Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Cowlbazar PS | ||||||||||||||||
1 | Cr.No:0328/2015 (IPC 1860 U/s 00MP ) |
07/11/2015 | Under Investigation | |||||||||||||
MISSING PERSON - Women | ||||||||||||||||
Brief Facts : | ದಿನಾಂಕ: 07/10/2015 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಫಿರ್ಯಾದಿದಾರರ ಮೊದಲನೇ ಮಗಳು ಭಾರತಿ ತಂದೆ: ಲಾಲುಸ್ವಾಮಿ, ತಾಯಿ: ಲಕ್ಷ್ಮೀ ವ: 19 ವರ್ಷ, ದವಳು ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು, ವಾಪಸ್ಸು ಮನೆಗೆ ಬಾರದೇ ಇದ್ದುದ್ದರಿಂದ, ಫಿರ್ಯಾಧಿ ಮತ್ತು ಅವರ ಸಂಬಂಧಿಕರು ಸೇರಿ ಬಳ್ಳಾರಿ ನಗರ ಹಾಗೂ ಇತರೇ ಕಡೆಗಳಲ್ಲಿ ಹುಡುಕಾಡಿ ನೋಡಿದರೂ ಹಾಗೂ ಸಂಬಂಧಿಕರ ಊರುಗಳಿಗೆ ಫೋನ್ ಮಾಡಿ ವಿಚಾರಿಸಿದರೂ ತನ್ನ ಮಗಳ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಿರುವುದಿಲ್ಲ. ಕಾರಣ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
2 | Cr.No:0329/2015 (IPC 1860 U/s 00MP ) |
07/11/2015 | Under Investigation | |||||||||||||
MISSING PERSON - Man | ||||||||||||||||
Brief Facts : | ಈ ದಿನ ದಿನಾಂಕ: 07/11/2015 ರಂದು ಪಿರ್ಯಾದಿದಾರರಾದ ಶ್ರೀ ಪಿ. ಚಿನ್ನಾಪುರಿ ರವರು ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ನೋಡಲಾಗಿ ಸಾರಾಂಶವೆನೆಂದರೆ: ತನ್ನ ಅಣ್ಣನಾದ ಹನುಮಂತಪ್ಪ ರವರ ಮಗನಾದ ಪಿ. ಅರುಣ್ ಕುಮಾರ್ ವ;20ವರ್ಷ ರವರು ದಿನಾಂಕ: 18/11/2015 ರಂದು ತನ್ನ ಸ್ವಂತ ಊರು ಹಗರಿಬೊಮ್ಮನಹಳ್ಳಿಯಿಂದ ಬಳ್ಳಾರಿಗೆ FDA ಪರೀಕ್ಷೆ ಬರೆಯಲು ಬಂದು BCM