ಗುರುವಾರ, ನವೆಂಬರ್ 26, 2015

PRESS NOTE OF 26/11/2015

Crime Key Report From   To   
Sl. No FIR No FIR Date Crime Group - Crime Head Stage of case
Gandhinagar PS
1 Cr.No:0247/2015
(IPC 1860 U/s 324 )
26/11/2015 Under Investigation
CASES OF HURT - Simple Hurt
Brief Facts :  ದಿನಾಂಕ:25.11.2015 ರಂದು ಮಧ್ಯಾಹ್ನ 01.45 ಗಂಟೆ ಸುಮಾರಿಗೆ ಫಿರ್ಯಾಧಿದಾರರು ಮನೆಯಲ್ಲಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ಫಿರ್ಯಾಧಿದಾರಿಗೆ ಲಗ್ನಪತ್ರಿಕೆಯನ್ನು ಕೊಡುವುದಾಗಿ ಹೇಳಿ ಮನೆಯ ಒಳಗಡೆ ಹೋಗಿ ಫಿರ್ಯಾಧಿದಾರರಿಗೆ ನೀರು ಕೊಡಿ ಅಂತಾ ಕೇಳುತ್ತ ಆರೋಪಿತನು ತನ್ನ ಬ್ಯಾಗ್ ನಲ್ಲಿದ್ದ ಕಬ್ಬಿಣದ ರಾಡಿನಿಂದ ಏಕಾಏಕಿ ಫಿರ್ಯಾಧಿದಾರರ ತೆಲೆಗೆ 03 ಬಾರಿ ಹೊಡೆದು ರಕ್ತಗಾಯಪಡಿಸಿದ್ದು, ಸದರಿಯವನನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ
Hirehadagali PS
2 Cr.No:0196/2015
(IPC 1860 U/s 379 )
26/11/2015 Under Investigation
THEFT - Of Automobiles - Of Two Wheelers
Brief Facts :  ಫಿರ್ಯಾದಿದಾರರಿಗೆ ಕಳಸಾಪುರ ಗ್ರಾಮದ ಹತ್ತಿರ ಸುಮಾರು 20 ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಅವರ ವಾಸದ ಮನೆ ಇದ್ದು, ಈ ಹಿಂದೆ ಅವರ ಜಮೀನಿನಲ್ಲಿ ಕೆಲಸ ಮಾಡಿ ಹೋಗಿದ್ದ ಸೊಂಡೂರು ತಾಲೂಕು ಬಂಡ್ರಿ ಗ್ರಾಮದ ಆರೋಪಿ ಚಿತ್ತಪ್ಪನು ದಿನಾಂಕ21-11-2015 ರಂದು ಮತ್ತೆ ಫಿರ್ಯಾದಿದಾರರ ಹೊಲದಲ್ಲಿ ಕೆಲಸ ಮಾಡಲು ಬಂದವನು ಅವರ ಮನೆಯಲ್ಲಿಯೇ ವಾಸವಿದ್ದು, ದಿನಾಂಕ 24-11-2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 25-11-2015 ರಂದು ಬೆಳಿಗ್ಗೆ 4 ಎ.ಎಂ. ಮಧ್ಯ ಅವಧಿಯಲ್ಲಿ ಆರೋಪಿಯು ಫಿರ್ಯಾದಿದಾರರ ಮನೆಯ ಮುಂದೆ ನಿಲ್ಲಿಸಿದ್ದ, ಫಿರ್ಯಾದಿದಾರರ ಹಿರೋ ಕಂಪನಿಯ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂ. ಕೆ.ಎ-35 ಎಕ್ಸ-0906 ಅಂದಾಜು ಬೆಲೆ ರೂ. 25000/- ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಚಿತ್ತಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ.
Kottur PS
3 Cr.No:0172/2015
(IPC 1860 U/s 279,337,338 ; INDIAN MOTOR VEHICLES ACT, 1988 U/s 183 )
26/11/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ದಿನಾಂಕ 26-11-15 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಸ್ವೀಕರಿಸಿ ನೋಡಲಾಗಿ, ದಿನಾಂಕ 24-11-2015 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದಿ ತನ್ನ ಮೋಟಾರ್ ಸೈಕಲ್ ನಂ ಕೆಎ17ಎಹೆಚ್3809 ನೇದ್ದರಲ್ಲಿ ಹಿಂದುಗಡೆ ತಿಪ್ಪೇಸ್ವಾಮಿ ಎಂಬುವರನ್ನು ಕೂರಿಸಿಕೊಂಡು ಕೊಟ್ಟೂರಿನಿಂದ ಬಸವನಕೋಟೆಗೆ ಹೋಗುತ್ತಿರುವಾಗ್ಗೆ ಕೊಟ್ಟೂರು-ಹರಪನಹಳ್ಳಿ ರಸ್ತೆಯ ಮೇಲೆ ಹಗರಿ ಗಜಪುರ ಬ್ರೀಡ್ಜ್ ಮತ್ತು ಮತ್ತಿಹಳ್ಳಿ ಕ್ರಾಸ್ ಮಧ್ಯೆ ಮತ್ತಿಹಳ್ಳಿ ಕ್ರಾಸ್ ಕಡೆಯಿಂದ ಹೊಸ ಹೊಂಡಾ ಸೈನ್ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ ನ್ನು ಅತೀವೇಗ ಮತ್ತು ಅಜಾಗೃಕತೆಯಿಂದ ನಡೆಸಿಕೊಂಡು ಬಂದು ಪಿರ್ಯಾದಿಯ ಮೋಟಾರ್ ಸೈಕಲ್ ನ ಬಲಭಾಗದ ಪುಟ್ ರೇಸ್ಟ್ ಮತ್ತು ಬ್ರೇಕ್ ಹತ್ತಿರ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ತನಗೂ ಮತ್ತು ಹಿಂದೆ ಕುಳಿತಿದ್ದ ತಿಪ್ಪೇಸ್ವಾಮಿಗೆ ಬಲಕಾಲುಗಳಿಗೆ ರಕ್ತಗಾಯ ಒಳಪೆಟ್ಟು ಆಗಿದ್ದಲ್ಲದೇ ಅಪಘಾತ ಪಡಿಸಿದ ವ್ಯಕ್ತಿ ಮಂಜು ತಂದೆ ಮೈಲಾಪ್ಪ ಹರಿಜನ ವಾಸ ಕೊಟ್ಟೂರು ಇವರಿಗೂ ಸಹ ತಲೆಗೆ ಹಾಗೂ ಇತರೆ ಕಡೆಗಳಲ್ಲಿ ರಕ್ತಗಾಯಗಳಾಗಿದ್ದು ಇಲ್ಲಿಯವರೆಗೆ ದಾವಣಗೇರಿಯ ಸಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ದಿನಾಂಕ 26-11-15 ರಂದು ಬೆಳಗ್ಗೆ 11-00 ಗಂಟೆಗೆ ಠಾಣೆಗೆ ಬಂದು ಲಿಖಿತ ದೂರು ಮೂಲಕ ಕ್ರಮ ಜರುಗಿಸಲು ಇದ್ದ ದೂರು ಮೇರೆಗೆ ಮೇಲ್ಕಂಡ ಕಲಂ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Kurugod PS
4 Cr.No:0192/2015
(CODE OF CRIMINAL PROCEDURE, 1973 U/s 110(E)(G) )
26/11/2015 Under Investigation
CrPC - Security For Good Behaviour (Sec 110)
Brief Facts :  ಆರೋಪಿತನು ಪದೇ ಪದೇ ಮಟ್ಕಾ ಜೂಜಾಟ ನಡೆಸಿ ಅಪರಾಧ ಮಾಡದಂತೆ ಪ್ರತಿಬಂದಿಸುವುದಕ್ಕಾಗಿ ಮತ್ತು ಕಾನೂನು ಬಾಹಿರ ಕೆಲಸ ಮಾಡುವುದನ್ನು ತಪ್ಪಿಸಲು ಸದುದ್ದೇಶದಿಂದ ಪ್ರಕರಣ ದಾಖಲಿಸಿದೆ.
