Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0478/2015 (KARNATAKA POLICE ACT, 1963 U/s 87 ) |
11/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 10-11-2015 ರಂದು ಬೆಳಿಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಕೊಳಗಲ್ ಗ್ರಾಮದ ಸರ್ಕಾರಿ ಶಾಲೆಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43-389-166 ಪಿ.ಸಿ-839-141-90-987-500-810-1147-1126 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಬೆಳಿಗ್ಗೆ 6-25 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ್ ಬಹಾರ್ ಇಸ್ಪೇಟ್ ಜೂಜಾಟವಾಡುತ್ತಿದ್ದ 1] ವಿಜಯೇಂದ್ರ 2] ಕೆ. ಬಸವರಾಜ 3] ಪೂಜಾರಿ ವೆಂಕಟೇಶ 4] ಕೆ. ಎರ್ರಿಸ್ವಾಮಿ 5] ಗೊಲ್ಲರ ಗೋವಿಂದ 6] ಹನುಮಂತ 7] ಗೋವಿಂದ ರವರಿಂದ ಜೂಜಾಟದ ಹಣ ರೂ. 2230/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿದ್ದಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದು ಮೇಲ್ಕಂಡ 7 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಎನ್ ಸಿ ನಂಬರ್ 64/2015 ನೇದ್ದರಲ್ಲಿ ನಮೂದಿಸಿಕೊಂಡು ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿದೆ. | |||||||||||||||
2 | Cr.No:0479/2015 (KARNATAKA POLICE ACT, 1963 U/s 87 ) |
11/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 11-11-2015 ರಂದು ಬೆಳಿಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರಿಗೆ ಠಾಣೆಯ ಸರಹದ್ದು ಅವಂಭಾವಿ ಏರಿಯಾದ ಕುಂಬಾರಗುಡ್ಡದ ಈಶ್ವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-43 ಪಿ.ಸಿ-987-141-1096-90-839-342-810-1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಬೆಳಿಗ್ಗೆ 5-10 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ್ ಬಹಾರ್ ಇಸ್ಪೇಟ್ ಜೂಜಾಟವಾಡುತ್ತಿದ್ದ 1] ರಸೂಲ್ ಸಾಬ್ 2] ನಾಗರಾಜ 3] ಎಂ. ಎರ್ರಿಸ್ವಾಮಿ 4] ಸಿ. ನಾರಾಯಣಸ್ವಾಮಿ 5] ಕರಿಯಪ್ಪ 6] ವೀರಭದ್ರಪ್ಪ 7] ವಿರೇಶ್ 8] ಈರಣ್ಣ 9] ಸೂರ್ಯತೇಜ ರವರಿಂದ ಜೂಜಾಟದ ಹಣ ರೂ. 