Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Chittavadagi PS | ||||||||||||||||
1 | Cr.No:0056/2015 (IPC 1860 U/s 379 ) |
06/11/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ದಿನಾಂಕ 28/10/2015 ರಂದು ಮದ್ಯಾಹ್ನ 3-30 ಗಂಟೆಯಿಂದ 3-45 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿದಾರರು ಹೊಸಪೇಟೆ ರೈಲ್ವೆ ರಿಜರ್ವೆಷನ್ ಟಿಕೇಟ್ ಕೌಂಟರ್ ಎದುರಿಗೆ ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೋಟಾರು ಸೈಕಲ್ ರಿಜಿಸ್ಟರ್ ನಂ. ಕೆ.ಎ.35/ವಿ-9483 ರ ಅಂದಾಜು ಬೆಲೆ ರೂ. 25,000/- ಬಾಳುವುದನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, ತನ್ನ ಅಣ್ಣನಾದ ಖುಬೇಬ್ ಎಂ.ಡಿ. ರವರು ರಾಮನಗರಕ್ಕೆ ಹೋಗಲು ರೈಲ್ವೆ ಟಿಕೇಟ್ ರಿಜರ್ವೆಷನ್ ಮಾಡಿಸಿದ್ದನ್ನು ರದ್ದು ಪಡಿಸಲು ಹೋಗಿ ರದ್ದು ಪಡಿಸಿ ವಾಪಾಸ್ ಬಂದು ನೋಡಿದಾಗ ತನ್ನ ಮೋಟಾರು ಸೈಕಲ್ ನಿಲ್ಲಸಿದ ಸ್ಥಳದಲ್ಲಿ ಕಾಣಿಸಲಿಲ್ಲ. ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲ. ತನ್ನ ಮೋಟಾರು ಸೈಕಲ್ ಸಿಗಬಹುದೆಂದು ಈವರೆಗೂ ಹುಡುಕಾಡಿದರೂ ಪತ್ತೆಯಾಗದಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಸದ್ರಿ ಮೋಟಾರು ಸೈಕಲ್ ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Cowlbazar PS | ||||||||||||||||
2 | Cr.No:0326/2015 (IPC 1860 U/s 506,498A,504,323 ) |
06/11/2015 | Under Investigation | |||||||||||||
CRUELTY BY HUSBAND - Husband | ||||||||||||||||
Brief Facts : | ಫಿರ್ಯಾಧಿ ಮತ್ತು ಆರೋಪಿ-ವಿರೇಶ್ ಗೌಡ ರವರಿಗೆ ಈಗ್ಗೆ 22 ವರ್ಷಗಳ ಹಿಂದೆ ಹೊಸಪೇಟೆಯ ರೈತ ಭವನದಲ್ಲಿ ಮದುವೆಯಾಗಿದ್ದು, ಮದುವೆಯಾದಾಗಿನಿಂದಲೂ ಫಿರ್ಯಾಧಿದಾರರಿಗೆ ಆರೋಪಿತನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಅಲ್ಲದೇ ಈ ದಿನ ದಿನಾಂಕ 03/11/2015 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 04/11/2015 ಬೆಳಗಿನ ಜಾವ 3-00 ಗಂಟೆಯವರಿಗೆ ಜಗಳ ಮಾಡಿ, ತನ್ನ ಮಕ್ಕಳಿಗೆ ಓದಲು ಬಿಡದೇ,ಪೀರ್ಯಾದಿದಾರರೊಂದಿಗೆ ವಿನಾಃಕಾರಣ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಹೊಡೆ ಬಡೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾನೆ, ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
Hagaribommanahalli PS | ||||||||||||||||
3 | Cr.No:0165/2015 (IPC 1860 U/s 379 ) |
06/11/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ಈ ದಿನ ದಿನಾಂಕ:-06-11-15 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಹೆಚ್.ಪಕ್ಕೀರಪ್ಪ ರವರು ಠಾಣೆಗೆ ಬಂದು ತಮ್ಮ ಗಣಕೀಕೃತ ದೂರನ್ನು ನೀಡಿದ್ದು, ಸ್ವೀಕರಿಸಿ ನೋಡಲು ಫಿರ್ಯಾದಿದಾರರು ಈಗ್ಗೆ 3 ವರ್ಷಗಳ ಹಿಂದೆ ಅಂದರೆ 2012 ನೇ ಸಾಲಿನಲ್ಲಿ ಹ.ಬೊ.ಹಳ್ಳಿ ಯಲ್ಲಿರುವ ಟಿ.ವಿ.ಎಸ್ .ಶೋ ರೂಮ್ ನಲ್ಲಿ ಒಂದು ಕಪ್ಪು ಮತ್ತು ಹಸಿರು ಬಣ್ಣದ ಟಿವಿಎಸ್ ಸ್ಟಾರ್ ಸ್ಪೋರ್ಟ ಮೋಟರ್ ಸೈಕಲ್ನ್ನು ಖರೀದಿ ಮಾಡಿದ್ದು, ಇದರ ನೊಂದಣಿ ಸಂಖ್ಯೆ ಕೆ.ಎ.35/ಡಬ್ಲ್ಯೂ-5610 ಅಂತ, ಇಂಜಿನ್ ನಂ. ಡಿಎಫ್5ಸಿಸಿ1153378 ಮತ್ತು ಚಾಸ್ಸಿ ನಂ. ಎಂಡಿ625ಎಂಎಫ್51ಸಿ1ಸಿ43279 ಅಂತ ಇದ್ದು, ಇದನ್ನು ಪಿರ್ಯಾದಿದಾರರು ದಿ:-04-11-15 ರಂದು ರಾತ್ರಿ ಹ್ಯಾಂಡ್ ಲಾಕ್ ಮಾಡಿ ತಮ್ಮ ಬಾಡಿಗೆಯ ಮನೆ ಮುಂದೆ ನಿಲ್ಲಿಸಿದ್ದನ್ನು ಅದೆ ದಿನ ದಿನಾಂಕ 04-11-15 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 05-11-15 ರಂದು ಬೆಳಿಗ್ಗೆ 8-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು, ಈ ಮೋಟರ್ ಸೈಕಲ್ ಅಂದಾಜು ರೂ.20,000/- ಬೆಲೆ ಬಾಳುತ್ತಿದ್ದು, ಇದರ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ನೋಡಿದರೂ ಪತ್ತೆಯಾಗಿರುವುದಿಲ್ಲವೆಂದು ಕಾರಣ ಮೋಟರ್ ಸೈಕಲ್ ನ್ನು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಮೋಟಾರ್ ಸೈಕಲ್ನ್ನು ಪತ್ತೆ ಮಾಡಿಕೊಡಬೇಕೆಂದು ಇದ್ದ ಸಾರಾಂಶದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Kottur PS | ||||||||||||||||
