Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0470/2015 (DOWRY PROHIBITION ACT, 1961 U/s 3,4 ; IPC 1860 U/s 498A ) |
04/11/2015 | Under Investigation | |||||||||||||
CRIMES RELATED TO WOMEN - Dowry Prohibition | ||||||||||||||||
Brief Facts : | ದಿನಾಂಕ: 4-11-2015 ರಂದು ಮದ್ಯಾಹ್ನ 1-30 ಗಂಟೆಗೆ ಶ್ರೀಮತಿ. ವಸಂತಿ @ ಸ್ವರ್ಣಲತಾ, ವಾಸ: ಬಳ್ಳಾರಿರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ತನ್ನ ತಂದೆ-ತಾಯಿ ಮತ್ತು ಹಿರಿಯರು ತನಗೆ ರಾಯದುರ್ಗ ವಾಸಿಯಾದ ಬಸವರಾಜುಗೆ ಕೊಟ್ಟು ದಿನಾಂಕ: 13-11-2011 ರಂದು ಲಗ್ನ ಮಾಡಿದ್ದು ಮಾತುಕತೆಯಂತೆ ತನ್ನ ತಂದೆ-ತಾಯಿ ನಗದು ಹಣ ರೂ: 45,000/- ಮತ್ತು ಅಧ ತೊಲೆ ಬಂಗಾರದ ಉಂಗುರವನ್ನು ತನ್ನ ಗಂಡನಿಗೆ ವರದಕ್ಷಣೆಯಾಗಿ ನೀಡಿರುತ್ತಾರೆ. ತನ್ನ ಗಂಡ, ಅತ್ತೆ, ಮಾವ, ಗಂಡನ ಅಣ್ಣ-ತಮ್ಮಂದಿರು ತನಗೆ ರಾಯದುರ್ಗದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವರದಕ್ಷಣೆ ಸಲುವಾಗಿ ಬೈದಾಡುವುದು, ಎಲ್ಲಾರು ಊಟ ಮಾಡಿದ ನಂತರ ಉಳಿದ ಅನ್ನವನ್ನು ಹಾಕುವುದು, ಕೆಲಸ ಮಾಡಲು ಬರುವುದಿಲ್ಲವೆಂದು ಬೈದಾಡುವುದು, ಕೈಕಾಲುಗಳಿಂದ ಹೊಡೆಯುವುದು ಮಾಡುತ್ತಿದ್ದರಿಂದ ತಾನು ಯಾಕೆ ಈ ರೀತಿ ವಿನಾಕಾರಣ ಪೀಡಿಸುತ್ತಿರುತ್ತಾರೆಂದು ತನಗೆ ಚುಚ್ಚು ಮಾತುಗಳನ್ನು ಅಡಿ ವರದಕ್ಷಣೆಯಾಗಿ ಹಣ ತೆಗೆದುಕೊಂಡು ಬಾ ಎಂದು ಈಗ್ಗೆ ಒಂದು ವರ್ಷದ ಹಿಂದೆ ಮನೆಯಿಂದ ತನಗೆ ಹೊರಗೆ ದಬ್ಬಿದ್ದರಿಂದ ತಾನು ತಮ್ಮ ತಂದೆ-ತಾಯಿ ಮನೆಗೆ ಬಂದಿದ್ದು, ಅಗಾಗ್ಗೆ ತನ್ನ ಗಂಡ, ಅತ್ತೆ, ಮಾವ, ಗಂಡನ ಅಣ್ಣ- ತಮ್ಮಂದಿರು ತಮ್ಮ ಮನೆಗೆ ಬರುವುದು ವರದಕ್ಷಣೆ ಕೊಡು ಎಂದು ಬೈದಾಡುವುದು, ಜನರ ಮುಂದೆ ತಮಗೆ ಹಿಯಾಳಿಸುವುದು, ಗಂಡ ತಾನು ಬೇಡ ಅಂತಾ ಬರೆದುಕೊಡು ಎಂದು ಹೇಳುವುದು ಮಾಡುತ್ತಿರುತ್ತಾರೆಂದು ತನ್ನ ಗಂಡನು ಹಾಲಿ ಇನ್ನೋಂದು ಮದುವೆ ಆಗಿರುತ್ತಾನೆಂದು ಮಾಹಿತಿ ಇರುತ್ತದೆ. ತನಗೆ ಹೆಚ್ಚಿನ ವರದಕ್ಷಣೆ ಸಲುವಾಗಿ ಮಾಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ | |||||||||||||||
