ಬುಧವಾರ, ನವೆಂಬರ್ 25, 2015

PRESS NOTE OF 25/11/2015

Crime Key Report From   To   
Sl. No FIR No FIR Date Crime Group - Crime Head Stage of case
Brucepet PS
1 Cr.No:0218/2015
(CODE OF CRIMINAL PROCEDURE, 1973 U/s 41(1)(d),102 ; IPC 1860 U/s 379 )
25/11/2015 Under Investigation
CrPC - Preventive Arrest (Sec 41 Class D,102)
Brief Facts :  ಈ ದಿನ ದಿನಾಂಕ:25/11/2015 ರಂದು ಬೆಳಿಗ್ಗೆ 11.30 ಗಂಟೆಗೆ ಪಿ.ಎಸ್.ಐ(ಕ್ರೈಂ) ಮತ್ತು ಸಿಬ್ಬಂದಿಯವರು ಠಾಣೆಯಲ್ಲಿ ವರದಿಯಾದ ಪ್ರಕರಣಗಳಲ್ಲಿ ಕಳುವಾದ ಮೋಟಾರ್ ಸೈಕಲ್ ಗಳು ಕಳುವು ಮಾಡಿದ ಆರೋಪಿತರ ಪತ್ತೆಕಾರ್ಯಕ್ಕಾಗಿ ನಗರದ ಕಣೆಕಲ್ ಬಸ್ ನಿಲ್ದಾಣದ ಹತ್ತಿರ ಮೋಟಾರ್ ಸೈಕಲ್ ಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಬೆಳಿಗ್ಗೆ 11.45 ಗಂಟೆ ಸುಮಾರಿಗೆ ಆರೋಪಿತರು ಮೋಟರ್ ಸೈಕಲ್ ನ್ನು ಚಲಾಯಿಸಿಕೊಂಡು ಬರುತ್ತಿದ್ದನ್ನು ನೋಡಿ ನಿಲ್ಲಿಸಲು ಹೋದಾಗ ಆ ಮೋಟರ್ ಸೈಕಲ್ ನವರು ಸಮವಸ್ತ್ರದಲ್ಲಿದ್ದವರನ್ನು ನೋಡಿ ನಿಲ್ಲಿಸದೇ ಸದರಿ ಮೋಟರ್ ಸೈಕಲ್ ನ್ನು ತಿರುಗಿಸಿಕೊಂಡು ಹೋಗುತ್ತಿದ್ದಾಗ ಬೆನ್ನಟ್ಟಿ ಹಿಡಿದು ಅದರ ಚಾಲಕನಿಗೆ ಮೋಟಾರ್ ಸೈಕಲ್ ನ ದಾಖಲಾತಿಗಳು ಕೊಡುವಂತೆ ಕೇಳಲು ಆತನ ಗಾಬರಿಯಾಗಿ ತೊದಲುತ್ತಾ ಮೋಟಾರ್ ಸೈಕಲ್ ನ ದಾಖಲಾತಿಗಳು ಇರುವುದಿಲ್ಲವೆಂದು ತಿಳಿಸಲು ಈ ಬಗ್ಗೆ ಆತನ ಮೇಲೆ ಸಂಶಯ ಬಂದು ಸದರಿಯವರನ್ನು ಸುತ್ತುವರಿದು ಹೆಸರು ಮತ್ತು ವಿಳಾಸ ವಿಚಾರಿಸಲು ಮೇಲ್ಕಂಡಂತೆ ನುಡಿದಿದ್ದು, ಈತನಿಗೆ ಪಿ.ಎಸ್.