Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Chittavadagi PS | ||||||||||||||||
1 | Cr.No:0057/2015 (IPC 1860 U/s 379 ) |
24/11/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ದಿನಾಂಕ 19/11/2015 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 20/11/2015 ರಂದು ಬೆಳಿಗ್ಗೆ 5-50 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿದಾರರು ಚಿತ್ತವಾಡಗಿ ರೈಲ್ವೆ ಟ್ರಾಕ್ ಹತ್ತಿರ ಖಾಜಾನಗರದಲ್ಲಿರುವ ತಮ್ಮ ಮನೆಯ ಮುಂದೆ ತನ್ನ ಅಣ್ಣನಾದ ಶ್ರೀ ಜಿ. ಲಕ್ಷ್ಮಣ ಇವರ ಹೊಂಡಾ ಯುನಿಕಾರ್ನ್ ರಿ.ನಂ. ಕೆ.ಎ.35/ಎಸ್-2439 ರ ಅಂದಾಜು ಬೆಲೆ ರೂ. 32,000/- ಬಾಳುವುದನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡು ಮರು ದಿನ ಬೆಳಿಗ್ಗೆ ಎದ್ದು ಹೊರಗಡೆ ಬಂದು ನೋಡಿದಾಗ ತನ್ನ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಕಾಣಿಸಲಿಲ್ಲ. ಸದರಿ ಮೋಟಾರು ಸೈಕಲ್ ನ್ನು ಮೇಲ್ಕಂಡ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟಾರು ಸೈಕಲ್ ಸಿಗಬಹುದೆಂದು ಸತತವಾಗಿ ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಲಿಲ್ಲವೆಂದು ಈ ದಿನ ತಡವಾಗಿ ಠಾಣೆಗೆ ಬಂದು ಸದರಿ ಮೋಟಾರು ಸೈಕಲ್ ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Hospet Rural PS | ||||||||||||||||
2 | Cr.No:0171/2015 (CODE OF CRIMINAL PROCEDURE, 1973 U/s 110(E)(G) ) |
24/11/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ಈ ದಿನ ದಿನಾಂಕ:24/11/2015 ರಂದು ಬೆಳಿಗ್ಗೆ 10-30 ಗಂಟೆಗೆ ಮಾನ್ಯ ಪಿ.ಐ. ರವರ ಆದೇಶದ ಮೇರೆಗೆ ವಿಶೇಷ ಗಸ್ತಿಗಾಗಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 893 ರವರ ಜೊತೆಯಲ್ಲಿ ಠಾಣೆಯನ್ನು ಬಿಟ್ಟು ಗಸ್ತಿಗಾಗಿ ಹೊರಟಿದ್ದು ಹಂಪಿ ರೋಡ್, ಎಂ.ಪಿ.ಪ್ರಕಾಶ ನಗರ ಏರಿಯಾಗಳಲ್ಲಿ ತಿರುಗಾಡಿ ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಪಾಂಡುರಂಗ ಕಾಲೋನಿಯ ಹತ್ತಿರ ಇರುವ ಸಾಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಗಸ್ತಿನಲ್ಲಿರುವಾಗ್ಗೆ ಶಾಲೆಯ ಕಾಂಪೋಂಡ್ ಗೋಡೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು, ಇವರಿಬ್ಬರೂ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ದುಭರ್ಾಷೆಗಳಿಂದ ಬೈದಾಡುತ್ತಾ ಸದರಿ ಸ್ಥಳದಲ್ಲಿರುವ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಭಾತ್ಮಿದಾರರನ್ನು ಭೇಟಿ ಆಗಿ ಅವರಬಗ್ಗೆ ವಿಚಾರ ಮಾಡಲಾಗಿ ಇವರು ಪದೇ ಪದೇ ಇದೇ ರೀತಿ ಸುತ್ತ-ಮುತ್ತಲೂ ಇರುವ ಜನರಿಗೆ ವಿನಾ: ಕಾರಣ ದುಭರ್ಾಷೆಗಳಿಂದ ಬೈದಾಡುತ್ತಾ ವಾಸ ಮಾಡುತ್ತಿರುವ ಜನರಿಗೆ ಇವರಿಬ್ಬರ ಕಡೆಯಿಂದ ತೊಂದರೆ ಆಗಿದ್ದು, ಸಾರ್ವಜನಿಕರಿಗೆ ನೆಮ್ಮದಿ ಇಲ್ಲದಂತೆ ಆಗಿದ್ದು,ರಿವರಿಗೆ ಎಷ್ಟು ಹೇಳಿದರೂ ಪದೇ ಪದೇ ಅದೇ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ಅವರನ್ನು ಹಿಡಿದು ವಿಚಾರ ಮಾಡಲಾಗಿ 1) ಲಕ್ಷ್ಮಣ ಮಾಳಪ್ಪನವರ್ ತಂದೆ ಹಾಲಪ್ಪ ಮಾಳಪ್ಪನವರ್ ವ:55 ವರ್ಷ, ಕುರುಬರ ಜನಾಂಗ, ವ್ಯವಸಾಯ, ಸಾ:-ಯಲಗಚ್ಚು ಗ್ರಾಮ, ಹಾವೇರಿ ತಾ, ಮತ್ತು ಜಿಲ್ಲೆ 2) ಬಿ. ಸಂತೋಷ ತಂದೆ ನಾಗಪ್ಪ ವ:28 ವರ್ಷ, ಲಿಂಗಾಯ್ತ ಜನಾಂಗ, ವ್ಯವಸಾಯ, ವಾಸ:-ಹೊಳಲು ಗ್ರಾಮ, ಹೂವ್ವಿನ ಹಡಗಲಿ ತಾ ಅಂತಾ ತಿಳಿಸಿದರು. ಈ ಆಸಾಮಿಗಳು ಸಾರ್ವಜನಿಕರ ನೆಮ್ಮಧಿಗೆ ಭಂಗ ಉಂಟಾಗುವಂತೆ ಪ್ರತೀದಿನ ಸಾರ್ವಜನಿಕರಿಗೆ ಬೈದಾಡುತ್ತಾ ವಿನಾ: ಕಾರಣ ತೊಂದರೆ ಕೊಡುತ್ತಿದ್ದರಿಂದ ಇವರು ಪದೇ ಪದೇ ಪ್ರತಿ ಅದೇ ಕೃತ್ಯವನ್ನು ಮಾಡುತ್ತಿದ್ದರಿಂದ ಮುಂಜಾಗ್ರತೆ ಕ್ರಮಕ್ಕಾಗಿ ಆತನನ್ನು ಸದರಿ ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಠಾಣೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಯಿತು. | |||||||||||||||
Kottur PS | ||||||||||||||||
3 | Cr.No:0170/2015 (IPC 1860 U/s 506,34,504,323,324 ) |
24/11/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ 24-11-2015 ರಂದು ಬೆಳಿಗ್ಗೆ 10-45 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ಮುದ್ರಿತ ದೂರು ಸಾರಾಂಶ, ನಿನ್ನೆ ದಿನ ದಿನಾಂಕ 23-11-2015 ರಂದು ರಾತ್ರಿ 10-00 ಗಂಟೆಗೆ ಪಿರ್ಯಾದಿಯು ತನ್ನ ಚಿಕ್ಕಪ್ಪನ ಮಕ್ಕಳಾದ ಕುಮಾರ್ ನಾಯ್ಕ ಮತ್ತು ಆನಂದ ನಾಯ್ಕ ಇವರಿಗೆ ತಂಗಿಯ ಮದುವೆ ನಿಶ್ಚಿತಾರ್ಥಕ್ಕೆ ಏಕೆ ಕರೆಯಲಿಲ್ಲವೆಂದು ಕೇಳಿದ್ದರಿಂದ ಆರೋಪಿತರು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕಟ್ಟಿಗೆಯಿಂದ ಪಿರ್ಯಾದಿಯ ಮುಂದೆಲೆಗೆ ಮತ್ತು ಮೈ ಕೈಗೆ ಹೊಡೆದು ರಕ್ತಗಾಯ ಒಳ ಪೆಟ್ಟು ಮಾಡಿದ್ದು, ಬಿಡಿಸಲು ಬಂದ ಪಿರ್ಯಾದಿಯ ತಾಯಿ ಜಂಬ್ಲೀಬಾಯಿರವರಿಗೂ ಕಪಾಳಕ್ಕೆ ಹೊಡೆದು ಒಳಪೆಟ್ಟು ಮಾಡಿದ್ದಲ್ಲದೆ ಪ್ರಾಣ ಭಯ ಹಾಕಿರುವುದಾಗಿ, ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ. | |||||||||||||||