Gandhinagar PS | ||||||||||||||||
2 | Cr.No:0230/2015 (KARNATAKA POLICE ACT, 1963 U/s 78(3) ) |
04/11/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ 02.11.2015 ರಂದು ಸಂಜೆ 06.15 ಗಂಟೆ ಸಮಯದಲ್ಲಿ ಬಳ್ಳಾರಿ ನಗರದ ಪಟೇಲ್ ನಗರದ ಪಾರ್ಕ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಅಪಾದಿತರು ಮಟಕಾ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾಧಿದಾರರು,ಮತ್ತು ಸಿಬ್ಬಂದಿಯವರಾದ ಪಿಸಿ-44,193,932,1012,723 ಹಾಗೂ ಇಬ್ಬರು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ ನಗದು ಹಣ 11260/-ಗಳು 2- ಮಟಕಾ ಪಟ್ಟಿ,2-ಬಾಲ್ ಪೆನ್ನುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮಕ್ಕಾಗಿ ಜಪ್ತುಮಾಡಿಕೊಂಡು ಆರೋಪಿ ಸಮೇತ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್ ಸಿ ನಂ 36/15 ರಲ್ಲಿ ದಾಖಲಿಸಿಕೊಂಡು ನಂತರ ಘನ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಬಳ್ಳಾರಿ ರವರಿಂದ ಅನುಮತಿ ಪಡೆದು ಈ ಪ್ರಕರಣ ದಾಖಲಿಸಿದೆ | |||||||||||||||
Hospet Rural PS | ||||||||||||||||
3 | Cr.No:0161/2015 (IPC 1860 U/s 498A,323,324,504,506,109,342,34 ) |
04/11/2015 | Under Investigation | |||||||||||||
CRUELTY BY HUSBAND - Husband And Relative(S) In Law | ||||||||||||||||
Brief Facts : | ಈ ದಿನ 04/11/2015 ರಂದು ಬೆಳಿಗ್ಗೆ 11-30 ರಿಂದ 12-15 ಗಂಟೆಯವರೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ, ಟಿ. ಉಮಾ ಗಂಡ ಸಿದ್ದೇಶ್, ವ: 22 ವರ್ಷ, ನಾಯಕರು ಜನಾಂಗ, ಗೃಹಿಣಿ, ವಾಸ: ಕಣಿವೆರಾಯಗುಡಿ, ಸಂಡೂರು ರಸ್ತೆ, ಹೊಸಪೇಟೆ (ತಾ) ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶ: ಪಿರ್ಯಾದಿದಾರರಿಗೆ ಕಣೀವೆರಾಯನ ಗುಡಿ ವಾಸಿಯಾದ ಕೃಷ್ಟಪ್ಪನ ಮಗನಾದ ಸಿದ್ದೇಶನೊಂದಿಗೆ ಮದುವೆಯಾಗಿ ಒಂದುವರೆ ವರ್ಷವಾಗಿದ್ದು ಮದುವೆಯಾದಾಗಿನಿಂದ ಪಿರ್ಯಾದಿದಾರರಿಗೆ ಗಂಡ, ಸಿದ್ದೇಶ್ , ಅತ್ತೆ ಮಾರೆಮ್ಮ, ಗಂಡನ ಅಣ್ಣಂದಿರಾದ ಬಸವರಾಜ, ಜಂಬಯ್ಯ ರವರು ವಿನಾಕಾರಣ ನಿನಗೆ ಮನೆಕೆಲಸ, ಹೊಲದ ಕೆಲಸ ಮಾಡಲು ಬರುವುದಿಲ್ಲ ನೀನು ಶೋಕಿ ಮಾಡಲು ಮಾತ್ರ ಲಯಾಕ್ ಇದಿಯಾ ಅಂತೆಲ್ಲಾ ಬೈದಾಡುತ್ತಾ ಸರಿಯಾಗಿ ಊಟವನ್ನು ಹಾಕದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಿದ್ದುದಾಗಿ ಅಲ್ಲದೆ ದಿನಾಂಕ: 01/11/2015 ರಂದು ಬೆಳಿಗ್ಗೆ 11 ಗಂಟೆಗೆ ಮನೆಯ ಮುಂದುಗಡೆ ಕುರಿಗಳಗೆ ಸೊಪ್ಪು ಕಟ್ಟುತ್ತಿರುವಾಗ ಸಿದ್ದೇಶನು ನಿನಗೆ ಸೋಪ್ಪುನ್ನು ಸಹ ಕಟ್ಟಲು ಬರುವದಿಲ್ಲವೆಂದು ಬಾರಿಕೋಲಿನಿಂದ ಪಿರ್ಯಾದಿದಾರರಿಗೆ ಹೊಡೆದಿರುತ್ತಾನೆಂದು ಹಾಗೂ ಮಾರೆಮ್ಮ | |||||||||||||||
ಮತ್ತು ಜಂಬಯ್ಯ ರವರು ಸಹ ಕೈ ಕಾಲುಗಳಿಂದ ಒದ್ದು ಹೊಡೆದಿರುವುದಾಗಿ ಹಾಗು ಬಸವರಾಜ ಇತನು ಈ ಕತ್ತೆ ಸೂಳೆಯನ್ನು ನಾನು ಹೊಲಕ್ಕೆ ಹೋಗಿ ಬರುವಷ್ಟರಲ್ಲಿ ಸಾಯಿಸಿ ಎಲ್ಲಿಯಾದರು ಹಾಕಿ ಬರ್ರಿ ಅಂತಾ ಜಗಳಕ್ಕೆ ಪ್ರಚೋದನೆ ಮಾಡಿರುವುದಾಗಿ ಈ ವಿಚಾರವನ್ನು ಹೊರಗಡೆ ಬಿಟ್ಟರೆ ಯಾರಿಗಾದರು ಹೇಳುತ್ತಾಳೆಂದು ಪಿರ್ಯಾದಿದಾರರಿಗೆ ಹೊರಗಡೆ ಬಿಡದೇ ಮನೆಯಲ್ಲಿ ಕೂಡಿ ಹಾಕಿದ್ದಾಗಿ ತನಗೆ ಅವರು ಎಲ್ಲಿ ಕೊಲೆ ಮಾಡಿಬಿಡುತ್ತಾರೆಯೋ ಎಂದು ತಪ್ಪಿಸಿಕೊಂಡು ಬಂದಿರುವುದಾಗಿ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯ ದೂರನ್ನು ಪಡೆದುಕೊಂಡು ಠಾಣೆಗೆ 12-30 ಗಂಟೆಗೆ ಬಂದು ಠಾಣೆಯ ಗುನ್ನೆ ನಂಬರ್ : 161/2015 ಕಲಂ: 498(ಎ) 323-324-504-506-109-342 ರೇವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | ||||||||||||||||
Kampli PS | ||||||||||||||||
4 | Cr.No:0144/2015 (IPC 1860 U/s 211,182 ) |
04/11/2015 | Under Investigation | |||||||||||||
PUBLIC JUSTICE - Public Justice | ||||||||||||||||
