ ವಯಸ್ಸು 26 ವರ್ಷ, ಲಿಂಗಾಯ್ತರು, ವ್ಯವಸಾಯ ವಾಸ ನಿಂಬಳಗೇರಿ ಗ್ರಾಮ ಅಂತ ತಿಳಿಸಿದ್ದು, ಇವನ ಮುಂದುಗಡೆ ಇಸ್ಪೀಟ್ ಜೂಜಾಟದ ಹಣ 600=00 ರೂಗಳು ದೊರೆಯಿತು. 3)ಸಿದ್ದೇಶ್ ತಂದೆ ಮರಳುಸಿದ್ದಪ್ಪ ವಯಸ್ಸು 35 ವರ್ಷ ಲಿಂಗಾಯ್ತರು, ವ್ಯವಸಾಯ ವಾಸ ನಾಗೇನಹಳ್ಳಿ ಗ್ರಾಮ ಅಂತ ತಿಳಿಸಿದ್ದು, ಇವನ ಮುಂದುಗಡೆ ಇಸ್ಪೀಟ್ ಜೂಜಾಟದ ಹಣ 900=00 ರೂಗಳು ದೊರೆಯಿತು. 4) ಬೊಮ್ಮಪ್ಪ ತಂದೆ ಲೇಟ್ ಗಾದ್ರೆಪ್ಪ ವಯಸ್ಸು 58 ವರ್ಷ ವಾಲ್ಮೀಕಿ ಜನಾಂಗ ಕೂಲಿ ಕೆಲಸ ವಾಸ ಮಂಗಾಪುರ ಗ್ರಾಮ ಅಂತ ತಿಳಿಸಿದ್ದು, ಇವನ ಮುಂದುಗಡೆ ಇಸ್ಪೀಟ್ ಜೂಜಾಟದ ಹಣ 370=00 ರೂಗಳು ದೊರೆಯಿತು. ನಮ್ಮ ಜೊತೆಯಲ್ಲಿದ್ದ ಪಂಚರಿಗೆ ಓಡಿ ಹೋದ ವ್ಯಕ್ತಿಗಳ ಹೆಸರು ವಿಳಾಸ ಕೇಳಲಾಗಿ 5) ಕರಿಬಸಪ್ಪ ತಂದೆ ಬಂಗಾರಪ್ಪ ವಯಸ್ಸು 35 ವರ್ಷ ವಾಲ್ಮೀಕಿ ಜನಾಂಗ ವ್ಯವಸಾಯ ವಾಸ ಗಾಣಾಗಟ್ಟೆ ಗ್ರಾಮ 6) ಕೋಕಿಕೆರೆ ಮಂತೇಶ ತಂದೆ ಚಿತ್ತಪ್ಪ ವಯಸ್ಸು 49 ವರ್ಷ, ವಾಲ್ಮೀಕಿ ಜನಾಂಗ ವ್ಯವಸಾಯ ವಾಸ ಗಾಣಾಗಟ್ಟೆ ಗ್ರಾಮ 7) ಸಿದ್ದಲಿಂಗಪ್ಪ ತಂದೆ ಬಸವರಾಜ 50 ವರ್ಷ, ಮಡಿವಾಳರ ಜನಾಂಗ ವ್ಯವಸಾಯ ವಾಸ ಮಂಗಾಪುರ ಗ್ರಾಮ ಅಂತ ತಿಳಿಸಿದರು. ಜೂಜಾಟದ ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ದೊರೆತಿದ್ದು, 52 ಇಸ್ಪೀಟ್ ಎಲೆಗಳನ್ನು ಮತ್ತು ಇಸ್ಪೀಟ್ ಜೂಜಾಟದ ಒಟ್ಟು ಹಣ 2500=00 ರೂಗಳನ್ನು ಸಾಯಂಕಾಲ 5-30 ಗಂಟೆಯಿಂದ 6-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಮೇಲ್ಕಂಡ 4 ಜನ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ಜಪ್ತು ಮಾಡಿಕೊಂಡ ಇಸ್ಪೀಟ್ ಎಲೆಗಳನ್ನು ಮತ್ತು ಜೂಜಾಟದ ಹಣ ರೂ 2500=00 ರೂಗಳನ್ನು ಹಾಗೂ ಮೇಲ್ಕಂಡ 4 ಜನ ವ್ಯಕ್ತಿಗಳೊಂದಿಗೆ ಮುಂದಿನ ಕ್ರಮದ ಸಲುವಾಗಿ ನನಗೆ ಒಪ್ಪಿಸಿದ್ದನ್ನು  ಸ್ವೀಕರಿಸಿ ಹೊಸಹಳ್ಳಿ ಠಾಣೆಯ ಎನ್.ಸಿ ನಂಬರ್-177/1504/2015 ಕಲಂ 87 ಕೆ.ಪಿ.ಯಾಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Kamalapur PS
11 Cr.No:0099/2015
(KARNATAKA POLICE ACT, 1963 U/s 87 )
28/11/2015 Under Investigation
 KARNATAKA POLICE ACT 1963 - Street Gambling (87)