ಐ ರವರು ಏಕೆ ಮೋಟರ್ ಸೈಕಲ್ ನ್ನು ನಿಲ್ಲಿಸದೇ ಪರಾರಿಯಾಗುತ್ತಿದ್ದೀರಿ ಎಂದು ಕೂಲಂಕುಶವಾಗಿ ವಿಚಾರಿಸಲು ಲಕ್ಷ್ಮಣ @ ಪುಟ್ಟ ಈತನು ತಾನು ಮತ್ತು ತಾಯಣ್ಣನು ಸೇರಿ ಈಗ್ಗೆ 15 ದಿನಗಳ ಕೆಳಗೆ ಬೆಳಿಗ್ಗೆ 5.00 ಗಂಟೆ ಸುಮಾರಿಗೆ ಬಳ್ಳಾರಿ ನಗರದ ದೊಡ್ಡ ಮಾರ್ಕೆಟ್ ಹತ್ತಿರ ಒಂದು ಹಿರೊ ಹೋಂಡಾ ಡಿಲಕ್ಸ್ ಮೋಟರ್ ಸೈಕಲ್ ನಂ.ಕೆಎ34-ಯು-5608 ನೇದ್ದಕ್ಕೆ ಲಾಕ್ ಮಾಡದೇ ಹಾಗೇ ಬಿಟ್ಟಿದ್ದನ್ನು ಕಂಡು ಸ್ವಲ್ಪ ದಿವಸ ಓಡಾಡಿಸಿ ಯಾರಿಗಾದರೂ ಮಾರಾಟ ಮಾಡೋಣವೆಂದು ಯೋಚಿಸಿ ಸದರಿ ಮೋಟರ್ ಸೈಕಲ್ ನ್ನು ಕಳುವು ಮಾಡಿರುವುದಾಗಿ ನಂತರ ಸದರಿ ಮೋಟರ್ ಸೈಕಲ್ ನ್ನು ಕಂಡು ಹಿಡಿಯಬಾರದೆಂದು ಸದರಿ ಮೋಟರ್ ಸೈಕಲ್ ಡೂಮ್ ತೆಗೆದು, ಅದರ ಹಿಂದಿನ ನಂಬರ್ ಪ್ಲೇಟ್ ತೆಗೆದು, ಮುಂದಿನ ನಂಬರ್ ಪ್ಲೇಟ್ ಮೇಲಿದ್ದ ಕೆಎ34-ಯು-5608 ಎಂದಿರುವುದನ್ನು ಕೆಎ34-ಜೆ-60 ಎಂದು ಮಾಡಿರುವುದಾಗಿ ಹೇಳಿ ಈ ದಿನ ಯಾರಿಗಾದರೂ ಮಾರಾಟ ಮಾಡೋಣವೆಂದು ಹೋಗುತ್ತಿರುವುದಾಗಿ ತಿಳಿಸಿದ್ದರಿಂದ ಪಿ.ಎಸ್.ಐ ರವರು ಕೂಡಲೇ ಸಿಬ್ಬಂದಿಯಿಂದ ಪಂಚರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪಂಚರ ಸಮಕ್ಷಮ ಸದರಿ ಮೋಟರ್ ಸೈಕಲ್ ನ್ನು ಮದ್ಯಾಹ್ನ 12.00 ಗಂಟೆಯಿಂದ 1.00 ಗಂಟೆಯವರೆಗೆ ಜಪ್ತು ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ದ ಕಲಂ:41(ಡಿ)-102 ಸಿ.ಆರ್.ಪಿ.ಸಿ ರೆ/ವಿ 379 ಐ.ಪಿ.ಸಿ ರಿತ್ಯ ಪ್ರಕರಣ ದಾಖಲಿಸಲು ನೀಡಿದ ವಿಶೇಷ ವರದಿ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
2 Cr.No:0219/2015
(IPC 1860 U/s 392 )
25/11/2015 Under Investigation
ROBBERY - Chain Snatching
Brief Facts :  ಫಿರ್ಯಾದಿದಾರರು ಮತ್ತು ಅವರ ಮಗಳು ಶ್ರೀಮತಿ.ಲಕ್ಷ್ಮಿದೇವಿ ರವರು ಮದ್ಯಾಹ್ನ 12.30 ಗಂಟೆ ಸುಮಾರಿಗೆ ಎಸ್.ಬಿ.ಎಂ.ಮೇನ್ ಬ್ರಾಂಚ್ ನಿಂದ ನಗರದ ಹೆಚ್.ಎಲ್.ಸಿ. ಕಾಲೋನಿಯಲ್ಲಿರುವ ತಮ್ಮ ಮನೆಗೆ ಆಟೋದಲ್ಲಿ ಹೋಗಿ ತಮ್ಮ ಕ್ವಾಟ್ರಸ್ ಮುಂದೆ ಮದ್ಯಾಹ್ನ 12.45 ಗಂಟೆ ಸುಮಾರಿಗೆ ಆಟೋ ಇಳಿದು ಫಿರ್ಯಾದಿದಾರರ ಮಗಳು ತಮ್ಮ ಮನೆಯ ಕಾಂಪೌಂಡ್ ನೊಳಗಡೆ ಹೋಗುತ್ತಿದ್ದು,ಈಕೆಯ ಹಿಂದೆಯೇ ಫಿರ್ಯಾದಿದಾರರು ನಿಧಾನವಾಗಿ ಹೋಗುತ್ತಿದ್ದಾಗ ಅಂದಾಜು 30-35 ವಯಸ್ಸಿನ ಒಬ್ಬ ವ್ಯಕ್ತಿಯು ಮೋಟರ್ ಸೈಕಲ್ ನಲ್ಲಿ ಬಂದು ಕೆಳಗೆ ಇಳಿದು ಫಿರ್ಯಾದಿದಾರರಿಗೆ ರಂಗನಾಥರೆಡ್ಡಿ ಯವರ ಮನೆ ಎಲ್ಲಿದೆ ಅಂತ ಕೇಳಲು ಅದಕ್ಕೆ ತಾನು ಇಲ್ಲಿ ಆ ಹೆಸರಿನವರು ಯಾರು ಇಲ್ಲ ಅಂತ ಹೇಳಲು ಆತನು ವಾಪಸ್ಸು ಮುಂದಕ್ಕೆ ಹೋದಂತೆ ಮಾಡಿ ಫಿರ್ಯಾದಿದಾರರು ಮನೆಯ ಕಾಂಪೌಂಡ್ ನೊಳಗಡೆ ಹೋಗುತ್ತಿದ್ದಾಗ ಫಿರ್ಯಾದಿಯ ಹಿಂದಿನಿಂದ ಆ ವ್ಯಕ್ತಿಯು ಬಂದು ಫಿರ್ಯಾದಿಯ ಕೊರಳಲ್ಲಿದ್ದ 1 1/2 ತೊಲೆ ತೂಕದ ಅಂದಾಜು ಬೆಲೆ ರೂ.24,000/-ಗಳ ಬೆಲೆ ಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
Kudligi PS
3 Cr.No:0198/2015
(IPC 1860 U/s 504,324,34 )
25/11/2015 Under Investigation
CASES OF HURT - Simple Hurt
Brief Facts :  ಈ ದಿನ ದಿ.25/11/15 ರಂದು ಮಧ್ಯಾಹ್ನ 3-30 ಗಂಟೆಗೆ ಬೊಮ್ಮಯ್ಯ ತಂದೆ ಲೇಟ್ ಲಕ್ಲಹಳ್ಳಿ ಈರಪ್ಪ 28 ವರ್ಷ, ವಾಲ್ಮೀಕಿ ವ್ಯವಸಾಯ
 ವಾ// ಅಂಕಮನಾಳ್ ಗ್ರಾಮ ಸಂಡೂರು ತಾ. ಇವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಿಂದ ಮಾಡಿಸಿದ ದೂರಿನ ಸಾರಾಂಶವೇನೆಂದರೆ ನಮ್ಮ ಮನೆ ಮತ್ತು ನಮ್ಮೂರಿನ ನಮ್ಮ ಜನಾಂಗದ ಮಲ್ಲಾಪುರದ ಈರಣ್ಣನ ಮಗನಾದ ನಾಗರಾಜನ ಮನೆಯು ಅಕ್ಕಪಕ್ಕದಲ್ಲಿರುತ್ತವೆ. ನಿನ್ನೆಯ ದಿನ ದಿ.24/11/15 ರಂದು ಬೆಳಗ್ಗೆ 7-00 ಗಂಟೆ ಸುಮಾರಿಗೆ ನಾನು ಮತ್ತು  ನಮ್ಮ ಮಾವ ಬಗ್ಗಲು ಮಾರಪ್ಪನ ಮಗನಾದ ಬಸವರಾಜ ಇಬ್ಬರೂ ನಮ್ಮ ಮನೆಯ ಮುಂದೆ ಇದ್ದಾಗ ಪಕ್ಕದ ಮನೆಯ ವಾಸಿಗಳಾದ 1] ಎಂ ನಾಗರಾಜ ತಂದೆ ಮಲ್ಲಾಪುರದ ದೊಡ್ಡೀರಪ್ಪ 37 ವರ್ಷ, ಈತನ ತಮ್ಮ  2] ವೀರೇಶಿ ತಂದೆ ಮಲ್ಲಾಪುರದ ದೊಡ್ಡೀರಪ್ಪ 30 ವರ್ಷ 3] ಎಂ ನಾಗರಾಜನ ಹೆಂಡತಿ ಸಾಕಮ್ಮ 32 ವರ್ಷ  ಈ ಮೂರು ಜನರು ನಮ್ಮ ಮನೆಯ 
ಅಂಗಳಕ್ಕೆ ಬಂದು, ಇಲ್ಲಿ ಯಾವುದೇ ಕಾರಣಕ್ಕೆ ಹೊಲಸು ಮಾಡಬೇಡಿ, ತೊಳೆದಂತಹ ನೀರು ನಮ್ಮ ಮನೆಯ ಮುಂದೆ ಬಂದು ನಮಗೆ ತೊಂದರೆ ಅಗುತ್ತದೆ ಅಂದಾಗ, ಅದಕ್ಕೆ ನಾನಿದ್ದು, ನಮ್ಮ ಮನೆಯ ಮುಂದೆ ಕೈಕಾಲು ಮುಖ ತೊಳೆದರೆ ನಿನಗೇನು ಆಯ್ತು ಅಂದೆನು. ಈ ಪೈಕಿ ಎಂ ನಾಗರಾಜನು ಏ ಸೂಳೆಮಗನೆ, ಬೋಳಿ ಮಗನೆ ನಿಮಗೆ ಯಾವುದೇ ಕಾರಣಕ್ಕೂ ದಾರಿ ಇಲ್ಲಲ್ಲೇ, ಗಂಡು ಮಕ್ಕಳೇ ಆಗಿದ್ರೆ ನಮ್ಮ ಮನೆ ಮುಂದೆ ಅಡ್ಡಾಡ್ರಲೇ ಅಂತಾ ಬೈದಾಗ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಎಂ ನಾಗರಾಜನು ಅಷ್ಟಕ್ಕೆ ಸಿಟ್ಟಾಗಿ ತಡೆ ಸೂಳೆ ಮಗನೇ ಸಮಯಕ್ಕೆ ಸರಿಯಾಗಿ ಸಿಕ್ಕೀಯಾ ಇವತ್ತು ನಿನಗೆ ಸರಿಯಾಗಿ ಮಾಡ್ತಿನಿ ಅಂತಾ ಅಲ್ಲೇ ಇದ್ದಿದ್ದ ಕಟ್ಟಿಗೆಯಿಂದ  ಬಲಮೊಣಕಾಲ ಕೆಳಗೆ, ಎಡಮೊಣಕೈ ಮುಂಭಾಗ ಹೊಡೆದು ಗಾಯಪಡಿಸಿದ. ಬಲಪಕ್ಕೆಗೆ ಅದೇ ಕಟ್ಟಿಗೆಯಿಂದ ಹೊಡೆದು ನೋವು ಪಡಿಸಿದ. ಜಗಳ ಬಿಡಸಲು ಬಂದ ನನ್ನ ತಮ್ಮ ಪರಶುರಾಮನಿಗೆ ವೀರೇಶಿ ಈತನು ಕಲ್ಲಿನಿಂದ ಎಡರೊಂಡಿಗೆ ಗುದ್ದಿ ನೋವು ಪಡಿಸಿದನು. ನನ್ನ ಮಾವನ ಓಬಯ್ಯನಿಗೆ ಎಂ ನಾಗರಾಜನ ಹೆಂಡತಿ ಸಾಕಮ್ಮಳು ಕಲ್ಲಿನಿಂದ ಎಡಗಡೆ ತಲೆಗೆ ಗುದ್ದಿ ರಕ್ತಗಾಪಡಿಸಿದಳು. ನನ್ನ ಇನ್ನೊಬ್ಬ ಭಾವಮೈದುನ ಬಸವರಾಜ ತಂದೆ ಬಗ್ಗಲು ಮಾರಪ್ಪನಿಗೆ  ಎಂ ನಾಗರಾಜನು ಕಟ್ಟಿಗೆಯಿಂದ ಎಡಗಡೆ ಮುಂಭಾಗದ ತಲೆಗೆ ಹೊಡೆದು ರಕ್ತಗಾಪಡಿಸಿದ್ದಲ್ಲದೇ  ಅದೇ ಕಟ್ಟಿಗೆಯಿಂದ ಬಲಗಣ್ಣಿನ ಕೆಳಭಾಗದಲ್ಲಿ ತಿವುದು ನೋವು ಪಡಿಸಿದನು ಮತ್ತು ಕಲ್ಲಿನಿಂದ ಬಲಮೊಣಕೈಗೆ ಗುದ್ದಿದನು. ಅಲ್ಲೇ ಜಗಳ ನೋಡುತ್ತಾ ನಿಂತಿದ್ದ  ನಮ್ಮೂರಿನ 1] ಬಂಡ್ರಿ ಪಾಲಯ್ಯ  2] ಬಗ್ಗಲು ಓಬಣ್ಣ ತಂದೆ ಲೇಟ್ ಓಬಯ್ಯ 33 ವರ್ಷ  3] ಹಿರಾಳ್ ಓಬಯ್ಯ ತಂದೆ ಗುರಯ್ಯ 34 ವರ್ಷ ನನ್ನ ತಾಯಿ 4] ಬಸಮ್ಮ ನನ್ನ ಅತ್ತಿಗೆ 5] ನಿಂಗಮ್ಮ ಗಂಡ  ಪರಶುರಾಮ ಹಾಗೂ ನನ್ನ ಹೆಂಡತಿ 6] ಲಕ್ಷ್ಮಿ ಇಷ್ಟು ಜನ ಸೇರಿ ಜಗಳಬಿಡಿಸಿಕೊಂಡರು. ಗಾಯಗೊಂಡ ನಾನು ಮತ್ತು ನನ್ನ ಮಾವ ಓಬಯ್ಯ ಇಬ್ಬರೂ ನಿನ್ನೆಯ ದಿನ ಕೂಡ್ಲಿಗಿ ಸರಕಾರಿ ಆಸ್ಪತ್ರೆಗೆ ಬಂದು ಡಾಕ್ಟರ್ ಹತ್ತಿರ ತೋರಿಸಿಕೊಂಡಿರುತ್ತೇವೆ. ನನ್ನ ಅಣ್ಣ ಪರಶುರಾಮ, ನನ್ನ ಅಳಿಯ ಬಸವರಾಜ ಇವರಿಬ್ಬರೂ ಸಹ ಈ ದಿನ ಕೂಡ್ಲಿಗಿ ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಬಳಿ ತೋರಿಸಿಕೊಂಡಿರುತ್ತಾರೆ. ಮೇಲ್ಕಂಡ ಮೂರು ಜನರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಿನ್ನೆಯ ದಿನ ನನಗೆ ನೋವಿನ ಬಾದೆ ಹೆಚ್ಚಾಗಿದ್ದು, ತಡೆಯಲಾಗದೇ ಇದ್ದುದಕ್ಕೆ ಮನೆಗೆ ಹೋಗಿ ಸುಧಾರಿಸಿಕೊಂಡು, ಈ ದಿನ ತಡವಾಗಿ ಬಂದು ಈ ದೂರು ಕೊಟ್ಟಿರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಮೇಲ್ಕಂಡ ಕಲಂಗಳ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Moka PS
4 Cr.No:0167/2015
(KARNATAKA MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 73,192(a) ; IPC 1860 U/s 379 )