Kudligi PS | ||||||||||||||||
4 | Cr.No:0195/2015 (IPC 1860 U/s 406,34 ) |
24/11/2015 | Under Investigation | |||||||||||||
CRIMINAL BREACH OF TRUST - Criminal Breach Of Trust | ||||||||||||||||
Brief Facts : | ಪಿರ್‍ಯಾದುದಾರರ ಈ ದಿನ ದಿನಾಂಕ ೨೪/೧೧/೨೦೧೫ ರಂದು ಮದ್ಯಾಹ್ನ ೧-೦೦ ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶದಲ್ಲಿ ಪಿರ್‍ಯಾದುದಾರರು ಇ. ಮಂಜುನಾಥ ತಂದೆ ಯಲ್ಲಪ್ಪ, ವಾಸ ಪಾಳಿಯಂ, ಧರ್ಮಪುರಿ ತಾಲೂಕು ತಮೀಳುನಾಡು ಈತನಿಗೆ ದಿನಾಂಕ ೮/೦೮/೨೦೧೪ ರಂದು ಗುಡೇಕೋಟೆ ರಸ್ತೆಯಲ್ಲಿ ಬರುವ ಎನ್.ಟಿ. ಬೊಮ್ಮಣ್ಣ ಇವರ ಸ್ಟಾಲ್ ಅಂಗಡಿಯಲ್ಲಿರುವ ಕಾರ ಚಿಪ್ಸ್, ಚಕ್ಕಲಿ ಬಿಸ್ಕತ್, ಹಾಗು ಇತರೇ ೧೫೦ ಐಟಂ ಉಳ್ಳ ಸಾಮಾನುಗಳೂ ಇವುಗಳ ಅಂದಾಜು ಬೆಲೆ ೬೧,೭೨೦ ರೂಗಳಿದ್ದು ಸದ್ರಿ ಅಂಗಡಿಯನ್ನು ಲೀಜ್ ಗೆ ನೀಡಿದ್ದು ಅದ್ರಿ ಅಂಗಡಿಯನ್ನು ಬಿಡುವಾಗ ೧೫೦ ಐಟಂ ಸಾಮಾನುಗಳನ್ನು ಒಪ್ಪಿಸತಕ್ಕದ್ದು ಐಟಂ ಕಡಿಮೆಯಾದರೆ ಅದಕ್ಕೆ ತಗಲುವ ವೆಚ್ಚವನ್ನು ಆ ದಿವಸದ ಬೆಲೆಗೆ ಕಟ್ಟಿಕೊಡತಕ್ಕದ್ದು ಎಂಬಿತ್ಯಾದಿಯಾಗಿ ಷರತ್ತುಗಳಿಗೆ ಒಳಪಟ್ಟು ರೂ ೭೦,೦೦೦/- ರೂ ಹಣಕ್ಕೆ ಲೀಜ್‌ಗೆ ನೀಡಿದ್ದು ಆದರೇ ಮಂಜುನಾಥ ಮತ್ತು ಕೆ.ಕೆ.ಹಟ್ಟಿ ನಿವಾಸಿ ಆರ್.ಸುರೇಶ್ ತಂದೆ ಎಂ.ಡಿ ರಾಮಚಂದ್ರಪ್ಪ, ರೆಡ್ಡಿ ಜನಾಂಗ, ಇವರುಗಳು ಸೇರಿಕೊಂಡು ಪಿರ್‍ಯಾದುದಾರರಿಗೆ ನಂಬಿಕೆ ದ್ರೋಹ ಮಾಡುವ ಉದ್ದೇಶದಿಂದ ಅಂಗಡಿಯಲ್ಲಿರುವ ಎಲ್ಲಾ ತಿಂಡಿ ತಿನಿಸುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಪಿರ್‍ಯಾದುದಾರರಿಗೆ ಕೊಡಬೇಕಾದ ೭೦,೦೦೦/-ರೂ ಹಣದಲ್ಲಿ ೧೦ರೂಗಳನ್ನು ನೀಡಿ ಉಳಿದ ೬೦ ಸಾವಿರ ರೂಗಳನ್ನು ನೀಡದೆ ನಂಬಿಕೆ ದ್ರೋಹ ಮಾಡಿರುತ್ತಾರೆಂದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಇದ್ದು ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದೆ. | |||||||||||||||
5 | Cr.No:0196/2015 (IPC 1860 U/s 504,323,354,448,355,34 ) |
24/11/2015 | Under Investigation | |||||||||||||
MOLESTATION - Public Place | ||||||||||||||||
Brief Facts : | ಈ