Brief Facts  ದಿನಾಂಕ 27/11/2015 ರಂದು ರಾತ್ರಿ 09-30 ಗಂಟೆಯ ಸಮಯದಲ್ಲಿ ಕೆ.ಪಿ ರವಿ ಕುಮಾರ ಸಿಪಿಐ ಹಂಪಿ ವೃತ್ತ ಹಂಪಿ ರವರು ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಕಮಲಾಪುರ ಠಾಣಾ ಸರಹದ್ದನ ವೆಂಕಟಾಪುರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರವಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ನಸೀಬಿನ ಜೂಜಾಟ ನಡೆಯುತ್ತಿದೆ ಅಂತಾ ಮಾನ್ಯ ಎಸ್.ಪಿ ಸಾಹೇಬರು ಬಳ್ಳಾರಿ ರವರ ಮುಖಾಂತರ ಖಚಿತ ವರ್ತಮಾನ ಬಂದ ಮೇರೆಗೆ ಹಂಪಿ ಠಾಣೆಯ ಅಧಿಕಾರಿ, ಸಿಬ್ಬಂದಿ ಹಾಗು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಿನಾಂಕ: 27/11/2015 ರಂದು 11-10 ಗಂಟೆಗೆ ದಾಳಿ ಮಾಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 05 ಜನರ ಪೈಕಿ 03 ಜನರನ್ನು ಹಿಡಿದಿದ್ದು, ಒಟ್ಟು ನಗದು ಹಣ 8430/- ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಪಂಚೆನಾಮೆ ಮೂಲಕ ಜಪ್ತು ಮಾಡಿಕೊಂಡಿದ್ದು, ಮಾಲು ಮತ್ತು 03 ಜನ ಆರೋಪಿತರನ್ನು ವಶಕ್ಕೆ ತಗೆದುಕೊಂಡು ದಿನಾಂಕ: 28/11/2015 ರಂದು ಬೆಳಗಿನ ಜಾವ 01-30  ಗಂಟಗೆ ಠಾಣೆಗೆ ಕರೆತಂದು ಆರೋಪಿತರ ವಿರುದ್ದ ಕಲಂ 87 ಕೆ.ಪಿ.ಯ್ಯಾಕ್ಟ್ ರೀತ್ಯಾ ಕೇಸ್ ದಾಖಸಲು ನೀಡಿದ ಜ್ಞಾಪನದ  ಸಾರಾಂಶದ ಮೇರೆಗೆ ಮಾನ್ಯ ನ್ಯಾಯಲಯದ ಅನುಮತಿಯನ್ನು ಪಡೆದು ಪ್ರ.ವ.ವರದಿ
Kampli  PS
12 Cr.No:0155/2015
(CODE OF CRIMINAL PROCEDURE, 1973 U/s 109 )
28/11/2015 Under Investigation
CrPC - Security For Good Behaviour (Sec 109)
Brief Facts  ಈ ದಿನ ದಿನಾಂಕ 28-11-2015 ರಂದು ಬೆಳಿಗ್ಗೆ 04-00 ಗಂಟೆಗೆ ನಾನು ಹೆಚ್.ಸಿ.237  ರವರಿಗೆ ಕರೆದುಕೊಂಡು ಪಟ್ಟಣದಲ್ಲಿ ಎನ್ ಆರ್ ಸಿ 
Brief Facts :  ಕರ್ತವ್ಯದಲ್ಲಿರುವಾಗ  ಕಂಪ್ಲಿಯ ಕೋಟೆ ಬ್ರಿಡ್ಜ್ ಹತ್ತಿರ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸಿದವನಿಗೆ ಬೆಳಿಗ್ಗೆ 04-30 ಗಂಟೆಗೆ ಹಿಡಿದು ವಿಚಾರಿಸಲು ರಾಮ ತಂದೆ ಹನುಮಂತ  ಅಂತ ತಿಳಿಸಿದ್ದು, ಅನುಮಾನ ಬಂದು ಪುನಃ ವಿಚಾರಿಸಲು, ಚೆಲುವಾದಿ ರಾಜ ತಾಯಿ ಗೌರಮ್ಮ 24ವರ್ಷ ಚೆಲುವಾದಿ ಜನಾಂಗ, ಹಮಾಲಿ ಕೆಲಸ, ಸಾ// ದೇವಸಮುದ್ರ ಗ್ರಾಮ ಅಂತ ತಿಳಿಸಿದ್ದು, ಸದರಿ ಆಸಾಮಿಯು ಕಂಪ್ಲಿಯಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ಶಂಕಿಸಿ, ಬೆಳಿಗ್ಗೆ 05-15 ಗಂಟೆಗೆ ಮರಳಿ ಠಾಣೆಗೆ ಬಂದು ಆಸಾಮಿಯ ವಿರುದ್ದ ಗುನ್ನೆ ನಂ  155/2015 ಕಲಂ 109 ಸಿಆರ್ ಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಮಾನ್ಯ ತಹಶಿಲ್ದಾರರು ಹಾಗೂ ತಾಲೂಕು ದಂಡಾಧೀಕಾರಿಗಳು ಹೊಸಪೇಟೆ ರವರ ಸನ್ನಿಧಿಗೆ ವರದಿಯೊಂದಿಗೆ ನಿವೇದಿಸಿಕೊಂಢಿರುತ್ತದೆ.