ಹಾಸ್ಟಲ್ ನಿಂದ ಪರೀಕ್ಷೇ ಬರೆಯುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಹುಡುಕಾಡಿ ನೋಡಿದಾಗ್ಯೂ ಪತ್ತೆಯಾಗದೇ ಇದ್ದುದ್ದರಿಂದ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಲಾಗಿದೆ. | |||||||||||||||
Hampi Tourism PS | ||||||||||||||||
3 | Cr.No:0018/2015 (IPC 1860 U/s 498A,506,149 ; DOWRY PROHIBITION ACT, 1961 U/s 3,4 ) |
07/11/2015 | Under Investigation | |||||||||||||
CRIMES RELATED TO WOMEN - Dowry Prohibition | ||||||||||||||||
Brief Facts : | ದಿನಾಂಕ:೧೪/೦೮/೨೦೧೫ ರಂದು ಸಂಜೆ ೬-೦೦ ಗಂಟೆಗೆ ನ್ಯಾಯಾಲಯದ ಕರ್ತವ್ಯಕ್ಕೆ ಹೋಗಿದ್ದ ಪಿ.ಸಿ.೭೮ ರವರು ಕೂಡ್ಲಿಗಿ ನ್ಯಾಯಾಲಯದಿಂದ ವಾಪಾಸ್ ಬಂದು ಕೂಡ್ಲಿಗಿ ಘನ ನ್ಯಾಯಾಲಯವು ಮಾನ್ಯ ನ್ಯಾಯಾಲಯದ ಮೆಮೋ ನಂ ಡಿಸ್ ನಂ /೨೦೧೫ ದಿನಾಂಕ:೦೭/೦೮/೨೦೧೫ ಜೊತೆಗೆ ಖಾಸಗಿ ದೂರು ಸಂ.೫೨/೧೫ ನೇದ್ದನ್ನು ಲಗತ್ತಿಸಿ ಕೊಟ್ಟಿದ್ದನ್ನು ಸ್ವೀಕರಿಸಿ ಪರಿಶೀಲಿಸಿ ನೋಡಲಾಗಿ ಫಿರ‍್ಯಾದಿದಾರರಾದ ಶ್ರೀಮತಿ.ಎ.ಎಸ್.ಅರ್ಪಿತ ಬಾಯಿ ಗಂಡ ಎಲ್.ಶಾಂತನಾಯ್ಕ @ ಸಂತೋಷ,೧೯ ವರ್ಷ,ಲಂಬಾಣಿ ಜನಾಂಗ,ವಾಸ:ಚಿಕ್ಕಜೋಗಿಹಳ್ಳಿ ತಾಂಡ ಎಂಬುವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದೇನೆಂದರೆ, ದಿನಾಂಕ:೦೩/೦೫/೨೦೧೫ ರಂದು ನನ್ನ ತಂದೆ ತಾಯಿರವರು ಕಡ್ಡಿರಾಂಪುರ ಗ್ರಾಮದ ವಾಸಿಯಾದ ಎಲ್.ಶಾಂತನಾಯ್ಕ @ ಸಂತೋಷ ಎಂಬುವನೊಂದಿಗೆ ಹಂಪಿ ವಿರುಪಾಕ್ಷ ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ೫ ಲಕ್ಷ ವರದಕ್ಷಿಣೆ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು, ಮತ್ತು ಮನೆ ಬಳಕೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿದ್ದು, ಮದುವೆ ಮಾಡಿಕೊಂಡ ನಂತರ ಕಡ್ಡಿ ರಾಂಪುರ ಗ್ರಾಮದಲ್ಲಿ ತನ್ನ ಗಂಡನ ಮನೆಯಲ್ಲಿ ತನ್ನ ಗಂಡ ಮತ್ತು ನನ್ನ ಅತ್ತೆ,ಮಾವ,ನನ್ನ ಗಂಡನ ಸಹೋದರರು ಮತ್ತು ನನ್ನ ಗಂಡನ ಸಹೋದರರ ಪತ್ನಿ ಹಾಗು ನನ್ನ ಗಂಡನ ಅಜ್ಜಿ ಸೇರಿಕೊಂಡು ನನಗೆ ನಿನ್ನ ತವರು ಮನೆಯಿಂದ ಹಣ ತೆಗೆದು ಕೊಂಡು ಬಾ ಅಂತ ದುರ್ಬಾಷೆಗಳಿಂದ ಬೈಯ್ಯುವುದ ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಪ್ರಾಣ ಭಯ ಹಾಕಿರುತ್ತಾರೆಂದು ಈ ವಿಚಾರವಾಗಿ ನಮ್ಮ ಬಂದುಗಳು ಮತ್ತು ನಮ್ಮ ತಾಂಡದ ಮುಖಂಡರು ಸೇರಿಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ನನ್ನ ಗಂಡನ ತಂದೆ,ತಾಯಿರವರಿಗೆ ಬುದ್ದಿವಾದ ಹೇಳಿ ಹೋಗಿರುತ್ತಾರೆಂದು, ನಂತರ ನನ್ನ ಗಂಡ ನನಗೆ ಬೆಂಗಳೂರಿಗೆ ಕರೆದು ಕೊಂಡು ಹೋಗಿ ಅಲ್ಲಿಯೂ ಸಹಾ ನನಗೆ ಕಿರುಕುಳ ಕೊಟ್ಟಿರುತ್ತಾನೆಂದು ಇದ್ದ ಖಾಸಗಿ ದೂರನ್ನು ಸ್ವೀಕರಿಸಿ ಹೊಸಹಳ್ಳಿ ಪೊಲೀಸ್ ಠಾಣಾ ಗುನ್ನೆ ನಂ 147/2015ರಲ್ಲಿ ಪ್ರಕರಣ ದಾಖಲಿಸಿಕೊಂಡು ನಂತರ ಕೃತ್ಯಸ್ಥಳದ ಆಧಾರದ ಮೇರೆಗೆ ಈ ದಿನ ವರ್ಗಾವಣೆಗೊಂಡು ಬಂದ ಪ್ರಕರಣದ ಕಡತವನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Moka PS | ||||||||||||||||
4 | Cr.No:0157/2015 (IPC 1860 U/s 379 ; KARNATAKA |
07/11/2015 | Under Investigation | |||||||||||||
MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 73,192(a) ) | ||||||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ಈ
ದಿನ ದಿ:07-11-15 ರಂದು ಬೆಳಿಗ್ಗೆ 6-30 ಗಂಟೆಗೆ
ಶ್ರೀ.ಎರ್ರಿಸ್ವಾಮಿ.ಇ. ಪಿ.ಎಸ್.ಐ ಮೋಕಾ ಪೊಲೀಸ್‌ಠಾಣೆರವರು ಠಾಣಗೆ ಬಂದು ಕೊಟ್ಟ