25/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿನಾಂಕ: 25-11-15 ರಂದು  2-00 ಎ,ಎಸ್ ಐ. ಶ್ರೀ.ರಾಜ್ ಕುಮಾರ್ ಎ ಎಸ್ ಐ ಮೋಕಾ ಪೊಲೀಸ್‌ಠಾಣೆರವರ ಠಾಣೆಗೆ ಬಂದು ಕೊಟ್ಟ  ವಿಶೇಷ ವರದಿ ಏನಂದರೇ, ಈ ದಿನ ದಿ:೨೪-೧೧-೧೫ ರಂದು  ರಾತ್ರಿ ೧೧ ಗಂಟೆಗೆ  ನಾನು ವಿಶೇಷ ರಾತ್ರಿ ಗಸ್ತು ಕರ್ತವ್ಯ  ಮೋಕಾ ಗ್ರಾಮದಲ್ಲಿ ಮಾಡುತ್ತಿರುವಾಗ ನನಗೆ ರಾತ್ರಿ ೧೧-೩೦ ಗಂಟೆಗೆ ಗೋಟೂರು ಗ್ರಾಮದ ವೇದಾವತಿ ಹಗರಿಯಲ್ಲಿ ಅಕ್ರಮವಾಗಿ ೦೫ ಟ್ರಾಕ್ಟರ್ ಟ್ರಾಲಿಗಳಲ್ಲಿ  ಮರಳು ತುಂಬಿಕೊಂಡು ಜಾಲಿಬೆಂಚಿ ಕ್ರಾಸ್ ಮುಖಾಂತರ ಹೋಗುತ್ತವೆ ಅಂತ ಖಚಿತವಾದ ಮಾಹಿತಿ ಬಂದಾಗ ನಾನು ಕೊಡಲೆ ಎನ್.ಆರ್.ಸಿ. ಕರ್ತವ್ಯ ಮಾಡುತ್ತಿದ್ದ ಹೆಚ್.ಸಿ.೩೫೧ ಮತ್ತು ಮೋಕಾ ಗ್ರಾಮದಲ್ಲಿ ರಾತ್ರಿ ಗಸ್ತು ಕರ್ತವ್ಯ ಮಾಡುತ್ತಿದ್ದ  ಹೆಚ್.ಸಿ.೩೨೫ ಪಿಸಿ೧೮೭ರವರನ್ನು  ಮತ್ತು  ಪಿಸಿಸ್ ೧೭೫-೨೬೩ ರವರ  ಇವರನ್ನು ಕರೆಯಿಸಿಕೊಂಡು ಇವರಿಗೆ ವಿಷಯ ತಿಳಿಸಿ ನಮ್ಮ ನಮ್ಮ ಖಾಸಗಿ ಮೋಟಾರ್ ಸೈಕಲ್‌ನಲ್ಲಿ ಹೊರಟು ಹೊಸ ಮೋಕಾದಲ್ಲಿದ್ದ ಇಬ್ಬರು ಪಂಚರನ್ನು ಬರಮಾಡಿಕೊಂಡು ವಿಷಯ ತಿಳಿಸಿ ಸದ್ರಿ ದಾಳಿಗೆ ಪಂಚರಾಗಿ ವಿವರವಾದ ಪಂಚನಾಮೆ ಬರೆಯಿಸಿಕೊಂಡು ತಿಳಿಸಿ ಕೇಳಿಕೊಂಡು ಇಬ್ಬರು ಪಂಚರಾಗಲು ಒಪ್ಪಿಕೊಂಡರು.
 ನಂತರ ನಾನು ಮತ್ತು ನನ್ನ ಸಿಬ್ಬಂದಿ ಮತ್ತು ಪಂಚರೊಂದಿಗೆ ನಮ್ಮ ನಮ್ಮ ಮೋಟಾರ್ ಸೈಕಲ್‌ನಲ್ಲಿ ರಾತ್ರಿ ೧೧-೪೫ ಗಂಟೆಗೆ ಮೋಕಾ ಗ್ರಾಮವನ್ನು ಬಿಟ್ಟು  ವಾಸುದೇವ ಕ್ಯಾಂಪ್  ಹತ್ತಿರ ದಿ:೨೫-೧೧-೧೫ ರಂದು ೦೦-೧೫ ಗಂಟೆಗೆ  ಹೋಗಿ ನೋಡಲು ಕಾಲುವೆಯ ಬಳಿ ಮೋಕಾ ಜಾಲಿಬೆಂಚಿ  ಹೋಗುವ ರಸ್ತೆಯಲ್ಲಿ ೦೫ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಗಳು  ಹೋಗುತ್ತಿದ್ದು ರಾತ್ರಿ ೦೦-೩೦ ಗಂಟೆಗೆ ನಾನು ಮತ್ತ ನನ್ನ ಸಿಬ್ಬಂದಿಯೊಂದಿಗೆ ಪಂಚರೊಂದಿಗೆ ದಾಳಿ ಮಾಡಲು  ೦೫ ಜನ ಟ್ರಾಕ್ಟರ್ ಟ್ರಾಲಿಯ ಚಾಲಕರು ತಮ್ಮ ಟ್ರಾಕ್ಟರ್ ಟ್ರಾಲಿಗಳನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಗಿರುತ್ತಾರೆ.