ದಿನ ದಿನಾಂಕ 24/11/2015 ರಂದು ಹೆಚ್.ಸಿ 136 ರವರು
ಬಳ್ಳಾರಿ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಪಿರ್ಯಾದಿ
ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2-00 ಗಂಟೆಗೆ ಠಾಣೆಯಲ್ಲಿ ಹಾಜರು ಪಡಿಸಿದ್ದು ಸದ್ರಿ ಪಿರ್ಯಾದುದಾರರ ದೂರಿನ ಸಾರಾಂಶದಲ್ಲಿ ಪಿರ್ಯಾದುದಾರರಿಗೂ ಹಾಗು ಆರೋಪಿಗಳಿಗೂ ಆಗಾಗ ಸಣ್ಣಪುಟ್ಟ ವಿಷಯಗಳಿಗೆ ಬಾಯಿ ಮಾತಿನ ಜಗಳವಾಡುತ್ತಿದ್ದು ಪಿರ್ಯಾದುದಾರರು ಕಟ್ಟಿಗೆಗಳನ್ನು ತಂದು ತಮ್ಮ ಮನೆಯ ಮುಂದೆ ಹಾಕಿಕೊಂಡಿದ್ದು ಸದ್ರಿ ಕಟ್ಟಿಗಳನ್ನು ಬಸಮ್ಮ ತಂದೆ ಜಂಭಣ್ಣ ಎಂಬುವವರು ತೆಗೆದುಕೊಂಡು ಹೋಗಿರುತ್ತಾರೆಂದು ವಿಷಯ ತಿಳಿದು ಈ ಬಗ್ಗೆ ಬಸಮ್ಮಳನ್ನು ವಿಚಾರಿಸಿದ್ದಕ್ಕೆ ಬಸಮ್ಮಳ ಪರವಾಗಿ ಬಂದ ರಾಜಶೇಖರ್ ಈತನು ಪಿರ್ಯಾದುದಾರೊಂದಿಗೆ ಜಗಳ ತೆಗೆದಾಗ ಪಿರ್ಯಾದುದಾರು ಮನೆಯ ಓಳಗೆ ಹೋಗಿದ್ದು ಆರೋಪಿ ಬಸಮ್ಮ ಮತ್ತು ಬಸವರಾಜ ಹಾಗು ವಿರೇಶ್ ರವರುಗಳೆ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಸಿ ಪಿರ್ಯಾದುದಾರರಿಗೆ ಎಳೆದುಕೊಂಡು ಬಂದಾಗ ರಾಜಶೇಖರನು ಪಿರ್ಯಾದುದಾರಿರಗೆ ದುರ್ಭಾಷೆಗಳಿಂದ ಬೈಯ್ದಾಡಿ ಚಪ್ಪಲಿಯಿಂದ ಹೊಡೆದು ಈ ಬೂಸೂಡಿ ಸೂಳೆ ಯಾವಾಗಲೂ ಕಾಲು ಕೆರದು ಜಗಳ ಮಾಡುತ್ತಾಳೆ ಅಂತ ಅಂದಿದ್ದು ಅಲ್ಲದೆ ಬಸಮ್ಮ, ಬಸವರಾಜ. ವಿರೇಶ್ ರವರುಗಳು ಪಿರ್ಯಾದುದಾರರಿಗೆ ಕೈಕಾಲುಗಳಿಂದ ಹೊಡೆ ಬಡೆ ಮಾಡಿದ್ದು ಇದರಿಂದ ಪಿರ್ಯಾದುದಾರರು ಮಾರ್ಯಾದೆ ಹೋಯಿತಲ್ಲ ಅಂತ ಮನೆಯಲ್ಲಿದ್ದ ಕ್ರಿಮೀನಾಶಕ ಔಷದಿಯನ್ನು ಕುಡಿದು ಚಿಕಿತ್ಸೆಗಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೇಲ್ಕಂಡ 4 ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಮ್ಸ್ ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದೆ. |
|||||||||||||||
Moka PS | ||||||||||||||||
6 | Cr.No:0165/2015 (CODE OF CRIMINAL PROCEDURE, 1973 U/s 107 ) |
24/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಮೋಕ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಅಕ್ರಮ ಮರುಳು ಸಾಗಾಣಿಕೆ ನಡೆಯುತ್ತಿದ್ದು, ಈ ಬಗ್ಗೆ ಮಾನ್ಯ ಎಸ್.