Kurugod PS
13 Cr.No:0193/2015
(IPC 1860 U/s 498A,504,323,34 )
28/11/2015 Under Investigation
CRUELTY BY HUSBAND - Husband And Relative(S) In Law
Brief Facts :  ಫಿರ್ಯದುದಾರು ಈಗ್ಗೆ 3 ವರ್ಷಗಳ ಹಿಂದೆ ಆರೋಪಿ ಒಂದು ರವರೊಂದಿಗೆ ಮದುವೆಯಾಗಿದ್ದು ಮದುವೆಯಾದಾಗಿನಿಂದ 01 ವರ್ಷ ಗಂಡನ ಮನೆಯಲ್ಲಿ ಚೆನ್ನಾಗಿದ್ದು, ನಂತರ ತನ್ನ ಗಂಡ, ಅತ್ತೆ, ಮಾವ ನವರು ಸಣ್ಣಸಣ್ಣ ವಿಷಯಕ್ಕೆ ಜಗಳ ತೆಗೆದು ನೀನು ಗಿಡ್ಡಗಿದ್ದೀಯ ಸರಿಯಾಗಿ ಕೆಲಸ ಮಾಡಲು ಅಡುಗೆ ಮಾಡಲು ಬರುವುದಿಲ್ಲ ಅಂತಾ ಜಗಳ ತೆಗೆದು ಅದೇ ವಿಚಾರದಲ್ಲಿ ಫಿರ್ಯಾದುದಾರರ ಗಂಡ ಅತ್ತೆ ಮಾವ ಮಾನಸಿಕವಾಗಿ ಕಿರುಕುಳ ಕೊಟ್ಟು ಆ ವಿಚಾರವಾಗಿ 2-3 ಬಾರಿ ಪಂಚಾಯ್ತಿ ಮಾಡಿದರೂ ಸಹ ಹೊಂದಾಣಿಕೆ ಯಾಗದೆ ಇದ್ದು, ಅರೋಪಿತರ ಅದೇ ಚಾಳಿ ಮುಂದುವರೆಸಿ ದಿನಾಂಕ:20/11/15 ರಂದು ಬೆಳಿಗ್ಗೆ 10-00 ಗಂಟೆಗೆ 3 ಜನ ಆರೋಪಿತರು ಸೇರಿ ದುರ್ಭಾಷೆಗಳಿಂದ ಬೈದು ಮನೆಯಿಂದ ಹೊರಗಡೆ ಹಾಕಿರುತ್ತಾರೆಂದು ದೂರು.