       ಜಾಲಿಬೆಂಚಿ  ಗ್ರಾಮದ ವಾಸಿ ಗದ್ದೆ ನೀರು ಕಟ್ಟು ಬಂದಿದ್ದು  ನಮಗೆ ಪರಿಚಯವಿದ್ದು ಸಾಕ್ಷಿದಾರರಾದ ಜಾಲಿಬೆಂಚಿ ಹೊನ್ನರಪ್ಪ ತಂದೆ ಈರಣ್ಣ ವ:೪೦ವರ್ಷ (ಹರಿಜನ) ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ವಾಸ: ಜಾಲಿಬೆಂಚಿ ಗ್ರಾಮದವರಿಗೆ  ಓಡಿ ಹೋದ ಟ್ರಾಕ್ಟರ್ ಟ್ರಾಲಿ ಚಾಲಕ 
ಮತ್ತು ಮಾಲಿಕರ  ಹೆಸರು ವಿಚಾರಿಸಲು
೧)ಟ್ರಾಕ್ಟರ್ ನಂ: ಕೆಎ:೩೪:ಟಿ:೨೫೧೦ ಮತ್ತು ಟ್ರಾಲಿಗೆ ರಿಜಿಷ್ಟ್ರರ್ ಇರುವುದಿಲ್ಲ ಇದರ ಮಾಲಿಕನ ಹೆಸರು ಮಲ್ಲೇಶಪ್ಪ ಮತ್ತು ಚಾಲಕನ ಹೆಸರು ಬಸವ ವಾಸ: ಗೋಟೂರು ಗ್ರಾಮ
೨)ಟ್ರಾಕ್ಟರ್ ಕೆ;ಎ:೩೪;ಟಿ:೮೧೭೪ ಮತ್ತು ಟ್ರಾಲಿ ಚಾಸಿ ನಂ: MG/ TT/ 594/A09  ಅಂತ ಇರುತ್ತದೆ. ಇದರ  ಟ್ರಾಕ್ಟರ್ ಮಾಲಿಕನ & ಚಾಲಕ ಹೆಸರು ಸೀತಾಪ್ಪ   ತಂದೆ ಲಿಂಗಪ್ಪ ವಾಸ: ಗೋಟೂರು ಗ್ರಾಮ
೩)ಟ್ರಾಕ್ಟರ್ ನಂ:ಕೆಎ:೩೪:ಟಿ:೩೧೫೪  ಮತ್ತು ಟ್ರಾಲಿಗೆ ರಿಜಿಷ್ಟ್ರರ್ ಇರುವುದಿಲ್ಲ ಇದರ ಮಾಲಿಕನ ಹೆಸರು ಜಿ.ತಿಮ್ಮಪ್ಪ ತಂದೆ ಅಯ್ಯನಗೌಡ ಮತ್ತು ಚಾಲಕನ ಹೆಸರು ಬಸವರಾಜ್ ತಂದೆ ಜಿ.ತಿಮ್ಮಪ್ಪ ವಾಸ: ಗೋಟೂರು ಗ್ರಾಮ
೪)ಟ್ರಾಕ್ಟರ್ ನಂ: ಕೆಎ:೩೪:ಟಿ:೭೩೯೯ ಮತ್ತು ಟ್ರಾಲಿಗೆ ರಿಜಿಷ್ಟ್ರರ್ ನಂ:ಕೆ:ಎ:೩೪:ಟಿ:೭೪೦೦ ಇದರ ಮಾಲಿಕನ ಮತ್ತು ಚಾಲಕನ ಹೆಸರು ವೀರಭದ್ರಪ್ಪ ತಂದೆ ಸಣ್ಣ ಗಂಗಪ್ಪ  ವಾಸ: ಗೋಟೂರು ಗ್ರಾಮ
೫)ಟ್ರಾಕ್ಟರ್ ರಿಜಿಷ್ಟರ್ ನಂಬರ ಇರುವುದಿಲ್ಲ ಇಂಜಿನಿ ನಂ:PY3029D297661 CHASIS NO:PY5042DKBA000288 ಮತ್ತು ಟ್ರಾಲಿಗೆ ರಿಜಿಷ್ಟ್ರರ್ ನಂ:ಕೆ:ಎ:೩೪:ಎಂ:೬೪೩ ಅಂತ ಇರುತ್ತದೆ. ಇದರ ಮಾಲಿಕರ ಮತ್ತು ಚಾಲಕ ಹೆಸರು ಎಂ.ದ್ಯಾವಪ್ಪ ವಾಸ: ಗೋಟೂರು ಗ್ರಾಮ ಅಂತ ತಿಳಿಸಿದರು.