4100/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿದ್ದಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿದ್ದು ಮೇಲ್ಕಂಡ 9 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಎನ್ ಸಿ ನಂಬರ್ 65/2015 ನಮೂದಿಸಿಕೊಂಡು ಘನ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿದೆ. | |||||||||||||||
Bellary Traffic PS | ||||||||||||||||
3 | Cr.No:0174/2015 (IPC 1860 U/s 279,337 ) |
11/11/2015 | Under Investigation | |||||||||||||
MOTOR VEHICLE ACCIDENTS NON-FATAL - Other Roads | ||||||||||||||||
Brief Facts : | ದಿನಾಂಕ: 11-11-2015 ರಂದು ಫಿರ್ಯಾಧಿದಾರರಾದ ಜೆ. ಪಂಪಣ್ಣ, ಸಿ.ಹೆಚ್.ಸಿ. 211, ಕೌಲ್ ಬಜಾರ್ ಪೊಲೀಸ್ ಠಾಣೆ, ಬಳ್ಳಾರಿ ರವರಿಗೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆಯ ಪಿ.ಎಸ್.ಐ. ರವರು ಈ ದಿನ ಕೌಲ್ ಬಜಾರ್ ಪೊಲೀಸ್ ಠಾಣಾ ಸರಹದ್ದಿನ 1ನೇ ಬೀಟ್ “ಬಿ” ವಿಭಾಗದ ಹಗಲು ಕರ್ತವ್ಯಕ್ಕೆ ನೇಮಕ ಮಾಡಿದ್ದರಿಂದ ಸದರಿಯವರು ತಮ್ಮ ಮೋಟಾರ್ ಸೈಕಲ್ ನಲ್ಲಿ ಕರ್ತವ್ಯದ ಮೇಲೆ ಬಳ್ಳಾರಿನಗರದ ಬಂಡಹಟ್ಟಿ ಮುಖ್ಯ ರಸ್ತೆಯಲ್ಲಿರುವ ಸಪ್ತಗಿರಿ ಫಂಕ್ಷನ್ ಹಾಲ್ ಹತ್ತಿರ ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ಅದೇ ಸಮಯದಲ್ಲಿ ಅವರ ಮುಂದುಗಡೆ ಅವರಂತೆ ಕೌಲ್ ಬಜಾರ್ ಠಾಣಾ ಸರಹದ್ದಿನಲ್ಲಿ “ಬಿ” ವಿಭಾಗದ ಚೀತಾ ವಾಹನ ಹಗಲು ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದ ಕೌಲ್ ಬಜಾರ್ ಪೊಲೀಸ್ ಠಾಣೆಯ ಪಿ.ಸಿ.446 ಡಿ.ನೇಮ್ಯಾನಾಯ್ಕರವರು ಚೀತಾ ವಾಹನದ ಕರ್ತವ್ಯ ಇಲಾಖೆಯ ವತಿಯಿಂದ ನೀಡಿದ ಮೋಟಾರ್ ಸೈಕಲ್ ನಂಬರ್: ಕೆಎ-34 ಜಿ-413 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಅದೇ ಸಮಯದಲ್ಲಿ ಸಪ್ತಗಿರಿ ಫಂಕ್ಷನ್ ಹಾಲ್ ಕಡೆಯಿಂದ ಯಾವುದೋ ಒಂದು ಚಿಕ್ಕಮಗು ರಸ್ತೆಗೆ ಅಡ್ಡ ಬಂದಿದ್ದರಿಂದ ಆ ಮಗುವಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ನೇಮ್ಯಾ ನಾಯಕ್ ರವರು ಏಕಾಏಕಿ ಮೋಟಾರ್ ಸೈಕಲ್ ನ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಸ್ಕಿಡ್ಡಾಗಿ ಎಡಮಗ್ಗುಲಾಗಿ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ನೇಮ್ಯಾನಾಯ್ಕರವರಿಗೆ ಬಲಗಣ್ಣಿನ ಕೆಳಭಾಗದಲ್ಲಿ ಗದ್ದದ ಹತ್ತಿರ ಮತ್ತು ಬಲ ಅಂಗೈಹತ್ತಿರ ತೆರಚಿದ ಗಾಯಗಳು | |||||||||||||||