Sirigeri PS
14 Cr.No:0172/2015
(IPC 1860 U/s 143,147,148,323,324,504,506(2),149 )
28/11/2015 Under Investigation
RIOTS - Others
Brief Facts :  ದಿನಾಂಕ:- 28.11.2015 ರಂದು  ಸಂಜೆ 6:30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಬಂದು ನೀಡಿದ ದೂರನ್ನು ಪರಿಶೀಲಿಸಲು ಈ ದಿನ ಮಧ್ಯಾಹ್ನ 1:30ಗಂಟೆ ಸುಮಾರಿಗೆ ನಾನು ನನ್ನ ತಮ್ಮ ಸೇರಿ ಡಿಪಿನಂ:20ರ ಎಲ್ಎಲ್ಸಿ ಕಾಲುವೆ ದಡದ ಮೇಲೆ ಭತ್ತ ರಾಶಿ ಹಾಕಿದೆವು, ಅದೇ ಸಮಯದಲ್ಲಿ ನಮ್ಮ ಗ್ರಾಮದ ಮರೆಪ್ಪ ಈತನು ಟ್ರಾಕ್ಟರ್ನ್ನು ಹೊಡೆದುಕೊಂಡು ಕಾಲುವೆ ಮೇಲೆ ಬಂದು ನಮಗೆ ನೀವು ದಾರಿಯಲ್ಲಿ ಭತ್ತ ಹಾಕಿದ್ದೀರಾ ದಾರಿ ಬಿಟ್ಟು ಹಾಕಿರಿ ಎಂದು ಹೇಳಿದನು, ಆಗ ನಾವು ಪಕ್ಕದಲ್ಲಿ ದಾರಿ ಬಿಟ್ಟಿದೇ ಅಲ್ಲಿಯೇ ಹೊಡೆದುಕೊಂಡು ಹೋಗು ಎಂದ ಹೇಳಿದೆವು, ಮರೆಪ್ಪ್ಣ ಈ ಹಿಂದೆ ಆದ ಗಲಾಟೆಯ ಹಳೇ ದ್ವೇಷದಿಂದ ನಮ್ಮ ಮಾತು ಲೆಕ್ಕಿಸದೇ ನಾನು ಇಲ್ಲಿಯೇ ಹೊಡೆದುಕೊಂಡು ಹೋಗುತ್ತೇನಲೇ ಸೂಳೇ ಮಕ್ಕಳೆ ಈ ದಾರಿ ನಿಮ್ಮಪ್ಪನದಾ ಎಂದು ಬೈದು ಮರೆಪ್ಪನು ಆತನ ಜೊತೆಯಲ್ಲಿದ್ದ ಅವರ ತಂದೆ ಶಿವರಾಮ. ಹಾಗೂ ದುರುಗಣ್ಣ, ಬೆಣಕಲ್ ಶಿವಪ್ಪ, ತಳವಾರ ಈರಣ್ಣ, ಹನುಮಂತಪ್ಪ, ನಾಗರಾಜಯವರಿಗೆ ಎಲ್ಲಾರೂ ಬರ್ರಿ ಏನಾಗುತ್ತೇ ನೋಡಿ ಬಿಡೋಣ ಎಂದು ಎಲ್ಲಾರು ಸೇರಿ ಕೈಯಲ್ಲಿ ಕಟ್ಟಿಗೆ, ಕಲ್ಲು, ಮಚ್ಚು ಹಿಡಿದುಕೊಂಡು ಅಕ್ರಮ ಗುಂಪು ಕಟ್ಟಕೊಂಡು ಬಂದು  ನನ್ನ ತಮ್ಮ ಗಾದಿಲಿಂಗಪ್ಪನಿಗೆ, ಹಾಗೂ ಚಿಕ್ಕಪ್ಪ ಗಂಗಪ್ಪನಿಗೆ ತಲೆಗೆ ಕಿವಿ, ಕಣ್ಣಿ ಹತ್ತಿರ ಹೊಡೆದು ರಕ್ತಗಾಯ ಮಾಡಿದ್ದು, ನನಗೆ ಕಣ್ಣಿನ ಹತ್ತಿರ ಕಲ್ಲಿನಿಂದ ಗುದ್ದಿ ಕೈಗಳಿಂದ ಗುದ್ದಿ  ಮೈಕೈಗೆ ಗುದ್ದಿ ಪೆಟ್ಟು ಮಾಡಿ, ಜಗಳ ಬಿಡಿಸಲು ಬಂದ ದುರುಗಣ್ಣ ಹಾಗೂ ಪತ್ತೆಪ್ಪರವರಲ್ಲಿ ದುರುಗ್ಣಿಗೆ ನೂಕಿದ್ದು, ಎಲ್ಲಾರು ಸೇರಿ ಕಲ್ಲು, ಕಟ್ಟಿಗೆ, ಮಚ್ಚು ನಮಗೆ ತೋರಿಸಿ ನಿಮ್ಮನ್ನು ಇಲ್ಲಿಗೇ ಬಿಡುವುದಿಲ್ಲ ನಿಮ್ಮನ್ನು ಸಾಯಿಸುತ್ತೇಲೇ ಎಂದು ಪ್ರಾಣ ಬೆದರಿಕೆ ಹಾಕಿದ್ದು, ನಂತರ ಸ್ಥಳಕ್ಕೆ ಬಂದ ಪಿಎಸ್ ಐರವರು ಮತ್ತು ಸಿಬ್ಬಂದಿಗಳು ಸದರಿ ಗಲಾಟೆಯನ್ನು ತಿಳಿಗೊಳಿಸಿದ್ದು, ನಂತರ ನನ್ನ ತಮ್ಮ ಗಾದಿಲಿಂಗಪ್ಪ, ಗಂಗಪ್ಪ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋದರು
, ನಂತರ ನಾನು  ಈ ಬಗ್ಗೆ ನಮ್ಮ ಹಿರಿಯರನ್ನು ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ನಮ್ಮನ್ನು ಹೊಡೆದು ಗಾಯ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ
15 Cr.No:0173/2015
(IPC 1860 U/s 353 )
28/11/2015 Under Investigation
OFFENCES AGAINST PUBLIC SERVANTS (Public servant is a victim) - Police Personnel
Brief Facts :  ಈ ದಿನ ದಿನಾಂಕ: 28/11/2015ರಂದು ಮಧ್ಯಾಹ್ನ 1:15ಗಂಟೆಗೆ ಪಿಎಸ್ಐರವರಿಗೆ ದರೂರು ಡಿಪಿ ನಂ:20 ಎಲ್ಎಲ್ಸಿ ಕಾಲುವೆ ಮೇಲೆ ದರೂರು ಗ್ರಾಮದವರು ಗುಂಪು ಸೇರಿ ಗಲಾಟೆ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ. ಪಿಎಸ್ಐ ಬಿ ನಿರಂಜನರವರೊಂದಿಗೆ ಸಿಬ್ಬಂದಿಗಳಾದ ನಾನು ಹೆಚ್ಸಿ-46,ಪಿಸಿ-685,ಎಪಿಸಿ-   ರವರು ಸೇರಿ ಇಲಾಖಾ ಜೀಪ್ ನಂ:ಕೆಎ34/ಜಿ269 ನೇದ್ದರಲ್ಲಿ ಹೊರಟು ಮಧ್ಯಾಹ್ನ 1:35ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ಜನರು ಸೇರಿ ಗಲಾಟೆ ಮಾಡುತ್ತಿದ್ದರು, ಆಗ ಪಿಎಸ್ಐ ಸಾಹೇಬರ ಆದೇಶದ ಮೇರೆಗೆ ಅವರೊಂದಿಗೆ ನಾವುಗಳು ಸೇರಿ ಸದರಿ ಗಲಾಟೆಯ ಗುಂಪನ್ನು ಚದುರಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಡೆಯುತ್ತಿದ್ದಾಗ ಯಾರೋ ವ್ಯಕ್ತಿಗಳು ಗಲಾಟೆಯಲ್ಲಿ ಸಮವಸ್ತ್ರದಲ್ಲಿದ್ದ ನನಗೆ ಅಂಗಿ ಹಿಡಿದು ಎಳೆದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದರು, ನಂತರ ನಾವುಗಳು ಹಿಡಿಯುವಷ್ಠರಲ್ಲಿ ಅಲ್ಲಿದ್ದವರು ಓಡಿಹೋದರು. ನಾನು ಅವರನ್ನು ನೋಡಿದರೆ ಗುತರ್ಿಸುತ್ತೇನೆ, ನಂತರ ಸದರಿ ಗಲಾಟೆ ತಿಳಿಗೊಳಿಸಿದ ನಂತರ ಠಾಣೆಗೆ ಬಂದು ನನಗೆ ಅಂಗಿ ಹಿಡಿದು ಎಳೆದು ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಠಾಣಾ ಗುನ್ನೆ ನಂ-173/2015 ಕಲಂ-353 ಐಪಿಸಿ ರೀತ್ಯ ಪ್ರಕರಣ ಧಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ.