  ಸದ್ರಿ ಸಾಕ್ಷಿದಾರರಿಗೆ  ಈ  ಮರಳನ್ನು ಎಲ್ಲಿ ತುಂಬಿದ್ದು ಅಂತ ವಿಚಾರಿಸಲು  ಮೇಲ್ಕಂಡ ಲಾರಿಗಳಲ್ಲಿ  ರಾತ್ರಿ ೯ ಗಂಟೆಯಿಂದ ರಾತ್ರಿ ೧೦ಗಂಟೆಯವರೆಗೆ  ಗೋಟೂರು ಗ್ರಾಮದ ವೇದಾವತಿ ಹಗರಿಯಲ್ಲಿ  ಮರಳನ್ನು ತುಂಬಿರುತ್ತಾರೆ  ಅಂತ ತಿಳಿಸಿದನು ಕಾರಣ ಮೇಲ್ಕಂಡ ಟ್ರಕ್ಟರ ಟ್ರಾಲಿಗಳು ಚಾಲಕ & ಮಾಲಿಕರು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಗೋಟೂರು ಹಗರಿ ನದಿಯಲ್ಲಿನ ಸರ್ಕಾರಿ ಜಮೀನಿನಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ     ಟ್ರಕ್ಟರ ಟ್ರಾಲಿ ಗಳು ತುಂಬಿಕೊಂಡು ಸಾಗಿಸುತ್ತಿದ್ದ ಮೇಲ್ಕಂಡ  ಮಾಲಿಕರ ಮತ್ತು ಚಾಲಕರವರ  ವಿರುದ್ಧ  ಕಾನೂನು ಕ್ರಮ ಜರುಗಿಸಲು  ಎ ಎಸ್ ಐ (ಆರ್ ) ರವರು  ಕೊಟ್ಟ ಠಾಣೆಗೆ ಬಂದು ರಾತ್ರಿ 2 ಗಂಟೆಗೆ ಬಂದು ಕೊಟ್ಟ ವಿಶೇಷ ವರದಿಯನ್ನು ನಾನು ಪಡೆದುಕೊಂಡು ಮೇಲ್ಕಂಡ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
P.D. Halli PS
5 Cr.No:0067/2015
(MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21(1) ; IPC 1860 U/s 379 )
25/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ 25/11/2015 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀ ಚಿದಾನಂದ ಎಂ.ಗದಗ್ ರವರು ಠಾಣೆಗೆ ಹಾಜರಾಗಿ ನೀಡಿದ ವಿಶೇಷ ವರದಿಯನ್ನು ನೋಡಲಾಗಿ ದಿನಾಂಕ 25/11/2015 ರಂದು ಬೆಳಿಗ್ಗೆ 10-30 ಗಂಟೆಗೆ ರೂಪನಗುಡಿ ಗ್ರಾಮದ ಹಗರಿ ನದಿ ದಂಡೆಯ ಮೇಲೆ  ಟ್ರಾಕ್ಟರ್ ಮತ್ತು ಟ್ರಾಲಿಯಲ್ಲಿದ್ದ ಮರಳನ್ನು ಚಾಲಕರು ಮತ್ತು ಮಾಲಿಕರು ಆಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಪಿ.ಎಸ್.ಐ ಸಿಬ್ಬಂದಿಯವರು ಟ್ರಾಕ್ಟರ್ ಯನ್ನು ನಿಲ್ಲಿಸಿ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಹೊನ್ನೂರ ತಂದೆ ಹೊನ್ನೂರಪ್ಪ ಟ್ರಾಕ್ಟರ್ ನಂ ಕೆ.ಎ.34/ಟಿಎ-0494 ಹಾಗು ಟ್ರಾಲಿ ನಂ ಕೆಎ 34/ಟಿಎ-0495 ನೇದ್ದರ ಚಾಲಕ ವಾಸ: ಚಳ್ಳಗುರ್ಕಿ ಗ್ರಾಮ ಅಂತಾ ತಿಳಿಸಿದ್ದು ಹಾಗು ಟ್ರಾಕ್ಟರ್ ನಲ್ಲಿದ್ದ ಸುಮಾರು ಒಂದು ಟನ್ ಮರಳು ಅಂದಾಜು  ರೂ 1000/- ರೂಗಳಾಗಬಹುದೆಂದು  ಟ್ರಾಕ್ಟರ್ ಮತ್ತು ಟ್ರಾಲಿ ಚಾಲಕ ಹೊನ್ನೂರ ನೊಂದಿಗೆ ಠಾಣೆಗೆ ಬಂದು ಚಾಲಕ ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