Moka PS
5 Cr.No:0169/2015
(IPC 1860 U/s 379 ; KARNATAKA MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 73,192(a) )
26/11/2015 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ಈ ದಿನ ದಿ:26-11-15 ರಂದು ಮದ್ಯಾಹ್ನ 1 ಗಂಟೆಗೆ ಶ್ರೀ. ಎಂ.ಶಕ್ಷಾವಲಿ ಹೆಚ್.ಸಿ.೮೩ ಮೋಕಾ ಪೊಲೀಸ್ ಠಾಣೆಯ ರವರು ಠಾಣೆಗೆ ಬಂದು ತಮ್ಮ ವಿಶೇಷ ವರದಿ ನೀಡಿದ್ದು ಏನಂದರೇ, ಈ ದಿನ ದಿ:೨೬-೧೧-೧೫ ರಂದು  ಬೆಳಿಗ್ಗೆ  ೧೦-೧೫ ಗಂಟೆಗೆ ಎ.ಎಸ್.ಐ. ಶ್ರೀ ಅಬ್ದುಲ್ ಗಪೋರ್ ರವರಿಗೆ ಕೆ.ಕೆ.ಹಾಳ್ ಗ್ರಾಮದ ವೇದಾವತಿ ಹಗರಿಯಲ್ಲಿ ಒಂದು ಟ್ರಾಕ್ಟರ್ ಟ್ರಾಲಿಯಲ್ಲಿ  ಚಾಲಕ ಅಕ್ರಮವಾಗಿ ಮರಳನ್ನು  ತುಂಬಿಕೊಳ್ಳು ತ್ತಿದ್ದಾನೆ ಅಂತ ಖಚಿತವಾದ ಮಾಹಿತಿ  ಬಂದಿದ್ದರಿಂದ ನನಗೆ ಪಿಸಿ ೧೮೭ ಇಬ್ಬರನ್ನು ದಾಳಿ ಮಾಡಿ ಟ್ರಾಕ್ಟರ್ ಟ್ರಾಲಿಯನ್ನು  ತರಲು ನಮಗೆ ಆಧೇಶಸಿದ್ದರಿಂದ ನಾನು ಮತ್ತು ಪಿಸಿ೧೮೭ರವರೊಂದಿಗೆ ಬೆಳಿಗ್ಗೆ ೧೦-೩೦ ಗಂಟೆಗೆ ನನ್ನ ಸ್ವಂತ ಮೋಟಾರ್ ಸೈಕಲ್‌ನಲ್ಲಿ ಹೊರಟು ಕೆ.ಕೆ.ಹಾಳ್ ಗ್ರಾಮಕ್ಕೆ  ಬೆಳಿಗ್ಗೆ ೧೦-೪೫ ಗಂಟೆಗೆ ಹೋಗಿ ಇಬ್ಬರು ಪಂಚರನ್ನು ಬರಮಾಡಿಕೊಂಡು  ವಿಷಯ ತಿಳಿಸಿ ಸದ್ರಿ ದಾಳಿಗೆ ಪಂಚರಾಗಿ ವಿವರವಾದ ಪಂಚನಾಮೆ ಬರೆಯಿಸಿಕೊಂಡು ತಿಳಿಸಿ ಕೇಳಿಕೊಂಡು ಇಬ್ಬರು ಪಂಚರಾಗಲು ಒಪ್ಪಿಕೊಂಡರು.
 ನಂತರ ನಾನು ಪಿಸಿ೧೮೭ ಮತ್ತು ಪಂಚರೊಂದಿಗೆ ನಮ್ಮ ನಮ್ಮ ಮೋಟಾರ್ ಸೈಕಲ್‌ನಲ್ಲಿ ಬೆಳ್ಳಿಗೆ ೧೧-೦೦ ಗಂಟೆಗೆ  ಹಗರಿಯಲ್ಲಿ  ಹೋಗಿ  ನೋಡಲು  ಟ್ರಾಕ್ಟರ್ ಟ್ರಾಲಿಯಲ್ಲಿ ಚಾಲಕನು ಮರಳನ್ನು ಅಕ್ರಮವಾಗಿ ತುಂಬುತ್ತಿದ್ದನು ಆಗ ನಾನು  ಪಂಚರ ಸಮಕ್ಷಮ ಬೆಳಿಗ್ಗೆ ೧೧-೧೫ ಗಂಟೆಗೆ ದಾಳಿ ಮಾಡಲು ಟ್ರಾಕ್ಟರ್ ಟ್ರಾಲಿ ಚಾಲಕನು ಮರಳು ಬಿದ್ದ ಟ್ರಾಕ್ಟರ್ ಟ್ರಾಲಿಯನ್ನು ಹಗರಿಯಲ್ಲಿ ಬಿಟ್ಟು  ಬಿಟ್ಟು ಪರಾರಿಯಗಿರುತ್ತಾರೆ.