ವಿಶೇಷ ವರದಿ ಏನಂದರೇ, ಈ ದಿನ ದಿ:೦೭-೧೧-೧೫
ರಂದು ಬೆಳಗಿನ ಜಾವ ೩-೦೦ ಗಂಟೆಗೆ ನಾನು ಪೊಲೀಸ್ ಕ್ವಾರ್ಟಸ್‌ನಲ್ಲಿದ್ದಾಗ ನನಗೆ ಪೋನ್
ಮೂಖಾಂತರ ಹಡ್ಲಿಗಿ ಗ್ರಾಮದ ವೇದಾವತಿ ಹಗರಿಯಲ್ಲಿ ಒಂದು ಟ್ರಾಕ್ಟರ್ ಟ್ರಾಲಿಯಲ್ಲಿ ಅಕ್ರಮವಾಗಿ
ಮರಳನ್ನು ತುಂಬಿಕೊಂಡು ಚಾನಾಳ್ ಕ್ರಾಸ್ ಮೂಖಾಂತರ
ಬಳ್ಳಾರಿ ಕಡೆಗೆ ಹೋಗುತ್ತೇದೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಪೊಲೀಸ್ ಕ್ವಾರ್ಟಸ್‌ನಲ್ಲಿದ್ದ ಸಿಬ್ಬಂದಿರವರಾದ
ಪಿಸಿಸ್:೧೭೫-೨೬೩ ರವರನ್ನು ಕರೆಯಿಸಿಕೊಂಡು
ಬೆಳಿಗ್ಗೆ ೩-೧೫ ಗಂಟೆಗೆ ನಮ್ಮ ಪೊಲೀಸ್ ಇಲಾಖೆ ಜೀಪ್‌ನಲ್ಲಿ ಬಿಟ್ಟು ಬೆಳಿಗ್ಗೆ ೪-೪೫
ಗಂಟೆಗೆ ಚಾನಾಳ್ ಕ್ರಾಸ್‌ಗೆ ಹೋಗಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಸದ್ರಿ
ಪಂಚರಿಗೆ ವಿಷಯ ತಿಳಿಸಿ ಸದ್ರಿ ದಾಳಿಗೆ ಸಹಕರಿಸಿ ವಿವರವಾದ ಪಂಚನಾಮೆಯನ್ನು ಬರೆಯಿಸಿಕೊಂಡಲು
ತಿಳಿಸಿ ಕೇಳಿಕೊಂಡ ಮೇರೆಗೆ ಪಂಚರು ಪಂಚರಾಗಲು
ಒಪ್ಪಿಕೊಂಡಿದ್ದು ಚಾನಾಳ್ ಕ್ರಾಸ್‌ನಲ್ಲಿ ಬೆಳಿಗ್ಗೆ ೫-೦೦ ಗಂಟೆಗೆ ಕಾಯುತ್ತಿರುವಾಗ ಹಡ್ಲಿಗಿ
ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ
ಟ್ರಾಕ್ಟರ್ ಟ್ರಾಲಿ ಬರುತ್ತಿದ್ದನ್ನು
ನೋಡಿ ಬೆಳಿಗ್ಗೆ ೫-೧೫ ಗಂಟೆಗೆ ದಾಳಿ
ಮಾಡಿ ಟ್ರಾಕ್ಟರ್ ಟ್ರಾಲಿಯನ್ನು
ನಿಲ್ಲಿಸಿದಾಗ ಚಾಲಕನನ್ನು ಹಿಡಿದು
ಮರಳು ಸಾಗಣೆಕೆ ಮಾಡಲು ಸರ್ಕಾರದಿಂದ ಯಾವುದಾದರೂ ಪರವಾನಿಗೆ ಇದೆಯೋ ಅಥವಾ ಇಲ್ಲವೇ ಅಂತ
ವಿಚಾರಿಸಿದಾಗ ಟ್ರಾಕ್ಟರ್ ಚಾಲಕ ತನ್ನ ಹತ್ತಿರ & ತನ್ನ ಮಾಲಿಕರನ ಹತ್ತಿರ ಮರಳ ಸಾಗಣಿಕೆ
ಮಾಡಲು ಯವುದೇ ಪರವಾನಿಗೆ ಇಲ್ಲ ಅಂತ ತಿಳಿಸಿದಾಗ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಚಾಲಕನ ಮತ್ತು ಮಾಲಿಕನ ಹೆಸರು ಮತ್ತು ವಿಳಾಸ