Tekkalkota PS
16 Cr.No:0130/2015
(INDIAN MOTOR VEHICLES ACT, 1988 U/s 183 ; IPC 1860 U/s 279,337,338 )
28/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ದಿನಾಂಕ ೨೩-೦೯-೨೦೧೫ ರಂದು  ಪಿರ್ಯಾದಿದಾರನು  ದೇವಿನಗರದಿಂದ  ತೆಕ್ಕಲಕೋಟೆಗೆ ವ್ಯವಸಾಯದ  ಉಪಕರಣಗಳನ್ನು  ಖರೀದಿಗಾಗಿ ಬಂದು ,ವಾಪಸ್ಸು ತನ್ನ ಮೋಟರ್ ಸೈಕಲ್ಲುನಲ್ಲಿ ನಂ ಕೆ.ಎ ೩೪ ಟಿ೩೩೩೦ ರಲ್ಲಿ ಹೋಗುತ್ತಿರುವಾಗ  ತೆಕ್ಕಲಕೋಟೆಯ ಕೆ.ಇ.ಬಿ  ಕಛೆರಿಯ ಹತ್ತಿರ ಸಮಯ ೦೭-೦೦ ಪಿ.ಎಮ್ ದಲ್ಲಿ  ಟ್ರಾಕ್ಟರ್ ನಂ ಕೆ.ಎ ೩೪ಟಿ ೯೯೫೦ ನೆದ್ದರ ಚಾಲಕನು  ಅತಿ ವೇಗ ಮತ್ತು ಆಜಾರುಕತೆಯಿಂದ ಚಲಾಯಿಸಿ  ಪಿರ್ಯಾದಿದಾರನಿಗೆ ಡಿಕ್ಕಿ ಹೊಡೆಸಿದ್ದು  ಸದರಿ ಅಪಘಾತದಿಂದ ಪಿರ್ಯಾದಿದಾರನ ತಲೆಗೆ,  ಕತ್ತುಗೆ ,  ತಿವ್ರಸ್ವರೂಪದ ಗಾಯವಾಗಿದ್ದು  ಸದರಿ ಚಾಲಕನು  ಟ್ರಾಕ್ಟರನ್ನು ನಿಲ್ಲಿಸದೆ  ಹೋಗಿದ್ದು   ಅಲ್ಲಿಯೆ ಇದ್ದ ವೀರೆಶ ತಂದೆ ದೊಡ್ಡ ಸಿದ್ದಪ್ಪ  ಮತ್ತು ಕಾಡಸಿದ್ದಪ್ಪ ತಂದೆ  ಬಸಪ್ಪ   ಸದರಿ  ಅಪಘಾತವನ್ನು ನೋಡಿದ್ದು  ನಂತರ ಪಿರ್ಯಾದಿದಾರನನ್ನು   ಸಮಯ ೦೯-೪೨ ಪಿ.ಎಂ ಗೆ ಪಿರ್ಯಾದಿದಾರನ್ನು ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು  ಗಾಯಾಳು ದಿನಾಂಕ ೨೩-೦೯-೨೦೧೫ ರಿಂದ ೧೪-೧೦-೨೦೧೫ ರವರೆಗೆ   ಚಿಕಿತ್ಸೆಯನ್ನು  ಪಡೆದಿದ್ದು  , ಸದರಿ ಆಪಘಾತಪಡಿಸಿದ ಟ್ರಾಕ್ಟರ್  ಚಾಲಕನ ವಿರುದ್ದ  ನೀಡಿದ ಮಾನ್ಯ ಸಿ.ಜೆ& ಜೆ.ಎಮ್.ಸಿ ನ್ಯಾಯಲಯ ಸಿರುಗುಪ್ಪದಿಂದ  ಪಿ.ಸಿ ೪೬೮ ರವರು ತಂದು ಹಾಜರ‍್ಪಡಿಸಿದ್ದನ್ನು   ಪಡೆದು ಠಾಣಾ ಗುನ್ನೆ ನಂ ೧೩೦/೧೫ ಕಲಂ ೨೭೯,೩೩೭,೩೩೮ ಐ.ಪಿ.ಸಿ ಮತ್ತು ೧೮೩ ಐ ಎಮ್ ವಿ  ರಿತ್ಯಾ ಪ್ರಕರಣ ಧಾಖಲಿಸಿ ಮುಂದಿನ ತನಿಖೆಯನ್ನು ಕೈಗೋಂಡಿದೆ.