ಪಿ ಸಾಹೇಬರು, ಬಳ್ಳಾರಿ ರವರು ಖುದ್ದಾಗಿ ಮರುಳು ತುಂಬುವ ಸ್ಥಳಗಳಿಗೆ ಬೇಟಿ ನೀಡಿ ಅಕ್ರಮ ಮರುಳು ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದು, ಅದರಂತೆ ಸಿಬ್ಬಂದಿಯವರಿಗೆ ಪಹರೆಯಂತೆ ಮರುಳು ತುಂಬುವ ಸ್ಥಳಗಳ ಪೆಟ್ರೋಲಿಂಗ್ ಕರ್ತವ್ಯಕ್ಕೆ ನೇಮಕ ಮಾಡುತ್ತಿದ್ದು, ಅಷ್ಟೆ ಅಲ್ಲದೇ ನಾನು ರಾತ್ರಿ ಪೆಟ್ರೋಲಿಂಗ್ ಕರ್ತವ್ಯ ಮಾಡಿ ಮರುಳು ತಂಬುತ್ತಿದ್ದ ಟ್ರಾಕ್ಟರ್‌ಗಳನ್ನು "ಡಿದು ಟ್ರಾಕ್ಟರ್ ಚಾಲಕ ಮತ್ತು ಮಾಲಿಕರ ಮೇಲೆ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರತ್ತೇನೆ, ನಿನ್ನೆ ದಿನ ದಿನಾಂಕ: ೨೩/೧೧/೨೦೧೫ ರಂದು ನಾನು ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದು, ಹಡ್ಲಿಗಿ, ಬಸರಕೋಡು, ಬೆಣಕಲ್ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ ೧.೦೦ ಗಂಟೆಗೆ ಕೆ.ಕೆ.ಹಾಳ್ ಗ್ರಾಮಕ್ಕೆ ಬಂದು ಗ್ರಾಮದಲ್ಲಿ ಗಸ್ತು ತಿರುಗಿ, ಕೆ.ಕೆ.ಹಾಳ್ ಗ್ರಾಮದ ಮರುಳು ತುಂಬುವ ಸ್ಥಳಕ್ಕೆ ಹೋಗಿ ನೋಡಲು ಹಗರಿಂದ 03 ಎತ್ತಿನ ಗಾಡಿಗಳಲ್ಲಿ ಅಕ್ರಮವಾಗಿ ಮರುಳನ್ನು ಮಾರಾಟ ಮಾಡುವ ಉದ್ದೇಶದಿಂದ ಮೇಲ್ಕಂಡ ಪ್ರತಿವಾದಿಗಳು ದಡದಲ್ಲಿ ತಂದು ಸಂಗ್ರಹಿಸುತ್ತಿದ್ದು, ಅಕ್ರಮ ಮರುಳು ಸಾಗಾಣಿಕೆಯು ಗಂಭೀರ "ಷಯವಾಗಿದ್ದು, ಅಕ್ರಮ ಮರುಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಮತ್ತು ಪ್ರತಿವಾದಿಗಳು ಇನ್ನೂ ಮುಂದೆ ಇಂತ ತಪ್ಪು ಮಾಡದಂತೆ ಪ್ರತಿವಾದಿಗಳ ವಿರುದ್ದ ಠಾಣೆಯಲ್ಲಿ ಗುನ್ನೆ ನಂ: ೧೬೫/೨೦೧೫ ಕಲಂ: ೧೭೪ ಸಿ.ಅರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ | |||||||||||||||
P.D. Halli PS | ||||||||||||||||
7 | Cr.No:0066/2015 (IPC 1860 U/s 00MP ) |
24/11/2015 | Under Investigation | |||||||||||||
MISSING PERSON - Women | ||||||||||||||||
Brief Facts : | ಈ ದಿನ ದಿನಾಂಕ ೨೪/೧೧/೨೦೧೫ ರಂದು ಮದ್ಯಾಹ್ನ ೧೨.೩೦ ಗಂಟೆಗೆ ಫಿರ್ಯಾದಿ ಶ್ರೀ. ವೀರಣ್ಣ ತಂದೆ ಕೆ. ರಾಮಯ್ಯ , ೪೦ ವರ್ಷ , ಕುರುಬರ ಜನಾಂಗ, ಕೂಲಿಕೆಲಸ , ವಾಸ: ಪಿ.ಡಿ. ಹಳ್ಳಿ ಗ್ರಾಮ ಬಳ್ಳಾರಿ ತಾಲೂಕು ೯೬೬೩೭೮೫೬೦೫ ರವರು ಹಾಜರಾಗಿ ನೀಡಿದ ಕಂಪ್ಯೂಟರ್ ರೈಸಡ್ ದೂರನ್ನು ಪಡೆದುಕೊಂಡು ನೋಡಲಾಗಿ ತನ್ನ ಹೆಂಡತಿ ಕೆ. ಕವಿತಾ ರವರು ದಿನಾಂಕ ೨೨/೧೧/೨೦೧೫ ರಂದು ಮದ್ಯಾಹ್ನ ೨.೦೦ ಗಂಟೆಗೆ ಬರ್ಹಿದಿಸೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ. ಎಲ್ಲಾ ಸಂಭಂದಿಕರ ಊರಗಳಿಗೆ ಹೋಗಿ ಹುಡಿಕಾಡಿದರೂ ಪತ್ತೆ ಆಗಿರುವುದಿಲ್ಲ ಎಂದು ಇದ್ದ ದೂರಿನ ಮೇರೆಗೆ ಠಾಣೆಯ ಗುನ್ನೆ ನಂ ೬೬/೨೦೧೫ ಕಲಂ ಹೆಂಗಸ್ಸು ಕಾಣೆಯಾಗಿದ್ದಾಳೆ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Sandur PS | ||||||||||||||||