ವಿಚಾರಿಸಲು ೧)ಶಶಿಕುಮಾರ್ ತಂದೆ ದೊಡ್ಡಬಸಪ್ಪ ವ:೨೫ವರ್ಷ ವಾಲ್ಮೀಕಿ ಜನಾಂಗ, ಟ್ರಾಕ್ಟರ್ ನಂಬರ್ ಇರುವುದಿಲ್ಲ. ಇಂಜಿನಿ:ನಂ:3RS08925 & ಟ್ರಾಲಿ ನಂ MG/TT/408/LZ ನೇದ್ದರ ಚಾಲಕ ವಾಸ: ಸಿದ್ದಮ್ಮನಹಳ್ಳಿ ಗ್ರಾಮ ೨)ಮಾಲಿಕರ ಹೆಸರು ಪಕ್ಕೀರಮ್ಮ ಇಂಜಿನಿ:ನಂ:3RS08925 &ಟ್ರಾಲಿ ನಂ MG/TT/408/LZ ನೇದ್ದರ ಮಾಲಿಕರು ವಾಸ: ಸಿದ್ದಮ್ಮನಹಳ್ಳಿ ಗ್ರಾಮ ಅಂತ ತಿಳಿಸಿದನು. ೩)ಟ್ರಾಲಿಯಲ್ಲಿ ಮರಳು ಇರುತ್ತದೆ. ಸದ್ರಿ ಅಪಾದಿತನಿಗೆ ಈ ಮರಳನ್ನು ಎಲ್ಲಿ ತುಂಬಿದ್ದು ಅಂತ ವಿಚಾರಿಸಲು ಮೇಲ್ಕಂಡ ಟ್ರಾಕ್ಟರ ಟ್ರಾಲಿಯಲ್ಲಿ ಬೆಳಿಗ್ಗೆ ೩ ಗಂಟೆಯಿಂದ ಬೆಳಿಗ್ಗೆ ೪ಗಂಟೆಯವರೆಗೆ ಹಡ್ಲಿಗಿ ಗ್ರಾಮದ ವೇದಾವತಿ ಹಗರಿಯಲ್ಲಿ ಮರಳನ್ನು ತುಂಬಿರುತ್ತಾರೆ ಅಂತ ತಿಳಿಸಿದನು. ಈ ಪಂಚನಾಮೆಯನ್ನು ಬೆಳಿಗ್ಗೆ ೦೫-೧೫ ಗಂಟೆಯಿಂದ ಬೆಳಿಗ್ಗೆ ೦೬ ಗಂಟೆಗೆಯವರೆಗೆ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿ ಸಿಕ್ಕ ಸ್ಥಳದಲ್ಲಿ ಮತ್ತು ಜಪ್ತು ಪಂಚನಾಮೆ ಮಾಡಿಕೊಂಡು ಠಾಣೆಗ ಬೆಳಿಗ್ಗೆ 6-30 ಗಂಟೆಗೆ ಮೇಲ್ಕಂಡ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಗಳ ಮೇಲೆ ಮತ್ತು ಚಾಲಕರ ಮೇಲೆ & ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ವಿಶೇಷ ವರದಿ ಮೇರೆಗೆ ಮೇಲ್ಕಂಡ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. |
|||||||||||||||
Sandur PS | ||||||||||||||||
5 | Cr.No:0177/2015 (IPC 1860 U/s 498A,306,34 ) |
07/11/2015 | Under Investigation | |||||||||||||
SUICIDE - Abetment of Suicide | ||||||||||||||||