             ಕೆ.ಕೆ.ಹಾಳ್ ಗ್ರಾಮದ  ಹಗರಿಯಲ್ಲಿದ್ದ ರಮೇಶ ತಂದೆ ದುರ್ಗಪ್ಪ ವ:೨೨ವರ್ಷ ಹರಿಜನ ಜನಾಂಗ, ಚಾಲಕ ಕೆಲಸ ವಾಸ:  ೭ನೇವಾರ್ಡ ಸಂಗನಕಲ್ಲು ಗ್ರಾಮದವರಿಗೆ  ಓಡಿ ಹೋದ ಟ್ರಾಕ್ಟರ್ ಟ್ರಾಲಿ ಚಾಲಕ ಮತ್ತು ಮಾಲಿಕರ  ಹೆಸರು ವಿಚಾರಿಸಲು ಬ್ರಹ್ಮಯ್ಯ ತಂದೆ ಈರಣ್ಣ  ವ:೪೦ವರ್ಷ ಟ್ರಾಕ್ಟರ್ ನಂ:ಕೆ:ಎ:೩೪:ಟಿ:೯೬೨೯ ಟ್ರಾಲಿ ನಂ:ಕೆಎ:೩೪:ಟಿ:೯೬೩೦ ನೇದ್ದರ ಮಾಲಿಕರು ವಾಸ: ಶಿವಪುರ ಗ್ರಾಮ ಅಂತ ತಿಳಿಸಿದನು.
    ಸದ್ರಿ ಸಾಕ್ಷಿದಾರರಿಗೆ  ಈ  ಮರಳನ್ನು ಎಲ್ಲಿ ತುಂಬಿದ್ದು ಅಂತ ವಿಚಾರಿಸಲು  ಮೇಲ್ಕಂಡ ಟ್ರಾಕ್ಟರ್ ಟ್ರಾಲಿಚಾಲಕನು ಬೆಳಿಗ್ಗೆ ೦೯ ಗಂಟೆಯಿಂದ ಬೆಳಿಗ್ಗೆ ೧೦ಗಂಟೆಯವರೆಗೆ  ಕೆ.ಕೆ.ಹಾಳ್ ಗ್ರಾಮದ ವೇದಾವತಿ ಹಗರಿಯಲ್ಲಿ  ಮರಳನ್ನು ತುಂಬಿರುತ್ತಾರೆ  ಅಂತ ತಿಳಿಸಿದನು.
ಈ ಪಂಚನಾಮೆಯನ್ನು ದಿ:೨೫-೧೧-೧೫ ರಂದು ಬೆಳಿಗ್ಗೆ ೧೧-೩೦ ಎ.ಎಂ. ಗಂಟೆಯಿಂದ ಮದ್ಯಾಹ್ನ ೧೨-೩೦ ಪಿ.ಎಂ.ಗಂಟೆಗೆಯವರೆಗೆ ಟ್ರಾಕ್ಟರ್ ಟ್ರಾಲಿ ಸಿಕ್ಕ ಸ್ಥಳದಲ್ಲಿ  ಮತ್ತು ಜಪ್ತು ಪಂಚನಾಮೆ ಮಾಡಿಕೊಂಡಿದೆ. ಮೇಲ್ಕಂಡ ಟ್ರಾಕ್ಟರ ಟ್ರಾಲಿ ಚಾಲಕ ಮತ್ತು ಮಾಲಿಕ ಯಾವುದೇ ಪರ್ಮಿಟ್ ಇಲ್ಲದೇ ಅನಧಿಕೃತವಾಗಿ  ಮರಳನ್ನು ಅಕ್ರಮವಾಗಿ ಚಾಲಾಯಿಸಿಕೊಂಡು ಹಣಕ್ಕೆ ಮರಳ ಮಾಡುತ್ತಿದ್ದ ಮೇಲ್ಕಂಡ ಟ್ರಾಕ್ಟರ್ ಟ್ರಾಲಿ ಮಾಲಿಕ & ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ನಾನು ಮದ್ಯಾಹ್ನ 1 ಗಂಟೆಗೆ ಠಾಣೆಗೆ ಬಂದು ನನ್ನ ವಿಶೇಷ ವರದಿಯನ್ನು ಠಾಣಾಧಿಕಾರಿಗಳಾದ ಶ್ರೀ ಅಬ್ದುಲ್ ಗಫೋರ್ ಎ ಎಸ್ ಐ ರವರಿಗೆ ನೀಡಿರುತ್ತೇನೆ.