Brief Facts : | ಪಿರ್ಯಾದಿದಾರರಾದ ನಾಗೇಂದ್ರನು ಚಂದ್ರಶೇಖರ ಮತ್ತು ಪಾರ್ವತಮ್ಮ ಎನ್ನುವವರು ಗೋನಾಳ್ ಗ್ರಾಮದ ಬಳಿ ಇರುವ ಸರ್ವೇ ನಂ 120/ಎ ಜಮೀನಿನ ಪೈಕಿ ಒಟ್ಟು 10 ಎಕರೆ ಜಮೀನನ್ನು ಮೋಸದಿಂದ ತಮ್ಮ ಹೆಸರಿಗೆ ಮಾಡಿಸಿಕೊಂಡಿರುತ್ತಾರೆ. ಮತ್ತು ದಿನಾಂಕ 20/6/2014 ರಂದು ಪಿರ್ಯಾದಿಗೆ ಮೇಲ್ಕಂಡ ಆರೋಪಿತರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾಗಿ ದೂರು ನೀಡಿದ್ದು ಈ ಬಗ್ಗೆ ಕಂಪ್ಲಿ ಪೊಲೀಸ್ ಠಾಣೆಯ ಗುನ್ನೆ ನಂ 110/2014 ಕಲಂ 420,323,324,504,506 ಐಪಿಸಿ ಮತ್ತು ಕಲಂ 3(1),(5),(10) ಎಸ್.ಸಿ/ಎಸ್.ಟಿ ಪಿ.ಎ ಕಾಯಿದೆ-1989 ರೀತ್ಯ ಪ್ರಕರಣ ದಾಖಲಾಗಿದ್ದು ಮಾನ್ಯ ಡಿ.ಎಸ್.ಪಿ ಹಂಪಿ ರವರ ತನಿಖೆಯಿಂದ ಮೇಲ್ಕಂಡ ಪ್ರಕರಣದಲ್ಲಿ ಪಿರ್ಯಾದಿದಾರ ನಾಗೇಂದ್ರನು ಸುಳ್ಳು ದೂರು ನೀಡಿರುವುದು ಮತ್ತು ಸಾಕ್ಷಿದಾರರಾದ ತಿಮ್ಮಕ್ಕ ಹಾಗೂ ರಂಗನಾಥ ರವರು ಸುಳ್ಳು ಹೇಳಿಕೆಯನ್ನು ಕೊಟ್ಟಿರುತ್ತಾರೆಂದು ಧೃಡಪಟ್ಟಿರುತ್ತದೆ. ಈ ಬಗ್ಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಹಂಪಿ ರವರು ಸುಳ್ಳು ದೂರು & ಸುಳ್ಳು ಸಾಕ್ಷ್ಯ ನೀಡಿದ ಮೇಲ್ಕಂಡವರ ವಿರುದ್ಧ ಕ್ರಮ ಜರುಗಿಸಲು ಜ್ಞಾಪನ ನೀಡಿದ್ದನ್ನು ಪಡೆದು ಠಾಣೆಯ ಎನ್.ಸಿ ನಂ: 21/2015 ಕಲಂ 182,211 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದು ಈ ದಿನ ಈ ಬಗ್ಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರ ವ ವರದಿಯನ್ನು ದಾಖಲಿಸಿದೆ | |||||||||||||||
5 | Cr.No:0145/2015 (IPC 1860 U/s 506,341,504 ) |
04/11/2015 | Under Investigation | |||||||||||||
WRONGFUL RESTRAINT/CONFINEMENT - Others | ||||||||||||||||
Brief Facts : | ನಿನ್ನೆ ದಿನಾಂಕ: 03/11/2015ರಂದು ಮಧ್ಯಾಹ್ನ 12.30ಗಂಟೆಗೆ ಪಿರ್ಯಾದಿದಾರರು ಕಂಪ್ಲಿಯ ಕಮ್ಮವಾರಿ ಸಂಘಂ ಕಾರ್ಯಾಲಯದಲ್ಲಿದ್ದಾಗ ಆರೋಪಿ ಎ ಸಿ ದಾನಪ್ಪನು ಕಾರ್ಯಾಲಯಕ್ಕೆ ಹೋಗಿ ನನಗೆ ಫಂಕ್ಷನ್ ಮಾಡಲು ದಿ: 19/02/2016ಕ್ಕೆ ಭವನ ಬೇಕು ಎಂದು ಕೇಳಿದ್ದು ಪಿರ್ಯಾದಿದಾರರು ಆ ತಾರೀಖಿಗೆ ಭವನ ಖಾಲಿ ಇಲ್ಲವೆಂದು ತಿಳಿಸಿದ್ದಕ್ಕೆ ಎಸ್ ಸಿ ಯವರಿಗೆ ಕೊಡಲು ಇಷ್ಟವಿಲ್ಲೇನು ಎಂದು ಚಪ್ಪಲಿ ಹೊರಗೆ ಬಿಟ್ಟಿದ್ದೇನೆ. ಇಲ್ಲದಿದ್ದ ಪಕ್ಷದಲ್ಲಿ ನಿನಗೆ ಚಪ್ಪಲಿಯಿಂದ ಹೊಡೆಯುತ್ತಿದ್ದೆ ಎಂದು ದುರ್ಬಾಷೆಗಳಿಂದ ಬೈದಾಡತೊಡಗಿದ್ದನ್ನು ಕಂಡು ಪಿರ್ಯಾದಿದಾರನು ಹೊರಗೆ ಬರಲು ಹೊರಟವನನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ನಾನು ನಿನ್ನನ್ನು ಅಟ್ರಾಸಿಟಿ ಕೇಸ್ ನಲ್ಲಿ ಕಳುಹಿಸುತ್ತೇನೆ. ನೀನು ಅಂಬೇಡ್ಕರ್ ಸರ್ಕಲ್ ನಲ್ಲಿ ಬಂದಾಗ ನಿನ್ನನ್ನು ಕಡಿಯುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ಘಟನೆ ಬಗ್ಗೆ ಸಂಘದವರೊಡನೆ ಚರ್ಚಿಸಿ ತಡವಾಗಿ ಬಂದು ದೂರು ನೀಡುತ್ತಿದ್ದು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ | |||||||||||||||
P.D. Halli PS | ||||||||||||||||
6 | Cr.No:0063/2015 (IPC 1860 U/s 341,506,34 ) |
04/11/2015 | Under Investigation | |||||||||||||
WRONGFUL RESTRAINT/CONFINEMENT - Attempt To Commit | ||||||||||||||||
Brief Facts : | ಈ ದಿನ ದಿನಾಂಕ 04/11/2015 ರಂದು ಮದ್ಯಾಹ್ನ 1.00 ಗಂಟೆಗೆ ನ್ಯಾಯಾಲಯದ ಪಿ.ಸಿ. 10 ರವರು ಠಾಣೆಗೆ ಹಾಜರಾಗಿ ನೀಡಿದ ನ್ಯಾಯಾಲಯದ ಪಿ.ಸಿ. ನಂ 240/2015 ರನ್ನು ಪಡೆದುಕೊಂಡು ನೋಡಲು ದಿನಾಂಕ 06/08/2015 ರಂದು ರಾತ್ರಿ 7.00 ಗಂಟೆಗೆ ಫಿರ್ಯಾದಿ ಶೇಖಮ್ಮಳಿಗೆ ಗ್ರಾಮದ ಬರ್ಹಿದಿಸೆಗೆ ಫಿರ್ಯಾದಿ ಹೋಗಿ ಮನೆಗೆ ಬರುತ್ತಿರುವಾಗ ಆರೋಪಿತರಾದ ಮುನಿಸ್ವಾಮಿ ,ಸಾವಿತ್ರಮ್ಮ , ಮಂಗಮ್ಮ ಗಾದೆಮ್ಮ ರಮಾದೇವಿ ಎಲ್ಲರೂ ಸೇರಿಕೊಂಡು ಫಿರ್ಯಾದಿಯನ್ನು ಅಡ್ಡಗಟ್ಟಿ “ ನೀವು ನಮ್ಮವರ ಮೇಲೆ ಕೊಟ್ಟ ಕೇಸ್ ನ್ನು ವಾಪಸ್ಸು ತೆಗೆದುಕೊಂಡು ಕೊರ್ಟನಲ್ಲಿ ರಾಜಿ ಆಗಬೇಕು ಇಲ್ಲವಾದಲ್ಲಿ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Sandur PS | ||||||||||||||||
7 | Cr.No:0173/2015 (KARNATAKA EXCISE ACT, 1965 U/s 32,34 ) |
04/11/2015 | Under Investigation | |||||||||||||
KARNATAKA STATE LOCAL ACTS - Karnataka Excise Act 1965 | ||||||||||||||||