4 | Cr.No:0159/2015 (DOWRY PROHIBITION ACT, 1961 U/s 3,4 ; IPC 1860 U/s 304B,498A,149,302 ) |
06/11/2015 | Under Investigation | |||||||||||||
DOWRY DEATHS - By Husband And Relative/s In Law | ||||||||||||||||
Brief Facts : | ದಿನಾಂಕ
06-11-2015 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ
ದೂರು ಸಾರಾಂಶ: ಪಿರ್ಯಾದಿಯ ಮಗಳು ಮೃತೆ
ಅನ್ನಪೂರ್ಣಮ್ಮ ಳಿಗೆ ಈಗ್ಗೆ 3 ವರ್ಷಗಳ ಹಿಂದೆ ಬೇವೂರು ಗ್ರಾಮದ ಕರಿಬಸಪ್ಪನೊಂದಿಗೆ ಮದುವೆ
ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ
50,000=00 ರೂ ಮತ್ತು ನಾಲ್ಕು ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡಿರುತ್ತಾರೆ. ಮೃತಳು ತನ್ನ ಗಂಡನ ಮನೆಯಲ್ಲಿ ಬಾಳ್ವೆ
ಮಾಡುತ್ತಿರುವಾಗ ಇನ್ನು ಹೆಚ್ಚಿನ
ವರದಕ್ಷಿಣೆಯನ್ನು ತರುವಂತೆ ಆರೋಪಿತರೆಲ್ಲರೂ
ಮೃತಳಿಗೆ ಹೊಡೆ ಬಡೆ ಮಾಡಿ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಮೃತಳು ಪಿರ್ಯಾದಿಗೆ
ತಿಳಿಸಿದ್ದು ಇರುತ್ತದೆ. ಈಗ್ಗೆ ಒಂದು ವಾರದ
ಹಿಂದೆ ಮೃತಳು ತವರು ಮನೆಗೆ ಬಂದಾಗಲೂ ಈ ವಿಷಯವನ್ನು ಮನೆಯವರಿಗೆ ಮತ್ತು ಸಂಬಂಧಿಕರಿಗೆ
ಹೇಳಿದ್ದರಿಂದ ಹಿರಿಯರೆಲ್ಲಾ ಸೇರಿ ಗಂಡನ
ಮನೆಗೆ ಬಂದು ಬುದ್ದಿ ವಾದ ಹೇಳಿ ಬರುತ್ತೇವೆಂದು ಎಂದು ಮೃತಳಿಗೆ ಗಂಡನ ಮನೆಗೆ ಬಿಟ್ಟು
ಬಂದಿರುತ್ತಾರೆ. ನಿನ್ನೆ ದಿನ ದಿನಾಂಕ 05-11-2015 ರಂದು ಸಂಜೆ 7-00 ಗಂಟೆಗೆ ಆರೋಪಿತರ ಹೊಲದಲ್ಲಿ ಮೃತಳು ಅನ್ನಪೂರ್ಣಮ್ಮಳಿಗೆ 5 ಜನ ಆರೋಪಿತರು ಹೊಡೆ ಬಡೆ ಮಾಡಿದ್ದರಿಂದ ಕಿವಿಗೆ ಪೆಟ್ಟಾಗಿ ಕಿವಿಯಲ್ಲಿ ರಕ್ತ ಸಹ ಬಂದಿರುತ್ತದೆ. ಇವರ ಹಿಂಸೆ ತಾಳದೆ ಮನೆಯಲ್ಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಹಿರಿಯರಲ್ಲಿ ಚರ್ಚಿಸಿ ದೂರು ಕೊಡಲು ತಡವಾಗಿರುತ್ತದೆ. ಎಂದು ಇದ್ದ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ. |
|||||||||||||||
Kurugod PS | ||||||||||||||||
5 | Cr.No:0184/2015 (IPC 1860 U/s 379 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ) |