ಮತ್ತು ಎಡ ಮಣಿ ಕಟ್ಟಿನ ಹತ್ತಿರ ಒಳ ಪೆಟ್ಟಾಗಿರುತ್ತದೆಂದು, ಸದರಿವಯರಿಗೆ ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಈ ಬಗ್ಗೆ ಕ್ರಮ ಜರುಗಿಸಲು ದೂರು ಇರುತ್ತದೆ. | ||||||||||||||||
Gandhinagar PS | ||||||||||||||||
4 | Cr.No:0234/2015 (IPC 1860 U/s 506,341,504,143,147,149 ) |
11/11/2015 | Under Investigation | |||||||||||||
WRONGFUL RESTRAINT/CONFINEMENT - Others | ||||||||||||||||
Brief Facts : | ದಿನಾಂಕ:08.11.2015 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ಆರೋಪಿ-1 ರಿಂದ 7 ರವರು ಸೇರಿ ಅಕ್ರಮ ಗುಂಪು ಕಟ್ಟಿಕೊಂಡು ಫಿರ್ಯಾಧಿದಾರರ ಮನೆಯ ಹತ್ತಿರ ಬಂದು ಫಿರ್ಯಾಧಿದಾರರನ್ನು ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಆಸ್ತಿ ವಿಷಯದಲ್ಲಿ ಜಗಳ ತೆಗೆದು ಏ ಸೂಳೆ ಮಗನೇ ಆಸ್ತಿಯನ್ನು ನಿನ್ನೊಬ್ಬನೇ ತೆಗೆದುಕೊಂಡಿದ್ದೀಯ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ | |||||||||||||||
5 | Cr.No:0235/2015 (CODE OF CRIMINAL PROCEDURE, 1973 U/s 107 ) |
11/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ ದಿನ ದಿನಾಂಕ:11.11.2015 ರಂದು ಸಂಜೆ 6.30 ಗಂಟೆಗೆ ನಾನು ಠಾಣೆಯ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದಾಗ ಪ್ರತಿವಾದಿಯು ಬಳ್ಳಾರಿ ನಗರದ ಭಗತ್ ಸಿಂಗ್ ನಗರ ಏರಿಯಾ ಹಾಗು ತಾಳೂರು ರಸ್ತೆ ಏರಿಯಾಗಳಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವನುಂಟು ಮಾಡುತ್ತಿರುತ್ತಾನೆಂದು ತಿಳಿದು ಬಂದಿದ್ದು, ಈತನು ಠಾಣಾ ವ್ಯಾಪ್ತಿಯ ರೌಡಿ ಹಾಳೆ ಉಳ್ಳವನಾಗಿದ್ದು ಸಾರ್ವಜನಿಕರಿಗೆ ಬೆದರಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಶಾಂತತೆ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕ್ರಮಕ್ಕಾಗಿ ಪ್ರತಿವಾದಿಯ ವಿರುದ್ದ ಈ ಪ್ರ.ವ.ವರದಿ. | |||||||||||||||
Hospet Rural PS | ||||||||||||||||
6 | Cr.No:0165/2015 (IPC 1860 U/s 392,511 ) |
11/11/2015 | Under Investigation | |||||||||||||
