ಗುರುವಾರ, ನವೆಂಬರ್ 19, 2015

PRESS NOTE OF 19112015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0494/2015
(IPC 1860 U/s 363 )
19/11/2015 Under Investigation
KIDNAPPING AND ABDUCTION - Others
Brief Facts :  ದಿನಾಂಕ: 19-11-2015 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀಮತಿ. ಪೂಜಾರಿ ಲಕ್ಷ್ಮಿ, ವಾಸ: ಹಲಕುಂದಿಗ್ರಾಮರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ದಿ: 15-11-2015 ರಂದು ತಾನು, ತನ್ನ ಮಕ್ಕಳು ಮತ್ತು ತನ್ನ ಗಂಡನ ಅಣ್ಣನ ಮಗಳಾದ ಕು: ಸ್ವಪ್ನ ಹಲಕುಂದಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿದ್ದಾಗ ರಾತ್ರಿ 8-30 ಗಂಟೆಗೆ ಕು: ಸ್ವಪ್ನ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಾರದಿದ್ದರಿಂದ ತಾವು ಕು: ಸ್ವಪ್ನಳನ್ನು ಇಂದಿನವರೆಗೆ ತಮ್ಮ ಗ್ರಾಮದಲ್ಲಿ, ಇತರೆ ಕಡೆಗಳಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲವೆಂದು ಕು: ಸ್ವಪ್ನ ಕಾಣೆಯಾಗಿರುವುದು ನೋಡಿದರೆ ಅಪ್ರಾಪ್ತ ವಯಸ್ಸಿನ ಈಕೆಗೆ ಯಾರೋ ದುಷ್ಕ್ರಮಿಗಳು ಯಾವುದೋ ಉದ್ದೇಶಕ್ಕೆ ಅಪಹರಣ ಮಾಡಿಕೊಂಡು ಹೋದಂತೆ ಕಂಡು ಬರುತ್ತದೆಂದು ಅಪಹರಣಕ್ಕೆ ಒಳಗಾದ ಕು: ಸ್ವಪ್ನಳನ್ನು ಪತ್ತೆ ಮಾಡಿಕೊಡಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ. ಕು: ಸ್ವಪ್ನಳ ಚಹರೆ ಗುರುತುಗಳು ಈ ಕೆಳಕಂಡಂತೆ ಇರುತ್ತವೆ.
ಹುಡುಗಿಯ ಹೆಸರು : ಕು: ಸ್ವಪ್ನ ತಂದೆ ಪೂಜಾರಿ ರಮಣಯ್ಯ, ವ: 14 ವರ್ಷ,
ಅಂದಾಜು ಎತ್ತರ 4 ಅಡಿ 8 ಇಂಚು, ಕಪ್ಪು ಮೈಬಣ್ಣ, ಸಾದಾರಣ ಮೈಕಟ್ಟು, ಕೊಲು ಮುಖ,
ಮಾತನಾಡುವ ಬಾಷೆ: - ಕನ್ನಡ, ತೆಲ್ಲುಗು, ಕೊರಚರ ಬಾಷೆ ಮಾತನಾಡುತ್ತಾನೆ.
ಹೋಗುವಾಗ ಧರಿಸಿದ ಬಟ್ಟೆಗಳು:- ಹಸಿರು ಬಣ್ಣದ ಸೀರೆ, ಹಸಿರು ಬಣ್ಣದ ಕುಪ್ಪಸ ತೊಟ್ಟಿರುತ್ತಾಳ
Brucepet PS
2 Cr.No:0215/2015
(IPC 1860 U/s 448,354,504,323,506,34 )
19/11/2015 Under Investigation
MOLESTATION - Other Places
Brief Facts :  ಪಿರ್ಯಾದಿದಾರರಾದ ಕು.ಪುಷ್ಪಲತಾ ರವರು ಈಗ್ಗೆ ೫ವರ್ಷದ ಹಿಂದೆ ಬಳ್ಳಾರಿ ನಗರದ ಕೌಲ್ಬಜಾರ್ನ ಬಾಬು ಚೌಕ್ ಏರಿಯಾದ ಮುಸ್ಲಿಂ ಜನಾಂಗದ ಗುಲಾಬ್ ರವರನ್ನು ಪ್ರೀತಿ ಮಾಡುತ್ತಿದ್ದು ಈಗ್ಗೆ ೦೩ ತಿಂಗಳ ಹಿಂದೆ ಹುಡುಗನ ಮನೆಯವರು ಪಿರ್ಯಾದಿದಾರರನ್ನು ಮದುವೆ ಮಾಡಿಕೊಳ್ಳುವುದಕ್ಕೆ ರೂ ೩ ಲಕ್ಷ ಹಣ ಕೇಳಿದ್ದಕ್ಕೆ ಪಿರ್ಯಾದಿದಾರರ ಮನೆಯವರು ಹಣ ಕೊಡಲಾಗದ ಕಾರಣ ಗುಲಾಬ್ ನ ಮನೆಯವರು ಮದುವೆ ಬೇಡವೆಂದು ಹೇಳಿದ್ದರಿಂದ ಪಿರ್ಯಾದಿದಾರರ ತಂದೆ ತಾಯಿಗಳು ಅಷ್ಟಕ್ಕೆ ಸುಮ್ಮನಿದ್ದರು. 