06/11/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಪಿರ್ಯಾದಿದಾರರಿಗೆ ಈ ದಿನ ದಿನಾಂಕ: 06/11/2015 ರಂದು ಬೆಳಿಗ್ಗೆ 08:00 ಗಂಟೆಗೆ ತಮ್ಮ ಕಛೇರಿಯಲ್ಲಿದ್ದಾಗ, ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಶಂಕರಸಿಂಗ್ ಕ್ಯಾಂಪ್ನಲ್ಲಿ ಪಿ. ಶ್ರೀನಿವಾಸಲು ಮತ್ತು ಇತರರು ವಿವಿಧ ಸ್ಥಳಗಳಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುತ್ತಾರೆ ಎಂದು ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ದಾಳಿ ಮಾಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೇ ಕಳ್ಳತನದಿಂದ ಅಕ್ರಮ ಮರಳನ್ನು ದಾಸ್ತಾನು ಮಾಡಿದ್ದ 08 ಟ್ರಾಕ್ಟರ್ ಮರಳು ಇದ್ದು, ಈ ಮರಳು ಸುಮಾರು 12 ಕ್ಯೂಬಿಕ್ ಮೀಟರ್ ಇರುತ್ತದೆ. ಒಂದು ಕ್ಯೂಬಿಕ್ ಮೀಟರ್ಗೆ ಸುಮಾರು 700/-ರೂ.ಗಳಂತೆ ಒಟ್ಟು 8400/-ರೂ.ಗಳಾಗಬಹುದು ಇದನ್ನು ದಾಸ್ತಾನು ಮಾಡಿ ಸಕರ್ಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಪಿ. ಶ್ರೀನಿವಾಸಲು ತಂದೆ ನಾರಾಯಣಪ್ಪ ರವರ ವಿರುದ್ಧ ಪ್ರಕರಣ ದಾಖಲಿಸಲು ನೀಡಿದ ಪಿರ್ಯಾದಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇದರೊಂದಿಗೆ ಪಿರ್ಯಾದಿದಾರರು ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ. | |||||||||||||||
6 | Cr.No:0185/2015 (IPC 1860 U/s 379 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ) |
06/11/2015 | Under Investigation | |||||||||||||
KARNATAKA STATE LOCAL ACTS - Mmdr (Mines & Minerals Regulation Development) Act 1957 | ||||||||||||||||
Brief Facts : | ಪಿರ್ಯಾದಿದಾರರಿಗೆ ಈ ದಿನ ದಿನಾಂಕ: 06/11/2015 ರಂದು ಬೆಳಿಗ್ಗೆ 09:15 ಗಂಟೆಗೆ ಶಂಕರಸಿಂಗ್ ಕ್ಯಾಂಪ್ನಲ್ಲಿ ಶಂಕರಸಿಂಗ್ ಕ್ಯಾಂಪ್ನ ಪಿ.ರಾಮಾಂಜಿನೇಯಲು ತಂದೆ ನಾರಾಯಣಪ್ಪ ರವರ ಗದ್ದೆಯ ಬಳಿ ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೇ ಕಳ್ಳತನದಿಂದ ಅಕ್ರಮ ಮರಳನ್ನು ದಾಸ್ತಾನು ಮಾಡಿದ್ದ ಸುಮಾರು 12 ಟ್ರಾಕ್ಟರ್ ಮರಳು ಇದ್ದು, ಈ ಮರಳು ಸುಮಾರು 18 ಕ್ಯೂಬಿಕ್ ಮೀಟರ್ ಇರುತ್ತದೆ. ಒಂದು ಕ್ಯೂಬಿಕ್ ಮೀಟರ್ಗೆ ಸುಮಾರು 700/-ರೂ.