Attempting to commit offences - Attempting to commit offences | ||||||||||||||||
Brief Facts : | ಪಿರ್ಯಾದಿದಾರರು ಈ ದಿನ ದಿನಾಂಕ 11/11/15 ರಂದು ರಾತ್ರಿ 10-15 ಗಂಟೆಗೆ ಹೊಸಪೇಟೆಯ ಎಂ.ಜೆ.ನಗರದ ತಮ್ಮ ಮಗಳ ಮನೆಗೆ ಲಕ್ಷಿ ಪೂಜೆ ಮುಗಿಸಿಕೊಂಡು ವಾಪಸ್ಸು ಅಮರಾವತಿ ಬಾರತಿ ನಗರದಲ್ಲಿರುವ ತಮ್ಮ ಮನೆಗೆ ವಾಪಸ್ಸು ತಮ್ಮ ಹೆಂಡತಿಯೊಂದಿಗೆ ಮೊಟಾರ್ ಸೈಕಲ್ಲಿನಲ್ಲಿ ಬರುವಾಗ ತಮ್ಮನ್ನು ಹಿಂಬಾಲಿಸಿಕೊಂಡು ಇಬ್ಬರು ವ್ಯಕ್ತಿಗಳು ಯಮಹಾ ಬೈಕ್ ನಲ್ಲಿ ಬಂದಿದ್ದು ತಮ್ಮ ಮನೆಯ ಹತ್ತಿರ ಬಂದು ಮೊಟಾರ್ ಸೈಕಲ್ ನಿಂದ ನನ್ನ ಹೆಂಡತಿ ಕೆಳಗೆ ಇಳಿಯುತ್ತಿದ್ದಂತೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಹಿಂದೆ ಕುಳಿತಿದ್ದ ಒಬ್ಬ ವ್ಯಕ್ತಿಯು ಅಂದಾಜು 18 ರಿಂದ 20 ವರ್ಷದವನಿದ್ದು, ಕೆಂಪಗೆ ಉದ್ದಗೆ ಇದ್ದು ನನ್ನ ಹೆಂಡತಿ ಬಳಿ ಬಂದು ನನ್ನ ಹೆಂಡತಿಯ ಕೊರಳಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಎರಡೆಳೆಯ ಬಂಗಾರದ ಸರ ಅಂದಾಜು 75,000/- ಹಾಗು ಸುಮಾರು 20 ಗ್ರಾಂ ತೂಕದ ಒಂದೆಳೆಯ ಡಾಲರ್ ಇದ್ದ ಬಂಗಾರದ ಸರ ಅಂದಾಜು ಬೆಲೆ ರೂ. 30,000/- ಗಳನ್ನು ಕಿತ್ತುಕೊಂಡು ಓಡಿ ಹೋಗಿ ಅಲ್ಲಿಯೇ ಬೈಕ್ ನಲ್ಲಿ ಇದ್ದ ಇನ್ನೊಬ್ಬ ವ್ಯಕ್ತಿಯ (ಅಂದಾಜು 18 ರಿಂದ 20 ವರ್ಷ, ಗೋಧಿ ಮೈಬಣ್ಣ ) ಬೈಕ್ ನ್ನು ಏರಿ ಹತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಪಿರ್ಯಾದಿ ಕೂಗಿಕೊಂಡು ಓಡಿ ಹೋಗಿ ಆರೋಪಿಗಳ ಯಮಹಾ ಬೈಕ್ ನ ಹಿಂದಿನ ಗ್ರಿಪ್ಪರ್ ಹಿಡಿದುಕೊಂಡಾಗ ಅಕ್ಕಪಕ್ಕದಲ್ಲಿನ ಜನರು ಓಡಿ ಬರುತ್ತಿರುವುದನ್ನು ಗಮನಿಸಿದ ಸರಗಳ್ಳರು ಸರಗಳನ್ನು ಪಿರ್ಯಾದಿಯ ಹೆಂಡತಿ ಕಡೆಗೆ ಬೀಸಾಡಿ ತಮ್ಮ ಬೈಕ್ ನಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದು, ಸದ್ರಿ ವ್ಯಕ್ತಿಯು ಕಿತ್ತುಕೊಂಡು ಕೆಳಗೆ ಬೀಸಾಡಿದ್ದ ಸರಗಳನ್ನು ಪರಿಶೀಲಿಸಿ ನೋಡಲು ಸಾದಾ ಬಂಗಾರದ ಸರದಲ್ಲಿದ್ದ ಒಂದು ಬಂಗಾರದ ಕೊಂಡಿ ಅಂದಾಜು ತೂಕ 1 ಗ್ರಾಂ ನದ್ದು ಮಾತ್ರ ಕೆಳಗೆ ಬಿದ್ದು ಕಳೆದು ಹೋಗಿದ್ದು, ಇನ್ನುಳಿದ ಆಭರಣಗಳು ಸರಿಯಿದ್ದು ಹಾಲಿ ಪಿರ್ಯಾದಿಯ ಬಳಿ ಇರುತ್ತವೆಂದು ತಿಳಿಸಿ, ಹಾಗು ಆರೋಪಿಗಳನ್ನು ಪುನಃ ನೋಡಿದರೆ ಗುರ್ತಿಸುತ್ತೇನೆಂದು ತಿಳಿಸಿ, ಸದ್ರಿ ಆಪಾದಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. | |||||||||||||||
Kamalapur PS | ||||||||||||||||