          ಪಿರ್ಯಾದಿದಾರರು ನಿನ್ನೆ ದಿನ ದಿನಾಂಕ: ೧೮-೧೧-೧೫ ರಂದು ರಾತ್ರಿ ೧೧-೩೦ ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ಪಿರ್ಯಾದಿದಾರರ ತಂದೆ-ಚಂದ್ರಶೇಖರ್, ಪಿರ್ಯಾದಿದಾರರ ತಾಯಿ-ಮಂಜುಳಾ, ಪಿರ್ಯಾದಿದಾರರ ತಮ್ಮ-ಮಧು, ಪಿರ್ಯಾದಿದಾರರ ಭಾವ-ನರಸಿಂಹಲು, ಪಿರ್ಯಾದಿದಾರರ ಅಕ್ಕ-ಭವಾನಿ ರವರೊಂದಿಗೆ ಮನೆಯಲ್ಲಿದ್ದು, ಪಿರ್ಯಾದಿದಾರರು ಅಡುಗೆ ಮನೆಯಲ್ಲಿ ಅವರ ತಂದೆಗೆ ಚಪಾತಿ ಮಾಡುತ್ತಿದ್ದಾಗ ಗುಲಾಬ್ ಮತ್ತು ಆತನ ಜೊತೆಗೆ ಇನ್ನೊಬ್ಬ ವ್ಯಕ್ತಿ  ಪಿರ್ಯಾದಿದಾರರ ಮನೆಯೊಳಗಡೆ ಬಂದಾಗ ಪಿರ್ಯಾದಿದಾರರ ತಂದೆ ಯಾಕೇ ಈ ಸಮಯದಲ್ಲಿ ಬಂದಿದ್ದೀಯಾ ಅಂತಾ ಕೇಳಿದಾಗ ಗುಲಾಬ್ ರವರು ನಿನ್ನ ಮಗಳು ಎಲ್ಲಿ ಅಂತಾ ಕೇಳಿದನು. ಆಗ ಪಿರ್ಯಾದಿದಾರರ ತಂದೆ ಅಡುಗೆ ಮನೆಯಲ್ಲಿದ್ದಾಳೆ ಅಂತಾ ಹೇಳಿದಾಗ ಗುಲಾಬ್ ಮತ್ತು ಇನ್ನೊಬ್ಬ ವ್ಯಕ್ತಿ ಅಡುಗೆ ಮನೆಗೆ ಬಂದು ಗುಲಾಬ್ ರವರು ಪಿರ್ಯಾದಿದಾರರು ತೊಟ್ಟಿದ್ದ ನೈಟಿಯನ್ನು ಹಿಡಿದುಕೊಂಡು ಮನೆಯ ಹೊರಗಡೆ ಎಳೆದು ತಂದು ಏನೇ ಸೂಳೇ ನಾನು ನಿನ್ನನ್ನು ಮದುವೆ ಆಗುವುದಿಲ್ಲಾ ಅಂತಾ ಹೇಳಿದರೂ ಕೂಡ ನೀನು ಬೇರೆಯವರ ಜೊತೆಗೆ ನನ್ನೊಂದಿಗೆ ಮಾತನಾಡು ಅಂತಾ ಹೇಳಿ ಕಳುಹಿಸುತ್ತೀಯಾ ನಿನಗೆ ಎಷ್ಟು ಸೊಕ್ಕು ಅಂತಾ ಕೈಗಳಿಂದ ಬಲ ಕಪಾಳಕ್ಕೆ, ಬೆನ್ನಿಗೆ ಹೊಡೆದುಕೊಂಡು ನೈಟಿಯನ್ನು ಹರಿದು ಗಲಾಟೆ ಮಾಡಿ ಪ್ರಾಣ ಭಯ ಹಾಕಿ ಗುಲಾಬ್ ರವರು ತಂದಿದ್ದ ಕಾರನಲ್ಲಿ ಹೋಗಿದ್ದು ಸದರಿ ಕಾರಿನ ಹಿಂದಿನ ಗ್ಲಾಸ್ ಮೇಲೆ ಎಂ.ಎಂ.ಕೆ ಅಂತಾ ನಮೂದಿಸಿದ್ದು, ಗುಲಾಬ್ ನ ಜೊತೆಯಲ್ಲಿ ಬಂದ ವ್ಯಕ್ತಿಯನ್ನು ಮತ್ತು ಕಾರನ್ನು ನೋಡಿದರೆ ಗುರುತಿಸುವುದಾಗಿ ಹೇಳಿ ಸದರಿ ರವರ ವಿರುದ್ದ ಸೂಕ್ತ ಕ್ರಮಕ್ಕಾಗಿ ನೀಡಿದ  ದೂರು