Brief Facts : | ದಿನಾಂಕ 7.11.2015 ರಂದು ಮದ್ಯಾಹ್ನ 1=00 ಗಂಟೆಗೆ ಪಿರ್ಯಾದಿದಾರರಾದ B ಈರಪ್ಪ ತಂದೆ B.ಅಜ್ಜಪ್ಪ ವಯಸ್ಸು 62 ವರ್ಷ ವಾಲ್ಮೀಕಿ ಜಾತಿ.ಬೇಸಾಯ ವಾಸಃ- ಯಶವಂತನಗರ ಗ್ರಾಮ 5 ನೇ ವಾರ್ಡ ಸಂಡೂರು ತಾಲೂಕು ರವರು ದೂರು ಕೊಟ್ಟಿದ್ದು ಸಾರಾಂಶವು ನನಗೆ 6 ಜನ ಮಕ್ಕಳಿದ್ದು [1] ತಿಂದಮ್ಮ [2] ಅಜ್ಜಪ್ಪ [3] ಗಂಗಮ್ಮ [4] ನಾಗಮ್ಮ [5] ರಾಘವೇಂದ್ರ [6] ಮಲಿಯಕ್ಕ ಅಂತ ಇರುತ್ತಾರೆ.ನನ್ನ ಮಕ್ಕಳಲ್ಲಿ ರಾಘವೆಂದ್ರನನ್ನು ಹೊರತುಪಡಿಸಿ ಇನ್ನುಳಿದವರಿಗೆಲ್ಲಾ ಮದುವೆ ಆಗಿ ರು ತ್ತದೆ ಸಂಡೂರ್‌ನ ಅಂಜಿರವರ ತಂಗಿ ಲಕ್ಷ್ಮಿಯನ್ನು ನನ್ನ ಮಗನಾದ ಅಜ್ಜಪ್ಪನ ಜೊತೆಗೆ 8 ವರ್ಷದ ಹಿಂದೆ ಮದುವೆ ಆಗಿರುತ್ತದೆ.ನನ್ನ ಕೊನೆಯ ಮಗಳಾದ ಮಲಿಯಕ್ಕ ಹಾಗು ನನ್ನ ಸೊಸೆ ಲಕ್ಷ್ಮಿ ಅಣ್ಣನಾದ ಅಂಜಿ ರವರು ಪರಸ್ಪರ ಒಪ್ಪಿ ದೇವಸ್ಥಾನದಲ್ಲಿ ದಿನಾಂಕ 13.3.2015 ರಂದು ಅಂದರೆ ಈಗ್ಗೆ 8 ತಿಂಗಳ ಹಿಂದೆ ಮದುವೆ ಆಗಿರು ತ್ತಾರೆ.ಮದುವೆ ಆದ ನಂತರ ನನ್ನ ಮಗಳು ಅಂಜಿ ರವರ ಮನೆಯಲ್ಲಿ ಸಂಡೂರುನಲ್ಲೇ ಇದ್ದಳು.ಅಂಜಿರವರ ಮನೆಯಲ್ಲಿ ಅಂಜಿ ಆತನ ತಾಯಿ ಸತ್ಯಮ್ಮ, ಅಂಜಿಯ ಅಕ್ಕ ನಾಗರತ್ನಮ್ಮ @ ರತ್ಮ ರವರು ಇರುತ್ತಾರೆ. ನನ್ನ ಮಗಳು ಮಲಿಯಕ್ಕ ನನ್ನ ಮಗ ಅಜ್ಜಪ್ಪನಿಗೆ ಈಗ್ಗೆ ಸುಮಾರು 2 ತಿಂಗಳ ಹಿಂದೆ ಫೋನ್ ಮಾಡಿ ವಿಷಯ ತಿಳಿಸಿ ದ್ದೇನೆಂದರೆ ನನ್ನ ಗಂಡ ಅಂಜಿ ಮತ್ತು ಆತನ ಅಕ್ಕ ನಾಗರತ್ನ ರವರು ನನಗೆ ನೀನು ಓಡಿ ಬಂದವಳು ನೀನು ನಮ್ಮ ಸಂಪ್ರದಾಯದಂತೆ | |||||||||||||||
ಮದುವೆ ಆಗಿ ಬಂದಿಲ್ಲ ನೀನು ನಮ್ಮ ಮನೆಗೆ ಬಂದಾಗಿನಿಂದ ನಮ್ಮ ಸಂಭಂಧಿಕರು ಯಾರು ನಮ್ಮ ಮನೆಗೆ ಬರದಂತೆ ಆಗಿರುತ್ತಾರೆ.ನೀನು ಅನಿಷ್ಟ ಮುಂಡೆ ನೀನು ಸಾಯಿ ನೀನು ಸತ್ತರೆ ಇನ್ನೊಂದು ಮದುವೆಗೆ ಏರ್ಪಾಟು ಮಾಡುತ್ತೇವೆ.ಎಂದು ಹೀಯಾಳಿಸುತ್ತಿದ್ದಾರೆ. 