8 | Cr.No:0185/2015 (CODE OF CRIMINAL PROCEDURE, 1973 U/s 41,109 ) |
24/11/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | G.R.ಷಣ್ಮುಖಪ್ಪ,P.S.I, ಸಂಡೂರ ಪೊಲೀಸ್ ಠಾಣೆ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ 23.11.2015 ರಂದು ರಾತ್ರ್ರಿ 11-45 ಗಂಟೆಗೆ ನಾನು ಮತ್ತು ಅಪರಾಧ ವಿಭಾಗದ P.C.450 & P.C.682 ರವರನ್ನು ಕರೆದುಕೊಂಡು ಸರಕಾರಿ ಟಾಟಾ ಸುಮೋ ನಂಬರ್ K.A.34-G 450 ರಲ್ಲಿ ಸಂಡೂರು ಟೌನ್‌ನಲ್ಲಿ ರಾತ್ರಿ ಗಸ್ತು ಮಾಡುತ್ತಾ ನಂತರ ದಿನಾಂಕ 24.11.2015 ರಂದು ಬೆಳಗಿನ ಜಾವ 3-30 ಗಂಟೆಗೆ ನಾವು ಸಂಡೂರು ಮೇನ್ ರೋಡ್ ಪುರಸಭೆ ಬಸ್ ನಿಲ್ದಾಣದಿಂದ ಕೋರ್ಟ ಕಡೆ ಹೋಗುವ ರಸ್ತೆಯಲ್ಲಿ ಗಸ್ತು ಮಾಡುತ್ತಾ ಹೋಗುತ್ತಿರುವಾಗ್ಗೆ ಅಲ್ಲಿ ಶಿವಲೀಲಾ ಸೌಹರ್ದ ಬ್ಯಾಂಕ್ ಹತ್ತಿರ ಬಳಿ ಇರುವ ಎಡೆಯೂರು ಜನರಲ್ ಸ್ಟೋರ‍್ಸ ಕಿರಾಣಿ ಅಂಗಡಿಯ ಮುಂದೆ ಬಾಗಿಲಿನ ಶಟರ್ ಮುಂದುಗಡೆ ಒಬ್ಬವ್ಯೆಕ್ತಿಯು ಅನುಮಾನಸ್ಪದವಾಗಿ ಕತ್ತಲಲ್ಲಿ ನಿಂತಿದ್ದು ಆತನ ಕೈಯ್ಯಲ್ಲಿ ಒಂದು ಬ್ಯಾಗ್ ಇದ್ದು ಆತನು ನಮ್ಮ ಪೊಲೀಸ್ ವಾಹನವನ್ನು ನೋಡಿ ತಾನು ತೊಟ್ಟಿದ್ದ ಅಂಗಿಯಿಂದ ತನ್ನ ಮುಖವನ್ನು ಮರೆ ಮಾಚುತ್ತಾ ಅವಿತುಕೊಳ್ಳಲು ಪ್ರಯತ್ನಿಸಿರುವು ತ್ತಿದ್ದನ್ನುಮತ್ತು ತನ್ನ ಇರುವಿಕೆಯನ್ನು ಮರೆಮಾಚುತ್ತಿರುವುದನ್ನುನಾವು ಗಮನಿಸಿ ಆತನ ನಡುವಳಿಕೆ ಮೇಲೆ ಸಂಶಯಗೊಂಡು ಪೊಲೀಸ್ ವಾಹನ ನಿಲ್ಲಿಸಿ ವಾಹನದಿಂ ದ ಇಳಿದು ಆತನ ಬಳಿ ಹೋಗುತ್ತಿದ್ದಂತೆ ಸದ್ರಿ ವ್ಯೆಕ್ತಿಯು ಪೊಲೀಸ್ ಸಮವಸ್ರ್ತದಲ್ಲಿದ್ದ ನಮ್ಮನ್ನು ನೋಡಿ ಓಡಲಾರಂಭಿಸಿದ್ದು ನಾವು ಆತನ ಬೆನ್ನತ್ತಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಆತನು ತೊದಲುತ್ತಾ ತನ್ನ ಹೆಸರು ನವೀನ್ ವಾಸಃ- ಮಂಗಳೂರು ಎಂದು ಹೇಳಿದ್ದು ಆತನ ವರ್ತನೆಯಿಂದ ಅನುಮಾನ ಗೊಂಡು ಪುನಃ ಪುನಃ ತೀಕ್ಷ್ಣವಾಗಿ ವಿಚಾರಿಸಲಾಗಿ ತನ್ನ ಹೆಸರು (1) ರಣಜೀತ್ ಕುಮಾರ್ ತಂದೆ ರಾಜ್ ಕಿಶೋರ್ ಸಾ ವಯಸ್ಸು 24 ವರ್ಷ ಸಾಹ ಜಾತಿ, ಬಂಗಾರ, ಬೆಳ್ಳಿ ಆಭರಣಗಳನ್ನು ಪಾಲೀಶ ಮಾಡುವ ಕೆಲಸ ವಾಸಃ- ಅನಂತಪುರ್ ಚೌಕಿ ಜದಿಯಾ (ತಾ) ಸುಪೋಲ್ ಜಿಲ್ಲಾ ಬಿಹಾರ್ ರಾಜ್ಯ ಎಂದು ತಿಳಿಸಿದನು. ಈ ಅಪರಾತ್ರಿ ವೇಳೆಯಲ್ಲಿ ಸದ್ರಿ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಲಾಗಿ ಸದ್ರಿಯವನು ಯಾವುದೇ ಸಮಂಜಸವಾದ ಉತ್ತರ ಕೊಡಲಿಲ್ಲ.