ಗಳಂತೆ ಒಟ್ಟು 12600/-ರೂ.ಗಳಾಗಬಹುದು ಇದನ್ನು ದಾಸ್ತಾನು ಮಾಡಿ ಸಕರ್ಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಪಿ.ರಾಮಾಂಜಿನೇಯಲು ತಂದೆ ನಾರಾಯಣಪ್ಪ ರವರ ವಿರುದ್ಧ ಪ್ರಕರಣ ದಾಖಲಿಸಲು ನೀಡಿದ ಪಿರ್ಯಾದಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇದರೊಂದಿಗೆ ಪಿರ್ಯಾದಿದಾರರು ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ. | |||||||||||||||
Sandur PS | ||||||||||||||||
7 | Cr.No:0175/2015 (INDIAN MOTOR |
06/11/2015 | Under Investigation | |||||||||||||
VEHICLES ACT, 1988 U/s 187 ; IPC 1860 U/s 279,338,304(A) ) | ||||||||||||||||
MOTOR VEHICLE ACCIDENTS FATAL - Other Roads | ||||||||||||||||
Brief Facts : | ದಿನಾಂಕ 06-11-2015ರಂದು ಮದ್ಯಾಹ್ನ 1-30 ಗಂಟೆಗೆ ಬೀಮಪ್ಪ ತಂದೆ ಹನುಮಂತಪ್ಪ ವಃ50 ವರ್ಷ ವಾಲ್ಮೀಕಿ ಜಾತಿ, ಸ್ಮಯೋರ್ ಗ್ಯಾಂಗ್ ಲೇಬರ್ ಕೆಲಸ ವಾಸಃ- ಚೋರ್ ನೂರು ಗ್ರಾಮ ಹಾಲಿ ವಾಸಃ- ಸುಬ್ರಾಯನಹಳ್ಳಿ ಗ್ರಾಮ ಸಂಡೂರು ತಾಲೂಕು.ರವರು ದೂರು ಕೊಟ್ಟಿದ್ದರ ಸಾರಾಂಶವು ಬೀಮಪ್ಪ ಆದ ನಾನು ಕೊಡುವ ದೂರು ಕೊಡುವುದೇನೆಂದರೆ, ನನಗೆ 4 ಜನ ಮಕ್ಕಳಿದ್ದು ಅವರಲ್ಲಿ 2 ಗಂಡು 2 ಹೆಣ್ಣುಮಕ್ಕಳು ಇರುತ್ತಾರೆ.ಅವರಲ್ಲಿ [1] ಮಂಗಳಮ್ಮ [2] ಗೌರೀಶ್ [3] ಗೌರ ಮ್ಮ [4] ಹನುಮಂತ ಅಂತ ಇರುತ್ತಾ ರೆ. ಈ ದಿನ ದಿನಾಂಕ 06.11.2015 ರಂದು ಬೆಳಿಗ್ಗೆ ನನ್ನ ಮಗನಾದ ಗೌರೀಶನು ನಮ್ಮೂರಿನ ಲಾರಿ ಚಾಲಕ ಕೆಲಸ ಮಾಡಿ ಕೊಂಡಿರುವ ತನ್ನ ಗೆಳೆಯ ಪುನೀತ್ ರವರ ಸಂಗಡ ಕಮತೂರ್‌ನ ಲಾರಿ ಮಾಲೀಕ ಮನೋಜ್ ರವರ ಹೀರೊ ಹೊಂಡಾ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ್ K.A.37-L 5070 ರಲ್ಲಿ ಕೆಲಸದ ಮೇಲೆ ಸುಬ್ರ ಯಾನ ಹಳ್ಳಿಯಿಂದ ಸಂಡೂರು ಕಡೆಗೆ ಹೋದರು.