Thoranagal PS
17 Cr.No:0175/2015
(IPC 1860 U/s 287,337,304(A) )
28/11/2015 Under Investigation
DEATHS DUE TO RASHNESS/NEGLIGENCE - Industrial Accident(Factory)
Brief Facts :  ನಿವೇದನೆ-
     ಈ ದಿನ ದಿನಾಂಕ:28/11/2015 ರಂದು  2;00 ಪಿ.ಎಂ.ಗೆ ಪಿರ್ಯಾದಿ ಹಾಜುರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಉಪೇಂದ್ರ ಕುಮಾರ್ ಆದ ನಾನು ಮನವಿ ಮಾಡಿಕೊಳ್ಳುವುದೆನೆಂದರೆ ನಾನು   ಎಸ್.ಸಿ.ಸಿ. ಕಂಪನಿಯಲ್ಲಿ ಫೀಟ್ಟರ್ ಕೆಲಸ ಮಾಡಿಕೊಂಡು ಬಂದಿರುತ್ತೇನೆ.  ಮಿಕೋ ಕಂಪನಿಯಲ್ಲಿ  ಗುತ್ತಿಗೆ ಕೆಲಸ ಮಾಡಿಕೊಂಡು ಬಂದಿರುತ್ತೆ.ನಂತರ ನಮ್ಮ ಸಂಬಂದಿಕರಾದ ಮುಖೇಶ್ ಠಾಕೂರು ತಂದೆ ಖಜಿಲ್ ಠಾಕೂರು 35 ವರ್ಷಗಳು ಹಿಂದೂ ಜನಾಂಗ ಗ್ರೈಂಡರ್  ಕೆಲಸ ವಾಸ: ಸ್ವಂತ ವಿಳಾಸ:ಮಾದುಪುರ ಗ್ರಾಮ ದೇವಾಡಿಯಾ ಮಂಡಲ ಪಾರು ತಾಲೂಕು ಮುಜಾಫ ಪುರ ಜಿಲ್ಲೆ, ಬಿಹಾರ್ ರಾಜ್ಯ ರವರನ್ನು  ಒಂದು ತಿಂಗಳ ನಿಂದ  ಕೆಲಸ ಮಾಡಿಕೊಂಡು  ಬಂದಿರುತ್ತಾರೆ.
      ಪ್ರತಿದಿನದಂತೆ ನಾನು ಮತ್ತು ನಮ್ಮ ಮುಖೇಶ್ ಠಾಕೂರು, ರಸಪಾಲ್,ವೀರೇಂದ್ರ ಸಿಂಗ್ ರವರೊಂದಿಗೆ ಜಿಂದಾಲ್ ಕಾರ್ಖನೆಗೆ ನಿನ್ನೆಯ ದಿನ ದಿನಾಂಕ: 27/11/2015 ರಂದು  ರಾತ್ರಿ “ಸಿ” ಶೀಪ್ಟ್ ಗೆ ಕೆಲಸಕ್ಕೆ ಹೋಗಿ ಕೆಲಸ ಮಾಡುತ್ತಿರುವಾಗ  ಜಿಂದಾಲ್ ಕಾರ್ಖಾನೆಯ ಬಿ.ಎಫ್-1 ನಲ್ಲಿ  ಸುಮಾರು 6 ಮೀಟರ್ ಎತ್ತರದಲ್ಲಿ ಮುಖೇಶ್ ಠಾಕೂರು ರವರು  ಗ್ರೈಡಿಂಗ್ ಕೆಲಸ ಮಾಡುತ್ತಿದ್ದನ್ನು ನಮ್ಮನ್ನು ಉಸ್ತುವಾರಿ ನೋಡಿಕೊಳ್ಳು ಹೆಚ್.ಕೆ. ಪ್ರವೀಣ್ ಎ.ಇ ಮತ್ತು ಜೀತೇಂದ್ರ ಎಂ.ಸಿನಿಯಾರ್ ಮ್ಯಾನೇಜರ್ ರವರು ಇದ್ದರು  ಈ ದಿನ ದಿನಾಂಕ 28/11/2015 ರಂದು 7;30 ಎ.ಎಂ. ಸಮಯದಲ್ಲಿ  ಸುಮಾರು 6 ಮೀಟರ್ ಎತ್ತರದಿಂದ ಫರ್ನೆಜ್ ಗೆ ಅಳಡಿಸಿದ ಸ್ಟೀಲ್ ಪ್ಲೀಟ್ ಕೆಳಗೆ  ಕೆಲಸ ಮಾಡುತ್ತಿದ್ದ ಮುಖೇಶ್ ಠಾಕೂರು  ಮತ್ತು ಹೆಚ್ ಕೆ. ಪ್ರವೀಣ್, ಜೀತೇಂದ್ರ  ರವರ ಮೇಲೆ ಬಿದಿದ್ದು ಇದರಿಂದ ಕೆ.