3 ತಿಂಗಳಿನಿಂದಲೂ ನನಗೆ ಅವರಿಬ್ಬರು ಆಗಾಗ ನನಗೆ ಕೈಗಳಿಂ ದ ಹೊಡೆಬಡೆ ಮಾಡಿರುವುದಾಗಿ ಲಕ್ಷ್ಮಿಗೆ ನೀನು ಮನೆಯಲ್ಲಿ ಕೆಲಸ ಮಾಡಿಸುತ್ತೀಯಂತಲ್ಲ ಅತ್ತಿಗೆ ಸಂಗಡ ಜಾಸ್ತಿ ಕೆಲಸ ಮಾಡಿಸಬೇಡ ನನ್ನ ಗಂಡ ಹಾಗು ನಾದಿನಿ ನಾಗರತ್ನ ರವರು ನನಗೆ ತೊಂದ ರೆ ಮಾಡುತ್ತಿದ್ದಾರೆ.ಎಂದು ಪದೇ ಪದೇ ನನ್ನ ಗಂಡ ಮತ್ತು ನಾದಿನಿ ನಾಗರತ್ನ ರವರು ಹೀಯಾಳಿಸುತ್ತಾ ನನಗೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಾ ರೆ ಎಂದು ಹೇಳಿದಾಗ ಆಗ ನನ್ನ ಮಗ ಅಜ್ಜಪ್ಪನು ತನ್ನ ಹೆಂಡತಿ ಲಕ್ಷ್ಮಿಯನ್ನು ಅಂಜಿರವರ ಮನೆಗೆ ಕರೆದುಕೊಂಡು ಹೋಗಿ ಈ ಬಗ್ಗೆ ಅವರು ವಿಚಾರ ಮಾಡಲಾಗಿ ನನ್ನ ಸೊಸೆ ಲಕ್ಷ್ಮಿಯು ನಾವಿಬ್ಬರೂ ಗಂಡ ಹೆಂಡತಿ ಇಬ್ಬರೂ ಚೆನ್ನಾಗಿದ್ದೇವೆ ಅಂತ ಹೇಳಿದಳು.ಆಗ ಅವರು ಅಷ್ಟಕ್ಕೆ ಸುಮ್ಮನಾಗಿದ್ದು ನಂತರ ನಾನು ನನ್ನ ಹೆಂಡತಿ ಈರಮ್ಮ ಇಬ್ಬರೂ ಅಂಜಿರವರ ಮನೆಗೆ ನನ್ನ ಮಗ ಹೋಗಿ ಬಂದ 2 ದಿನ ಗಳ ನಂತರ ಅಂಜಿ ರವರ ಮನೆಗೆ ಹೋಗಿದ್ದಾಗ ನನ್ನ ಮಗಳು ಮಲಿಯಕ್ಕಳು ನನಗೆ ನನ್ನ ಗಂಡ ಅಂಜಿ, ನಾದಿನಿ ನಾಗರತ್ನ ರವರು ಪುನಃ ಅದೇ ರೀತಿ ನೀನು ಓಡಿ ಬಂದವಳು ನೀನು ನಮ್ಮ ಸಂಪ್ರ ದಾಯದಂತೆ ಮದುವೆ ಆಗಿ ಬಂದಿಲ್ಲ ನೀನು ನಮ್ಮ ಮನೆಗೆ ಬಂದಾಗಿನಿಂದ ನಮ್ಮ ಸಂಭಂಧಿಕರು ಯಾರು ನಮ್ಮ ಮನೆಗೆ ಬಂದಿಲ್ಲ ನೀನು ಸತ್ತರೆ ಇನ್ನೊಂದು ಮದುವೆ ಮಾಡುತ್ತೇವೆಂದು ಕಿರುಕುಳ ನೀಡಿ ಕೈಗಳಿಂದ ಹೊಡೆಬಡೆ ಮಾಡಿ ಮಾನಸೀಕ ಹಾಗು ದೈಹಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದಳು.ಆಗ ನಾನು ನನ್ನ ಹೆಂಡತಿ ನನ್ನ ಮಗಳಿಗೆ ತಾಳ್ಮೆಯಿಂದ ಇರು ಇವತ್ತಿಲ್ಲ ನಾಳೇ ಸರಿ ಹೋಗುತ್ತೇ ಗಂಡ ಹೆಂಡತಿ ಅಂದ ಮೇಲೆ ಇದೆಲ್ಲಾ ಇರುತ್ತದೆ.ಎಂದು ಹೇಳಿ ಸಮಾಧಾನ ಮಾಡಿ ಬಂದಿದ್ದೆವು.