7 | Cr.No:0095/2015 (KARNATAKA POLICE ACT, 1963 U/s 87 ) |
11/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ-11/11/2015 ರಂದು ಬೆಳೆಗ್ಗೆ 01-35 ಗಂಟೆಯ ಸಮಯದಲ್ಲಿ ಪಿ.ಎಸ್.ಐ(ಅ.ವಿ) ರವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ ಕಮಲಾಪುರ ಠಾಣಾ ಸರಹದ್ದಿನ ಕಮಲಾಪುರದ ಶ್ರೀ ವಾಲ್ಮೀಕಿ ಆಶ್ರಮದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಎಂಬ ನಸೀಬಿನ ಜೂಜಾಟ ನಡೆಯುತ್ತಿದೆ, ಎಂದು ಖಚಿತ ವರ್ತಮಾನ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಬೆಳೆಗ್ಗೆ 02-35 ಗಂಟೆಗೆ ದಾಳಿ ಮಾಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 13 ಜನರನ್ನು ಹಿಡಿದಿದ್ದು, ಒಟ್ಟು ನಗದು ಹಣ 3500/- ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಪಂಚೆನಾಮೆ ಮೂಲಕ ಜಪ್ತು ಮಾಡಿಕೊಂಡಿದ್ದು ಮಾಲು ಮತ್ತು 13 ಜನ ಆರೋಪಿತರನ್ನು ವಶಕ್ಕೆ ತಗೆದುಕೊಂಡು ಬೆಳೆಗ್ಗೆ 04-30 ಗಂಟಗೆ ಠಾಣೆಗೆ ಬಂದು ಮಾಲು ಮತ್ತು ಆರೋಪಿತರನ್ನು ಹಾಗೂ ಜಪ್ತು ಪಂಚೆನಾಮೆಯನ್ನು ಒಪ್ಪಿಸಿ ಆರೋಪಿತರ ವಿರುದ್ದ ಕಲಂ 87 ಕೆ.ಪಿ.ಯ್ಯಾಕ್ಟ್ ರೀತ್ಯಾ ಕೇಸ್ ದಾಖಸಲು ನೀಡಿದ ಜ್ಞಾಪನ ಮೇರೆಗೆ ಮಾನ್ಯ ನ್ಯಾಯಲಯದ ಅನುಮತಿಯನ್ನು ಪಡೆದು ಪ್ರ.ವ.ವರದಿ | |||||||||||||||
Sirigeri PS | ||||||||||||||||
8 | Cr.No:0166/2015 () |
11/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ
ದಿನ ದಿನಾಂಕ:-11.11.2015 ರಂದು ಬಿ. ನಿರಂಜನ
ಪಿಎಸ್ಐ ಸಿರಿಗೇರಿ ಪೊಲೀಸ್ ಠಾಣೆ ಆದ ನಾನು
ಮಾನ್ಯ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ-11.11.2015 ರಂದು
ಸಂಜೆ 04.00 ಗಂಟೆಗೆ ದೀಪಾವಳಿ ಹಬ್ಬದ ನಿಮಿತ್ತ ಶಿರಿಗೇರಿ ಠಾಣಾ ಸರಹದ್ದಿನ ಗ್ರಾಮಗಳ
ಬೇಟಿಗಾಗಿ ಹೋಗಿ ಬೈರಾಪುರ, ಕರೂರು, ದರೂರು, ಮಾಟಸುಗೂರು, ತಾಳೂರು, ಹಾಗಲೂರು ಗ್ರಾಮಗಳಿಗೆ
ಬೇಟಿ ನಂತರ ರಾತ್ರಿ 07.30 ಗಂಟೆಗೆ ಶಾನವಾಸಪುರ ಗ್ರಾಮಕ್ಕೆ ಬೇಟಿ ನೀಡಿ ಸದರಿ
ಗ್ರಾಮದಲ್ಲಿ ಮುಖಂಡರನ್ನು ಮತ್ತು
ಭಾತ್ಮಿದಾರರನ್ನು ಸಂಪರ್ಕಿಸಿ ಗ್ರಾಮದಲ್ಲಿ ಪುಂಡರ ಹಾಳೆಯನ್ನು ಹೊಂದಿರುವ ಪ್ರತಿವಾದಿಯ ಬಗ್ಗೆ
ವಿಚಾರಿಸಿದಾಗ ಸದರಿ ಪ್ರತಿವಾದಿಯು ದೀಪಾವಳಿಯಲ್ಲಿ ಸಣ್ಣಪುಟ್ಟ ಕಾರಣಗಳಿಂದ ಹಾಗೂ ವಿನಾಕಾರಣ