ಅವರು ಹೋದ ಸ್ವಲ್ಪ ಸಮಯದ ನಂತರ ದೇವಗಿರಿ ಗ್ರಾ ಮ ಪಂಚಾಯತ್‌ನಲ್ಲಿ ಕೆಲಸ ಮಾಡುವ ಅರುಣ್ ಕುಮಾರ್ ಎಂಬುವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಸಂಡೂರು-ಶ್ರಿ ಕುಮಾರ್ ಸ್ವಾಮಿ ರಸ್ತೆಯಲ್ಲಿ ಬರುವ ತಾಯಮ್ಮ ಗುಡಿಯ ಬಳಿ ಅಕ್ಕಿ ಚನ್ನಮ್ಮ ಎಂಬುವರ ಹೊಲದ ಮುಂದಿನ ರಸ್ತೆಯಲ್ಲಿ ಮದ್ಯಾಹ್ನ 11-30 ಗಂಟೆ ಸುಮಾರಿಗೆ ಸಂಡೂರು ಕಡೆಯಿಂದ ನಂದಿಹಳ್ಳಿ ಕಡೆಗೆ ಹೋಗುವ ಒಂದು ಹೈವಾ ಟಿಪ್ಪರ್ ಲಾರಿ ನಂಬರ್ U.P.77-N 7772 ರ ಚಾಲಕ ತನ್ನ ಲಾರಿಯನ್ನು ಅತಿ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಮಾನವ ಪ್ರಾ ಣಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಎದುರುಗಡೆಯಿಂದ ಅಂದರೆ ನಂದಿಹಳ್ಳಿ ಕಡೆಯಿಂದ ಸಂಡೂರು ಕಡೆಗೆ ಬೈಕ್ K.A.37-L 5070 ರಲ್ಲಿ ಹೋ ಗುತ್ತಿದ್ದ ಪುನೀತ್ ರವರು ನಡೆಸಿ ಕೊಂಡು ಸದ್ರಿ ಬೈಕ್‌ಗೆ ಡಿಕ್ಕಿ ಹೊಡೆಸಿ ಅಪಗಾತ ಮಾಡಿದ್ದರಿಂದ ಬೈಕ್ ನಡೆಸುತ್ತಿದ್ದ ಪುನೀತ್ ಮತ್ತು ಬೈಕ್‌ನಲ್ಲಿ ಹಿಂದೆ ಕೂತಿದ್ದ ಗೌ ರೀಶ್ ರವರಿಬ್ಬರೂ ಕೆಳಗೆ ರಸ್ತೆಯಲ್ಲಿ ಬಿದ್ದಾಗ ಲಾರಿ ನಂಬರ್ U.P.77-N7772 ರ ಹಿಂದಿನ ಬಲಗಡೆ ಟೈರು ಗೌರೀಶನ ತಲೆಗೆ ಮೇಲೆ ಹತ್ತಿಳಿದು ತಲೆಯಿಂದ ಮೆದುಳು ಹೊರ ಬಂದು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಬೈಕ್ ನಡೆಸಿದ್ದ ಪುನೀತ್‌ನಿಗೆ ಸಹ ತಲೆಗೆ ಕೈ ಕಾಲುಗಳಿಗೆ ಬಾರಿ ಪೆಟ್ಟಾಗಿ ರಕ್ತ ಗಾಯಗಳಾಗಿರುತ್ತವೆಂದು ಲಾರಿ ಚಾಲಕನ ಹೆಸರು ಮಹಮದ್ ರಫೀಕ್ ತಂದೆ ವಲಿಸಾಬ್ ವಾಸಃ- ಮಿಂಚೇರಿ ಗ್ರಾಮ ಬಳ್ಳಾರಿ (ತಾ& ಜಿಲ್ಲಾ) ಎಂದು ತಿಳಿಸಿ ಸ್ಥಳದಲ್ಲಿ ಲಾರಿ ನಿಲ್ಲಿಸಿ ಕ್ಲೀನರ್ ನೊಂದಿಗೆ ಓಡಿ ಹೋಗಿದ್ದಾನೆಂದು ಈ ಅಪಘಾತವನ್ನು ಅಲ್ಲೇ ಹೋಗುತ್ತಿದ್ದ ತಾನು ಮತ್ತು ಲಾರಿ ಚಾಲಕರುಗಳು ಮತ್ತು ಕ್ಲೀನರ್‌ಗಳಾದ ರಾಜೇ ಶ್ [2] ಗಣೇಶ್ [3]ಲತೀಫ್ [4]ಹನುಮಂತರೆಡ್ಡಿ ಇತರರು ನೋಡಿರುವುದಾಗಿ ತಿಳಿಸಿದರು ಆಗ ಕೂಡಲೇ ನಾನು ಇತರರು ಸ್ಥಳಕ್ಕೆ ಹೋಗಿ ನೋಡಿದ್ದು ನನ್ನ ಮಗ ಗೌರೀಶನು ಮೃತಪಟ್ಟಿದ್ದು ಅಪಘಾತ ಮಾಡಿ ನನ್ನ ಮಗನ ಸಾವಿಗೆ ಕಾರಣವಾದ ರ ಚಾಲಕ ಮಹಮದ್ ರಫೀಕ್ ನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ಎಂದು ಇದ್ದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. | |||||||||||||||
ಶುಕ್ರವಾರ, ನವೆಂಬರ್ 6, 2015
PRESS NOTE OF 06/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