ಬುಧವಾರ, ನವೆಂಬರ್ 18, 2015

PRESS NOTE OF 18/11/2015

Crime Key Report From   To   
Sl. No FIR No FIR Date Crime Group - Crime Head Stage of case
Hospet Rural PS
1 Cr.No:0169/2015
(CODE OF CRIMINAL PROCEDURE, 1973 U/s 41,109 )
18/11/2015 Under Investigation
CrPC - Security For Good Behaviour (Sec 109)
Brief Facts :  ದಿನಾಂಕ:18/11/2015  ರಂದು ನಾನು ಮತ್ತು ಸಿಬ್ಬಂದಿಯವರು ಬೆಳಿಗ್ಗೆ 9-05 ಗಂಟೆಗೆ ಠಾಣಾ ಸರಹದ್ದಿನ ಅಮರಾವತಿ ಏರಿಯಾದ ಶ್ರೀ.ವೆಂಕಟೇಶ್ವರ ಗುಡಿ ಹತ್ತಿರ ಗಸ್ತಿನಲ್ಲಿರುವಾಗ್ಗೆ ಯಾರೋ ಇಬ್ಬರು ವ್ಯಕ್ತಿಗಳು ಸದರಿ ದೇವಸ್ಥಾನದ ಹತ್ತಿರದಲ್ಲಿರುವ ಮನೆಗಳ ಕಾಂಪೌಂಡ್ ಹತ್ತಿರ  ನಿಂತಿದ್ದು ನಮ್ಮನ್ನು ನೋಡಿ ತಮ್ಮ ಮುಖವನ್ನು ಮರೆಮಾಚಿಕೊಂಡು ಅನುಮಾನ ಬರುವಂತೆ ವರ್ತಿಸುತ್ತಿದ್ದು ನಾವು ಹತ್ತಿರ ಹೋಗುತ್ತಿದ್ದಂತೆ ಓಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಅವರನ್ನು ಸಿಬ್ಬಂದಿಯವರು ಬೆನ್ನುಹತ್ತಿ ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿದ್ದು ಅವರ ಹೆಸರು ವಿಳಾಸ ವಿಚಾರಿಸಲು ಮೊದಲು ವಿಧವಿಧವಾಗಿ ನುಡಿದಿದ್ದು ಪುನಃ ವಿಚಾರಿಸಲು ಮೇಲಿನಂತೆ  ತಿಳಿಸಿದರು. ಸದರಿಯವರಿಗೆ ಸದರಿ ಸ್ಥಳದಲ್ಲಿ ಈ ಸಮಯದಲ್ಲಿ ಇರುವಿಕೆಯ ಬಗ್ಗೆ, ತಮ್ಮ ಮುಖವನ್ನು ಮರೆಮಾಚಿಕೊಂಡಿದ್ದರ ಬಗ್ಗೆ, ನಮ್ಮನ್ನು ನೋಡಿ ಓಡಿದ ಬಗ್ಗೆ ಮತ್ತು ಅನುಮಾನ ಬರುವಂತೆ ವರ್ತಿಸುತ್ತಿದ್ದರ ಬಗ್ಗೆ ವಿಚಾರಿಸಲು ಸಮಪರ್ಕವಾದ ಉತ್ತರ ನೀಡಲಿಲ್ಲ. ಸದರಿ ಆಪಾದಿತರನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು
Hospet Town PS
2 Cr.No:0223/2015
(IPC 1860 U/s 380,457 )
18/11/2015 Under Investigation
BURGLARY - NIGHT - In Other Places
Brief Facts :  ಫಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಏನಂದರೆ, ನಿನ್ನೆ ದಿನ ದಿನಾಂಕ; 17/11/2015 ರಂದು ಸಂಜೆ 6-15 ಗಂಟೆಗೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಪ್ರ.ದ.ನ್ಯಾ.ದಂ.ಗಳ ಎಲ್ಲಾ ಕೊಠಡಿಯ ಬಾಗಿಲುಗಳಿಗ ನ್ಯಾಯಾಲಯದಲ್ಲಿ ರಾತ್ರಿ ಕಾವಲುಗಾರ ಕರ್ತವ್ಯ ನಿರ್ವಹಿಸುತ್ತಿದ್ದ  ಪ್ರಭಯ್ಯ .ಎಸ್. ಬಾರಾಗಣಿ ಜವಾನರು ಅವರಿಂದ ಬೀಗವನ್ನು ಹಾಕಿಸಿ ಮನೆಗೆ ಹೋಗಿದ್ದು ನಂತರ ಈ ದಿನ ದಿನಾಂಕ; 18/11/2015 ರಂದು ಬೆಳಿಗ್ಗೆ ಸುಮಾರು 7-00 ಗಂಟೆಗೆ ಜವಾನ ಪ್ರಭಯ್ಯ .ಎಸ್. ಬಾರಾಗಣಿ ರವರು ಫೋನ್ ಮಾಡಿ ನ್ಯಾಯಾಲಯದ ನಕಲು ಪ್ರತಿ ವಿಭಾಗದ ಕೊಠಡಿಯಲ್ಲಿ ಇಟ್ಟಿದ್ದ ಬಿಳಿ ಬಣ್ಣದ ಶಾರ್ಪ 5620 ಎನ್-ಎ3 ಜಿರಾಕ್ಸ್ ಮಿಷನ್ ಇದರ ಅಂದಾಜು ಬೆಲೆ ರೂ: 91,200/- ಬೆಲೆ ಬಾಳುವ ಮಿಷನ್ ನ್ನು ಸದರಿ ರೋಮಿನ ಬೀಗವನ್ನು ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ.
T.B. Halli PS
3 Cr.No:0045/2015
(IPC 1860 U/s 279,337 )
18/11/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ : 17-11-2014 ರಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಅವರ ತಂದೆ ತಂಬ್ರಹಳ್ಳಿ ಕೆ.ಇ.ಬಿ ಹತ್ತಿರ ರಸ್ತೆಯ ಎಡಭಾಗದಲ್ಲಿ ವಾಂಕಿಂಗ್ ಹೋಗುತ್ತಿರುವಾಗ ಕೃಷ್ಣಾಪುರದ ಕಡೆಯಿಂದ ಆರೋಪಿ ಸುನಿಲ್ ಕುಮಾರ್ ಈತನು ತನ್ನ ಸ್ಯಾಂಟ್ರೋ ಹೊಂಡೈ ಕಾರ್ ನಂ. ಕೆ.ಎ-35/ಎಂ.1850 ನೇದ್ದನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿ ತಂದೆ ರೇಹಮಾನ್ ಸಾಬ್ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ರೆಹಮಾನ್ ಸಾಬ್  ಎರಡೂ ಪಾದಗಳ ಬೆರಳುಗಳ ಮೇಲೆ ಕಾರ್ ನ  ಚಕ್ರಗಳು ಹಾದು ರಕ್ತಗಾಯ ಹಾಗೂ ಮೈ-ಕೈಗೆ ತೆರಚಿದಗಾಯವಾಗಿದ್ದು ಕಾರಣ ಅಪಘಾತ ಪಡಿಸಿದ ಕಾರ್ ಚಾಲಕ ಸುನಿಲ್ ಕುಮಾರ್ ಹೆಚ್. ತಂದೆ ಹನುಮಂತಪ್ಪ ರವರ ವಿರುದ್ದ ಕ್ರಮ ಜರುಗಿಸಲು ಫಿರ್ಯಾದಿ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಮಾಡಿಸಿಕೊಂಡು ತಂದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