ಇತರರೊಂದಿಗೆ ಜಗಳ ತೆಗೆದು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ತರುವ ಸಾದ್ಯತೆ ಇರುತ್ತದೆ
ಎಂದು ಗ್ರಾಮಸ್ಥರು ಮತ್ತು ಭಾತ್ಮೀದಾರರಿಂದ ಮಾಹಿತಿ ತಿಳಿದಿರುತ್ತದೆ. ಈ ವಿಷಯವಾಗಿ ಪ್ರತಿವಾದಿಯು ಗ್ರಾಮದಲ್ಲಿ ಯಾವ ಸಮಯದಲ್ಲಾದರೂ ಅನಾಗತ್ಯ ಗಲಾಟೆ ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕರ ಶಾಂತತೆಗೆ ಭಂಗ ತರುವ ಸಾದ್ಯತೆ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಮೇಲ್ಕಂಡ ಪ್ರತಿವಾದಿಯ ವಿರುದ್ದ ಠಾಣೆಗೆ ಬಂದು ನನ್ನ ಸ್ವದೂರಿನ ಮೇರೆಗೆ ಠಾಣಾ ಗುನ್ನೆ ನಂ-166/15 ಕಲಂ-107 ಸಿಆರ್.ಪಿ.ಸಿ ಸಿಅರ್ಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ಸದರಿ ಪ್ರತಿವಾದಿಗಳಿಗೆ ಅತೀ ಹೆಚ್ಚಿನ ಮೊತ್ತದ ಜಾಮೀನು ಮುಚ್ಚಳಿಕೆಯನ್ನು ಪಡೆಯಬೇಕೆಂದು ಮಾನ್ಯ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತೇನೆ |
|||||||||||||||
Siruguppa PS | ||||||||||||||||
9 | Cr.No:0235/2015 (KARNATAKA POLICE ACT, 1963 U/s 87 ) |
11/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ಈ ದಿನ ದಿನಾಂಕ:11-11-2015 ರಂದು ರಾತ್ರಿ 07-00 ಗಂಟೆಗೆ ರಘು ಎನ್. ಪಿ.ಎಸ್.ಐ.[ಕಾ&ಸು] ರವರು ಠಾಣೆಯಲ್ಲಿದ್ದಾಗ ಸಿರುಗುಪ್ಪ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಕೆ.ಇ.ಬಿ. ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಅಂದರ್ -ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ ಸಿರುಗುಪ್ಪ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಪಿ.ಸಿ.896, 711, 1135, 128, 561 ಮತ್ತು ಜೀಪ್ ಚಾಲಕ ಪಿಸಿ.1088 ಮತ್ತು ಪಂಚರೊಂದಿಗೆ ಸದರಿ ಸ್ಥಳಕ್ಕೆ ರಾತ್ರಿ 07-45 ಗಂಟೆಗೆ ಹೋಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ರಾತ್ರಿ 09-15 ಗಂಟೆಗೆ ಠಾಣೆಗೆ ಹಾಜರ್ ಆಗಿ ಜಪ್ತು ಪಂಚನಾಮೆ ಅದರಲ್ಲಿ ನಮೂದಿಸಿದ ಇಸ್ಪೇಟ್ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 2800/- ರೂ, 52 ಇಸ್ಪೇಟ್ ಎಲೆಗಳನ್ನು ಹಾಗೂ 07 ಜನ ಆರೋಪಿತರನ್ನು ಹಾಜರ್ ಪಡಿಸಿ ಜ್ಞಾಪನ ನೀಡಿ ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Tekkalkota PS | ||||||||||||||||