Brief Facts : | ದಿನಾಂಕ 04.11.2015 ರಂದು ಮದ್ಯಾಹ್ನ 1-15 ಗಂಟೆಗೆ ಮಾನ್ಯ P.S.I. ರವರು ಠಾಣೆಯಲ್ಲಿ ನೀಡಿದ ಜ್ಞಾಪನ ವರದಿ ಸಾರಂಶವು G.R.ಷಣುಖಪ್ಪ P.S.I. ಸಂಡೂ ರು ಪೊಲೀಸ್ ಠಾಣೆ ಆದ ನಾನು ಈ ದಿನ ದಿನಾಂಕ ೦4/11/2015 ರಂದು ಬೆಳಿಗ್ಗೆ 10-30 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಸಂಡೂರು ಟೌನ್ ನ 14 ನೇ ವಾರ್ಡ ನಲ್ಲಿ ಬರುವ ಶ್ರೀಧರ್ ಎಂಬುವರ ಟೀ ಹೋಟೆಲ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿಯು ಮದ್ಯವನ್ನು ಜನರಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾನೆಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಠಾಣೆಗೆ ಪಂಚರನ್ನು ಬೆಳಿಗ್ಗೆ 10-45 ಗಂಟೆಗೆ ಬರ ಮಾಡಿಕೊಂಡು ನಾನು ಮತ್ತು ಠಾಣಾ ಸಿಬ್ಬಂದಿಯವರಾದ PC'S 682,377,450 ರವರ ಸಂಗಡ ನಡೆದುಕೊಂಡು ಸಂಡೂರು ಟೌನ್‌ನ ಚಪ್ಪರದಳ್ಳಿರುವ ಶ್ರೀಧರ್ ರವರ ಟೀ ಹೋಟೆಲ್ ಬಳಿ ಬೆಳಿಗ್ಗೆ 11-00 ಗಂಟೆಗೆ ಬೇಟಿ ಕೊಟ್ಟಾಗ ಅಲ್ಲಿ ಒಬ್ಬ ವ್ಯೆಕ್ತಿಯು ಟೀ ಅಂಗಡಿ ಮುಂದುಗಡೆ ಸಾರ್ವಜನಿಕ ಸ್ಥಳ ದಲ್ಲಿ ನಿಂತು ಪ್ಲಾಸ್ಟೀಕ್ ಚೀಲ ಮುಂದೆ ಇಟ್ಟುಕೊಂಡಿದ್ದು,ಆತನು ಜನರಿಗೆ ಕರೆಯುತ್ತಾ ಮದ್ಯದ ಬಾಟ ಲುಗಳು ಇವೆ ಬನ್ನಿರಿ ಎಂದು ಹೇಳುತ್ತಿದ್ದಾಗ ಜನರು ಹಣ ಕೊಟ್ಟು ಮದ್ಯದ ಪೌಚ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನಾವೆಲ್ಲಾರೂ ಸೇರಿ ಬೆಳಿಗ್ಗೆ 11-10 ಗಂಟೆಗೆ ಆತನ ಮೇಲೆ ದಾಳಿ ಮಾಡಲಾಗಿ ಜನರು ಅಲ್ಲಿಂದ ಚದುರಿ ಹೊಗಿದ್ದು ಮದ್ಯದ ಬಾಟಲುಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದವನು ಸಿಕ್ಕಿದ್ದು ಆತನ ಹೆಸರು ಕೇಳಲಾ ಗಿ ವಿಳಾಸ ಕೇಳಲಾಗಿ ತನ್ನ ಹೆಸರು [1] ಶ್ರೀಧರ್ ತಂದೆ H.M.ರಾಜಶೇಖರಯ್ಯ,ಜಂಗಮರು ಜನಾಂಗ,ವಯಸ್ಸು 23 ವರ್ಷ ಟೀ ಹೋಟೆಲ್ ಅಂಗಡಿ ವ್ಯಾಪಾರ, ಮತ್ತು ಲಾರಿ ಕ್ಲೀನರ್ ಕೆಲಸ ವಾಸಃ- 14 ನೇ ವಾರ್ಡ ಚಪ್ಪರದಳ್ಳಿ ಆಂಜನೇಯ ಗುಡಿಯ ಬಳಿ ಸಂಡೂರು ಅಂತ ತಿಳಿಸಿದನು. ಸದ್ರಿ ಟೀ ಹೋಟೆಲ್ ಯಾರದೆಂದು ವಿಚಾರ ಮಾಡಲಾಗಿ ತನ್ನದೆಂದು ತಿಳಿಸಿದನು ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ ಅಂತ ವಿಚಾರ ಮಾಡಲಾಗಿ ಮದ್ಯ ತುಂಬಿದ ಪೌಚ್‌ಗಳು ಇವೆ ಎಂದು ತಿಳಿಸಿದನು. ಅವುಗಳನ್ನು ಜನರಿಗೆ ಮಾರಾಟ ಮಾಡಲು ಯಾವುದಾದರು ಅಧಿಕೃತ ಪರವಾನಿಗೆಯಾಗಲಿ ಕಾಗದ ಪತ್ರಗಳಾಗಲಿ ಇವೆಯೇ ಎಂದು ಕೇಳಲಾಗಿ ಅವು ಯಾವುದು ತನ್ನಲ್ಲಿಲ್ಲವೆಂದು ತಿಳಿಸಿದನು.ಜನರಿಗೆ ಮದ್ಯದ ಬಾಟಲುಗಳನ್ನು ಹಣ ಪಡೆದುಕೊಂಡು ಮಾರಾಟ ಮಾಡುವುದಾಗಿ ತಿಳಿಸಿದನು. ಆಗ ಪಂಚರ ಸಮಕ್ಷ ಮ ಪ್ಲಾಸ್ಟೀಕ್ ಚೀಲದಲ್ಲಿದ್ದ ಮದ್ಯ ವನ್ನುಪರಿಶೀಲಿಸಿ ನೋಡಲು ಪ್ಲಾಸ್ಟೀಕ್ ಚೀಲದಲ್ಲಿ 90 M.L.ತುಂಬಿದ ಒಟ್ಟು 96 ORIGINALCHOICE WHISKY ಟಟ್ರಾ ಪೌಚ್‌ಗಳು ಇದ್ದು ಒಂದರ ಬೆಲೆ ರೂ 25-04 ಇದ್ದು ಒಟ್ಟು ಅಂದಾಜು ರೂ 2438/ ರೂಗಳು, ಇವುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 11-10 ಗಂಟೆ ಯಿಂದ ಮದ್ಯಾಹ್ನ 12-45 ಗಂಟೆವರೆಗೆ ಪಂಚನಾಮೆಯ ಮೂಲಕ ಜಪ್ತುಪಡಿಸಿಕೊಂಡು ಸದ್ರಿ ಮದ್ಯದ ಟಟ್ರಾ ಪೌಚ್‌ಗಳ ಪೈಕಿ ಸುಮಾರು 4 ವರೆ ಲೀಟರ್ ಗಳಿಗಾಗುವಷ್ಟು ಮದ್ಯ ತುಂಬಿದ ಟಟ್ರಾ ಪೌಚ್‌ಗಳನ್ನು ಸ್ಯಾಂ ಪಲ್ ಗಾಗಿ ತೆಗೆಯಲಾಯಿತು.ಶ್ರೀಧರ್‌ನ ಅಂಗಶೋಧನೆ ಮಾಡಲಾಗಿ ನಗದು ಹಣ 350/= ರೂಗಳು ದೊರೆತವು.ಸದ್ರಿ ಹಣ ಮದ್ಯ ಮಾರಾಟದಿಂದ ಬಂದಂತಹ ಹಣ ಎಂ ದು ತಿಳಿಸಿದನು. ಶ್ರೀಧರ್ ನನ್ನು ಮದ್ಯಾಹ್ನ 1-00 ಗಂಟೆಗೆ ವಶಕ್ಕೆ ತೆಗೆದು ಕೊಂಡು ಮರಳಿ ಠಾಣೆಗೆ ಮದ್ಯಾಹ್ನ 1-15 ಗಂಟೆಗೆ ಬಂದು ಪಂಚನಾಮೆ, ಮಾಲು & ಜ್ಞಾಪ ನ ವರದಿ, ಆರೋಪಿ ಶ್ರೀಧರ್ ರವರನ್ನು ನಿಮ್ಮ ಸ್ವಾಧೀನಕ್ಕೆ ನೀಡುತ್ತಿದ್ದು ಯಾವುದೇ ಪರವಾನಿಗೆ ಇಲ್ಲದೇ ಮದ್ಯವುಳ್ಳ ಪೌಚ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಶ್ರೀದರ್ ರವರ ವಿರುದ್ದ ಕಲಂ:32-34 ಕರ್ನಾಟಕ ಅಬ್ಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈ ಗೊಳ್ಳಲು ಈ ಮೂಲಕ ನಿಮಗೆ ಸೂಚಿಸ ಲಾ ಗಿದೆ.ಎಂದು ಇದ್ದ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. | |||||||||||||||
ಬುಧವಾರ, ನವೆಂಬರ್ 4, 2015
PRESS NOTE OF 04/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