ಪ್ರವೀಣ್ ಮತ್ತು ಜೀತೇಂದ್ರ ರವರಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ. ಮುಖೇಶ್  ಠಾಕೂರು ರವರಿಗೆ ತೆಲೆಗೆ ಮತ್ತು ಸೊಂಟಕ್ಕೆ ಮತ್ತು ಕಾಲುಗಳಿಗೆ ರಕ್ತಗಾಯ ಗಳು ಮತ್ತು ಒಳ ಪೆಟ್ಟುಗಳು ಅಗಿದ್ದು ಗಾಯ ಗೊಂಡವರನ್ನು ಅಂಬ್ಯುಲೇನ್ಸ್ ನಲ್ಲಿ ಸಂಜೀವನಿ ಆಸ್ಪತ್ರೆಗೆ ಕರೆದು ಕೊಂಡು ಬಂದು  ದಾಖಲು ಮಾಡಿದೆವು. ಕೆ.ಪ್ರವಿಣ್  ಮತ್ತು ಜೀತೇಂದ್ರ ಸಿಂಗ್ ರವರಿಗೆ ಸಂಜೀವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟರು ಮುಖೇಶ್ ಠಾಕೂರು ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಳ್ಳಾರಿಗೆ ಕರೆದು ಕೊಂಡು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವಾಗ ಈ ದಿನ ಸುಮಾರು  11;05ಎ.ಎಂ. ಗೆ ಮೃತ ಪಟ್ಟಿರುತ್ತಾರೆ.    ಈ ಘಟನೆ ಜಿಂದಾಲ್ ಕಾರ್ಖಾನೆ ಕಾರ್ಮಿಕರಾದ  1)ಕಾಠಾರಿಯಾ  ಸಿನಿಯರ್ ವಿ.ಪಿ 2)ನಾಗೇಂದ್ರ ಕುಮಾರ್. ಎ.ವಿ.ಪಿ. ಬಿಎಫ್.-1 3)ಬಿಆರ್. ಗಣೇಶ್ ಡಿ.ಜಿ.ಎಂ. ಮ್ಯೆಕಾನಿಕಲ್ 4)ಹನುಮೇಶ್ ಡಿ.ಜಿ.ಎಂ.5)ಸಂತೋಷ್ ಕಾಂಡೇ ಮ್ಯಾನೇಜರ್ ಸೇಪ್ಟೀ 6)ಆರ್.ಕೆ. ಸಿಂಗ್ ಜಿ.ಎಂ. ಸೇಪ್ಟೀ ಮತ್ತು ಮಿಕೋ ಕಂಪನಿಯ 7)ಆಶಿಷ್ ಪರ್ಮಾನಿಕ್ ಸೈಟ್ ಇಂಜಿನೀಯರ್ 8)ಯು.ಕೆ.  ಜಿನ್ ಜುನ್ ವಾಲ್  ಸಿನಿಯಾರ್ ಮ್ಯಾನೇಜರ್ 9)ದಾನೇಶ್ ವುದ್ದಿನ್ ಖಾನ್ ಸೇಪ್ಟೀ ಮ್ಯಾನೇಜರ್ 10)ರೋಷನ್ ಸೇಪ್ಟೀ ಇನ್ ಚಾರ್ಜ 11)ಎಸ್.ಎ.ಪರ್ವೆಜ್ ಗ್ರೋಪ್ ಲೀಡರ್ ಮಾನವನ ಪ್ರಾಣಕ್ಕೆ ಅಪಾಯವಾಗುವಂತಹ ಕೆಲಸವನ್ನು  ಯಾವುದೇ ಮುಂಜಾಗ್ರತ ಕ್ರಮಗಳನ್ನು ಮತ್ತು   ಸುರಕ್ಷತಾ  ಸಲಕರಣೆಗಳನ್ನು  ಸೂಕ್ತ ಮಾರ್ಗದರ್ಶನ ನೀಡದೇ  ಕೆಲಸಮಾಡಿಲು ನೂರಿತ ಕಾರ್ಮಿಕರನ್ನು  ಕೆಲಸಕ್ಕೆ ನೇಮಕ ಮಾಡದೇ  ಸ್ಥಳದಲ್ಲಿ ನಿಂತು  ಮಾನವನ ಪ್ರಾಣಕ್ಕೆ ಅಪಾಯವಾಗದಂತೆ ಮುಂಜಾಗ್ರತ ಕ್ರಮ ವಹಿಸದೇ ನಿರ್ಲಕ್ಷತನ ತೋರಿದ್ದರಿಂದ ಘಟನೆ ಜರುಗಿರುತ್ತದೆ.  ಕಾರಣ ಸದ್ರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು  ತಮ್ಮಲ್ಲಿ ಕೇಳಿ ಕೊಳ್ಳುತ್ತೇನೆ. ಎಂದು ದೂರಿನ ಮೇರೆಗೆ  ಈ ಗುನ್ನೆ ದಾಖಲು ಮಾಡಿ ತನಿಖೆ ಕೈ ಗೊಂಡಿದೆ.( ಪ್ರ.ವ.ವಗೆ  ದೂರನ್ನು ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