10 | Cr.No:0115/2015 (IPC 1860 U/s 279 ) |
11/11/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ: 10/11/2015 ರಂದು ರಾತ್ರಿ 11-25 ಗಂಟೆಗೆ ಪಿರ್ಯಾದಿದಾರರು ತನ್ನ ಕಾರ್ ನಂಬರ್ ಕೆಎ-34 ಬಿ-3066 ನೇದ್ದರಲ್ಲಿ ತನ್ನ ತಾಯಿ ಮತ್ತು ತಂಗಿಯೊಂದಿಗೆ ತೋರಣಗಲ್ಲಿನಿಂದ ಸಿರುಗುಪ್ಪಕ್ಕೆ ಎಸ್ಹೆಚ್-19 ರಸ್ತೆಯಲ್ಲಿ ಬರುತ್ತಿರುವಾಗ ದೇವಿನಗರದ ಹತ್ತಿರ ರಸ್ತೆಯಲ್ಲಿದ್ದ ಹಂಪ್ಸ್ನ್ನು ದಾಟುತ್ತಿರುವಾಗ ಮುಂದಿನಿಂದ ಆರೋಪಿತನು ತನ್ನ ಲಾರಿ ನಂಬರ್ ಎಪಿ-07 ಟಿಎ-7789 ನೇದ್ದನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬಂದು ಪಿರ್ಯಾದಿದಾರರ ಕಾರ್ಗೆ ಬಲಗಡೆ ಹಿಂದಿನ ಡೋರ್ಹತ್ತಿರ ಡಿಕ್ಕಿ ಹೊಟೆದ ಪರಿಣಾಮ ಪಿರ್ಯಾದಿದಾರರ ಕಾರ್ನ ಹಿಂದಿನ ಡೋರ್ನಿಂದ ಕಾರ್ನ ಹಿಂದಿನ ಭಾಗದ ವರಗೆ ಜಕಂ ಗೊಂಡಿದ್ದು, ಅಪಘಾತ ಪಡಿಸಿದ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿದೆ. | |||||||||||||||
11 | Cr.No:0116/2015 (CODE OF CRIMINAL |
11/11/2015 | Under Investigation | |||||||||||||
PROCEDURE, 1973 U/s 107 ) | ||||||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ ದಿನ ದಿನಾಂಕ; 11/11/2015 ರಂದು ಸಂಜೆ 04-00 ಗಂಟೆಗೆ ನಾನು ಸಿಬ್ಬಂದಿಯವರಾದ ಪಿಸಿ-624-1029 ರವರ ಸಂಗಡ ತೆಕ್ಕಲಕೋಟೆ ಪಟ್ಟಣದ ೦6ನೇ ವಾರ್ಡನಲ್ಲಿ ದೀಪಾವಳಿಯ ಪ್ರಯುಕ್ತ ಪಟ್ಟದಲ್ಲಿ ಮಾಹಿತಿ ಸಂಗ್ರಹಿಸಲು ಹೋದಾಗ ತೆಕ್ಕಲಕೋಟೆ ವಾಸಿ ದೇವನೂರು ಷಾಷಾವಲಿ @ ಸೀಮೆಎಣ್ಣೆ ಷಾಷಾವಲಿ ತಂದೆ ಹಸನ್ ಸಾಬ್ ಈತನು ವಾರ್ಡನಲ್ಲಿ ಜನರನ್ನು ಗುಂಪಾಗಿ ಸೇರಿಸಿಕೊಂಡು ದೀಪಾವಳಿ ಪ್ರಯುಕ್ತ ಲಕ್ಷ್ಮಿ ಪೂಜೆಯನ್ನು ಮಾಡಿ ರಾತ್ರಿಯಲ್ಲಾ ಎಚ್ಚರ ಇದ್ದು, ಓಣಿಗಳಲ್ಲಿ ತಿರುಗಾಡಿ ಜನರು ಯಾರು ಮಲಗದಂತೆ ನೋಡಿಕೊಳ್ಳಲು ಹೇಳಿ ಹೋಗುತ್ತಿರುವುದಾಗಿ., ಮತ್ತು ಈತನು ಅಕ್ರಮಗುಂಪು ಸೇರಿಸುವುದು ಮತ್ತು ಕೋಮುಗಲಬೆಯನ್ನು ಮಾಡುವ ಪ್ರವೃತ್ತಿ ಉಳ್ಳವನಾಗಿರುವ ವ್ಯಕ್ತಿ ಇದ್ದು. ಈತನು ತೆಕ್ಕಲಕೋಟೆ ಠಾಣೆಯಲ್ಲಿ ರೌಡಿ ಹಾಳೆ ಹೊಂದಿರುವ ವ್ಯಕ್ತಿ ಆಗಿದ್ದು. ಈತನಿಂದ ಮುಂದಿನ ದಿನಗಳಲ್ಲಿ ಯಾವ ಸಮಯದಲ್ಲಾದರೂ ಸಾರ್ವಜನಿಕರಲ್ಲಿ ಜಗಳ / ಗಲಾಟೆಗಳು ಆಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ, ಮತ್ತು ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವ ಸಾದ್ಯತೆಗಳು ಇವೆ ಎಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ. ಅಲ್ಲದೇ ಈತನು ತೆಕ್ಕಲಕೋಟೆ ಠಾಣೆಯಲ್ಲಿ ರೌಡಿ ಹಾಳೆ ಹೊಂದಿದ ವ್ಯಕ್ತಿ ಇದ್ದು, ಆದ್ದರಿಂದ ಸಂಜೆ ೫-೦೦ ಗಂಟೆಗೆ ವಾಪಸ್ಸು ಠಾಣೆಗೆ ಬಂದು ಮುಂಜಾಗೃತಾ ಕ್ರಮಕ್ಕಾಗಿ ಪ್ರತಿವಾದಿ ವಿರುದ್ದ ಠಾಣಾ ಗುನ್ನೆ ನಂಬರ್ 116/2015 ಕಲಂ 107 ಸಿಆರ್ಪಿಸಿ ರೀತ್ಯ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೇನೆ. | |||||||||||||||
Thoranagal PS | ||||||||||||||||
12 | Cr.No:0170/2015 (IPC 1860 U/s 149,420,464,468 ) |
11/11/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಈ ದಿನ ದಿನಾಂಕ:11/11/2015ರಂದು 10;30 ಎ.ಎಂ. ಸಮಯದಲ್ಲಿ ಪಿ.ಸಿ. 823 ರವರು ಪಿರ್ಯಾದಿ ಗಂಗಮ್ಮ ಗಂಡ ಲೇಟ್ ಗೋವಿಂದಪ್ಪ 60 ವರ್ಷಗಳು ಉಪ್ಪಾರು ಜನಾಂಗ ಬೇಸಾಯ ವಾಸ; ತೋರಣಗಲ್ಲು ಗ್ರಾಮ ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ ರವರು ಮಾನ್ಯ ನ್ಯಾಯಲಯ ಸಂಡೂರುರವರ ಮುಖಾಂತರ ನೀಡಿದ ದೂರಿನ ಸಾರಂಶವೆನೆಂದರೆ ಪಿರ್ಯಾದಿಗೆ ಸಂಬಂದ ಪಟ್ಟ ಜಾಮೀನು ಸರ್ವೆ ನಂ 20/ಸಿ/2 ರಲ್ಲಿ 4.88 ಎಕರೆಯಲ್ಲಿ 2.44 ರ ಎಕರೆ ಜಾಮೀನು ನ್ನು ಆರೋಪಿತರಾದ ಯು.ಶಂಕರಗೌಡ ತಂದೆ ಗಂಗಪ್ಪ 40 ವರ್ಷಗಳು, 2)ಯು. ನಾಗರಾಜ ತಂದೆ ಯು.ಯಲ್ಲಪ್ಪ 55 ವರ್ಷಗಳು,3)ಯು. ನಾಗೇಶ್ ತಂದೆ ಯು. ಯಲ್ಲಪ್ಪ45 ವರ್ಷಗಳು 4)ಸುರೇಶ್ ತಂದೆ ಉಡೇಧ್ ಬಸಪ್ಪ 45 ವರ್ಷಗಳು 5)ಶರಬಣ್ಣ ತಂದೆ ಲೇಟ್ ಗೋಳೆಪ್ಪ 48 ವರ್ಷಗಳು ವಾಸ; ತೋರಣಗಲ್ಲ ಗ್ರಾಮ 6)ದೊಡ್ಡ ಹೊನ್ನೂರಪ್ಪ ತಂದೆ ಹುಲಿಗಪ್ಪ 55 ವರ್ಷಗಳು 7)ಸಣ್ಣ ಹನುಮಂತಪ್ಪ ತಂದೆ ಹುಲುಗಪ್ಪ 8)ಶ್ರೀಮತಿ ಲಕ್ಷ್ಮಿ ಗಂಡ ಲೇಟ್ ತಿಮ್ಮನಗೌಡ ಎಲ್ಲಾರು ಕುಡತನಿ ಗ್ರಾಮ ಬಳ್ಳಾರಿ ರವರು ಕೂಡಿಕೊಂಡಿ ಪಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಜಾಮೀನಿನ ದಾಖಲತಿಗಳನ್ನು ತಿದ್ದುಪಡಿಕೊಂಡಿ ಕೊಂಡು ತಮ್ಮ ಹೆಸರಿನಲ್ಲಿ ನೊಂದಣಿ ಮಾಡಿಕೊಂಡಿರುತ್ತಾರೆ. ಎಂದು ದೂರಿನ ಸಾರಂಶದ ಮೇರೆಗೆ ಈ ಗುನ್ನೆ ದಾಖಲು ಮಾಡಿ ತನಿಖೆ ಕೈ ಗೊಂಡಿದೆ.( ಪ್ರ.ವ.ಗೆ ಪಿರ್ಯಾದಿ ದೂರನ್ನು ಲಗತ್ತಿಸಿದೆ.) | |||||||||||||||
ಬುಧವಾರ, ನವೆಂಬರ್ 11, 2015
PRESS NOTE OF 12/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