3 Cr.No:0216/2015
(IMMORAL TRAFFIC PREVENTION ACT, 1956 U/s 3(2A)(2B),5(D),4,5(1) )
19/11/2015 Under Investigation
IMMORAL TRAFFIC - Un-Organised
Brief Facts :  ಈ ದಿನ ದಿನಾಂಕ:19/11/15 ರಂದು  ಬೆಳಿಗ್ಗೆ 11-45 ಗಂಟೆಗೆ ನಗರದ ಕಾಳಮ್ಮ ಬೀದಿಯಲ್ಲಿರುವ ನವರಂಗ್ ಕಾಂಪ್ಲೆಕ್ಸ್ ನಲ್ಲಿರುವ ದೇವಾ ಲಾಡ್ಜ್ ನ  ರೂಂ ನಂ: 101,102  ನೇದ್ದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ರವರಿಂದ ಶೋಧನಾ ವಾರೆಂಟ್ ಪಡೆದುಕೊಂಡು ಠಾಣೆಯ ಪಿ.ಎಸ್.ಐ. ( ಕಾ.ಸು) ಹಾಗು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆಪಾದಿತ 1 ರಿಂದ 5 ರವರು ಸಿಕ್ಕಿ ಬಿದ್ದಿದ್ದು, ಆಪಾದಿತರಿಂದ ನಗದು ಹಣ ರೂ. 3120/-, 03 ಕಾಂಡೋಮ್ ಗಳನ್ನು ಜಪ್ತು ಪಡಿಸಿಕೊಂಡಿದ್ದು, ಸದರಿ ಆಪಾದಿತ 4 ರಿಂದ 6 
ರವರು   ಮಹಿಳೆಯರನ್ನು ವೇಶಾವಾಟಿಕೆಯಲ್ಲಿ ತೊಡಗುವ ಗಂಡಸರಿಗೆ ಅನುಕೂಲ ಮಾಡಿಕೊಟ್ಟು, ಅವರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿ ವೇಶಾವಾಟಿಕೆ ನಡೆಸಲು ಅನುಕೂಲ ಮಾಡಿಕೊಟ್ಟು ವೇಶಾವಾಟಿಕೆ ದಂದೆಯನ್ನು ನಡೆಸಿ ಹಣ ಸಂಪಾದಿಸುತ್ತಿದ್ದು, ಈ ಬಗ್ಗೆ ಮೇಲ್ಕಂಡ ಆಪಾದಿತ 1 ರಿಂದ 6 ರವರ ವಿರುದ್ದ ಪ್ರಕರಣ ದಾಖಲಿಸಲು ನೀಡಿದ ದೂರು.