ಬ್ಯಾಗ್‌ನಲ್ಲಿದ್ದ ವಸ್ತುಗಳ ಬಗ್ಗೆ ಪರಿಶೀ ಲನೆ ಮಾಡ ಲಾಗಿ ಅರಿಷಿಣ ಪೌಡೆರ್ ಹಾಗು ಪೌಡರ್ ತರಹ ವಸ್ತು ಇದ್ದು ಅದು ಬಂಗಾರದ ಆಭರಣಗಳನ್ನು ಪಾಲೀಶ್ ಮಾಡುವ ವಸ್ತುಗಳೆಂದು ತಿಳಿಸಿದನು.ಇತ್ತೀಚಿಗೆ ಬಂಗಾರದ ಆಭರಣಗಳನ್ನು ಪಾಲೀಶ ಮಾಡಿ ಕೊಡುವ ನೆಪದಲ್ಲಿ ಬಂಗಾರದ ಆಭರಣಗಳನ್ನು ಲಪಟಾಯಿಸಿ ಸಾರ್ವಜನಿಕರಿಗೆ ಮೋಸ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಪ್ರಕರಣಗಳು ಆಗುತ್ತಿದ್ದು ಸದ್ರಿಯವನನ್ನು ಹಾಗೇ ಬಿಟ್ಟಲ್ಲಿ ಯಾವುದಾದರೂ ಕನ್ನ ಕಳುವು ಹಾಗು ಜನರಿಗೆ ಮೋಸ ಮಾಡುವ ಹಾಗು ಸಂಜ್ಞೇಯ ಅಪರಾದ ಮಾಡ ಬ ಹುದಾದ ಹೆಚ್ಚಿನ ಸಂಭವವಿದ್ದುದ್ದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಅವನನ್ನು ಬೆಳಗಿನ ಜಾವ 4-20 ಗಂಟೆಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಬೆಳಗಿನ ಜಾವ 04-30 ಗಂಟೆಗೆ ಬಂದು ಸದ್ರಿಯವನ ವಿರುದ್ದ ಠಾಣಾ ಗುನ್ನೆ ನಂಬರ್ 185/2015 ಕಲಂ 41-109 C.R.P.C. ಪ್ರಕಾರ ಕೇಸು ದಾಖಲಿಸಿ ಕೊಂಡು ತನಿಖೆ ಕೈ ಗೊಳ್ಳ ಲಾಗಿದೆ. | |||||||||||||||
Sirigeri PS | ||||||||||||||||
9 | Cr.No:0171/2015 (IPC 1860 U/s 00MP ) |
24/11/2015 | Under Investigation | |||||||||||||
MISSING PERSON - Women | ||||||||||||||||
Brief Facts : | ಈ ದಿನ ದಿನಾಂಕ: 24/11/2015 ರಂದು ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪರಿಶೀಲಿಸಿ ದಿ:-22/11/2015 ರಂದು ಸಂಜೆ 6:00ಗಂಟೆಗೆ ನಾನು ಮನೆಯಿಂದ ಹೊರಗಡೆ ಹೋದೆನು, ಮನೆಯಲ್ಲಿ ನನ್ನ ಹೆಂಡತಿ ಮಕ್ಕಳಿದ್ದರು, ನಂತರ ನಾನು ರಾತ್ರಿ 8:30ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲು ನನ್ನ ಹೆಂಢತಿ ವೀರಲಕ್ಷ್ಮೀ ಮನೆಯಲ್ಲಿ ಇರಲಿಲ್ಲ, ನನ್ನ ಮಗ ಲೋಹಿತ್ ನಿಗೆ ನಿಮ್ಮ ಅಮ್ಮ ಎಲ್ಲಿ ಎಂದು ಕೇಳಿದೆನು, ಅವನು ಮನೆಯಿಂದ ಹೊರಗಡೆ ಹೋದಳು ಎಂದು ತಿಳಿಸಿದನು, ನಂತರ ರಾತ್ರಿ 9:30ಗಂಟೆಯಾದರೂ ಮನೆಗೆ ನನ್ನ ಹೆಂಡತಿ ಬರಲಿಲ್ಲ, ಅಕ್ಕಪ್ಪಕ್ಕದ ಕಮ್ಮಾರ ಶೇಖಣ್ಣನ ಮನೆ ಹತ್ತಿರ ಹೋಗಿ ವಿಚಾರ ಮಾಡಲು ಕಾಣಲಿಲ್ಲ, ನಂತರ ನಾನು ಸಾದಾಕಲಿ ಸೇರಿ ಕ್ಯಾಂಪ್ ನ ಎಲ್ಲಾ ಕಡೆ ಹುಡುಕಾಡಿ ವಿಚಾರಿಸಲು ನನ್ನ ಹೆಂಢತಿ ಎಲ್ಲಿಯೂ ಕಾಣಲಿಲ್ಲ, ತನ್ನ ತವರು ಮನೆಗ ಹೋಗಿ ಬೆಳಿಗ್ಗೆ ಬರಬಹುದು ಎಂದು ತಿಳಿದು ಸುಮ್ಮನಾದೆನು, ಮರುದಿನವಾದರೂ ನನ್ನ ಹೆಂಡತಿ ಮನೆಗೆ ಬರಲಿಲ್ಲ, ನಂತರ ನಾನು ನಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಊರುಗಳಲ್ಲಿ ಫೋನ್ ಮಾಡಿ ಅಂಗನವಾಡಿ ಟೀಚರ್ ಗಳನ್ನು ಕೇಳಿ ವಿಚಾರಿಸಲು ನಮಗೆ ಗೊತ್ತಿಲ್ಲವೆಂದು ತಿಳಿಸಿದರು, ನಂತರ ನಾನು ನಮ್ಮ ಅಣ್ಣ ಸುಭಾಸ್ಕರ್ ಸೇರಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹಾಗೂ ಬಳ್ಳಾರಿ, ಸಿರುಗುಪ್ಪ ಇತರೇ ನಮ್ಮ ಸಂಬಂದಿಕರ ಮನೆಗಳಲ್ಲಿ ಗ್ರಾಮಗಳಲ್ಲಿ ನನ್ನ ಹೆಂಡತಿ ಬಗ್ಗೆ ವಿಚಾರಿಸಿ ಹುಡುಕಾಡಿ ನೋಡೆಲು ಎಲ್ಲಿಯೂ ಸಿಗಲಿಲ್ಲ, ಹೀಗೆ ದಿನಾಲು ಮನೆ ಬರಬಹುದೆಂದು ತಿಳಿದು ಇಲ್ಲಿಯವರೆಗೆ ಹುಡುಕಾಡಿ ಸಿಗದಿದ್ದರಿಂದ ನಮ್ಮ | |||||||||||||||
ಹಿರಿಯವರನ್ನು ವಿಚಾರಿಸಿಕೊಂಡು ಈ ದಿನ ತಡವಾಗಿ ಸಿರಿಗೇರಿ ಠಾಣೆಗೆ ಬಂದು ಕಾಣೆಯಾದ ನನ್ನ ಹೆಂಢತಿ ವೀರಲಕ್ಮಿಯನ್ನು ಹುಡುಕಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ. | ||||||||||||||||
Tekkalkota PS | ||||||||||||||||
10 | Cr.No:0127/2015 (CODE OF CRIMINAL PROCEDURE, 1973 U/s 107 ) |
24/11/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈ ದಿನ ದಿನಾಂಕ; 24/11/2015 ರಂದು ಸಂಜೆ 3-00 ಗಂಟೆಗೆ ನಾನು ಸಿಬ್ಬಂದಿಯವರ ಸಂಗಡ ಹಳೇಕೋಟೆ ಗ್ರಾಮದಲ್ಲಿ ಮಾಹಿತಿ ಸಂಗ್ರಹಿಸಲು ಹೋದಾಗ ಪ್ರತಿವಾದಿ ಈಡಿಗರ ಜಂಬಣ್ಣ ರವರು ವಿನಾಕಾರಣ ತಮ್ಮ ಸಂಗಡಿಗರೊಂದಿಗೆ ಗ್ರಾಮಗಳಲ್ಲಿ ತಿರುಗಾಡಿ, ಸಾರ್ವಜನಿಕರಲ್ಲಿ ಗಲಭೆ ಉಂಟು ಮಾಡುವ ಪ್ರವೃತ್ತಿ ಉಳ್ಳವರಾಗಿದ್ದು, ಅಕ್ರಮಗುಂಪು ಸೇರಿಸುವುದು ಮತ್ತು ಕೋಮುಗಲಬೆಯನ್ನು ಮಾಡುವ ಪ್ರವೃತ್ತಿ ಉಳ್ಳವರಾಗಿದ್ದು, ಇವರ ಹೆಸರಿನಲ್ಲಿ ತೆಕ್ಕಲಕೋಟೆ ಠಾಣೆಯಲ್ಲಿ ರೌಡಿ ಹಾಳೆ ಸಹಾ ತೆರೆದಿದ್ದು ಇದೆ. ಈತನಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಗಳ / ಗಲಾಟೆಗಳು ಆಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಯಾಗದಂತೆ ಮತ್ತು ಸಾರ್ವಜನಿಕರ ಶಾಂತತೆಗೆ ಭಂಗ ವಾಗದಂತೆ ಇರಲು, ಮಾನ್ಯ ನ್ಯಾಯಾಲಯವು ಸದರಿ ಪ್ರತಿವಾದಿಯನ್ನು ಕರೆಯಿಸಿ, ಒಳ್ಳೆಯ ನಡೆತೆಯಿಂದ ಇರುವಂತೆ ಮುಚ್ಚಳಿಕೆಯನ್ನು ಪಡೆಕೊಳ್ಳಲು ಕೋರಿ, ಪ್ರತಿವಾದಿ ವಿರುದ್ದ ಠಾಣಾ ಗುನ್ನೆ ನಂಬರ್ 127/2015 ಕಲಂ 107ಸಿಆರ್ಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
ಮಂಗಳವಾರ, ನವೆಂಬರ್ 24, 2015
PRESS NOTE OF 24112015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