Siruguppa PS
6 Cr.No:0246/2015
(IPC 1860 U/s 379 )
26/11/2015 Under Investigation
THEFT - Of Automobiles - Of Two Wheelers
Brief Facts :  ಪಿಯರ್ಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆಂದರೆ, ದಿನಾಂಕ 22/11/215 ರಂದು ನನ್ನ ಕೆಲಸದ ನಿಮಿತ್ತ ಕುರುಗೋಡಿಗೆ ಹೋಗಬೇಕಾಗಿದ್ದು ಮದ್ಯಾಹ್ನ 2-30 ಪಿ.ಎಮ್ ಗಂಟೆ ಸುಮಾರಿಗೆ ನನ್ನ ಕಪ್ಪು ಮತ್ತು ನೀಲಿ ಬಣ್ಣದ ಮಿಶ್ರಿತ ಹಿರೋ ಹೊಂಡ ಸ್ಪೆಂಡರ್ ಪ್ಲಸ್ ಟಿ.ಪಿ ನಂ ಕೆ.ಎ 34  2895  ಇಂಜಿನ್ ನಂ HA10EA8G07448 ಚಾಸ್ಸೀಸ್ ನಂ MBLHA10EJ8GE06898 ನೇದ್ದು 
ಇದ್ದು ಸದರಿ ಮೋಟಾರು ಸೈಕಲನ್ನು ಬಳ್ಳಾರಿ ರಸ್ತೆಯ ಹಳೆ ಪತಂಗೆ ಪೆಟ್ರೋಲ್ ಬಂಕ್ ಹತ್ತಿರ ಇರುವ ಬೇಕರಿ ಮುಂದೆ ಹ್ಯಾಂಡ್ ಲಾಕ್ ಮಾಡಿಕೊಂಡು ನಿಲ್ಲಿಸಿ ನನ್ನ ಪ್ರೆಂಡ್ ಪಾಂಡುರಂಗರೆಡ್ಡಿ ಜೊತೆ ಕಾರಿನಲ್ಲಿ ಕೆಲಸದ ನಿಮಿತ್ತ ಕುರುಗೋಡು ಹೋಗಿ ಕೆಲಸ ಮುಗಿಸಿಕೊಂಡು  ಅದೇ ದಿನ ರಾತ್ರಿ 8-00 ಗಂಟೆಗೆ ಬಂದು ನೋಡಲು ಬೇಕರಿ ಮುಂದೆ ನಿಲ್ಲಸಿದ ಮೋಟಾರು ಸೈಕಲ್ ಕಾಣಲಿಲ್ಲ ನಾನು ಅಲ್ಲಲ್ಲಿ ಹುಡುಕಾಡಿದೆ. ಸಿಗಲಿಲ್ಲ ಅಲ್ಲಿಂದ ಇಲ್ಲಿಯವರಿಗೂ ಹುಡುಕಾಡಿದರೂ  ನನ್ನ ಮೋಟಾರು ಸಿಕ್ಕಿಕರುವುದಿಲ್ಲ.ಅಂದಾಜು ಬೆಲೆ ರೂ 30000/- ಬೆಲೆ ಬಾಳುವ ಮೋಟಾರು ಸೈಕಲನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ಮೋಟಾರು ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರುನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
T.B. Halli PS
7 Cr.No:0047/2015
(CODE OF CRIMINAL PROCEDURE, 1973 U/s 110(E)(G) )
26/11/2015 Under Investigation
CrPC - Security For Good Behaviour (Sec 110)
Brief Facts :  ದಿನಾಂಕ 26-11-2015 ರಂದು ಬೆಳಗ್ಗೆ 10-00 ಗಂಟೆಗೆ ತಂಬ್ರಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಜಿ.ಕೋಡಿಹಳ್ಳಿ, ಏಣಿಗಿ ಬಸಾಪುರ, ಹಂಪಸಾಗರ-1 & 2  ಗ್ರಾಮಗಳಿಗೆ ಭೇಟಿ ನೀಡಿ ಬೆಳಗ್ಗೆ 10-30 ಗಂಟೆಗೆ ಭೀತ್ಯಾನ್ತಾಂಡಕ್ಕೆ ಭೇಟಿ ನೀಡಿ ಬಾತ್ಮಿದಾರರನ್ನು ಕಂಡು ಮಾಹಿತಿ ಸಂಗ್ರಹಿಸಲು ಈ ಗ್ರಾಮದ 1) ಮಂಜುನಾಯ್ಕ ತಂದೆ ಮುಕುಡ ಚಂದ್ಯಾನಾಯ್ಕ, 26 ವರ್ಷ, ಲಂಬಾಣಿ ಜನಾಂಗ ಈತನು ತಾಂಡದಲ್ಲಿ ಮತ್ತು ಸುತ್ತು-ಮುತ್ತ ಗ್ರಾಮಗಳಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡುವ ಮತ್ತು ಆಸ್ತಿ-ಪಾಸ್ತಿಗೆ ಧಕ್ಕೆಯನ್ನುಂಟು ಮಾಡುವ ಮತ್ತು ಗೂಂಡಾಗಿರಿ ಪ್ರವೃತ್ತಿವುಳ್ಳವನಾಗಿದ್ದು ಸಾರ್ವಜನಿಕರ ಎದುರಿಗೆ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಪ್ರವೃತ್ತಿವುಳ್ಳವನಾಗಿದ್ದು ದಿನಾಂಕ : 29-04-2014 ರಂದು ಈತನು ತನ್ನ ಸಹಚರರೊಂದಿಗೆ ಸೇರಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕೆ ಠಾಣಾ ಗುನ್ನೆ ನಂ. 18/2014 ಕಲಂ. 353,504,332,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿದ್ದು ಹಾಗೂ ಈತನ ಚಟುವಟಿಕೆಯ ಮೇಲೆ ನಿಗಾವಣೆ ಇಡಲು ದಿನಾಂಕ: 15-07-2014 ರಂದು ರೌಡಿಶೀಟ್ ನ್ನು ತೆರೆಯಲಾಗಿದ್ದರೂ ಸಹ ಈತನು ತನ್ನ ಗುಂಡಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ತಿಳಿದ ಮೇರೆಗೆ ಆರೋಪಿಯನ್ನು ಠಾಣೆಗೆ ಮದ್ಯಾಹ್ನ 12-30 ಗಂಟೆಗೆ ಕರೆದುಕೊಂಡು ಬಂದು ಮುನ್ನೆಚ್ಚರಿಕೆ ಕ್ರಮವಾಗಿ ಮೇಲ್ಕಂಡ ಕಲಂ ಅನ್ವಯ ಪ್ರಕರಣ ದಾಖಲಿಸಿದೆ.
Tekkalkota PS
8 Cr.No:0129/2015
(IPC 1860 U/s 304A,279 )
26/11/2015 Under Investigation
MOTOR VEHICLE ACCIDENTS FATAL - State Highways
Brief Facts :  ದಿನಾಂಕ: 26/11/2015 ರಂದು ಬೆಳಿಗ್ಗೆ ಸುಮಾರು 6-30 ಗಂಟೆಗೆ ಲಾರಿ ನಂಬರ್ ಕೆಎಲ್-57 ಡಿ-6823 ನೇದ್ದನ್ನು ಅದರ ಚಾಲಕ ಅಬ್ದುಲ್ ರಜಾಕ್ನು ಅತಿವೇಗ ಮತ್ತು ಅಜಾಗರುಕತೆಯಿಂದ  ನಡೆಸಿ ಎಸ್ಹೆಚ್-19 ರಸ್ತೆಯಲ್ಲಿ ದೇವಿನಗರದ ಹತ್ತಿರ ಬೈರಾಪುರ ನಾಗನಗೌಡರವರ ನವಣೆ ಹೊಲದಲ್ಲಿ ಲಾರಿಯನ್ನು ಎಡಮಗ್ಗಲಾಗಿ ಬೀಳಿಸಿದ್ದರಿಂದ  ಲಾರಿಯ ಕ್ಲೀನರ್ ಸೋಹೇಲ್ ಸ್ಥಳದಲ್ಲಿ ತೀವ್ರ ಗಾಯಗಳಾಗಿ ಮೃತ ಪಟ್ಟಿದ್ದು, ಲಾರಿ ಚಾಲಕ ಅಬ್ದುಲ್ ರಜಾಕ್ನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರನ್ನು ಪಡೆದು ತೆಕ್ಕಲಕೋಟೆ ಪೊಲೀಸ್ ಠಾಣೆಯ ಗುನ್ನೆ ನಂಬರ್ 129/2015 ಕಲಂ 279-304[ಎ] ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