ಇದಕ್ಕಿಂತ ಮುಂಚಿತವಾಗಿ ಈಗ್ಗೆ ಸುಮಾರು 3 ತಿಂಗ ಳ ಹಿಂದೆ ನನ್ನ ಅಳಿಯನಾದ Kಬಸವ ರಾಜ್ ತಂದೆ ಪಾಲಪ್ಪ@ ಪಾಲಯ್ಯ ವಾಸಃ- ನಡುಗುರ್ತಿ ಮಲ್ಲಾಪುರ ರವರು ಸಹ ನನ್ನ ಮಗಳು ಮಲಿಯಕ್ಕಳಿಗೆ ಮಾತಾನಾ ಡಲು ಅಂಜಿರವರ ಮನೆಗೆ ಹೋದ ಸಂಧರ್ಭದಲ್ಲಿ ಸಹ ನನ್ನ ಮಗಳು ತನಗೆ ತನ್ನ ಗಂಡ,ನಾದಿನಿ ರವರು ಕಿರುಕುಳ ನೀಡಿದ ಬಗ್ಗೆ ಮಲಿಯಕ್ಕಳು ಹೇಳಿರುವುದಾಗಿ ನನ್ನ ಅಳಿಯ ಬಸವ ರಾಜನು ನನಗೆ ತಿಳಿಸಿದನು. ದಿನಾಂಕ 07.11.2015 ರಂದು ಮದ್ಯರಾತ್ರಿ 1-30 ಗಂಟೆಗೆ ಸಂಡೂರುನಿಂದ ಅಂಜಿರವರ ಚಿಕ್ಕಪ್ಪನ ಮಗನಾದ ರಮೇ ಶ್ ರವರು ನನ್ನ ಮಗ ಅಜ್ಜಪ್ಪನ ಮೊಬೈಲ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಮಲಿಯಕ್ಕಳು ತನ್ನ ಗಂಡ ಅಂಜಿ ರವರ ಮನೆಯಲ್ಲಿ ದಿನಾಂಕ 7.11.2015 ರಂದು ಮದ್ಯರಾತ್ರಿ 12-30 ಗಂಟೆ ಸುಮಾರಿಗೆ ಮನೆಯ ಮೇಲ್ಛವಾಣಿಯ R.C.C.ಕೊಂಡಿಗೆ ಸೀರೆಯಿಂದ ನೇಣು ಹಾಕಿ ಕೊಂಡು ಸತ್ತಿರುತ್ತಾಳೆಂದು ತಿಳಿಸಿದಾಗ ಕೂಡ ಲೇ ನಾನು ನನ್ನ ಹೆಂಡತಿ ಈರಮ್ಮ ನನ್ನ ಮಕ್ಕಳು ಸಂಡೂರುಗೆ ಅಂಜಿರವರ ಮನೆಗೆ ಬಂದು ನೋಡಿದೆವು. ನನ್ನ ಮಗಳು ಸೀರೆಯಿಂದ ನೇಣು ಹಾಕಿಕೊಂಡು ಮೃತಪ ಟ್ಟಿದ್ದಳು.ನನ್ನ ಮಗಳು ಮಲಿಯಕ್ಕಳಿಗೆ ಆಕೆಯ ಗಂಡ ಅಂಜಿ ನಾದಿನಿ ನಾಗರತ್ನ ರವರು ನು ಓಡಿ ಬಂದವಳು ನಿನ್ನಿಂದ ನಮ್ಮ ಸಂಭಂಧಿಕರು ಯಾರು ಮನೆಗೆ ಬರುತ್ತಿಲ್ಲ ಎಂದು ಮಾನಸೀಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ನನ್ನ ಮಗಳು ಅವರ ಕಿರುಕುಳದಿಂದ ನೊಂದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.ಸದ್ರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.ನಮ್ಮ ಹಿರಿಯರಿಗೆ ವಿಚಾರಿಸಿ ಈ ದಿನ ತಡವಾಗಿ ದೂರು ಕೊಟ್ಟಿರುತ್ತೇನೆ.ಎಂದು ಇದ್ದ ದೂರಿನಂತೆ ಮೊಕದ್ದಮೆ ದಾಖಲಿಸಲಾಗಿದೆ. | ||||||||||||||||
ಶನಿವಾರ, ನವೆಂಬರ್ 7, 2015
PRESS NOTE OF 07/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