Gudekote PS
4 Cr.No:0138/2015
(IPC 1860 U/s 506,504,323,324 )
19/11/2015 Under Investigation
CASES OF HURT - Simple Hurt
Brief Facts :  ದಿನಾಂಕ 18/11/2015 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಗೆದ್ದಲಗಟ್ಟೆ ಗ್ರಾಮದ ಈ ಕೇಸಿನ ಪಿರ್ಯಾಧಿ ಎನ್. ಓಬಳೇಶ ತಂದೆ ಶಿವಣ್ಣ ಇವರು ತಮ್ಮ ಅಕ್ಕಳಾದ ಶ್ರೀ ಮತಿ ಗಂಗಮ್ಮ ಇವರ ಮನೆಗೆ ಹೋಗಿ ಟಗರು ಮರಿಗಳನ್ನು ಕಟ್ಟಿಹಾಕಿ ಪಕ್ಕದ ಮನೆಯವರಾದ ಶ್ರೀ ತಿಪ್ಪೇಶ ಇವರ ಮನೆಯ ಹತ್ತಿರ ಗೌರಪ್ಪ ಇವರು ಪಿರ್ಯಾಧಿ ಓಬಳೇಶ ಇವರಿಗೆ ಕರೆದಾಗ ಪಿರ್ಯಾದಿದಾರರು ಅವರ ಹತ್ತಿರ ಹೋಗಿ ಕುಳಿತಿಕೊಂಡಿದ್ದು ಅಲ್ಲಿ ತಮ್ಮ ಗ್ರಾಮದ ವೆಂಕಟೇಶ ತಂದೆ ಮಾಸ್ತೆಪ್ಪ, ಯಲ್ಲಪ್ಪ ಇವರು ಯಾವುದೋ ಹೊಲದ ವಿಚಾರದಲ್ಲಿ ಮಾತಾಡುತ್ತಿದ್ದರು ಅಷ್ಟರಲ್ಲಿ ತಮ್ಮ ಗ್ರಾಮದ ನಾಗರಾಜ ತಂದೆ ಯಲ್ಲಪ್ಪ ಈತನು ಅಲ್ಲಿಗೆ ಬಂದು ಪಿರ್ಯಾಧಿಗೆ, ಈ ಸೂಳೇ ಮಗನೇ ನಮ್ಮ ಕುಲಸ್ಥರಿಗೆ ಜಗಳ ಇಟ್ಟವನು ಎಂದು ತನ್ನ ಕೈಯಲ್ಲಿದ್ದ ಮೋಬೈಲ್ ನ್ನು ಬೀಸಿ ಹೊಗೆದಾಗ, ಪಿರ್ಯಾಧಿಯ ಮೂಗು ಮತ್ತು ಬಾಯಿಗೆ ಬಿದ್ದು ಮೂಗಿನಲ್ಲಿ ರಕ್ತ ಬಂದು ವರಸಿಕೊಳ್ಳುವಾಗ ನಾಗರಾಜನು ಅಲ್ಲೇ ಇದ್ದ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾಧಿ ತಲೆಯ ಬಲ ಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದಾಗ ಅಲ್ಲೇ ಇದ್ದ ಮೇಲ್ಕಂಡವರು ಬಿಡಿಸಲು ಹೋದಾಗ ತನ್ನ ಬಲಗಾಲಿನಿಂದ ಪಿರ್ಯಾಧಿ ಎದೆಗೆ ಒದ್ದು ಪೆಟ್ಟು ಮಾಡಿ, ನೀನು ಒಬ್ಬನೇ ಸಿಕ್ಕರೆ ನಿನ್ನನ್ನು ಸಾಯಿಸುತ್ತೇನೆ ಅಂತಾ ಪ್ರಾಣ ಬೆದರಿಕೆ ಹಾಕಿ ಹೊದನು, ರಾತ್ರಿ ವಾಹನ ಸೌಕರ್ಯ ಇಲ್ಲದರಿಂದ ತಡವಾಗಿ ಠಾಣೆಗೆ ಬಂದು, ತನಗೆ ಹೊಡೆದು ಗಾಯಗೊಳಿಸಿದ ನಾಗರಾಜನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ದೂರಿನ ಮೇರಿಗೆ ಈ ಪ್ರಕರಣ ದಾಖಲಿಸಿದೆ.
Hospet Extention PS
5 Cr.No:0054/2015
(IPC 1860 U/s 323,354,504,506 )
19/11/2015 Under Investigation
MOLESTATION - Private Place
Brief Facts :  ಈ ದಿನ ದಿನಾಂಕ 19-11-2015 ರಂದು ಮದ್ಯ ರಾತ್ರಿ 00-10 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ದೂರೇನೆಂದರೆ, ಫಿರ್ಯಾದಿಗೆ ಈಗ್ಗೆ 9 ವರ್ಷಗಳ ಕೆಳಗೆ ತನ್ನ ಗಂಡ ಶ್ರೀನಿವಾಸನೊಂದಿಗೆ ಪ್ರೀತಿಸಿ ಲಗ್ನವಾಗಿದ್ದು, ತನಗೆ  8 ವರ್ಷದ ಕೋಮಲ ಎಂಬ ಮಗಳಿದ್ದು, ಗಂಡ-ಹೆಂಡತಿ ಮದ್ಯೆ ಸಂಸಾರ ವಿಷಯದಲ್ಲಿ ವೈಮನಸ್ಸು ಬಂದು ಇಬ್ಬರು ಈಗ್ಗೆ 2 ವರ್ಷಗಳ ಕೆಳಗೆ ಕೂಡ್ಲಿಗಿ ಕೋರ್ಟನಲ್ಲಿ ವಿವಾಹ ವಿಛ್ಛೆದನ ಕೋರಿ ಅರ್ಜಿ ಸಲ್ಲಿಸಿದ್ದು, ಅಂದಿನಿಂದ ಫಿರ್ಯಾದಿ ತನ್ನ ಮಗಳೊಂದಿಗೆ ಹೊಸಪೇಟೆಗೆ ಬಂದು ವಾಸವಾಗಿರುತ್ತಾಳೆ.ತಾನು ಕೋರ್ಟ ಕೇಸಿಗೆ ಕೂಡ್ಲಿಗಿಗೆ ಹೋಗುತ್ತಿದ್ದಾಗ ಆರೋಪಿ ರಮೇಶನಾಯ್ಕನು ಪರಿಚಯವಾಗಿದ್ದು,ಅಂದಿನಿಂದ ಆರೋಪಿಯು ಹೊಸಪೇಟೆಗೆ ಬಂದು ಫಿರ್ಯಾದಿಗೆ ಮಾತಾಡಿಸಿ ಹೋಗುತ್ತಿದ್ದು, ಫಿರ್ಯಾದಿಗೆ ಜೀವನ ನಡೆಸಲು ತೊಂದರೆಯಾಗಿದ್ದರಿಂದ ತನ್ನ ಬಂಗಾರದ ಒಡವೆಗಳನ್ನು ಒತ್ತೆ ಇಟ್ಟಿದ್ದು, ಅವುಗಳನ್ನು ಆರೋಪಿಯು ಈಗ್ಗೆ 5 ತಿಂಗಳ ಕೆಳಗೆ ಫಿರ್ಯಾದಿಗೆ ಬಿಡಿಸಿಕೊಟ್ಟಿದ್ದು, ಆರೋಪಿಯು ಅದನ್ನೆ ನೆಪ ಮಾಡಿಕೊಂಡು ಫಿರ್ಯಾದಿ ಬಳಿ ಹೆಚ್ಚಾಗಿ ಬಂದು ಹೋಗುತ್ತಿದ್ದು, ಈ ದಿನ ಸಂಜೆ 7-30 ಗಂಟೆಗೆ ಫಿರ್ಯಾದಿ ಮನೆಗೆ ಆರೋಪಿ ಬಂದು ತನ್ನೊಂದಿಗೆ ಕುಡಿತಿನಿಗೆ ಬಾ ಅಂತಾ ಕರೆದಿದ್ದರಿಂದ ಫಿರ್ಯಾದಿ ತಾನು ಬರುವುದಿಲ್ಲ ಅಂತಾ ಹೇಳಿದಕ್ಕೆ ಆರೋಪಿಯು ಬರದಿದ್ದರೆ ನನ್ನ ಹಣ ಕೊಡು ಅಂತಾ ಹೇಳಿದಕ್ಕೆ ಫಿರ್ಯಾದಿಯು ತನ್ನ ಒಡವೆಗಳನ್ನು ಬಿಚ್ಚಿಕೊಟ್ಟು ಇನ್ನು ಮುಂದೆ ಬರಬೇಡ ಹೋಗು ಅಂತಾ ಹೇಳಿ ಎಂ.ಜೆ. ನಗರದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದು, ಅಲ್ಲಿಯೂ ಸಹ ಆರೋಪಿಯು ರಾತ್ರಿ 8 ಗಂಟೆಗೆ ಬಂದು ಅವಾಚ್ಯ ಶಬ್ಧಗಳಿಂದ ಬೈದು ಕೈಯಿಂದ ಕಪಾಳಕ್ಕೆ, ಎದೆಗೆ, ಹೊಟ್ಟೆಗೆ ಹೊಡೆದು ಮೈ ಮೇಲಿನ ಬಟ್ಟೆಗಳನ್ನು ಹಿಡಿದು ಎಳೆದಾಡಿ ಮಾನ ಭಂಗ ಮಾಡಿ ಪ್ರ್ರಾಣ ಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